Bride Groom Viral Video: ಮದುವೆಯ ಬಳಿಕ ಕಾರಿನಲ್ಲಿ ತೆರಳುವಾಗ ವಧುವೊಬ್ಬಳು ವರನ ಕಪಾಳಕ್ಕೆ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
Couple Viral Video: ನನ್ನ ಹೆಂಡ್ತಿ ಹೊಡಿತಾಳೆ, ಬಡಿತಾಳೆ ಎಂಬ ಕನ್ನಡದ ಹಾಡನ್ನು ನೀವು ಖಂಡಿತ ಕೇಳುತ್ತಿರುತ್ತೀರಿ. ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲಿಗರು ಈ ಹಾಡನ್ನು ಬಳಕೆ ಮಾಡುತ್ತಿರುತ್ತಾರೆ. ಗಂಡಂದಿರು ದಾರಿ ತಪ್ಪಿದಾಗ ಮಹಿಳೆಯರು ಕೆಲವೊಮ್ಮೆ ದಂಡಿಸೋದುಂಟು. ಕೆಲವು ವಿಶೇಷ ಪ್ರಕರಣಗಳಲ್ಲಿ ಅಮಾಯಕನಾಗಿರುವ ಗಂಡಂದಿರು ಪತ್ನಿಯರ ಕಿರುಕುಳಕ್ಕೆ ಒಳಗಾಗುತ್ತಿರುತ್ತಾರೆ. ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಪತ್ನಿ ಮತ್ತು ಆಕೆಯ ಕುಟುಂಬಸ್ಥರ ಕಿರುಕುಳದಿಂದ ಪ್ರಾಣ ಕಳೆದುಕೊಂಡಿದ್ದರು. ಈ ಪ್ರಕರಣ ದೇಶದಾದ್ಯಂತ ಸದ್ದು ಮಾಡಿತ್ತು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಗಂಡನಿಗೆ ವಧು ಕಾರ್‌ನಲ್ಲಿಯೇ ಬೆಂಡೆತ್ತಿದ ಹಳೆಯ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ರೂಪದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾದಲ್ಲಿ ಮದುವೆಗೆ ಸಂಬಂಧಿಸಿದ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿರುತ್ತವೆ. ವಧುವಿನ ಮೇಕಪ್, ಜೋಡಿಗಳ ಗ್ರ್ಯಾಂಡ್ ಎಂಟ್ರಿ, ಪ್ರಿ ವೆಡ್ಡಿಂಗ್ ಶೂಟ್, ಊಟ ಹೀಗೆ ಮದುವೆಯ ಪ್ರತಿಯೊಂದು ಶಾಸ್ತ್ರ ಪೂಜೆಗಳ ವಿಡಿಯೋ ಕ್ಲಿಪ್ ಕಡಿಮೆ ಸಮಯದಲ್ಲಿಯೇ ವೈರಲ್ ಆಗುತ್ತಿವೆ. ಇತ್ತೀಚೆಗೆ ವಧುವಿಗೆ ವರ ಕಾರ್‌ನಲ್ಲಿಯೇ ಬಲವಂತವಾಗಿ ಮದ್ಯ ಕುಡಿಸುವ ವಿಡಿಯೋ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ವರನೊಬ್ಬ ಕಾರ್‌ನಲ್ಲಿಯೇ ವಧುವಿನ ಸೊಂಟಕ್ಕೆ ಕೈ ಹಾಕಿ ಕಚಗುಳಿ ಇರಿಸಿದ್ದನು. ಇದೀಗ ವರನಿಗೆ ಕಾರ್‌ನಲ್ಲಿಯೇ ವಧು ಗ್ರಹಚಾರ ಬಿಡಿಸಿದ್ದಾಳೆ.
ಕಪಾಳಕ್ಕೆ ಹೊಡೆದು ಗ್ರಹಚಾರ ಬಿಡಿಸಿದ ವಧು
ಮದುವೆ ಮುಗಿದ ಬಳಿಕ ವರ-ವಧುವಿಗಾಗಿ ವಿಶೇಷವಾಗಿ ಕಾರ್ ಸಿದ್ಧಪಡಿಸಲಾಗಿರುತ್ತದೆ. ಹೂಗಳಿಂದ ಅಲಂಕರಿಸಲ್ಪಟ್ಟ ಕಾರ್‌ನಲ್ಲಿ ನವಜೋಡಿ, ಚಾಲಕ, ಒಬ್ಬರು ಅತ್ಯಾಪ್ತರು ಮಾತ್ರ ಪ್ರಯಾಣಿಸುತ್ತಾರೆ. ಹೀಗೆ ತೆರಳುವ ಸಂದರ್ಭದಲ್ಲಿಯೇ ವಧು ಕೋಪಗೊಂಡ ವರನ ಕಪಾಳಕ್ಕೆ ಹೊಡೆದು ಗ್ರಹಚಾರ ಬಿಡಿಸಿದ್ದಾಳೆ. ಪಾಪ ವರ ಪತ್ನಿಯಿಂದ ಹೊಡೆಸಿಕೊಂಡು ಸುಮ್ಮನಾಗಿದ್ದಾನೆ. ಆದ್ರೆ ವಧು ಯಾಕೆ ಹೀಗೆ ಮಾಡಿದ್ದು? ಈ ಘಟನೆ ನಡೆದಿದ್ದು ಎಲ್ಲಿ ಎಂಬುದರ ಬಗ್ಗೆ ತಿಳಿದು ಬಂದಿಲ್ಲ.
ಇದನ್ನೂ ಓದಿ: ಫ್ಯಾಷನ್ ಡ್ರೆಸ್ ಬಿಟ್ಟು, ಅಪ್ಪಟ ಗ್ರಾಮೀಣ ಸೊಗಡಿನ ಕುರಿಗಾಹಿ ವೇಷದಲ್ಲಿ ವಧ-ವರರ ಪ್ರೀ ವೆಡ್ಡಿಂಗ್ ಶೂಟ್ ವೈರಲ್!
ವೈರಲ್ ಆಗಿರುವ ಈ ವಿಡಿಯೋವನನ್ನು bhutni_ke_memes ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.ಈ ವಿಡಿಯೋಗೆ ಕಮೆಂಟ್ ಮಾಡಿರುವ ನೆಟ್ಟಿಗರು ವರನ ಮುಂದಿನ ಜೀವನ ಊಹಿಸಿಕೊಂಡು ಕನಿಕರ ವ್ಯಕ್ತಪಡಿಸಿದ್ದಾರೆ. ಬಹುಶಃ ಇಬ್ಬರದ್ದು ಲವ್ ಮ್ಯಾರೇಜ್ ಆಗಿರಬಹುದು. ಆ ಸಲುಗೆಯಿಂದಲೇ ವಧು ಹೀಗೆ ಮಾಡಿರಬಹುದು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಈ ಕಮೆಂಟ್‌ಗೆ ಪ್ರತಿಕ್ರಿಯಿಸಿರುವ ಮತ್ತೋರ್ವ ಬಳಕೆದಾರರು, ಅದೇನೇ ಇರಲಿ. ಖಾಸಗಿ ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚೆ ಮಾಡಬಾರದು.ಈ ರೀತಿಯಾಗಿ ವರ್ತಿಸೋದು ಸಹ ತಪ್ಪು ಎಂದು ಸಲಹೆ ನೀಡಿದ್ದಾರೆ.
ಗಂಡನ ಮನೆಗೆ ಹೋಗಲಾರೆ ವಧು ಕಣ್ಣೀರು!
ಇತ್ತೀಚೆಗೆ ಜನರೇಷನ್ Z ವಧು ಕಾರ್‌ನಲ್ಲಿ ಕುಳಿತು ಗಂಡನ ಮನೆಗೆ ಹೋಗಲಾರೆ? ಅಲ್ಲಿ ಹೇಗೆ ನಾನು ಚಿಕ್ಕ ಚಿಕ್ಕ ಬಟ್ಟೆಗಳನ್ನು ಧರಿಸಲಿ. ಅಲ್ಲಿ ಪಾತ್ರೆ ಮತ್ತು ಬಟ್ಟೆಗಳನ್ನು ತೊಳೆಯಬೇಕಾಗುತ್ತದೆ. ಮಾತಿಗೆ ತಿರುಗೇಟು ಕೊಡಲು ಆಗಲ್ಲ ಎಂದು ವಧು ಕಣ್ಣೀರು ಹಾಕಿದ್ದಳು. ಇದಕ್ಕೆ ವಧುವಿನ ತಾಯಿ, ಇದು ಸಂಪ್ರದಾಯವಾಗಿದ್ದು, ಪಾಲಿಸಲೇಬೇಕು ಎಂದು ಹೇಳುತ್ತಾರೆ. ವಿಡಿಯೋ ಕೊನೆಯಲ್ಲಿ, ವಧು ಬಡೋ-ಬಡಿ ಮತ್ತು ಕಚ್ಚ ಬದಮ್ ಹಾಡುತ್ತಾ ನಗುತ್ತಾಳೆ. ಜೆನ್-ಜಿ ವಧುವಿನ ಈ ತಮಾಷೆಯ ವೀಡಿಯೊವನ್ನು ನೆಟಿಜನ್‌ಗಳು ತುಂಬಾ ಇಷ್ಟಪಡುತ್ತಿದ್ದಾರೆ.
ಇದನ್ನೂ ಓದಿ: ತಾಳಿ ಕಟ್ಟೋದಕ್ಕೂ ಬಿಡದೇ ಮದುಮಗಳನ್ನೇ ಅಪಹರಿಸಿದ ವರನ ಸ್ನೇಹಿತರು!
