ನಾನು ಪಕ್ಷದ ಕಾರ್ಯಕರ್ತ, ಬಿಜೆಪಿ ನೂತನ ಅಧ್ಯಕ್ಷ ನಿತಿನ್ ನಬಿನ್ ನನ್ನ ಬಾಸ್ ಎಂದ ಪ್ರಧಾನಿ ಮೋದಿ
ನಾನು ಪಕ್ಷದ ಕಾರ್ಯಕರ್ತ, ನಿತಿನ್ ನಬಿನ್ ನನ್ನ ಬಾಸ್ , ಇದು ಪ್ರಧಾನಿ ನರೇಂದ್ರ ಮೋದಿ ಹೇಳಿದ ಮಾತು. ಬಿಜೆಪಿ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮೋದಿ ಭಾಷಣ ಬಿಜೆಪಿ ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಳಿಸಿದೆ.

ದಾಖಲೆ ಬರೆದ ನಿತಿನ್ ನಬಿನ್
ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಪದಗ್ರಹಣ ಮಾಡಿದ್ದಾರೆ. ಹಾಲಿ ಅಧ್ಯಕ್ಷ ಜೆಪಿ ನಡ್ಡಾ, ಅಧಿಕಾರವನ್ನು ಹಸ್ತಾಂತರ ಮಾಡಿದ್ದಾರೆ. ಕೇವಲ 45ನೇ ವರ್ಷದ ನಿತಿನ್ ನಬಿನ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ದಾಖಲೆ ಬರೆದಿದ್ದಾರೆ. ಅತೀ ಕಿರಿಯ ವಯಸ್ಸಿಗೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೇರಿದ ದಾಖಲೆ ಬರೆದಿದ್ದಾರೆ.
ನಾನು ಸಾಮಾನ್ಯ ಕಾರ್ಯಕರ್ತ, ನಿತಿನ್ ನಬಿನ್ ನನ್ನ ಬಾಸ್
ನಿತಿನ್ ನಬಿನ್ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಾನು ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತ. ನೂತನವಾಗಿ ಪದಗ್ರಹಣ ಮಾಡಿದ ಅಧ್ಯಕ್ಷ ನಿತಿನ್ ನಬಿನ್ ನನ್ನ ಬಾಸ್ ಎಂದು ಮೋದಿ ಹೇಳಿದ್ದಾರೆ. ಯುವ ನಾಯಕ ನಿತಿನ್ ನಬಿನ್ ಬಿಜೆಪಿ ಕಾರ್ಯಕರ್ತರ ಉತ್ಸಾಹಕ್ಕೆ ಡಬಲ್ ಸ್ಪೀಡ್ ನೀಡಿದ್ದಾರೆ ಎಂದಿದ್ದಾರೆ.
ನಿತಿನ್ ನಬಿನ್ ಈ ಜನರೇಶನ್ ನಾಯಕ
ನಿತಿನ್ ನಬಿನ್ ಮಿಲೇಯನಿಯಲ್ ಜನರೇಶನ್ ನಾಯಕ. ನಮ್ಮ ಕಾಲದಲ್ಲಿ ರೇಡಿಯೋ ಮೂಲಕ ಎಲ್ಲವನ್ನು ಕೇಳುತ್ತಿದ್ದೆವು. ಆದರೆ ನಿತಿನ್ ನಿಬಿನ್ ಸೇರಿದಂತೆ ಈಗನ ಕಾಲದಲ್ಲಿ ಎಐ ಬಳಕೆಯಾಗುತ್ತಿದೆ. ಯುವ ನಾಯಕತ್ವದಡಿಯಲ್ಲಿ ಬಿಜೆಪಿ ಹೊಸ ಅಧ್ಯಾಯ ಬರೆಯಲಿದೆ ಎಂದು ಪ್ರದಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಅತೀ ದೊಡ್ಡ ರಾಜಕೀಯ ಪಕ್ಷ
ಹಲವು ಹೋರಾಟ ಸಂಘರ್ಷಗಳಿಂದ ಬಿಜೆಪಿ ಹುಟ್ಟಿಕೊಂಡಿದೆ. ಸತತ ಪ್ರಯತ್ನಗಳ ಫಲವಾಗಿ ಇಂದು ವಿಶ್ವದ ಅತೀದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದು ನಿಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಲ್ಲಿ ಪ್ರತಿ ಕಾರ್ಯಕರ್ತರ ಅಭಿಪ್ರಾಯಕ್ಕೆ ಗೌರವಿದೆ. ಪ್ರಜಾಪ್ರುಭತ್ವ ಮೂಲತತ್ವದಡಿ ಬಿಜೆಪಿ ಕೆಲಸ ಮಾಡುತ್ತದೆ ಎಂದು ಮೋದಿ ಹೇಳಿದ್ದಾರೆ.
ಯುವೋತ್ಸಾಹದ ನಿತಿನ್ ನಬಿನ್
ನಿತಿನ್ ನಬಿನ್ ಹಲವು ರಾಜ್ಯಗಳಲ್ಲಿ ಕೆಲಸ ಮಾಡಿದ್ದಾರೆ. ಹಲವು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇದೀಗ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿಯೂ ಅಷ್ಟೇ ಯಶಸ್ವಿಯಾಗಿ ಕೆಲಸ ಮಾಡುವ ವಿಶ್ವಾಸವಿದೆ ಎಂದು ಮೋದಿ ಹೇಳಿದ್ದಾರೆ. ನಿತಿನ್ ನಬಿನ್‌ನಲ್ಲಿ ಯುವೋತ್ಸಾಹವಿದೆ. ನಮ್ಮ ಕಾರ್ಯಕರ್ತರಲ್ಲೂ ಇದೇ ಯುವೋತ್ಸಾಹವಿದೆ ಎಂದು ಮೋದಿ ಹೇಳಿದ್ದಾರೆ.
ಅತೀ ದೊಡ್ಡ ಪಕ್ಷಕ್ಕೆ ಅತೀ ಕಿರಿಯ ಅಧ್ಯಕ್ಷ
ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದ ವೇಳೆ ಹಲವು ವಿಚಾರ ಪ್ರಸ್ತಾಪಿಸಿದ್ದಾರೆ. ಬಿಜೆಪಿ ವಿಶ್ವದಲ್ಲೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅತೀ ಹೆಚ್ಚು ಕಾರ್ಯಕರ್ತರು, ಅತೀ ಹೆಚ್ಚು ರಾಜ್ಯಗಳಲ್ಲಿ ಅಧಿಕಾರ, ಅತೀ ಹೆಚ್ಚು ಚುನಾವಣೆ ಗೆಲುವು ಸೇರಿದಂತೆ ಹಲವು ದಾಖಲೆ ಮೂಲಕ ಬಿಜೆಪಿ ದೊಡ್ಡ ಪಕ್ಷವಾಗಿದೆ. ಈ ದೊಡ್ಡ ಪಕ್ಷಕ್ಕೆ ಅತೀ ಕಿರಿಯ ನಾಯಕ ನಿತಿನ್ ನಬಿನ್ ಅಧ್ಯಕ್ಷರಾಗಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಅತೀ ದೊಡ್ಡ ಪಕ್ಷಕ್ಕೆ ಅತೀ ಕಿರಿಯ ಅಧ್ಯಕ್ಷ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

