Wedding Viral Video: ಮದುವೆಯ ಶಾಸ್ತ್ರದ ವೇಳೆ ವಧು ವರನಿಗೆ ಅನಿರೀಕ್ಷಿತವಾಗಿ ಕಿಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಗೆ ಹಲವರು ಆಕ್ರೋಶ ವ್ಯಕ್ತಪಡಿಸಿದರೆ, ಇನ್ನು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚೆನ್ನೈ: ಮದುವೆ ಅಂದ್ರೆ ಅದೊಂದು ಸಂಭ್ರಮ. ಮದುವೆ ಆಚರಣೆ ಮತ್ತು ಶಾಸ್ತ್ರಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬೇರೆಯಾಗಿರುತ್ತವೆ. ಕೆಲವು ಪ್ರದೇಶಗಳ ಮದುವೆಯಲ್ಲಿನ ಶಾಸ್ತ್ರಗಳು ವಿಭಿನ್ನವಾಗಿರುತ್ತದೆ ದಕ್ಷಿಣ ಭಾರತದ ಮದುವೆಗಳಲ್ಲಿ ನವಜೋಡಿಯನ್ನ ಅಕ್ಕಪಕ್ಕದಲ್ಲಿ ಕೂರಿಸಿ ಅರಿಶಿನ, ನೀರಿನ ಶಾಸ್ತ್ರಗಳನ್ನು ನೆರವೇರಿಸಲಾಗುತ್ತದೆ. ಮದುವೆ ನಂತರವೂ ಹಾಲಿನಲ್ಲಿ ಉಂಗುರ ಹುಡುಕುವ ಶಾಸ್ತ್ರ ಎಲ್ಲಾ ಭಾಗದಲ್ಲಿಯೂ ನಡೆಯುತ್ತದೆ. ಇದೀಗ ವೈರಲ್ ಆಗಿರುವ ಮದುವೆಯ ವಿಡಿಯೋದಲ್ಲಿ ಎಲ್ಲರೆದರು ವಧು ನೀಡಿದ ಕಿಸ್‌ಗೆ ವರ ಫುಲ್ ಶಾಕ್ ಆಗಿದ್ದಾನೆ. ಈ ವೇಳೆ ಜೋಡಿಯ ಮುಂದೆ ಮಕ್ಕಳು ಸೇರಿದಂತೆ ಹಲವು ಮಹಿಳೆಯರು ಕುಳಿತಿದ್ದರು. ಆದರೂ ವಧು ಕೊಂಚವೂ ನಾಚಿಕೊಳ್ಳದೇ ಹೆದರದೆ ಗಂಡನ ತುಟಿಯನ್ನು ಬಿಸಿ ಮಾಡಿದ್ದಾಳೆ. 

ಕಳೆದೊಂದು ವಾರದಿಂದ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣದ ಎಲ್ಲಾ ವೇದಿಕೆಗಳಲ್ಲಿ ಮುದ್ದಾದ ಜೋಡಿಯ ಚುಂಬನದ ದೃಶ್ಯ ಸಂಚಲನಕ್ಕೆ ಕಾರಣವಾಗಿದೆ. ಈ ವಿಡಿಯೋಗೆ ಜನರು ಮೆಚ್ಚುಗೆ ಸೂಚಿಸಿದ್ದಕ್ಕಿಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತದ ಮದುವೆಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ ಎಂಬುದನ್ನು ನಂಬಲು ಆಗುತ್ತಿಲ್ಲ. ಅದು ಇಷ್ಟೊಂದು ಮಕ್ಕಳು ಮಹಿಳೆಯರಿರುವಾಗ ಏನಿದು ಅಸಭ್ಯ ವರ್ತನೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. 

ಏನಿದು ವಿಚಿತ್ರ ಶಾಸ್ತ್ರ?
ಮದುವೆಯಲ್ಲಿ ನವಜೋಡಿ ನಡುವೆ ಸಾಮರಸ್ಯ ಹೆಚ್ಚಾಗಲಿ ಅನ್ನೋ ಉದ್ದೇಶದಿಂದ ಕೆಲವು ಶಾಸ್ತ್ರಗಳನ್ನು ಮಾಡಲಾಗುತ್ತದೆ. ವರ ಬಾಯಿಯಲ್ಲಿ ಹಿಡಿದಿರುವ ತಿಂಡಿವನ್ನು ವಧು ಕಚ್ಚಿ ತೆಗೆದುಕೊಳ್ಳಬೇಕಾಗುತ್ತದೆ. ಅದೇ ರೀತಿ ವರ ಸಹ ಮಾಡಬೇಕಾಗುತ್ತದೆ. ಈ ಶಾಸ್ತ್ರಕ್ಕಾಗಿ ಲಡ್ಡು, ಎಲೆ-ಅಡಿಕೆ ಬಳಸುತ್ತಾರೆ. ಈ ಶಾಸ್ತ್ರ ನಡೆಯುವ ವೇಳೆ ವಧು ಸ್ವಲ್ಪ ಮುಂದೆ ಹೋಗಿ ವರನ ತುಟಿಯನ್ನೇ ಕಚ್ಚಿದ್ದಾಳೆ. ಈ ವಿಡಿಯೋ ತಮಿಳುನಾಡು ಭಾಗದ್ದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ವಿಮಾನ ಲ್ಯಾಂಡ್ ಆಗುವ ಪೈಲಟ್‌ಗೆ ಭೂಮಿ ಹೇಗೆ ಕಾಣುತ್ತೆ? ರೋಚಕ ದೃಶ್ಯದ ವಿಡಿಯೋ

ವೈರಲ್ ವಿಡಿಯೋದಲ್ಲಿ ಏನಿದೆ? 
ಕುರ್ಚಿ ಮೇಲೆ ನವಜೋಡಿ ಕುಳಿತಿರುತ್ತಾಳೆ. ವರನ ಬಾಯಲ್ಲಿರುವ ಲಡ್ಡು ಕಚ್ಚಿಕೊಂಡು ತೆಗೆದುಕೊಳ್ಳುವಂತೆ ವಧುವಿಗೆ ಹೇಳಲಾಗಿರುತ್ತದೆ. ವಧು ಲಡ್ಡು ಮಾತ್ರ ತೆಗೆದುಕೊಳ್ಳದೇ ಕಿಸ್ ಮಾಡಿದ್ದಾಳೆ. ವರನ ಮುಖವನ್ನು ತನ್ನೆರಡು ಕೈಗಳಿಂದ ಬಿಗಿಯಾಗಿ ಹಿಡಿದುಕೊಂಡು ಚುಂಬಿಸಿದ್ದಾಳೆ. ಇದನ್ನು ನೋಡಿದ ಸುತ್ತಲಿದ್ದ ಜನರು ಜೋರಾಗಿ ಕೂಗುವ ಮೂಲಕ ವಧುವನ್ನು ಹುರಿದುಂಬಿಸಿದ್ದಾರೆ. ಇದರಿಂದ ವರು ಒಂದು ಕ್ಷಣ ಶಾಕ್ ನಾಚಿಕೊಂಡು ತಲೆ ತಗ್ಗಿಸಿದ್ದಾನೆ. ವರ ನಾಚಿಕೊಳ್ಳುತ್ತಿದ್ದಂತೆ ವಧು ಮತ್ತೆ ಆತನ ಮುಖ ನೋಡುತ್ತಾನೆ. ಆಗ ವರ ತನ್ನ ತುಟಿಗಳನ್ನು ಒರಿಸಿಕೊಳ್ಳುತ್ತಾನೆ. ನಂತರ ವರನ ಸರದಿ ಬರುತ್ತದೆ. ಆದ್ರೆ ವರ ಸರಳವಾಗಿ ವಧುವಿನ ಬಾಯಲ್ಲಿರುವ ಲಡ್ಡು ಕಚ್ಚಿಕೊಂಡು ತಿನ್ನುತ್ತಾನೆ. 

ಈ ವೈರಲ್ ವಿಡಿಯೋವನ್ನು Sketchkarthik ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋಗೆ ಇಲ್ಲಿಯವರೆಗೆ 37 ಮಿಲಿಯನ್ ವ್ಯೂವ್ ಪಡೆದುಕೊಂಡಿದ್ದು, ಸಾವಿರಾರು ಕಮೆಂಟ್‌ಗಳು ಬಂದಿವೆ. ಈ ಕಮೆಂಟ್‌ಗಳಲ್ಲಿ ಹೊಗಳಿದವರಿಗಿಂತ ಬೈದವರೇ ಹೆಚ್ಚು. ಯಾವುದೇ ಶಾಸ್ತ್ರವಾದರೂ ಅದು ಮಿತಿಯಲ್ಲಿರಬೇಕು. ವಧು ಈ ರೀತಿಯಾಗಿ ನಡೆದುಕೊಂಡು ಸುತ್ತಲಿದ್ದ ಹಿರಿಯರು ಎಚ್ಚರಿಸಬೇಕಿತ್ತು. ಚಿಕ್ಕ ಮಕ್ಕಳಿದ್ರೂ ಈ ರೀತಿ ಮಾಡಿದ್ದು ತಪ್ಪು ಎಂದು ಖಂಡಿಸಿದ್ದಾರೆ. ಮುಂದೊಂದು ದಿನ ಮೊದಲ ರಾತ್ರಿಯೂ ಬಹಿರಂಗವಾದ್ರೂ ಅಚ್ಚರಿಯೇನಿಲ್ಲ ಎಂದು ಆಶ್ವರ್ಯ ವ್ಯಕ್ತಪಡಿಸಿದ್ದಾರೆ.

ಬಹುತೇಕ ಕಮೆಂಟ್‌ಗಳು ತಮಿಳು ಭಾಷೆಯಲ್ಲಿರೋದರಿಂದ ಇದು ತಮಿಳುನಾಡು ಭಾಗದ ವಿಡಿಯೋ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. ಆದ್ರೆ ನಿಖರ ಸ್ಥಳ ಗೊತ್ತಾಗಿಲ್ಲ. ಇನ್ನು ಕೆಲ ಪಡ್ಡೆ ಹುಡುಗರು ಪೋಲಿಯಾಗಿ ಕಮೆಂಟ್ ಮಾಡಿದ್ದಾರೆ.

ವೈರಲ್ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ https://www.facebook.com/share/r/19utF4gTXy/

ಇದನ್ನೂ ಓದಿನೀರನ್ನು ಕಚ್ಚಿ ತಿನ್ನುವ ಪ್ರಪಂಚದ ಮೊದಲ ಮಹಿಳೆ, ನಟಿ ಊರ್ವಶಿ ರೌಟೇಲಾ! ವಿಡಿಯೋ ವೈರಲ್