ಅಜ್ಮೀರ್ (ನ. 25)   ಕೊರೋನಾ ನಿಯಮಗಳನ್ನು ಗಾಳಿಗೆ ತೂರಿ ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್ ಅವರಿಗೆ ಗೌರವ ಸಲ್ಲಿಸಲು ಅವಕಾಶ ನೀಡಿದ್ದಕ್ಕಾಗಿ ರಾಜಸ್ಥಾನ ಪೊಲೀಸರು ಅಜ್ಮೀರ್ ಸೂಫಿ ಪ್ರಾರ್ಥನಾ ಮಂದಿರದ ಖಾದಿಮ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಗುಜರಾತ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿರುವ ಹಾರ್ದಿಕ್ ಪಟೇಲ್ ಅವರು ಸೋಮವಾರ ಅಜ್ಮೀರ್‌ನಲ್ಲಿ ಖ್ವಾಜಾ ಗರಿಬ್ ನವಾಜ್ ಎಂದು ಪ್ರಸಿದ್ಧರಾಗಿರುವ ಸೂಫಿ ಸಂತ ಹಜರತ್ ಖ್ವಾಜಾ ಮೊಯಿನುದ್ದೀನ್ ಭೇಟಿ ನೀಡಿ ಚಾದರ್ ಅರ್ಪಿಸಿದರು.

ಕೊರೋನಾ ಲಸಿಕೆ ಭಾರತಕ್ಕೆ ಯಾವಾಗ? 

ಸಾಂಕ್ರಾಮಿಕ ಕಾಯ್ದೆ  ತಡೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೋವಿಡ್ -19 ನಿರ್ಬಂಧಗಳಿಂದಾಗಿ ಚಾದರ್ ಮತ್ತು ಹೂವನ್ನು ನೀಡುವುದನ್ನು ನಿಷೇಧಿಸಿದ್ದೇವೆ. ಖಾದಿಮ್ ಆಗಿರುವ  ಫೈಸಲ್  ವಿರುದ್ಧ ಪ್ರಕರಣ ದಾಖಲಾಗಿದೆ ಕೆಲವು ಭಕ್ತರಿಗೂ ಚಾದರ್ ಅರ್ಪಿಸಲು ಅವಕಾಶ ಮಾಡಿಕೊಟ್ಟಿದ್ದು ಕಾನೂನು ಕ್ರಮ ಜರಗಿಸಲಾಗುವುದು ಎಂದು ಅಜ್ಮೀರ್‌ನ ಎಎಸ್‌ಪಿ ಸುನಿಲ್ ತೆವಾಟಿಯಾ ಹೇಳಿದ್ದಾರೆ.

ಕೊರೋನಾ ಏರಿಕೆ ಕಾಣುತ್ತಿರುವುದರಿಂದ  ರಾಜಸ್ಥಾನದಲ್ಲಿ ರಾತ್ರಿ 8 ರಿಂದ ಬೆಳಿಗ್ಗೆ 6 ರವರೆಗೆ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಮಾಸ್ಕ್ ಧರಿಸದಿದ್ದರೆ ದಂಡವನ್ನು 200 ರೂ.ನಿಂದ 500 ರೂ.ಗೆ ಹೆಚ್ಚಿಸಲಾಗಿದೆ.