Asianet Suvarna News Asianet Suvarna News

ಕಾಂಗ್ರೆಸ್ ಕಾರ್ಯಕರ್ತರಿಂದಲೇ ಗುಜರಾತ್‌ನಲ್ಲಿ 'ಕೈ' ಕಚೇರಿ ಧ್ವಂಸ

ಗುಜರಾತ್‌ನಲ್ಲಿ ಇಲೆಕ್ಷನ್ ಕಾವು ಜೋರಾಗಿದೆ. ಟಿಕೆಟ್ ಸಿಗದೆ ಅಸಮಾಧಾನಗೊಂಡ ವಿವಿಧ ರಾಜಕೀಯ ಪಕ್ಷಗಳ ನಾಯಕರು ಕಾರ್ಯಕರ್ತರು ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದು, ಕೆಲವರು ಟಿಕೆಟ್ ಸಿಗದೇ ಪಕ್ಷಾಂತರ ಮಾಡುತ್ತಿದ್ದಾರೆ.

Gujarat Assembly Election, Upset Congress workers demolish their own party office in Ahmedabad akb
Author
First Published Nov 14, 2022, 6:03 PM IST

ಅಹ್ಮದಾಬಾದ್: ಗುಜರಾತ್‌ನಲ್ಲಿ ಇಲೆಕ್ಷನ್ ಕಾವು ಜೋರಾಗಿದೆ. ಟಿಕೆಟ್ ಸಿಗದೆ ಅಸಮಾಧಾನಗೊಂಡ ವಿವಿಧ ರಾಜಕೀಯ ಪಕ್ಷಗಳ ನಾಯಕರು ಕಾರ್ಯಕರ್ತರು ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದು, ಕೆಲವರು ಟಿಕೆಟ್ ಸಿಗದೇ ಪಕ್ಷಾಂತರ ಮಾಡುತ್ತಿದ್ದಾರೆ. ಹಾಗೆಯೇ ಟಿಕೆಟ್ ಸಿಗದ ಕಾಂಗ್ರೆಸ್‌ ಕಾರ್ಯಕರ್ತರ ಅಸಮಾಧಾನವೂ ಮುಗಿಲು ಮುಟ್ಟಿದ್ದು, ಅಹ್ಮದಾಬಾದ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಪಕ್ಷದ ಕಚೇರಿಯೇ ಧ್ವಂಸಗೊಂಡಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಪ್ರಸ್ತುತ ಜಮಾಲ್‌ಪುರ-ಖಾಡಿಯಾ ಕ್ಷೇತ್ರದ ಹಾಲಿ ಶಾಸಕ ಇಮ್ರಾನ್ ಖೇಡವಾಲಾ (Imran Khedawala) ಅವರಿಗೆ ಟಿಕೆಟ್ ನೀಡುವ ನಿರ್ಧಾರ ಖಂಡಿಸಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಇಂದು ಅಹ್ಮದಾಬಾದ್‌ನಲ್ಲಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಗೆ ನುಗ್ಗಿ ಪಕ್ಷದ ಹಿರಿಯ ನಾಯಕ ಭರತ್ ಸಿಂಹ ಸೋಲಂಕಿ (Bharatsinh Solanki) ಅವರ ಪೋಸ್ಟರ್‌ಗಳನ್ನು, ನಾಮಫಲಕಗಳನ್ನು ಕಿತ್ತು ಬಿಸಾಕಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಅವರ ವಿರುದ್ಧ ಅವಮಾನಕಾರಿ ಪದಗಳನ್ನು ಬರೆದು ಗೊಡೆಗಳಿಗೆ ಅಂಟಿಸಿದ್ದಲ್ಲದೇ ಸ್ಪ್ರೇ ಪೇಂಟ್ ಬಳಸಿ ಗೋಡೆಗಳನ್ನು ವಿರೂಪಗೊಳಿಸಿದರು. ಅಲ್ಲದೇ ಹಾಲಿ ಶಾಸಕ ಇಮ್ರಾನ್ ಖೇಡವಾಲ ಅವರಿಂದ ಕಾಂಗ್ರೆಸ್ ನಾಯಕ ಭರತ್ ಸಿಂಹ ಸೋಲಂಕಿ ಹಣ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು. 

ಚುನಾವಣಾ ಬಾಂಡ್ ಗಳೇ ರಾಜಕೀಯ ಪಕ್ಷಗಳ ತಿಜೋರಿ; 2018ರಿಂದ ಇಲ್ಲಿಯ ತನಕ 10,791ಕೋಟಿ ರೂ. ಸಂಗ್ರಹ

ಇದು ಭಾರತೀಯ ಜನತಾ ಪಕ್ಷಕ್ಕೆ (BJP) ಸ್ಥಾನವನ್ನು ಬಿಟ್ಟು ಕೊಡಲು ಮಾಡಿದ ಪಿತೂರಿಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಪ್ರತಿಭಟನಾಕಾರರ ಹೇಳಿಕೆ ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಬಿಜೆಪಿ ತನ್ನ 160 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಐವರು ಸಚಿವರು ಮತ್ತು ವಿಧಾನಸಭಾ ಸ್ಪೀಕರ್ ಸೇರಿದಂತೆ 38 ಹಾಲಿ ಶಾಸಕರನ್ನು ಕೈಬಿಟ್ಟಿದೆ. ಹೀಗಾಗಿ ಬಿಜೆಪಿಗೂ ಬಂಡಾಯದ ಬಿಸಿ ತಟ್ಟುತ್ತಿದ್ದು, ಆರು ಬಾರಿ ಬಿಜೆಪಿ ಶಾಸಕರಾಗಿದ್ದ ಮಧುಭಾಯಿ ಶ್ರೀವಾಸ್ತವ್ (Madhubhai Shrivastav) ಅವರು ಬಂಡಾಯ ಅಥವಾ ಸ್ವಾತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

ಗುಜರಾತ್ ಚುನಾವಣೆ: ಒಂದೇ ಕ್ಷೇತ್ರದಿಂದ ಕಣಕ್ಕಿಳಿದ ರವೀಂದ್ರ ಜಡೇಜಾ ಪತ್ನಿ, ಸೋದರಿ

ಬಿಜೆಪಿ ಟಿಕೆಟ್ ನಿರ್ಧಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ (Bhupendra PateL) ಅವರು ಏನೂ ಮಾಡಲು ಸಾಧ್ಯವಿಲ್ಲ, ಏಕೆಂದರೆ ಎಲ್ಲವೂ ದೆಹಲಿಯ ಉನ್ನತ ನಾಯಕತ್ವ ನಿರ್ಧರಿಸುತ್ತದೆ ಎಂದು ಗುಜರಾತ್ ಗಲಭೆ ಪ್ರಕರಣದಲ್ಲಿ ಹೆಸರು ಕೇಳಿ ಬಂದಿದ್ದ, ಗುಜರಾತ್‌ನ ಪ್ರಭಾವಿ ನಾಯಕ ಶ್ರೀವಾಸ್ತವ್ (Shrivastav) ಹೇಳಿದ್ದಾರೆ. 182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ  ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ . ಡಿಸೆಂಬರ್ 8 ರಂದು ಎಣಿಕೆ ಕಾರ್ಯ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ. 

Follow Us:
Download App:
  • android
  • ios