‘ಕೇಮ್‌ಛೋ ಟ್ರಂಪ್’ ಅಹಮದಾಬಾದ್‌ನಲ್ಲಿ: ಎಕ್ಸೈಟ್ ಆಗಿದ್ದೇನೆ ಎಂದ ಟ್ರಂಪ್!
ಎರಡು ದಿನಗಳ ಭಾರತ ಪ್ರವಾಸಕ್ಕೆ ಬರಲಿರುವ ಅಮೆರಿಕ ಅಧ್ಯಕ್ಷ| ಫೆ.24ರಂದು ಭಾರತಕ್ಕೆ ಪತ್ನಿ ಸಮೇತರಾಗಿ ಬರಲಿರುವ ಡೋನಾಲ್ಡ್ ಟ್ರಂಪ್| ಅಹಮದಾಬಾದ್‌ನಲ್ಲಿ ‘ಕೇಮ್‌ಛೋ ಟ್ರಂಪ್’ ಸಮಾರಂಭ ಆಯೋಜನೆ| ಅಹಮದಾಬಾದ್‌ನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ‘ಕೇಮ್‌ಛೋ ಟ್ರಂಪ್’ ಸಮಾರಂಭ| ಹೌಡಿ ಮೋದಿ ಕಾರ್ಯಕ್ರಮಕ್ಕೆ ಪರ್ಯಾಯವಾಗಿ ಅಹಮದಾಬಾದ್‌ನಲ್ಲಿ ‘ಕೇಮ್‌ಛೋ ಟ್ರಂಪ್’|
ನವದೆಹಲಿ(ಫೆ.11): ಇದೇ ಫೆ.24ರಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎರಡು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದು, ಟ್ರಂಪ್ ಸ್ವಾಗತಕ್ಕೆ ಗುಜರಾತ್ ರಾಜಧಾನಿ ಅಹಮದಾಬಾದ್ ಸಜ್ಜಾಗಿದೆ.
ತಮ್ಮ ಭಾರತ ಭೇಟಿಯಲ್ಲಿ ಟ್ರಂಪ್ ಗುಜರಾತ್’ಗೂ ಭೇಟಿ ನೀಡಲಿದ್ದು, ಈ ವೇಳೆ ‘ಕೇಮ್‌ಛೋ ಟ್ರಂಪ್’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರಧಾನಿ ಮೋದಿ ಅಮೆರಿಕ ಭೇಟಿ ವೇಳೆ ಹಮ್ಮಿಕೊಳ್ಳಲಾಗಿದ್ದ ‘ಹೌಡಿ ಮೋದಿ’ ಕಾರ್ಯಕ್ರಮದಂತೆಯೇ ಈ ಕಾರ್ಯಕ್ರಮವೂ ಇರಲಿದೆ.
ಅಹಮಾದಾಬಾದ್’ನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಕೇಮ್‌ಛೋ ಟ್ರಂಪ್ ಕಾರ್ಯಕ್ರಮ ನಡೆಯಲಿದ್ದು, 1 ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.
24, 25ರಂದು ಭಾರತಕ್ಕೆ ಟ್ರಂಪ್, ಪತ್ನಿ ಜೊತೆ ದಿಲ್ಲಿ, ಅಹಮದಾಬಾದ್ ಟೂರ್!
ವಿಶೇಷವೆಂದರೆ ಈ ಸ್ಟೇಡಿಯಂನ್ನು ಖುದ್ದು ಡೋನಾಲ್ಡ್ ಟ್ರಂಪ್ ಉದ್ಘಾಟಿಸಲಿದ್ದು, ಉದ್ಘಾಟನೆ ದಿನದಂದೇ ಅದ್ದೂರಿ ಸಮಾರಂಭಕ್ಕೆ ಸರ್ದಾರ್ ಪಟೇಲ್ ಸ್ಟೇಡಿಯಂ ಸಾಕ್ಷಿಯಾಗಲಿದೆ.
ಇನ್ನು ತಮ್ಮ ಭಾರತ ಪ್ರವಾಸದ ಕುರಿತು ಟ್ವೀಟ್ ಮಾಡಿರುವ ಟ್ರಂಪ್, ಭಾರತ ಭೇಟಿಗೆ ಕಾತರದಿಂದ ಕಾಯುತ್ತಿರುವುದಾಗಿ ಹೇಳಿದ್ದಾರೆ. ಟ್ರಂಪ್ ಅವರೊಂದಿಗೆ ಪತ್ನಿ ಮೆಲನಿಯಾ ಟ್ರಂಪ್ ಕೂಡ ಭಾರತಕ್ಕೆ ಬರಲಿದ್ದು, ಅಮೆರಿಕ ಅಧ್ಯಕ್ಷರ ಸ್ವಾಗತಕ್ಕೆ ಭಾರತ ಸಜ್ಜಾಗಿದೆ.