Gujarat Elections: ಎಎಪಿ ಸರ್ಕಾರ ರಚನೆ ಎಂದು ಐಬಿ ವರದಿ; ವರದಿಯಿಂದ ಬಿಜೆಪಿಗೆ ನಡುಕ ಎಂದ ಕೇಜ್ರಿವಾಲ್‌

ಗುಜರಾತ್‌ನಲ್ಲಿ ಇಂದು ಚುನಾವಣೆ ನಡೆದರೆ ಎಎಪಿ ಸರ್ಕಾರ ರಚನೆಯಾಗಲಿದೆ ಎಂದು ಐಬಿ ವರದಿ ನೀಡಿದೆ. ಆದರೆ, ಗೆಲುವಿನ ಅಂತರ ಕಡಿಮೆಯಾಗಿರುತ್ತದೆ ಎಂದು ಗುಜರಾತ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ. 

aap set to form government in gujarat intelligence bureau report ash

ಗುಜರಾತ್‌ನಲ್ಲಿ ಇಂದು ಚುನಾವಣೆ (Election) ನಡೆದರೆ ಆಮ್ ಆದ್ಮಿ ಪಕ್ಷ (Aam Aadmi Party) (ಎಎಪಿ) ಸರ್ಕಾರ ರಚಿಸಲಿದೆ ಎಂದು ಗುಪ್ತಚರ ಇಲಾಖೆ (Intelligence Bureau) ತಿಳಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಆದರೂ, ಗೆಲುವಿನ ಅಂತರ ಕಡಿಮೆಯಾಗಿರುತ್ತದೆ ಎಂದು ವರದಿ ಹೇಳುತ್ತದೆ ಎಂದೂ ಆಪ್‌ ಮುಖ್ಯಸ್ಥರು ಹೇಳಿದ್ದಾರೆ. ಈ ಹಿನ್ನೆಲೆ ರಾಜ್ಯದಲ್ಲಿ ಆರಾಮದಾಯಕ ಬಹುಮತ ಪಡೆಯಲು ಗುಜರಾತಿಗರು ದೊಡ್ಡ ಮಟ್ಟದ ಬೆಂಬಲ ನೀಡಬೇಕೆಂದೂ ದೆಹಲಿ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ಮೂಲಗಳ ಪ್ರಕಾರ, ಐಬಿ ವರದಿ ಬಂದಿದೆ. ಇಂದು ಚುನಾವಣೆ ನಡೆದರೆ ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷ ಸರ್ಕಾರ ರಚಿಸಲಿದೆ ಎಂದು ವರದಿಯಲ್ಲಿ ಬರೆಯಲಾಗಿದೆ ಎಂದು ಅರವಿಂದ್‌ ಕೇಜ್ರಿವಾಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

“ಇದೀಗ ಗೆಲುವು ಕಡಿಮೆ ಅಂತರದಲ್ಲಿದೆ ಎಂದು ವರದಿಯಲ್ಲಿ ಬರೆಯಲಾಗಿದ್ದು, ನಾವು ಕೆಲವೇ ಸೀಟುಗಳಲ್ಲಿ ಮುಂದಿದ್ದೇವೆ. ಈ ಹಿನ್ನೆಲೆ ಎಎಪಿ ಸರ್ಕಾರವು ಹೆಚ್ಚು ಬಹುಮತದೊಂದಿಗೆ ರಚನೆಯಾಗಲು ಗುಜರಾತ್‌ನ ಜನರು ದೊಡ್ಡ ಮಟ್ಟದ ಬೆಂಬಲ ನೀಡಬೇಕಾಗುತ್ತದೆ ಎಂದು ಅವರು ಹೇಳಿದರು. ಇನ್ನು, ಈ "ಐಬಿ ವರದಿ" ಬಂದ ನಂತರ ಬಿಜೆಪಿ ಮತ್ತು ಕಾಂಗ್ರೆಸ್ ಕೈಜೋಡಿಸಿ ರಹಸ್ಯ ಸಭೆಗಳನ್ನು (Secret Meetings) ನಡೆಸುತ್ತಿವೆ ಎಂದೂ ಎಎಪಿ ನಾಯಕ ಹೇಳಿಕೊಂಡಿದ್ದಾರೆ.

ಇದನ್ನು ಓದಿ: ಗುಜರಾತ್‌ನಲ್ಲಿ ಅಧಿಕಾರಕ್ಕೆ ಬಂದ್ರೆ ಪ್ರತಿ ಮಹಿಳೆಗೆ ತಿಂಗಳಿಗೆ 1,000 ರುಪಾಯಿ ಮಾಸಿಕ ಭತ್ಯೆ: ಕೇಜ್ರಿವಾಲ್‌ ಭರವಸೆ

ವಿಶೇಷವಾಗಿ, ಬಿಜೆಪಿ, ವರದಿಯ ಬಗ್ಗೆ ಭಯಭೀತರಾಗಿದ್ದು, ಬಿಜೆಪಿ ವಿರೋಧಿ ಮತಗಳು ವಿಭಜನೆಯಾಗುವಂತೆ ಕೇಸರಿ ಪಕ್ಷವು ಕಾಂಗ್ರೆಸ್ ಅನ್ನು ಬಲಪಡಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದೂ ಅರವಿಂದ್ ಕೇಜ್ರಿವಾಲ್‌ ಹೇಳಿದರು. "ಸಾಧ್ಯವಾದಷ್ಟು ಆಪ್‌ನ ಮತಗಳನ್ನು ಸೆಳೆಯುವ ಜವಾಬ್ದಾರಿಯನ್ನು ಕಾಂಗ್ರೆಸ್‌ಗೆ ನೀಡಲಾಗಿದೆ" ಎಂದೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು. ಈ ಹಿನ್ನೆಲೆ ನಾನು ಗುಜರಾತ್ ಜನರಿಗೆ ಜಾಗರೂಕರಾಗಿರಿ ಎಂದು ಹೇಳಲು ಬಯಸುತ್ತೇನೆ ಎಂದೂ ಅವರು ಹೇಳಿದರು. 

ಚುನಾವಣಾ ಕಣದಲ್ಲಿರುವ ಗಾಂಧಿ ನಾಡು ಗುಜರಾತ್‌ ರಾಜ್ಯದಲ್ಲಿ ಆಪ್ ಸರ್ಕಾರ ರಚನೆಯಾದರೆ ಪ್ರತಿ ಹಸುವಿನ ನಿರ್ವಹಣೆಗೆ (Cow Maintenance) ದಿನಕ್ಕೆ ₹ 40 ನೀಡುವುದಾಗಿಯೂ ಕೇಜ್ರಿವಾಲ್ ಚುನಾವಣಾ ಪೂರ್ವ ಭರವಸೆ ನೀಡಿದ್ದಾರೆ. ಈ ವೇಳೆ ಪತ್ರಿಕಾಗೋಷ್ಠಿಯಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡ ಉಪಸ್ಥಿತರಿದ್ದರು. ಗುಜರಾತ್‌ನಲ್ಲಿ ಆಡಳಿತಾರೂಢ ಬಿಜೆಪಿಯನ್ನು ಎದುರಿಸಲು ಮತ್ತು ಹಿಂದೂ ಮತದಾರರನ್ನು ಸೆಳೆಯಲು ಕೇಜ್ರಿವಾಲ್ ಅವರ ಈ ಘೋಷಣೆಯು ಹೊಸ ಪ್ರಯತ್ನವಾಗಿದೆ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ.

ಹಸುಗಳಿಗೆ ನಿರ್ವಹಣೆ ವೆಚ್ಚ
"ದೆಹಲಿಯಲ್ಲಿ ನಾವು ಹಸುವಿಗೆ ದಿನಕ್ಕೆ 40 ರೂ. ನೀಡುತ್ತೇವೆ. ದೆಹಲಿ ಸರ್ಕಾರ ಮತ್ತು ಮುನ್ಸಿಪಲ್ ಕಾರ್ಪೊರೇಷನ್ ತಲಾ 20 ರೂ. ನೀಡುತ್ತದೆ. ಇದೇ ರೀತಿ, ಗುಜರಾತ್‌ನಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ಹಸುಗಳ ಸಂರಕ್ಷಣೆಗಾಗಿ ನಾವು ದಿನಕ್ಕೆ 40 ರೂ ನೀಡುತ್ತೇವೆ’’ ಎಂದು ಅರವಿಂದ್‌ ಕೇಜ್ರಿವಾಲ್ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಇದನ್ನೂ ಓದಿ: Gujarat Polls: ‘’ಸಿಸೋಡಿಯಾ ಮೇಲೆ ಸಿಬಿಐ ರೇಡ್‌ನಿಂದ ಎಎಪಿ ಮತಗಳಿಕೆ 4% ಹೆಚ್ಚಳ'

ಅರವಿಂದ್‌ ಕೇಜ್ರಿವಾಲ್‌ ಹಾಗೂ ಭಗವಂತ್‌ ಮಾನ್‌ - ಈ ಇಬ್ಬರು ಎಎಪಿ ನಾಯಕರು ಎರಡು ದಿನಗಳ ಗುಜರಾತ್ ಭೇಟಿಯಲ್ಲಿದ್ದು, ಮತ್ತು ಈ ವರ್ಷದ ಕೊನೆಯಲ್ಲಿ ಬಿಜೆಪಿ ಆಡಳಿತದ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪಕ್ಷವು ತನ್ನ ಪ್ರಚಾರವನ್ನು ತೀವ್ರಗೊಳಿದೆ. ಭಾನುವಾರ ಅಂದರೆ ಇಂದು 2 ಸಾರ್ವಜನಿಕ ರ‍್ಯಾಲಿಗಳನ್ನು ಉದ್ದೇಶಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಹಾಗೂ ಪಂಜಾಬ್‌ ಸಿಎಂ ಭಗವಂತ್ ಮಾನ್ ಮಾತನಾಡಲಿದ್ದಾರೆ. 

Latest Videos
Follow Us:
Download App:
  • android
  • ios