ಫೆ. 24ರಿಂದ ಎರಡು ದಿನಗಳ ಭಾರತ ಪ್ರವಾಸದಲ್ಲಿ ಡೋನಾಲ್ಡ್ ಟ್ರಂಪ್| ಅಹಮದಾಬಾದ್’ನಲ್ಲಿ ‘ಕೇಮ್‌ಛೋ ಟ್ರಂಪ್’ ಸಮಾರಂಭದಲ್ಲಿ ಅಮೆರಿಕ ಅಧ್ಯಕ್ಷ ಭಾಗಿ| ಟ್ರಂಪ್ ಸ್ವಾಗತಕ್ಕಾಗಿ ಹಣದ ಹೊಳೆಯನ್ನೇ ಹರಿಸುತ್ತಿರುವ ಗುಜರಾತ್ ಸರ್ಕಾರ| ಟ್ರಂಪ್’ಗಾಗಿ 100 ಕೋಟಿ ರೂ. ಖರ್ಚು ಮಾಡುತ್ತಿರುವ ಗುಜರಾತ್ ಸರ್ಕಾರ| ಅಹಮದಾಬಾದ್ ನಗರ ಸೌಂದರ್ಯಕ್ಕಾಗಿ ಕೋಟಿ ಕೋಟಿ ರೂ. ವ್ಯಯ| ಬಜೆಟ್ ನಿರ್ಬಂಧ ತೆರವುಗೊಳಿಸಿದ ಸಿಎಂ ವಿಜಯ್ ರೂಪಾನಿ|

ಅಹಮದಾಬಾದ್(ಫೆ.15): ಇದೇ ಫೆ. 24ರಿಂದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎರಡು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಗುಜರಾತ್’ನ ಅಹಮದಾಬಾದ್’ಗೆ ಬರಲಿರುವ ಟ್ರಂಪ್, ‘ಕೇಮ್‌ಛೋ ಟ್ರಂಪ್’ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಈ ಹಿನ್ನೆಲೆಯಲ್ಲಿ ಟ್ರಂಪ್ ಅದ್ದೂರಿ ಸ್ವಾಗತಕ್ಕೆ ಸಜ್ಜಾಗಿರುವ ಗುಜರಾತ್ ಸರ್ಕಾರ, ಇದಕ್ಕಾಗಿ ಹಣದ ಹೊಳೆಯನ್ನೇ ಹರಿಸುತ್ತಿದೆ. ಮೂಲಗಳ ಪ್ರಕಾರ ಟ್ರಂಪ್ ಸ್ವಾಗತಕ್ಕಾಗಿ ಗುಜರಾತ್ ಸರ್ಕಾರ 100 ಕೋಟಿ ರೂ. ಹಣ ಖರ್ಚು ಮಾಡುತ್ತಿದೆ.

ಟ್ರಂಪ್‌ಗೆ ಸ್ಲಮ್ ಕಾಣದಂತೆ ತಡೆಯಲು ಅರ್ಧ ಕಿಮೀ ಉದ್ದದ ತಡೆಗೋಡೆ!

ಅಹಮದಾಬಾದ್ ವಿಮಾನ ನಿಲ್ದಾಣದಿಂದ ಮೊಟೆರಾ ಸ್ಟೇಡಿಯಂಗೆ ಟ್ರಂಪ್ ಸಂಚರಿಸುವ 1.5 ಕಿ.ಮೀ ಉದ್ದದ ರಸ್ತೆಯನ್ನು ನವೀಕರಣಗೊಳಿಸಲಾಗುತ್ತಿದೆ. ಇದಕ್ಕಾಗಿ ಗುಜರಾತ್ ಸರ್ಕಾರ ಬೋಬ್ಬರಿ 80 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ.

ಅಲ್ಲದೇ ಸ್ಟೇಡಿಯಂನಲ್ಲಿ ಟ್ರಂಪ್ ಭದ್ರತೆಗಾಗಿ 10-15 ಕೋಟಿ ರೂ. ಖರ್ಚಾಗಲಿದ್ದು, ಸ್ಟೇಡಿಯಂಗೆ ಆಗಮಿಸುವ ಒಂದು ಲಕ್ಷಕ್ಕೂ ಅಧಿಕ ಜನರ ಊಟೋಪಚಾರಕ್ಕೆ 7ರಿಂದ 10 ಕೋಟಿ ರೂ. ಖರ್ಚು ಮಾಡಲಿದೆ.

Scroll to load tweet…

ಇಷ್ಟೇ ಅಲ್ಲದೇ ರಸ್ತೆ ವಿಭಜಕಗಳಲ್ಲಿ ಪಾಮ್ ಗಿಡಗಳನ್ನು ನೆಡಲು ಹಾಗೂ ನಗರ ಸೌಂದರ್ಯಕ್ಕಾಗಿ 6 ಕೋಟಿ ರೂ. ಹಾಗೂ ಟ್ರಂಪ್-ಮೋದಿ ಭಾಗಿಯಾಗಲಿರುವ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ 4 ಕೋಟಿ ರೂ. ವ್ಯಯಿಸಲಾಗುತ್ತಿದೆ.

‘ಕೇಮ್‌ಛೋ ಟ್ರಂಪ್‌’ ಅಹಮದಾಬಾದ್‌ನಲ್ಲಿ: ಎಕ್ಸೈಟ್ ಆಗಿದ್ದೇನೆ ಎಂದ ಟ್ರಂಪ್!

ಟ್ರಂಪ್ ಭೇಟಿಯ ಸಿದ್ಧತೆಗಾಗಿ ಯಾವುದೇ ಬಜೆಟ್ ನಿರ್ಬಂಧವಿಲ್ಲ ಎಂದು ಈಗಾಗಲೇ ಸಿಎಂ ವಿಜಯ್ ರೂಪಾನಿ ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ಟ್ರಂಪ್ ಅವರ ಮನ ಗೆಲ್ಲಲು ಹಣದ ಹೊಳೆಯನ್ನೇ ಹರಿಸಲಾಗುತ್ತಿದೆ.

ಫೆಬ್ರವರಿ 15ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ