Asianet Suvarna News Asianet Suvarna News

ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಡಿಲೀಟ್ ಮಾಡಲು ಹೇಳಿದ ಕೇಂದ್ರ ಸರ್ಕಾರ ...!

ಕೇಂದ್ರ ಸರ್ಕಾರ ಕೊಟ್ಟ ಪಟ್ಟಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಸಿಕ್ಕಿಬಿದ್ದಿದ್ದಾರೆ. ಇದರಿಂದ ಈ ಮೂಲಕ ಸೂರ್ಯ ಮುಜುರಕ್ಕೀಡಾಗಿದ್ದಾರೆ.

Govt asks Twitter to remove tweet by BJP MP Tejasvi Surya linking terrorists and Islam
Author
Bengaluru, First Published May 9, 2020, 8:45 PM IST

ನವದೆಹಲಿ, (ಮೇ.09): ಇಸ್ಲಾಂ ಧರ್ಮದ ಕುರಿತಂತೆ ಸಂಸದ ತೇಜಸ್ವಿ ಸೂರ್ಯ ಮಾಡಿದ್ದ ಟ್ವೀಟ್‌ನ್ನು ಅಳಿಸಿಹಾಕುವಂತೆ ಕೇಂದ್ರ ಸರ್ಕಾರ ಟ್ವಿಟ್ಟರ್‌ಗೆ ಮನವಿ ಮಾಡಿದೆ.

 ತೇಜಸ್ವಿ ಸೂರ್ಯ ಅವರು ಇಸ್ಲಾಂ ಕುರಿತಂತೆ ಇತರೆ ಆಕ್ಷೇಪಾರ್ಹ ಒಟ್ಟು 121 ಟ್ವೀಟ್‌ಗಳನ್ನು ತೆಗೆದು ಹಾಕುವಂತೆ ಕೇಂದ್ರ ಸರ್ಕಾರ, ಟ್ವಿಟ್ಟರ್‌ಗೆ ಕೇಳಿಕೊಂಡಿದೆ.ಈ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮುಜುರಕ್ಕೀಡಾಗಿದ್ದಾರೆ.

ಕಾಂಗ್ರೆಸ್‌ ನಾಯಕರ ಬಳಿಕ ಸಂಸದ ತೇಜಸ್ವಿ ಸೂರ್ಯರಿಂದ ಕಾರ್ಮಿಕರಿಗೆ ವಿಶೇಷ ಬೀಳ್ಕೊಡುಗೆ...! 

ಇತ್ತೀಚೆಗೆ ಭಾರತ ಸರಕಾರ ಕೋಮುದ್ವೇಷ ಹುಟ್ಟುಹಾಕುವ ಟ್ವೀಟ್‌ ಸಂದೇಶಗಳನ್ನ ಅಳಿಸಿ ಹಾಕುವಂತೆ ಲಿಂಕ್‌ ಸಮೇತ ಟ್ವಿಟ್ಟರ್‌ ಕಂಪೆನಿಗೆ ಮನವಿ ಮಾಡಿತ್ತು. 

ಅಚ್ಚರಿ ಅಂದ್ರೆ ಧಾರ್ಮಿಕ ದ್ವೇಷ ಹುಟ್ಟುಹಾಕುವ ಮತ್ತು ಕಾನೂನು ಕ್ರಮಕೈಗೊಳ್ಳಬೇಕೆನ್ನುವ ಒತ್ತಾಯ ಕೇಳಿಬಂದಿತ್ತೋ ಅಂತಹ ಟ್ವೀಟ್‌ಗಳನ್ನು ಅಳಿಸಿ ಹಾಕುವಂತೆ ಸರ್ಕಾರ ಕೇಳಿಕೊಂಡಿತ್ತು. ವಿಶೇಷ ಅಂದ್ರೆ, ಅದರಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಟ್ವೀಟ್‌ ಲಿಂಕ್‌ಗಳೂ ಇದ್ದವು. ಇದೀಗ ಅವುಗಳಿಗೆ ಮುಕ್ತಿ ಕಾಣಿಸಲಾಗುತ್ತಿದೆ.

2015ರಲ್ಲಿ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ತೇಜಸ್ವಿ ಸೂರ್ಯ ಪೋಸ್ಟ್​ ಒಂದನ್ನು ಮಾಡಿದ್ದರು. ಅದರಲ್ಲಿ, “ಭಯೋತ್ಪಾದನೆಗೆ ಧರ್ಮವಿಲ್ಲ. ಆದರೆ, ಭಯೋತ್ಪಾದಕರಿಗೆ ಧರ್ಮ ಇದ್ದೇ ಇದೆ. ಬಹುತೇಕ ಪ್ರಕರಣಗಳಲ್ಲಿ ಅವರು ಮುಸ್ಲೀಮರೇ ಆಗಿದ್ದಾರೆ,” ಎಂದು ಹೇಳಿದ್ದರು. ತೇಜಸ್ವಿ ಸೂರ್ಯ ಅವರ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು.

ಬಹುಸಂಖ್ಯಾತರು ಸುಮ್ಮನೇ ಕುಳಿತರೆ ಮುಘಲ್‌ ಆಳ್ವಿಕೆ: ತೇಜಸ್ವಿ ಎಚ್ಚರಿಕೆ!

ಈ ಟ್ವೀಟ್​ ಡಿಲೀಟ್​ ಮಾಡುವಂತೆ ಸಾಕಷ್ಟು ಜನರು ಆಗ್ರಹಿಸಿದ್ದರು. ಆದಾಗ್ಯೂ ತೇಜಸ್ವಿ ಸೂರ್ಯ ಅವರು ಟ್ವೀಟ್​ ಅಳಿಸಿ ಹಾಕಿರಲಿಲ್ಲ. ಆದರೆ ಈಗ ಈ ಪೋಸ್ಟ್​ ಬ್ಲಾಕ್​ ಮಾಡುವಂತೆ ಕೇಂದ್ರ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ಇಲಾಖೆ ಟ್ವಿಟ್ಟರ್‌ಗೆ ಮನವಿ ಮಾಡಿಕೊಂಡಿದೆ.

ಇನ್ನು ಮತ್ತೊಂದು ಹೆಜ್ಜೆ ಮುಂದೆ ಹೋಗಿ ನೋಡಿದ್ರೆ, 2015ರಲ್ಲಿ ತೇಜಸ್ವಿ ಸೂರ್ಯ  ಮತ್ತೊಂದು ಟ್ವೀಟ್​ ಮಾಡಿದ್ದರು. 'ಅರಬ್ ರಾಷ್ಟ್ರಗಳ ಶೇ. 95ರಷ್ಟು ಮಹಿಳೆಯರು ನೂರಾರು ವರ್ಷಗಳಿಂದ ಲೈಂಗಿಕವಾಗಿ ಉದ್ರೇಕಗೊಳ್ಳುವುದನ್ನೇ ಮರೆತಿದ್ದಾರೆ. ಅಲ್ಲಿನ ಪ್ರತಿಯೊಬ್ಬ ತಾಯಿಯೂ ಯಾಂತ್ರಿಕವಾದ ಲೈಂಗಿಕ ಕ್ರಿಯೆಯಿಂದ ಮಕ್ಕಳನ್ನು ಹೆತ್ತಿದ್ದಾಳೆಯೇ ವಿನಃ ಪ್ರೀತಿಯಿಂದಲ್ಲ' ಎಂದಿದ್ದರು.​ 

ಐದು ವರ್ಷಗಳ ಹಿಂದೆ ಮಾಡಿದ್ದ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಸದ್ದುಮಾಡಿ ವೈರಲ್ ಆಗಿ ತೇಜಸ್ವಿ ಸೂರ್ಯ ವಿರುದ್ಧ ಟೀಕೆಗಳ ಸುರಿಮಳೆಯೇ ಕೇಳಿಬರುತ್ತಿದೆ. ಅವರನ್ನು ಸಂಸದ ಸ್ಥಾನದಿಂದ ಕಿತ್ತುಹಾಕಬೇಕೆಂದು ಪ್ರಧಾನಿಗೆ ಒತ್ತಾಯಗಳು ಕೇಳಿಬಂದಿದ್ದವು. ಬಳಿಕ ಆ ಟ್ವೀಟ್‌ ತೆಗೆದು ಹಾಕಲಾಗಿತ್ತು.

ಒಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಕೋಮು ಸೌಹಾರ್ದಕ್ಕೆ ಧಕ್ಕೆ ತರುವಂತಹ ಪೋಸ್ಟ್‌ಗಳನ್ನು ಸ್ವಚ್ಛ ಮಾಡಲು ಕೇಂದ್ರ ಸರ್ಕಾರಕ್ಕೆ ಮುಂದಾಗಿದೆ.

Follow Us:
Download App:
  • android
  • ios