ಪ್ರಧಾನಿ ಮೋದಿ ಗುಜರಾತ್‌ನಲ್ಲಿ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದು, ನಮ್ಮ ಅತಿ ದೊಡ್ಡ ಸಾಧನೆ: Arvind Kejriwal

ಗುಜರಾತ್‌ನ ಸಾರ್ವಜನಿಕ ಶಾಲಾ ವ್ಯವಸ್ಥೆಯನ್ನು ಆಧುನೀಕರಿಸುವ ಉದ್ದೇಶದಿಂದ ಯೋಜನೆಯ ಬಿಡುಗಡೆಯ ಭಾಗವಾಗಿ ಪ್ರಧಾನಿ ಮೋದಿ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದರು. ಇದು ನಮ್ಮ ಅತಿ ದೊಡ್ಡ ಸಾಧನೆ ಎಂದು ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಪ್ರತಿಕ್ರಿಯೆ ನೀಡಿದ್ದಾರೆ. 

our biggest achievement arvind kejriwal as pm visits gujarat school

ಗುಜರಾತ್‌ನಲ್ಲಿ (Gujarat) ಈ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯ (Assembly Elections) ಕಾವು ದಿನೇ ದಿನೇ ಏರತೊಡಗಿದೆ. ಗಾಂಧಿ ನಾಡಲ್ಲಿ ಬಿಜೆಪಿಗೆ (BJP) ಈ ಬಾರಿ ಆಪ್‌ (AAP) ಪ್ರಬಲ ಪೈಪೋಟಿ ನೀಡುತ್ತಿದೆ. ಈ ಮಧ್ಯೆ, ಗುಜರಾತ್‌ ಪ್ರವಾಸದಲ್ಲಿರುವ ಪ್ರಧಾನಿ ಮೋದಿ (PM Narendra Modi) ಅವರು ಗುಜರಾತ್‌ನ ಸರಕಾರಿ ಶಾಲೆಗೆ (Government School) ಭೇಟಿ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ (Social Media) ಸುದ್ದಿ ಮಾಡುತ್ತಿದೆ. ಗುಜರಾತ್‌ನ ಸಾರ್ವಜನಿಕ ಶಾಲಾ ವ್ಯವಸ್ಥೆಯನ್ನು ಆಧುನೀಕರಿಸುವ ಉದ್ದೇಶದಿಂದ ಯೋಜನೆಯ ಬಿಡುಗಡೆಯ ಭಾಗವಾಗಿ ಪ್ರಧಾನಿ ಮೋದಿ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದರು. ಆದರೆ, ಮೇಲೆ ಹೇಳಿದಂತೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಗುಜರಾತ್‌ನಲ್ಲಿ ಬಿಜೆಪಿಯ ಅತಿದೊಡ್ಡ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮುತ್ತಿರುವ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಆಮ್ ಆದ್ಮಿ ಪಕ್ಷವು ಇದನ್ನು ತಮ್ಮ ಸಾಧನೆ ಎಂದು ಹೇಳಿಕೊಂಡಿದೆ. 

‘’ಈ ಘಟನೆ ಸ್ವಾತಂತ್ರ್ಯದ ನಂತರ 75 ವರ್ಷಗಳಾಗಿರಬಹುದು, ಆದರೆ ಸರ್ಕಾರಿ ಶಾಲೆಗಳು ಮತ್ತು ಬಡವರಿಗೆ ಶಿಕ್ಷಣವು ಮುಖ್ಯವಾಹಿನಿಯ ರಾಜಕೀಯ ಭಾಷಣದ ಭಾಗವಾಗಿದೆ ಎಂದು ನಮಗೆ ಸಂತೋಷವಾಗಿದೆ. ಇದು ನಮ್ಮ ಅತಿ ದೊಡ್ಡ ಸಾಧನೆಯಾಗಿದೆ" ಎಂದು ಆಪ್‌ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು.

ಇದನ್ನು ಓದಿ: ಮೋದಿಗೆ ಜನ್ಮ ನೀಡಿದ್ದೆ ಮಹಾ ಅಪರಾಧ, ಮೋದಿ ತಾಯಿ ವಿರುದ್ಧ ಆಪ್ ಅಧ್ಯಕ್ಷನ ವಿವಾದಾತ್ಮಕ ಹೇಳಿಕೆ!

ಗುಜರಾತ್‌ನ ಗಾಂಧಿ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿಯವರು ವಿದ್ಯಾರ್ಥಿಗಳೊಂದಿಗೆ ಮಾದರಿ ಶಾಲೆಯ ತರಗತಿಯೊಂದರಲ್ಲಿ ವಿದ್ಯಾರ್ಥಿಗಳೊಂದಿಗೆ ಕುಳಿತಿರುವುದನ್ನು ಫೋಟೋಗಳು ತೋರಿಸುತ್ತವೆ.  ಅಲ್ಲದೆ, ಪಾಠ ನಡೆಯುತ್ತಿರುವಂತೆಯೂ ಕಾಣುತ್ತದೆ. ನಂತರ, ಗುಜರಾತ್‌ನಾದ್ಯಂತ ಸರ್ಕಾರಿ ಶಾಲಾ ಶಿಕ್ಷಕರ ಸಭೆಯನ್ನುದ್ದೇಶಿಸಿ ಮೋದಿ ಮಾಡಿದ ಭಾಷಣದಲ್ಲಿ, "ಹೊಸ ಶಿಕ್ಷಣ ನೀತಿಯು ದೇಶವನ್ನು ಇಂಗ್ಲಿಷ್ ಭಾಷೆಯ ಗುಲಾಮ ಮನಸ್ಥಿತಿಯಿಂದ ಹೊರತರುತ್ತದೆ" ಎಂದು ಹೇಳಿದರು.

ಪ್ರಧಾನಿ ಗುಜರಾತ್‌ನ ಸರ್ಕಾರಿ ಶಾಲೆಗೆ ಭೇಟಿ ನೀಡಿರುವ ಮಧ್ಯೆ, ಮೋದಿಗೆ ಸಲಹೆ ನೀಡಿದ ಅರವಿಂದ್ ಕೇಜ್ರಿವಾಲ್‌, ದೇಶಾದ್ಯಂತ ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಎಎಪಿಯ ಪರಿಣತಿಯನ್ನು ಪ್ರಧಾನಿ ಬಳಸಿಕೊಳ್ಳಬೇಕು ಎಂದಿದ್ದಾರೆ. 

ಇದನ್ನೂ ಓದಿ: PM Modi Gujarat Visit ಮೊಧೆರಾ ಭಾರತದ ಮೊದಲ ಸೌರಶಕ್ತಿ ಗ್ರಾಮ, ಪ್ರಧಾನಿ ಮೋದಿ ಘೋಷಣೆ

"ಪ್ರಧಾನಿ ಸರ್, ನಾವು ದೆಹಲಿಯಲ್ಲಿ ಶಿಕ್ಷಣದಲ್ಲಿ ಅದ್ಭುತ ಕೆಲಸ ಮಾಡಿದ್ದೇವೆ. 5 ವರ್ಷಗಳಲ್ಲಿ ದೆಹಲಿಯ ಎಲ್ಲಾ ಸರ್ಕಾರಿ ಶಾಲೆಗಳನ್ನು ಹೊಳೆಯುವಂತೆ ಮಾಡಿದ್ದೇವೆ.. ಇದೇ ರೀತಿ, ದೇಶಾದ್ಯಂತ ಶಾಲೆಗಳು ಐದು ವರ್ಷಗಳಲ್ಲಿ ಚೇತರಿಸಿಕೊಳ್ಳಬಹುದು. ನಮಗೆ ಅನುಭವವಿದೆ. ದಯವಿಟ್ಟು ಇದಕ್ಕಾಗಿ ನಮ್ಮನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ. ದೇಶಕ್ಕಾಗಿ ಒಂದಾಗಿ ಕೆಲಸ ಮಾಡೋಣ" ಎಂದು ಹಿಂದಿಯಲ್ಲಿ ದೆಹಲಿ ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.

ಅಲ್ಲದೆ, ದೆಹಲಿಯ ಶಿಕ್ಷಣ ಸಚಿವರೂ ಆಗಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಹ ಕ್ಲಾಸ್‌ರೂಮಿನಲ್ಲಿ ಕುಳಿತಿರುವ ಮತ್ತೊಂದು ಫೋಟೋವನ್ನು ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ. ಇದೇ ರೀತಿ, ಮೋದಿ ತರಗತಿಯಲ್ಲಿ ಕೂತಿರುವ ಫೋಟೋವನ್ನೂ ಸೇರಿಸಿ ಕೊಲಾಜ್‌ ಮಾಡಿದ್ದಾರೆ.  

ಇನ್ನು, ಮತ್ತೊಂದು ಟ್ವೀಟ್‌ನಲ್ಲಿ ಅರವಿಂದ್‌ ಕೇಜ್ರಿವಾಲ್‌ "ಚುನಾವಣೆ ಸಮಯದಲ್ಲಿ ಮಾತ್ರ ಶಿಕ್ಷಣ ನೆನಪಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಎಲ್ಲಾ ಸರ್ಕಾರಗಳು ಒಟ್ಟಾಗಿ ಸೇರಿ ಕೇವಲ 5 ವರ್ಷಗಳಲ್ಲಿ ಎಲ್ಲಾ ಸರ್ಕಾರಿ ಶಾಲೆಗಳನ್ನು ಅದ್ಭುತಗೊಳಿಸಬಹುದು" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನಗರ ನಕ್ಸಲರಿಂದ ಯೋಜನೆಗಳಿಗೆ ತಡೆ: Narendra Modi ಕಿಡಿ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತ್ತು ಇತ್ತೀಚೆಗೆ ಪಂಜಾಬ್‌ನಲ್ಲಿ ಎಎಪಿಗಿಂತ ಬಿಜೆಪಿ ಕಳಪೆ ಸಾಧನೆ ಮಾಡಿದೆ. ದೆಹಲಿಯಲ್ಲಿ, ಎರಡನೇ ಸ್ಥಾನ ಪಡೆದುಕೊಂಡು ಕೇಸರಿ ಪಕ್ಷ ವಿಪಕ್ಷದ ಸಾಧನೆ ಮಾಡಿದೆ. ಇನ್ನೊಂದೆಡೆ, AAP ತನ್ನ ದೆಹಲಿಯ ಆಡಳಿತ ಮಾದರಿಯನ್ನು ಚುನಾವಣಾ ಪ್ರಚಾರಗಳಲ್ಲಿ ಬಳಸಿಕೊಳ್ಳುತ್ತಿದೆ. ವಿಶೇಷವಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿನ ತಮ್ಮ ಸಾಧನೆಯನ್ನು ಬಿಂಬಿಸಿಕೊಳ್ಳುತ್ತಿದೆ. ಇದು ಪಂಜಾಬ್‌ನಲ್ಲಿ ಪೊರಕೆಯ ಪಕ್ಷಕ್ಕೆ ಲಾಭವನ್ನೂ ನೀಡಿದ್ದು, ಅಲ್ಲಿ ಪಕ್ಷವು ಭರ್ಜರಿ ಜಯ ಗಳಿಸುವ ಮೂಲಕ ಅಧಿಕಾರಕ್ಕೇರಿತು. 

Latest Videos
Follow Us:
Download App:
  • android
  • ios