Asianet Suvarna News Asianet Suvarna News

ದೆಹಲಿ ಸಿಎಂಗೆ 'ಚೋರ್‌ ಚೋರ್‌', 'ಮೋದಿ ಮೋದಿ' ಘೋಷಣೆ ಕೂಗಿದ ಗುಜರಾತ್‌ ಜನತೆ; ಕಪ್ಪು ಬಾವುಟ ಪ್ರದರ್ಶನ

ಪಂಜಾಬ್‌ ವಿಧಾನಸಭೆ ಚುನಾವಣೆಗೂ ಮುನ್ನ ಸಹ ಎಎಪಿ ಸರ್ವೇಯೊಂದನ್ನು ನಡೆಸಿತ್ತು. ಆ ಸರ್ವೇಯಲ್ಲಿ ಭಗವಂತ ಮಾನ್ ಜನರ ನೆಚ್ಚಿನ ಅಭ್ಯರ್ಥಿಯಾಗಿದ್ದರು. ನಂತರ, ಅವರೇ ಪಂಜಾಬ್‌ನ ಮುಖ್ಯಮಂತ್ರಿಯೂ ಆದರು. ಅದೇ ಸ್ಟ್ರಾಟೆಜಿಯನ್ನು ಈಗ ಗುಜರಾತ್‌ನಲ್ಲೂ ಮಾಡಲು ಹೊರಟಿದ್ದಾರೆ ದೆಹಲಿ ಸಿಎಂ

 

 

gujarat people show black flags to delhi cm arvind kejriwal in navsari ash
Author
First Published Oct 30, 2022, 3:38 PM IST

ಗುಜರಾತ್‌ನ ನವ್ಸಾರಿಯಲ್ಲಿ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ಗೆ ಕಪ್ಪು ಬಾವುಟವನ್ನು ಪ್ರದರ್ಶಿಸಲಾಗಿದೆ. ದೆಹಲಿ ಸಿಎಂ ಹಾಗೂ ಬೆಂಗಾವಲು ಪಡೆ ವಾಹನಗಳು ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅಲ್ಲದೆ, ದೆಹಲಿ ಸಿಎಂ ಅವರ ಬಳಿ ಜನರು ಮೋದಿ ಮೋದಿ ಹಾಗೂ ಚೋರ್‌ ಚೋರ್‌ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಇನ್ನೊಂದೆಡೆ, ಗುಜರಾತ್‌ ಜನತೆಯ ಹೃದಯಗಳನ್ನು ಗೆಲ್ಲುವ ಇಚ್ಛೆಯನ್ನು  ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ವ್ಯಕ್ತಪಡಿಸಿದ್ದಾರೆ. 

ಇನ್ನು, ಮೋದಿ ಮೋದಿ ಹಾಗೂ ಚೋರ್‌ ಚೋರ್‌ ಎಂಬ ಘೋಷಣೆಗಳನ್ನು ಕೂಗಿದ್ದಕ್ಕೆ ಪ್ರತಿಕ್ರಿಯೆ ನೀಡಿದ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ನೀವು ಯಾರಿಗಾದರೂ ಘೋಷಣೆಗಳನ್ನು ಕೂಗಿ, ಗುಜರಾತ್‌ನಲ್ಲಿ ನಮ್ಮ ಸರ್ಕಾರ ರಚನೆಯಾದ ನಂತರ, ನಾನು ನಿಮ್ಮ ಮಕ್ಕಳಿಗೆ ಶಾಲೆಯನ್ನು ಕಟ್ಟಿಸುತ್ತೇನೆ, ನಿಮ್ಮ ಮನೆಯಲ್ಲಿ ಯಾರಿಗಾದರೂ ಹುಷಾರಿಲ್ಲದಿದ್ರೆ ನಾನು ಚಿಕಿತ್ಸೆ ಕೊಡಿಸುತ್ತೇನೆ. ನಿಮ್ಮ ಮಕ್ಕಳಿಗೆ ಕೆಲಸವನ್ನೂ ಕೊಡಿಸುತ್ತೇನೆ. ಒಂದಲ್ಲ ಒಂದು ದಿನ, ನಿಮ್ಮ ಹೃದಯವನ್ನು ಗೆಲ್ಲುತ್ತೇನೆ ಹಾಗೂ ನಮ್ಮ ಪಕ್ಷಕ್ಕೆ ಬೆಂಬಲಿಸುವಂತೆ ಮಾಡುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ. 

ಇದನ್ನು ಓದಿ: ಪ್ರಧಾನಿ ಮೋದಿ ಗುಜರಾತ್‌ನಲ್ಲಿ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದು, ನಮ್ಮ ಅತಿ ದೊಡ್ಡ ಸಾಧನೆ: Arvind Kejriwal

ಇನ್ನೊಂದೆಡೆ, ಅಭಿಯಾನವೊಂದನ್ನೂ ಪ್ರಾರಂಭಿಸಿದ ಅರವಿಂದ್‌ ಕೇಜ್ರಿವಾಲ್‌, ಗುಜರಾತ್‌ನ ಮುಂಬರುವ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿ ಯಾರಾಗಬೇಕೆಂದು ಕೇಳಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಕೇಜ್ರಿವಾಲ್‌, ಮುಂದಿನ ಸಿಎಂ ಯಾರಾಗಬೇಕೆಂದು ನಮಗೆ ಹೇಳಬೇಕೆಂದು ನಾವು ಗುಜರಾತ್‌ ಜನರನ್ನು ಬಯಸುತ್ತೇನೆ. ನಾವು ಒಂದು ಸಂಖ್ಯೆ ಹಾಗೂ ಇ - ಮೇಲ್‌ ಐಡಿಯೊಂದನ್ನು ನೀಡುತ್ತಿದ್ದೇವೆ. ನವೆಂಬರ್‌ 3 ಸಂಜೆ 5 ಗಂಟೆಯೊಳಗೆ ನಿಮ್ಮ ಅಭಿಪ್ರಾಯಗಳನ್ನು ಕಳಿಸಬಹುದು. ನಾವು ನವೆಂಬರ್‌ 4 ರಂದು ಈ ಫಲಿತಾಂಶವನ್ನು ಘೋಷಿಸುತ್ತೇವೆ ಎಂದು ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ. 

ಪಂಜಾಬ್‌ ವಿಧಾನಸಭೆ ಚುನಾವಣೆಗೂ ಮುನ್ನ ಸಹ ಎಎಪಿ ಸರ್ವೇಯೊಂದನ್ನು ನಡೆಸಿತ್ತು. ಆ ಸರ್ವೇಯಲ್ಲಿ ಭಗವಂತ ಮಾನ್ ಜನರ ನೆಚ್ಚಿನ ಅಭ್ಯರ್ಥಿಯಾಗಿದ್ದರು. ನಂತರ, ಅವರೇ ಪಂಜಾಬ್‌ನ ಮುಖ್ಯಮಂತ್ರಿಯೂ ಆದರು. ಅದೇ ಸ್ಟ್ರಾಟೆಜಿಯನ್ನು ಈಗ ಗುಜರಾತ್‌ನಲ್ಲೂ ಮಾಡಲು ಹೊರಟಿದ್ದಾರೆ ದೆಹಲಿ ಸಿಎಂ. ಅಲ್ಲದೆ, ಮುಂದಿನ ಐದು ವರ್ಷಗಳಲ್ಲಿ ಬಿಜೆಪಿ ಏನು ಮಾಡಲಿದೆ ಎಂಬುದರ ಕುರಿತು ಬಿಜೆಪಿಗೆ ಯಾವುದೇ ಅಜೆಂಡಾ ಇಲ್ಲ ಮತ್ತು ಹಣದುಬ್ಬರ ಸಮಸ್ಯೆಯಿಂದ ಜನರು ತೊಂದರೆಗೀಡಾಗಿದ್ದಾರೆ ಎಂದು ಮಾಧ್ಯಮಗಳನ್ನು ಉದ್ದೇಶಿಸಿ ಕೇಜ್ರಿವಾಲ್ ಹೇಳಿದ್ದಾರೆ. 

ಇದನ್ನೂ ಓದಿ: Gujarat Elections: ಎಎಪಿ ಸರ್ಕಾರ ರಚನೆ ಎಂದು ಐಬಿ ವರದಿ; ವರದಿಯಿಂದ ಬಿಜೆಪಿಗೆ ನಡುಕ ಎಂದ ಕೇಜ್ರಿವಾಲ್‌

ಗುಜರಾತ್ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಇನ್ನೂ ಪ್ರಕಟಿಸಿಲ್ಲ. 2017 ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಗುಜರಾತ್‌ನಲ್ಲಿ ಪಾದಾರ್ಪಣೆ ಮಾಡಿತು. ಆದರೆ, ಆ ವೇಳೆ ತನ್ನ ಖಾತೆಯನ್ನು ತೆರೆಯಲು ಸಾಧ್ಯವಾಗಲಿಲ್ಲ. ಆದರೂ, ಪಂಜಾಬ್‌ನಲ್ಲಿ ದೊಡ್ಡ ಮಟ್ಟದ ಗೆಲುವಿನ ನಂತರ, ಪಕ್ಷವು ದೇಶದ ಇತರ ಭಾಗಗಳಲ್ಲೂ ಅಧಿಕಾರ ಹಿಡಿಲು ಹವಣಿಸುತ್ತಿದೆ. 

ಫೆಬ್ರವರಿ 2021 ರ ಸೂರತ್ ಮುನ್ಸಿಪಲ್ ಕಾರ್ಪೊರೇಷನ್ (SMC) ಚುನಾವಣೆಯಲ್ಲಿ ಬಿಜೆಪಿ 93 ಸ್ಥಾನಗಳನ್ನು ಗೆದ್ದುಕೊಂಡರೆ, ಆಮ್ ಆದ್ಮಿ ಪಕ್ಷವು 27 ಸ್ಥಾನಗಳನ್ನು ಗೆದ್ದುಕೊಂಡಿತು ಮತ್ತು ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿತ್ತು. ಈ ಹಿನ್ನೆಲೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ಎಎಪಿ ಗಂಭೀರವಾಗಿ ಪರಿಗಣಿಸಿದೆ. 
ಇದನ್ನೂ ಓದಿ: ಗುಜರಾತ್‌ನಲ್ಲಿ ಅಧಿಕಾರಕ್ಕೆ ಬಂದ್ರೆ ಪ್ರತಿ ಮಹಿಳೆಗೆ ತಿಂಗಳಿಗೆ 1,000 ರುಪಾಯಿ ಮಾಸಿಕ ಭತ್ಯೆ: ಕೇಜ್ರಿವಾಲ್‌ ಭರವಸೆ

Follow Us:
Download App:
  • android
  • ios