Asianet Suvarna News Asianet Suvarna News

ಶೀಘ್ರವೇ Jiobook ಲ್ಯಾಪ್‌ಟ್ಯಾಪ್ ಲಾಂಚ್? ಬೆಲೆ ಕೂಡ ಕಡಿಮೆ ಇರುತ್ತಾ?

ಅಗ್ಗದ ಬೆಲೆಯ ಜಿಯೋಫೋನ್ ನೆಕ್ಸ್ಟ್ (JioPhone Next) ಸ್ಮಾರ್ಟ್‌ಫೋನ್ ಬಿಡುಗಡೆ ಮೂಲಕ ಸದ್ದು ಮಾಡುತ್ತಿರುವ ಜಿಯೋ ಇದೀಗ, ಲ್ಯಾಪ್‌ಟ್ಯಾಪ್ ಕೂಡ ಬಿಡುಗಡೆಗೆ ಮುಂದಾಗಿದೆ. ಜಿಯೋಬುಕ್ (JioBook) ಎಂಬ ಹೆಸರಿನ ಈ ಲ್ಯಾಪ್‌ಟ್ಯಾಪ್ ಹಲವು ವಿಶೇಷತೆಗಳನ್ನು ಹೊಂದಿವೆ ಎನ್ನಲಾಗಿದೆ. ಬಹುತೇಕ ಈ ಲ್ಯಾಪ್‌ಟ್ಯಾಪ್ ಕೂಡ ಕಡಿಮೆ  ಬೆಲೆ ದೊರೆಯಬಹುದು ಎನ್ನಲಾಗಿದೆ. ಆದರೆ, ಈ ಬಗ್ಗೆ ಖಚಿತ ಮಾಹಿತಿಯಿಲ್ಲ.

JioBook laptop may launch soon and check details
Author
Bengaluru, First Published Nov 13, 2021, 3:27 PM IST
  • Facebook
  • Twitter
  • Whatsapp

ದೀಪಾವಳಿ ಹಬ್ಬಕ್ಕೆ ಅಗ್ಗದ ಬೆಲೆಯ ಜಿಯೋ ಫೋನ್ ನೆಕ್ಸ್ಟ್ (JioPhone Next) ಲಾಂಚ್ ಮಾಡಿದ್ದ ರಿಲಯನ್ಸ್ ಇದೀಗ ತನ್ನ ಮೊದಲ ಲ್ಯಾಪ್‌ಟ್ಯಾಪ್ ಕೂಡ ಲಾಂಚ್ ಮಾಡುವ ಸಿದ್ಧತೆಯಲ್ಲಿದೆ. ಗೂಗಲ್ (Google) ಜತೆಗೂಡಿ ರಿಲಯನ್ಸ್ (Reliance) ಜಿಯೋ ಫೋನ್ ನೆಕ್ಸ್ಟ್ ಅಭಿವೃದ್ಧಿಪಡಿಸಿ, ಕಡಿಮೆ ಬೆಲೆಗೆ ಬಿಡುಗಡೆ ಮಾಡಿತ್ತು. ಈ ಫೋನ್ ‌ಬಗ್ಗೆ ಜನರಿಂದ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಈಗ ಲ್ಯಾಪ್‌ಟ್ಯಾಪ್ ಕೂಡ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಜಿಯೋ ಫೋನ್ ನೆಕ್ಸ್ ರೀತಿಯಲ್ಲೇ ಜಿಯೋಬುಕ್ (JioBook) ಲ್ಯಾಪ್‌ಟ್ಯೂಪ್ ಕೂಡ ಅಗ್ಗದ ದರಕ್ಕೆ ದೊರೆಯುವ ಸಾಧ್ಯತೆ ಇದೆ. ಹಾಗಾಗಿ, ಜಿಯೋಬುಕ್ ಎಂಟ್ರಿಲೇವಲ್ ಲ್ಯಾಪ್‌ಟ್ಯಾಪ್ ಆಗಿರಬಹುದು ಎಂದು ಊಹೆ ಮಾಡಬಹುದಾಗಿದೆ. ಶೀಘ್ರವೇ ಬಿಡುಗಡೆಯಾಗಲಿರುವ  ಜಿಯೋಬುಕ್, ಗೀಕ್‌ಬೆಂಚ್‌ (Geek Bench) ನಲ್ಲಿ ಕಾಣಿಸಿಕೊಂಡಿದ್ದು, ಅದರ ಒಂದಿಷ್ಟು ಮಾಹಿತಿಗಳು ಬಹಿರಂಗಗೊಂಡಿವೆ.

Smartphone Release: ಮೋಟೋರೋಲಾ ಎಡ್ಜ್ ಎಕ್ಸ್ ಬಿಡುಗಡೆಗೆ ಸಿದ್ಥತೆ

ಈಗ ಸೋರಿಕೆಯಾಗಿರುವ ಮಾಹಿತಿಗಳ ಪ್ರಕಾರ, ಮೀಡಿಯಾಟೆಕ್ ಎಂಟಿ8788 ಪ್ರೊಸೆಸರ್ ಆಧರಿತವಾಗಿರಲಿದೆ ಈ ಜಿಯೋಬುಕ್ ಲ್ಯಾಪ್‌ಟ್ಯಾಪ್. 2 ಜಿಬಿ ರ್ಯಾಮ್‌ನೊಂದಿಗೆ ಆಂಡ್ರಾಯ್ಡ್ 11 ಆಪರೇಟಿಂಗ್ ಸಾಫ್ಟ್‌ವೇರ್ ಕೂಡ ಇರಲಿದೆ. ಸಿಂಗಲ್ ಕೋರ್‌ ಟೆಸ್ಟ್‌ನಲ್ಲಿ ಜಿಯೋಬುಕ್ 1178 ಸ್ಕೋರ್ ಮಾಡಿದ್ದರೆ, ಮಲ್ಟಿ ಕೋರ್‌ ಟೆಸ್ಟ್‌ನಲ್ಲಿ 4,246 ಪಾಯಿಂಟ್ಸ್ ಸ್ಕೋರ್ ಮಾಡಿದೆ ಎನ್ನಲಾಗಿದೆ. ಜಿಯೋಫೋನ್ ನೆಕ್ಸ್ಟ್ ಘೋಷಣೆ ವೇಳೆಯ ಜಿಯೋ ಬುಕ್ ಕೂಡ ಕಂಪನಿ ಹೊರ ತರಲಿದೆ ಎಂದು ಹೇಳಲಾಗಿತ್ತು.

ಕೆಲವು ಮೂಲಗಳ ಪ್ರಕಾರ, ಜಿಯೋಬುಕ್ ಲ್ಯಾಪ್‌ಟ್ಯಾಪ್ ಕೂಡ ದೀಪಾವಳಿಗೆ ಜಿಯೋ ಪೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್ ಜತೆಗೆ ಲಾಂಚ್ ಆಗಬೇಕಿತ್ತು. ಆದರೆ, ಈ ಸ್ಮಾರ್ಟ್‌ಫೋನ್ ಜತೆಗೆ ಬಿಡುಗಡೆ ಸಾಧ್ಯವಾಗಿಲ್ಲ. ಆದರೆ, ಈಗ ಸೋರಿಕೆಯಾಗಿರುವ ಮಾಹಿತಿಗಳ ಪ್ರಕಾರ, ಸದ್ಯದಲ್ಲೇ ಕಂಪನಿಯು ಜಿಯೋಬುಕ್ ಲ್ಯಾಪ್‌ಟ್ಯಾಪ್ ಕೂಡ ಲಾಂಚ್ ಮಾಡಲಿದೆ ಎನ್ನಲಾಗುತ್ತಿದೆ.

ಈಗಿರುವ ಮಾಹಿತಿಗಳ ಪ್ರಕಾರ, ಜಿಯೋಬುಕ್ ಲ್ಯಾಪ್‌ಟ್ಯಾಪ್‌ ಸಾಕಷ್ಟು ಫೀಚರ್‌ಗಳನ್ನು ಒಳಗೊಂಡಿರುವ ಸಾಧ್ಯತೆ ಇದೆ. ಇದು ಎಂಟ್ರಿ ಲೇವಲ್ ಲ್ಯಾಪ್‌ಟ್ಯಾಪ್ ಎನಿಸಿದರೂ ಸಾಕಷ್ಟು ವಿಶಿಷ್ಟ ಫೀಚರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಕಂಪನಿಯು ಇನ್ನೂ ಯಾವುದೇ ಮಾಹಿತಿಯನ್ನು ಖಚಿತಪಡಿಸಿಲ್ಲ. ಲ್ಯಾಪ್‌ಟ್ಯಾಪ್ ಬಿಡುಗಡೆ ಹೊತ್ತಿಗೆ ಬಹುತೇಕ ಮಾಹಿತಿಯು ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.

WhatsApp community features; ಇದರಿಂದ ಸರಳವಾಗಲಿದೆ Group Talks

ಜಿಯೋ ಫೋನ್ ಖರೀದಿ ಮುನ್ನ ನೋಂದಣಿ 
ರಿಲಯನ್ಸ್‌ ಒಡೆತನದ ಜಿಯೋ ಕಂಪನಿ (Jio) ಮತ್ತು ಗೂಗಲ್‌ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಅಗ್ಗದ ದರದ ಜಿಯೋಫೋನ್‌ ನೆಕ್ಸ್ಟ್‌(JioPhone Next) ಹೆಸರಿನ ಸ್ಮಾರ್ಟ್‌ಫೋನ್‌ ದೇಶದ್ಯಾಂತ ಮಾರಾಟಕ್ಕೆ ಲಭ್ಯವಾಗಿದೆ. 6499 ರು. ಬೆಲೆ ಬಾಳುವ ಈ ಮೊಬೈಲ್‌ ಅನ್ನು ರಿಲಯನ್ಸ್‌ ಡಿಜಿಟಲ್‌ (Reliance Digital) ಮಳಿಗೆಗಳಲ್ಲಿ ಲಭ್ಯವಿದ್ದು, ಗ್ರಾಹಕರು ಖರೀದಿಸಬಹುದಾಗಿದೆ. ಅಲ್ಲದೆ ಗ್ರಾಹಕರು ಕೇವಲ 1999 ರು. ಹಾಗೂ 500 ರು. ಪ್ರೊಸೆಸಿಂಗ್‌ ಶುಲ್ಕದೊಂದಿಗೆ (Processing Fee) ಬಾಕಿ ಹಣವನ್ನು ಪ್ರತೀ ತಿಂಗಳ ಕಂತು (EMI)ಗಳಲ್ಲಿ ಪಾವತಿಸುವ ರೀತಿಯಲ್ಲೂ ಈ ಮೊಬೈಲ್‌ ಖರೀದಿಸಲು ಅವಕಾಶವಿದೆ. 

ಈ ಮೊಬೈಲ್‌ ಖರೀದಿಸಲು ರಿಲಯನ್ಸ್‌ ಮಳಿಗೆಗಳಿಗೆ ಹೋಗುವ ಮುನ್ನ ಗ್ರಾಹಕರು 7018-270-182 ಸಂಖ್ಯೆಗೆ ಹಾಯ್‌ (Hi) ಎಂದು ಸಂದೇಶ ರವಾನಿಸಿ, ತಮ್ಮ ಹೆಸರುಗಳನ್ನು ನೋಂದಾಯಿಸಲೇಬೇಕು ಎಂದು ರಿಲಯನ್ಸ್‌ ಗ್ರಾಹಕರಿಗೆ ಕೋರಿದೆ. ಅಥವಾ ರಿಲಯನ್ಸ್‌ನ ಅಧಿಕೃತ ವೆಬ್‌ಸೈಟ್ ನಲ್ಲಿ ಕೂಡ ಗ್ರಾಹಕರೊ ನೋಂದಾವಣಿ ಮಾಡಕೊಳ್ಳಬಹುದಾಗಿದೆ. ನೋಂದಣಿ ಪ್ರಕ್ರಿಯೆ ವೇಳೆ ಬಳಕೆದಾರರು ತಮ್ಮ ಸ್ಥಳವನ್ನು (Area) ಹಂಚಿಕೊಳ್ಳುವ ಅಗತ್ಯವಿದೆ ಮತ್ತುನಂತರ, ಬಳಕೆದಾರರು ಯಾವ ಅಂಗಡಿಗೆ ಹೋಗುವಂತೆ ಸೂಚನೆಯನ್ನು ಪಡೆಯುತ್ತಾರೆ ಎಂದು ಕಂಪನಿ ತಿಳಿಸಿದೆ. ಇದಾದ ಬಳಿಕವೇ ಗ್ರಾಹಕರು ಮೊಬೈಲ್‌ ಖರೀದಿಸಲು ಮಳಿಗೆಗಳಿಗೆ ತೆರಳಬೇಕು.

YouTubeನಲ್ಲಿ ಇನ್ನು ಮುಂದೆ ಡಿಸ್‌ಲೈಕ್ ಕೌಂಟ್ ಕಾಣಲ್ಲ! 

JioPhone Next ಸುಲಭ ಮಾರಾಟವನ್ನು ಖಚಿತಪಡಿಸಿಕೊಳ್ಳಲು ಭಾರತದಾದ್ಯಂತ 30,000ಕ್ಕಿಂತ ಹೆಚ್ಚು ಮಳಿಗೆಗಳೊಂದಿಗೆ  ಜಿಯೋ ಒಪ್ಪಂದ ಮಾಡಿಕೊಂಡಿದೆ ಎಂದು ಕಂಪನಿ ತಿಳಿಸಿದೆ. ಜಿಯೋ ಕಾಗದ ರಹಿತ ಡಿಜಿಟಲ್ ಫೈನಾನ್ಸಿಂಗ್ (Digital Financing) ಆಯ್ಕೆಯನ್ನು ಸಹ ಲಭ್ಯವಾಗುವಂತೆ ಮಾಡಿದೆ. ಇದು ದೇಶದ ಪ್ರತಿ ಮೂಲೆಯಲ್ಲೂ ಲಭ್ಯವಿರಲಿದೆ ಎಂದು ಕಂಪನಿ ತಿಳಿಸಿದೆ. ಸದ್ಯಕ್ಕೆ ಆನ್‌ಲೈನ್ ಜಿಯೋ ಸ್ಟೋರ್‌ನಿಂದ JioPhone Next ಅನ್ನು ಖರೀದಿಸಲು ಯಾವುದೇ ಆಯ್ಕೆಗಳಿಲ್ಲ. ನಿಮ್ಮ ಹತ್ತಿರದ ಜಿಯೋ ಸ್ಟೋರ್ ಜಿಯೋ ಅಧಿಕೃತ ವೆಬ್‌ಸೈಟ್ ಮೂಲಕ ನೀವು ಪತ್ತೆ ಮಾಡಬಹುದು.

Follow Us:
Download App:
  • android
  • ios