ನವದೆಹಲಿ[ಫೆ.06]: ‘ದೇಶದಲ್ಲಿ ಬಹುಸಂಖ್ಯಾತ ಸಮುದಾಯದವರು ಜಾಗೃತರಾಗದೇ ಹೋದರೆ ಮುಘಲ್‌ ಆಳ್ವಿಕೆ ಮರಳುವುದು ದೂರವಿಲ್ಲ’ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಎಚ್ಚರಿಸಿದರು.

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ಬುಧವಾರ ಮಾತನಾಡಿದ ಅವರು, ದಿಲ್ಲಿಯ ಶಾಹೀನ್‌ಬಾಗ್‌ನಲ್ಲಿ ನಡೆದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಉದ್ದೇಶಿಸಿ ಈ ಮಾತುಗಳನ್ನು ಹೇಳಿದರು. ತೇಜಸ್ವಿ ಈ ಹೇಳಿಕೆ ನೀಡುತ್ತಿದ್ದಂತೆಯೇ ಪ್ರತಿಪಕ್ಷದ ಸದಸ್ಯರ ತೀವ್ರ ವಿರೋಧ ವ್ಯಕ್ತವಾಯಿತು.

ಇದೇ ವೇಳೆ, ನರೇಂದ್ರ ಮೋದಿ ಆಳ್ವಿಕೆಯಲ್ಲಿ ದಶಕಗಳಿಂದ ಬಗೆಹರಿಯದ ರಾಮಮಂದಿರ, ಪರಿಚ್ಛೇದ 370, ತ್ರಿವಳಿ ತಲಾಖ್‌, ಬೋಡೋ ವಿವಾದ, ಮುಂತಾದ ಸಮಸ್ಯೆಗಳು ಇತ್ಯರ್ಥಗೊಂಡಿವೆ ಎಂದು ಅವರು ಕೊಂಡಾಡಿದರು.