ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರು, ನೀರನ್ನು ಕುಡಿಯುವ ಬದಲು ಕಚ್ಚಿ ತಿನ್ನುತ್ತಿರುವ ವಿಡಿಯೋ ವೈರಲ್ ಆಗಿದೆ. ಅಷ್ಟಕ್ಕೂ ಏನಿದು ನೋಡಿ!
ಬಾಲಿವುಡ್ ನಟಿ ಊರ್ವಶಿ ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತಾರೆ. ಕೆಲ ದಿನಗಳ ಹಿಂದೆ ಸೈಫ್ ಅಲಿ ಖಾನ್ ಇರಿತದ ವಿಷಯದ ಬಗ್ಗೆ ಕೇಳಿದ್ರೆ, ತಮ್ಮ ಅಪ್ಪ-ಅಮ್ಮ ಕೊಡಿಸಿದ ವಜ್ರದ ವಾಚು, ಉಂಗುರದ ಬಗ್ಗೆ ಮಾತನಾಡಿ ಕೊನೆಗೆ ಕ್ಷಮೆ ಕೋರಿದ್ದ ನಟಿ, ಕೆಲ ಹಿಂದೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಚಿನ್ನದ ಐ ಫೋನ್ ಕಳೆದುಕೊಂಡೆ ಎಂದು ಹೇಳುವ ಮೂಲಕ ಸದ್ದು ಮಾಡಿದ್ದರು. ಅದಾದ ಬಳಿಕ ಈಕೆಯ ಹುಟ್ಟುಹಬ್ಬದಂದು ಗಾಯಕ ಯೋಯೋ ಸಿಂಗ್ ಚಿನ್ನದ ಕೇಕ್ ಮಾಡಿಸಿ ಸದ್ದು ಮಾಡಿದ್ದರು. ಆದರೆ ಈಕೆ ಸ್ನಾನಕ್ಕೆಂದು ಬಾತ್‌ರೂಮ್‌ಗೆ ಹೋಗಿರುವ ವಿಡಿಯೋ ಒಂದು ಕಳೆದ ಜುಲೈನಲ್ಲಿ ವೈರಲ್ ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹಲ್‌ಚಲ್ ಸೃಷ್ಟಿಸಿತ್ತು. ಕೊನೆಗೆ ಇದು ಉದ್ದೇಶಪೂರ್ವಕವಾಗಿ ಚಿತ್ರವೊಂದರ ಪ್ರಮೋಷನ್ಗಾಗಿ ಮಾಡಿರುವುದಾಗಿ ಹೇಳಿದ್ದರು ನಟಿ.
ಇದೀಗ ಎಲ್ಲವನ್ನೂ ಮೀರಿಸುವಂಥ ಸುದ್ದಿಯೊಂದಿದೆ. ಅದೇನೆಂದರೆ, ಊರ್ವಶಿ ರೌಟೇಲಾ ನೀರನ್ನು ಕುಡಿಯುವುದಿಲ್ಲ, ಬದಲಾಗಿ ತಿನ್ನುತ್ತಾರೆ! ಇವರಿಗೇನು ಹುಚ್ಚಾ ಎಂದು ಕೇಳಬೇಡಿ. ಇಲ್ಲಿ ವೈರಲ್ ಆಗಿರೋ ವಿಡಿಯೋ ನೋಡಿ. ಯಾವುದೋ ಫಂಕ್ಷನ್ನಲ್ಲಿ ಕೆಜಿಗಟ್ಟಲೆ ಮೇಕಪ್ ಹಾಕಿಕೊಂಡು ಕುಳಿತಿರುವ ನಟಿ, ತಮ್ಮ ಉಗುರುಗಳಿಗೂ ಶೃಂಗಾರ ಮಾಡಿಕೊಂಡಿದ್ದಾರೆ. ನೀರನ್ನು ಕುಡಿಯುವಾಗ ತಮ್ಮ ಸುಂದರವಾಗಿ ಉಗುರುಗಳು ಕಾಣಿಸಲಿ ಎನ್ನುವ ಕಾರಣಕ್ಕೋ ಏನೋ ಬಾಯಿಯನ್ನು ಮುಚ್ಚಿಕೊಂಡಿದ್ದಾರೆ. ಇಷ್ಟೇ ಆದರೆ ಪರವಾಗಿರಲಿಲ್ಲ. ನೀರನ್ನು ಕುಡಿಯುವಾಗ ಕ್ಯಾಮೆರಾ ಕಣ್ಣುಗಳು ತಮ್ಮ ಮೇಲೆ ಇರುವುದು ತಿಳಿಯುತ್ತಲೇ ಸ್ಟೈಲ್ ಮಾಡಿ ಕುಡಿಯಲು ಹೋಗಿ ಟ್ರೋಲ್ಗೆ ಒಳಗಾಗಿದ್ದಾರೆ.
ನಿರ್ಮಾಪಕರಿಗಾಗಿ ಸ್ನಾನದ ವಿಡಿಯೋ ಲೀಕ್ ಮಾಡಿದ್ದೆ, ಆದ್ರೆ... ಊರ್ವಶಿ ರೌಟೇಲಾ ಶಾಕಿಂಗ್ ಸುದ್ದಿ ರಿವೀಲ್!
ಇವರು, ಈ ವಿಡಿಯೋದಲ್ಲಿ ನೀರನ್ನು ಕುಡಿಯುತ್ತಿಲ್ಲ ಬದಲಿಗೆ ತಿನ್ನುತ್ತಿರುವಂತೆ ಕಾಣಿಸುತ್ತದೆ. ನೀರನ್ನು ಬಾಯಿಗೆ ಹಾಕಿಕೊಂಡು ನಂತರ ಅದನ್ನು ಕಚ್ಚುವ ರೀತಿಯಲ್ಲಿ ಈ ವಿಡಿಯೋ ಇದೆ. ಇದಕ್ಕೆ ನೂರಾರು ಮಂದಿ ತರ್ಲೆ ಕಮೆಂಟ್ಸ್ ಹಾಕಿದ್ದಾರೆ. ಪ್ಲಾಸ್ಟಿಕ್ ರಾಣಿಯಿಂದ ಈಗ ಮತ್ತೊಂದು ದಾಖಲೆ, ನೀರನ್ನು ಕಚ್ಚಿ ತಿನ್ನುವ ಪ್ರಪಂಚದ ಏಕೈಕಿ ಮಹಿಳೆ ಎಂದೆಲ್ಲಾ ತಮಾಷೆ ಮಾಡುತ್ತಿದ್ದಾರೆ.
ಇನ್ನು ಕೆಲ ದಿನಗಳ ಹಿಂದೆ, ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಕ್ರಿಕೆಟ್ ಮ್ಯಾಚ್ ಸಂದರ್ಭದಲ್ಲಿ ಎಂದು ಜನಪ್ರಿಯವಾಗಿರುವ ಪ್ರಭಾವಿ ಓರ್ಹಾನ್ ಅವತ್ರಮಣಿ ಹಾಗೂ ಹಾಟ್ ಬ್ಯೂಟಿ ಊರ್ವಶಿ ರೌಟೇಲಾ ಸಕತ್ ಡಾನ್ಸ್ ಮಾಡಿದ್ದರು. ಡಾನ್ಸ್ ಮಾಡುತ್ತಲೇ ಓರಿ ಊರ್ವಶಿಗೆ ಕಿಸ್ ಮಾಡಿದ್ದ. ಈ ವಿಡಿಯೋ ಸಕತ್ ವೈರಲ್ ಆಗಿತ್ತು. ಇನ್ನು ಬಾಲಿವುಡ್ ಪ್ರೇಮಿಗಳಿಗೆ ಓರಿ ತೀರಾ ಚಿರಪರಿಚಿತ. ಸಾಮಾನ್ಯನಂತೆ ಕಾಣುವ ಈತ ಬಾಲಿವುಡ್‌ನಲ್ಲಿ ತುಂಬಾ ಪ್ರಭಾವಿ. ಎಲ್ಲಾ ಸೆಲೆಬ್ರಿಟಿಗಳಿಗೂ ಈತ ಬೇಕೇ ಬೇಕು. ಬಹುತೇಕ ಬಾಲಿವುಡ್‌ನ ಎಲ್ಲರೂ ಜೊತೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಈತನಿಗೆ ಎಲ್ಲೆಡೆ ಮುಟ್ಟಲು ನಟಿಯರು ಪರ್ಮಿಷನ್ ಕೊಡುತ್ತಾರೋ ಎನ್ನುವಂತೆಯೇ ಎಲ್ಲಾ ಫೋಟೋಗಳೂ ಇರುತ್ತವೆ. ಈತನ ಜೊತೆ ಫೋಟೋ ತೆಗೆಸಿಕೊಂಡರೆ ನಟಿಯರಿಗೆ ಲಕ್ಕಿ ಎನ್ನುವ ಮಾತಿದೆ. ಈಗ ಹೊಸ ವಿಷ್ಯ ಏನಪ್ಪಾ ಎಂದರೆ ಊರ್ವಶಿ ರೌಟೇಲಾ ಜೊತೆ ಓರಿ ಮದುವೆ ಎನ್ನುವ ಸುದ್ದಿ ಸದ್ದು ಮಾಡಿತ್ತು. ಆದರೆ ಕೊನೆಗೆ ಆ ಸುದ್ದಿ ಅಲ್ಲಿಯೇ ಸೈಲೆಂಟ್ ಆಗಿದೆ.
ಇವತ್ತಿನ ರಾತ್ರಿ... ಎನ್ನುತ್ತಲೇ ಕೆಲವೇ ನಿಮಿಷಕ್ಕೆ 7 ಕೋಟಿ ಪಡೆದ ಊರ್ವಶಿ ರೌಟೇಲಾ! ವಿಡಿಯೋ ವೈರಲ್


