ಗುಜರಾತ್ ಚುನಾವಣೆ: ಒಂದೇ ಕ್ಷೇತ್ರದಿಂದ ಕಣಕ್ಕಿಳಿದ ರವೀಂದ್ರ ಜಡೇಜಾ ಪತ್ನಿ, ಸೋದರಿ
ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆ ವೇಳೆ ಜಾಮ್‌ನಗರ ಉತ್ತರ ವಿಧಾನಸಭಾ ಕ್ಷೇತ್ರ ಕೌಟುಂಬಿಕ ರಾಜಕೀಯ ಕದನಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ.
ಅಹಮದಾಬಾದ್: ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆ ವೇಳೆ ಜಾಮ್‌ನಗರ ಉತ್ತರ ವಿಧಾನಸಭಾ ಕ್ಷೇತ್ರ ಕೌಟುಂಬಿಕ ರಾಜಕೀಯ ಕದನಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾರ ಪತ್ನಿ ರಿವಾಬಾ ಕಣಕ್ಕೆ ಇಳಿಯುವ ಸಾಧ್ಯತೆ ಇದ್ದರೆ, ಕಾಂಗ್ರೆಸ್‌ನಿಂದ ಜಡೇಜಾರ ಸೋದರಿ ನೈನಾ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗುತ್ತಿದೆ.
ರಿವಾಬಾ (Rivaba) ಖ್ಯಾತ ಉದ್ಯಮಿಯ(famous businessman) ಪುತ್ರಿ. 2019ರಲ್ಲಿ ಬಿಜೆಪಿ ಸೇರಿ ಸ್ಥಳೀಯ ನಾಯಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಅಲ್ಲಿ ಹಾಲಿ ಬಿಜೆಪಿ ಶಾಸಕ ಧಮೇಂದ್ರ ಸಿಂಗ್ (Dhamendra Singh)ಅವರಿಗೂ ಉತ್ತಮ ಹೆಸರು ಉಳಿದಿಲ್ಲ. ಹೀಗಾಗಿ ರಿವಾಬಾಗೆ ಸೀಟು ಸಿಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಮತ್ತೊಂದೆಡೆ ಜಡೇಜಾ ಸೋದರಿ ನೈನಾ(Naina) ಜಾಮ್‌ನಗರ (Jamnagar) ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ. ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಅವರಿಗೂ ಟಿಕೆಟ್ ಸಿಗುವ ಸಾಧ್ಯತೆ ದಟ್ಟವಾಗಿದೆ.
ಹೀಗೆ ಇಬ್ಬರಿಗೂ ಸೀಟು ಸಿಕ್ಕರೆ ಜಡೇಜಾ ಪತ್ನಿ ಮತ್ತು ಸೋದರಿ ನಡುವಿನ ಸೆಣಸು ಇಡೀ ದೇಶದ ಗಮನ ಸೆಳೆಯುವುದು ಖಚಿತ.
IPL 2023 ಸಿಎಸ್‌ಕೆ ಅಭಿಮಾನಿಗಳಿಗೆ ಗುಡ್ ನ್ಯೂಸ್, ಜಡೇಜಾರನ್ನು ಉಳಿಸಿಕೊಂಡ ಧೋನಿ!
ಇವನಿಗೆ ಮದುವೆ ಮಾಡಿ, ಜವಾಬ್ದಾರಿ ಬಂದ್ರೆ ಸುಧಾರಿಸಬಹುದು; ಧವನ್‌ಗೆ ಜಡ್ಡು ಹೀಗಂದಿದ್ದೇಕೆ..? ವಿಡಿಯೋ ವೈರಲ್