Asianet Suvarna News Asianet Suvarna News

ಕೈ ಜೊತೆ ಅಸಮಾಧಾನ: ಹಾರ್ದಿಕ್‌ ಪಟೇಲ್‌ಗೆ ಎಎಪಿ ಆಹ್ವಾನ

  • ಆಪ್‌ ಸೇರಲು ಹಾರ್ದಿಕ್‌ ಪಟೇಲ್‌ಗೆ ಆಹ್ವಾನ
  • ಕಾಂಗ್ರೆಸ್‌ ತೊರೆಯುವುದಿಲ್ಲ ಎಂದು ಹಾರ್ದಿಕ್‌ ಸ್ಪಷ್ಟನೆ
  • ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದ ಹಾರ್ದಿಕ್‌
Gujarat AAP Invited congress Leader Hardik patel into Party akb
Author
Surat, First Published Apr 16, 2022, 4:20 AM IST

ಸೂರತ್‌: ಗುಜರಾತ್‌ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಹಾರ್ದಿಕ್‌ ಪಟೇಲ್‌ (Hardik Patel) ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ ಬೆನ್ನಲ್ಲೇ ಅವರಿಗೆ ಆಮ್‌ ಆದ್ಮಿ ಪಕ್ಷ (ಆಪ್‌)(Aam Aadmi Party) ಆಹ್ವಾನ ನೀಡಿದೆ. ಆದರೆ ಕಾಂಗ್ರೆಸ್‌ (Congress) ತೊರೆಯುವುದಿಲ್ಲ ಎಂದು ಹಾರ್ದಿಕ್‌ ಸ್ಪಷ್ಟನೆ ನೀಡಿದ್ದಾರೆ. ‘ಹಾರ್ದಿಕ್‌ ಪಟೇಲ್‌ ಅವರಿಗೆ ಕಾಂಗ್ರೆಸ್‌ ಇಷ್ಟವಿಲ್ಲದಿದ್ದರೇ, ಅವರು ಆಮ್‌ ಆದ್ಮಿ ಪಕ್ಷವನ್ನು ಸೇರಬಹುದು. ಕಾಂಗ್ರೆಸ್‌ ಪಕ್ಷವನ್ನು ದೂರುತ್ತಾ ಕಾಲಹರಣ ಮಾಡುವ ಬದಲು ಇಲ್ಲಿ ಬಂದು ಕೊಡುಗೆ ನೀಡಬಹುದು. ಕೆಲಸ ಮಾಡುವಂತಹ ಜನರಿಗೆ ಕಾಂಗ್ರೆಸ್‌ ಪಕ್ಷ ಸರಿಯಲ್ಲ’ ಎಂದು ಗುಜರಾತ್‌ ಆಪ್‌ ಮುಖ್ಯಸ್ಥ ಗೋಪಾಲ್‌ ಇಟಾಲಿಯಾ (Gopal Italia) ಹೇಳಿದ್ದಾರೆ.

ಆದರೆ ಪಕ್ಷ ಬಿಡುವ ಸಾಧ್ಯತೆ ತಳ್ಳಿಹಾಕಿರುವ ಪಟೇಲ್‌, ಕಾಂಗ್ರೆಸ್‌ ನಾಯಕರ ಮೇಲಿನ ಮುನಿಸಿನ ನಂತರ ನಾನು ಪಕ್ಷ ತೊರೆಯುತ್ತೇನೆ ಎಂದು ಹರಡಿರುವ ಸುದ್ದಿ ಸುಳ್ಳು. ನಾನು ಕಾಂಗ್ರೆಸ್‌ ಪಕ್ಷ (Congress party) ತೊರೆಯುವುದಿಲ್ಲ’ ಎಂದು ಹಾರ್ದಿಕ್‌ ಸ್ಪಷ್ಟನೆ ನೀಡಿದ್ದಾರೆ. ಕೆಲ ಕಾಂಗ್ರೆಸ್ಸಿಗರು ನನ್ನನ್ನು ಪಕ್ಷದಿಂದ ಹೊರಹಾಕಲು ಸಂಚು ರೂಪಿಸಿದ್ದಾರೆ. ಪಕ್ಷದಲ್ಲಿ ನನ್ನ ಸ್ಥಾನ ಮದುಮಗನಿಗೆ ಸಂತಾನಹರಣ ಮಾಡಿದಂತಾಗಿದೆ’ ಎಂದು ಗುರುವಾರ ಅಸಮಾಧಾನ ಹೊರಹಾಕಿದ್ದರು.

ಸಂತಾನಹರಣಕ್ಕೊಳಗಾದ ನವವಿವಾಹಿತನಂತೆ ಪಕ್ಷದಲ್ಲಿ ನನ್ನ ಸ್ಥಿತಿ
 

ಕೆಲ ದಿನಗಳ ಹಿಂದಷ್ಟೇ ಹಾರ್ದಿಕ್‌ ಪಟೇಲ್‌ ಕಾಂಗ್ರೆಸ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ನನ್ನನ್ನು ನಿರ್ಲಕ್ಷಿಸಿದೆ. ಯಾವುದೇ ಸಭೆಗಳಿಗೆ ನನ್ನನ್ನು ಆಹ್ವಾನಿಸುತ್ತಿಲ್ಲ ಎಂದು ಗುಜರಾತ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್  ತಮ್ಮ ಪಕ್ಷದ ವಿರುದ್ಧವೇ ಬುಧವಾರ ತೀವ್ರ ವಾಗ್ದಾಳಿ ನಡೆಸಿದ್ದರು. ಪಕ್ಷದಲ್ಲಿ ನನ್ನ ಸ್ಥಾನವೂ ಸಂತಾನಹರಣಕ್ಕೊಳಗಾದ ನವವಿವಾಹಿತನಂತೆ ಆಗಿದೆ ಎಂದು ಅವರು ದೂರಿದ್ದರು. 2015ರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತನ್ನ ವಿರುದ್ಧದ ಶಿಕ್ಷೆಗೆ ತಡೆ ನೀಡಿದ ನಂತರ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛೆ ವ್ಯಕ್ತಪಡಿಸಿದ ಒಂದು ದಿನದ ನಂತರ, ಪಾಟಿದಾರ್ ಸಮುದಾಯದ ನಾಯಕ ಮತ್ತು  ಗುಜಾರತ್ ಕಾಂಗ್ರೆಸ್‌ನ ಕಾರ್ಯಕಾರಿ ಅಧ್ಯಕ್ಷರೂ ಆಗಿರುವ ಹಾರ್ದಿಕ್‌ ಪಟೇಲ್‌ ಈ ಆರೋಪ ಮಾಡಿದ್ದಾರೆ.

ಹಾರ್ದಿಕ್‌ಗೆ ಈ ಕೆಲಸ ಮಾಡಲು ಅವಕಾಶ ಕೊಟ್ಟವರ ಮೇಲೆಯೂ ಕೇಸ್!
ರಾಜ್ಯದ ಎಲ್ಲಾ ಪಕ್ಷಗಳು ಸೇರಿಸಿಕೊಳ್ಳಲು ಬಯಸುವ ಖೋಡಲ್‌ಧಾಮ್ ಟ್ರಸ್ಟ್ ಅಧ್ಯಕ್ಷ ಮತ್ತು ಪ್ರಬಲ ಪಾಟಿದಾರ್ ನಾಯಕ ನರೇಶ್ ಪಟೇಲ್ ಅವರನ್ನು ಪಕ್ಷಕ್ಕೆ ಕರೆಸಿಕೊಳ್ಳುವಲ್ಲಿ ಕಾಂಗ್ರೆಸ್ ನಾಯಕರ ವಿಳಂಬವನ್ನು ಪ್ರಶ್ನಿಸಿದ ಅವರು ಇದು ಇಡೀ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಹೇಳಿದರು. ಪ್ರದೇಶ ಕಾಂಗ್ರೆಸ್‌ ಸಮಿತಿಯ  ಯಾವುದೇ ಸಭೆಗಳಿಗೆ ನನ್ನನ್ನು ಆಹ್ವಾನಿಸುತ್ತಿಲ್ಲ. ಅವರು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ನನ್ನನ್ನು ಸಂಪರ್ಕಿಸುವುದಿಲ್ಲ, ಹಾಗಿದ್ದ ಮೇಲೆ ನನ್ನ ಹುದ್ದೆಗಿರುವ ಅರ್ಹತೆ ಏನು ಎಂದು  ಹಾರ್ದಿಕ್ ಕೇಳಿದರು. ಇತ್ತೀಚೆಗೆ ಪಕ್ಷಕ್ಕೆ 75 ಹೊಸ ಪ್ರಧಾನ ಕಾರ್ಯದರ್ಶಿಗಳು ಮತ್ತು 25 ಹೊಸ ಉಪಾಧ್ಯಕ್ಷರನ್ನು ಘೋಷಿಸಿದರು. ಆಗಲೂ ಅವರೇನಾದರು ನನ್ನನ್ನು ಸಂಪರ್ಕಿಸಿದರೇ? ಎಂದು ಹಾರ್ದಿಕ್ ಪ್ರಶ್ನಿಸಿದರು. 
 

Follow Us:
Download App:
  • android
  • ios