Asianet Suvarna News Asianet Suvarna News

Smart Phone ಕೊಳ್ಳಲು ರೈತರಿಗೆ 1500 ರು. ನೆರವು

  • ರಾಜ್ಯದ ರೈತರು ಸ್ಮಾರ್ಟ್‌ಫೋನ್‌ ಖರೀದಿಸಲು  ಸರ್ಕಾರವು 1,500 ರು. ನೆರವು ನೀಡಲು ನಿರ್ಧರಿಸಿದೆ
  • ರಾಜ್ಯದ ರೈತರು ಸ್ಮಾರ್ಟ್‌ಫೋನ್‌ ಖರೀದಿಸಲು ಗುಜರಾತ್‌ ಸರ್ಕಾರವು 1,500 ರು. ನೆರವು ನೀಡಲು ನಿರ್ಧರಿಸಿದೆ
Gujarat Farmers to get Rs 1500 to purchase smartphone snr
Author
Bengaluru, First Published Nov 22, 2021, 7:25 AM IST

ಅಹಮದಾಬಾದ್‌ (ನ.22) :  ರಾಜ್ಯದ ರೈತರು (Farmers) ಸ್ಮಾರ್ಟ್‌ ಫೋನ್‌ (Smart phone ಖರೀದಿಸಲು ಗುಜರಾತ್‌ ಸರ್ಕಾರವು 1,500 ರು. ನೆರವು ನೀಡಲು ನಿರ್ಧರಿಸಿದೆ. ಕೃಷಿ ಕ್ಷೇತ್ರದಲ್ಲಿ( Agriculture) ಡಿಜಿಟಲ್‌ ಸೇವೆಗಳು (Digital service) ಹೆಚ್ಚಾಗುತ್ತಿರುವ ಸಮಯದಲ್ಲಿ ರೈತರು (farmers) ತಮ್ಮ ಕೃಷಿ ಆದಾಯ ಹೆಚ್ಚಿಸಿಕೊಳ್ಳಲು ಹಾಗೂ ವಿವಿಧ ಉದ್ದೇಶಗಳಿಗಾಗಿ ಸ್ಮಾರ್ಟ್‌ ಫೋನ್‌ (Smart Phone) ಖರೀದಿಸಲು ರೈತರನ್ನು ಉತ್ತೇಜಿಸುವ ದೃಷ್ಟಿಯಿಂದ ಈ ನೆರವು ನೀಡಲಾಗುತ್ತಿದೆ ಎಂದು ರಾಜ್ಯ ಕೃಷಿ ಇಲಾಖೆ (Gujarath agriculture Department) ಪ್ರಕಟಣೆಯಲ್ಲಿ ತಿಳಿಸಿದೆ. 

ಗುಜರಾತ್‌ನಲ್ಲಿ (Gujarath) ಭೂಮಿ ಹೊಂದಿದ ರೈತರು ಸ್ಮಾರ್ಟ್‌ಫೋನಿನ ಒಟ್ಟು ಮೊತ್ತದ ಶೇ.10ರಷ್ಟನ್ನು ಅಂದರೆ 1,500 ರು. ನೆರವು ಪಡೆಯಲು ಅರ್ಜಿ ಸಲ್ಲಿಸಬಹುದು. ಫೋನ್‌ (Phone) ಖರೀದಿಸಲು ಮಾತ್ರ ಅರ್ಜಿ ಸಲ್ಲಿಸಬೇಕು. ಚಾರ್ಜರ್‌( Chrger), ಇಯರ್‌ ಫೋನ್‌ನಂತಹ (Ear Phone) ಬಿಡಿ ಭಾಗಗಳಿಗಾಗಿ ಅರ್ಜಿ ಸಲ್ಲಿಸುವಂತಿಲ್ಲ ಎಂದು ತಿಳಿಸಲಾಗಿದೆ.

ಭಾರತದಲ್ಲಿ ಶೀಘ್ರ ರೆಡ್ಮಿ ಇನ್ನೊಂದು ವರ್ಷನ್ ರಿಲೀಸ್ : 

ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿರುವ ರೆಡ್‌ಮಿ ನೋಟ್ 11ಟಿ 5ಜಿ (Redmi Note 11T 5G) ಸ್ಮಾರ್ಟ್‌ಫೋನ್ ಲಾಂಚ್ ದಿನಾಂಕ ಖಚಿತವಾಗಿದ್ದು, ನವೆಂಬರ್ 30ರಂದು ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಚೀನಾ (China) ಮೂಲದ ಶಿಯೋಮಿ (Xiaomi) ಸ್ಮಾರ್ಟ್‌ಫೋನ್ ಉತ್ಪಾದಕ ಕಂಪನಿಯ ಸಬ್ ಬ್ರ್ಯಾಂಡ್ ಆಗಿರುವ ರೆಡ್‌ಮಿ ಭಾರತೀಯ  (Indian) ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ಹೊಂದಿದೆ.

ಪ್ರೀಮಿಯಂ (Premium) ಮತ್ತು ಬಜೆಟ್‌ (Budget) ಸ್ಮಾರ್ಟ್‌ಫೋನ್‌ (Smartphones)ಗಳ ಮೂಲಕ ಭಾರತದಲ್ಲಿ ಗ್ರಾಹಕ ವಲಯವನ್ನು ವಿಸ್ತರಿಸಿಕೊಂಡಿರುವ ರೆಡ್‌ಮಿ (Redmi), ಇದೀಗ ರೆಡ್‌ಮಿ ನೋಟ್ 11ಟಿ 5ಜಿ (Redmi Note 11T 5G) ಸ್ಮಾರ್ಟ್‌ಫೋನ್ ಮೂಲಕ ಮತ್ತೊಂದು ಹಂತಕ್ಕೆ ಮುನ್ನುಗ್ಗುವ ಪ್ರಯತ್ನ ಮಾಡುತ್ತಿದೆ. 

ಕೆಲವು ಮೂಲಗಳ ಪ್ರಕಾರ, ಕಳೆದ ತಿಂಗಳು ಚೀನಾ (China) ಮಾರುಕಟ್ಟೆಯಲ್ಲಿ ರೆಡ್‌ಮಿ ನೋಟ್ 11 (Redmi Note 11)) ಸ್ಮಾರ್ಟ್‌ಫೋನ್ ಲಾಂಚ್ ಮಾಡಲಾಗಿತ್ತು. ಅದೇ ಸ್ಮಾರ್ಟ್‌ಫೋನ್ ಅನ್ನು ಕಂಪನಿಯು ಇದೀಗ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ರೆಡ್‌ಮಿ ನೋಟ್ 11ಟಿ 5ಜಿ (Redmi Note 11T 5G) ಎಂಬ ರಿಬ್ರ್ಯಾಂಡ್ ಮಾಡಿ ಲಾಂಚ್ ಮಾಡುತ್ತಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್ ಲಾಂಚ್ ದಿನಾಂಕ ಖಚಿತದೊಂದಿಗೆ ಕೆಲವೊಂದಿಷ್ಟು ವಿಶೇಷತೆಗಳು ಬಹಿರಂಗಗೊಂಡಿವೆ. 

ರೆಡ್‌ಮಿ ನೋಟ್ 11ಟಿ 5ಜಿ (Redmi Note 11T 5G) ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದಂತೆ ಬಿಡುಗಡೆಯಾಗಿರುವ ಟೀಸರ್ ಮೂಲಕ ಈ ಸ್ಮಾರ್ಟ್‌ಫೋನ್, ವೇಗದ ಪ್ರೊಸೆಸರ್, ಫಾಸ್ಟ್ ಚಾರ್ಜಿಂಗ್, ಹೈಯರ್ ಸ್ಕ್ರೀನ್ ರೆಫ್ರಿಶ್ ರೇಟ್ ಮತ್ತು ಸುಧಾರಿತ ಕ್ಯಾಮೆರಾವನ್ನು ನಿರೀಕ್ಷಿಸಬಹುದಾಗಿದೆ. ಹಾಗೆಯೇ, ಈ ಸ್ಮಾರ್ಟ್ ಫೋನ್, 6 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್, 6 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಹಾಗೂ 8 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್  ವೆರಿಯೆಂಟ್‌ಗಳಲ್ಲಿ ದೊರೆಯಲಿದೆ ಎನ್ನಲಾಗಿದೆ. ಈ ಬಗ್ಗೆ ಕಂಪನಿ ಮಾಹಿತಿ ನೀಡಿಲ್ಲ.

ನವೆಂಬರ್ 30ರಂದು ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ರೆಡ್‌ಮಿ ನೋಟ್ 11ಟಿ 5ಜಿ (Redmi Note 11T 5G) ಸ್ಮಾರ್ಟ್‌ಫೋನ್ ಮೂರು ಬಣ್ಣಗಳ ಆಯ್ಕೆಯಲ್ಲಿ ಮಾರಾಟಕ್ಕೆ ಸಿಗಲಿದೆ. ಅಂದರೆ, ಅಕ್ವಾಮರಿನ್ ಬ್ಲೂ (Aquamarine Blue), ಮ್ಯಾಟ್ ಬ್ಲ್ಯಾಕ್ (Matt Black) ಮತ್ತು ಸ್ಟಾರ್‌ಡಸ್ಟ್ (Stardust White) ವೈಟ್ ಬಣ್ಣಗಳಲ್ಲಿ ಸಿಗಲಿದೆ.

ಶೀಘ್ರವೇ Jiobook ಲ್ಯಾಪ್‌ಟ್ಯಾಪ್ ಲಾಂಚ್? ಬೆಲೆ ಕೂಡ ಕಡಿಮೆ ಇರುತ್ತಾ?

ಇನ್ನು ಈ ಫೋನಿನ ಡಿಸ್‌ಪ್ಲೇ (Display) ಬಗ್ಗೆ ಹೇಳುವುದಾದರೆ, 6.6 ಇಂಚ್ ಫುಲ್ ಎಚ್‌ಡಿ ಪ್ಲಸ್ ಸ್ಕ್ರೀನ್ ಇರುವ ಸಾಧ್ಯತೆ ಇದೆ. ಜೊತೆಗೆ, 8 ಜಿಬಿ ರ್ಯಾಮ್‌ನೊಂದಿಗೆ ಸಂಯೋಜಿತಗೊಂಡಿರುವ  ಅಕ್ಟಾಕೋರ್ ಮೀಡಿಯಾ ಟೆಕ್ ಡಿಮೆನ್ಸಿಟಿ 810 ಪ್ರೊಸೆಸರ್ ಇರಲಿದೆ. ಅಂದರೆ, ಈ ಪ್ರೊಸೆಸರ್ ವೇಗವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. 

ವಿಶೇಷ ಎಂದರೆ, ರೆಡ್‌ಮಿ ಈ ಫೋನಿನ ಕ್ಯಾಮೆರಾವನ್ನು ಅಪ್‌ಗ್ರೇಡ್ ಮಾಡಿದೆ ಎನ್ನಲಾಗಿದೆ. ಫೋನ್ ಹಿಂಬದಿಯಲ್ಲಿ 50 ಮೆಗಾ ಪಿಕ್ಸೆಲ್ ಮತ್ತು 8 ಮೆಗಾ ಪಿಕ್ಸೆಲ್ ಅಲ್ಟ್ರಾವೈಡ ಶೂಟರ್‌ರೊಂದಿಗೆ ಎರಡು ಕ್ಯಾಮೆರಾಗಳು ಇರಲಿವೆ ಎನ್ನಲಾಗಿದೆ. ಜೊತೆಗೆ, ಮುಂಬದಿಯಲ್ಲಿ 16 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರಲಿದೆ ಎನ್ನಲಾಗಿದೆ. ಆದರೆ, ಈವರೆಗೂ ಈ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನು ಖಚಿತಪಡಿಸಿಲ್ಲ.

ಈ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಕಂಪನಿಯು 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಿದೆ ಮತ್ತು ಇದು 33 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ. ಕಂಪನಿಯು ರೆಡ್‌ಮಿ ನೋಟ್ 11ಟಿ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆಯ ದಿನಾಂಕವನ್ನು ಮಾತ್ರವೇ ಖಚಿತಪಡಿಸಿದೆ. ಆದರೆ, ವಿಶೇಷತೆಗಳ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ

Follow Us:
Download App:
  • android
  • ios