ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನಾಚರಣೆಯನ್ನು ವಿಜ್ರಂಭಣೆಯಿಂದ ಹಾಗೂ ಯಶಸ್ವಿಯಾಗಿ ನಡೆಸಲು ಪ್ರಧಾನಿ ನರೇಂದ್ರ ಮೋದಿ ದೇಶದ ಜನರಲ್ಲಿ ವಿಶೇಷ ಮನವಿ ಮಾಡಿದ್ದಾರೆ. ಇದರ ಜೊತೆಗೆ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ನವದೆಹಲಿ(ಡಿ.21): ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಹೆಸರು ಅತೀ ದೊಡ್ಡ ಶಕ್ತಿ. ಬ್ರಿಟೀಷರ ವಿರುದ್ಧ ಸಶಸ್ತ್ರ ಹೋರಾಟಕ್ಕಿಳಿದ ಸೇನಾನಿ ಬೋಸ್. ಇದೀಗ ನೇತಾಜಿಯ 125ನೇ ಜನ್ಮ ದಿನಾಚರಣೆಗೆ ಕೇಂದ್ರ ಸರ್ಕಾರ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮೊದಲ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಮಿತಿ ರಚಿಸಿದ್ದಾರೆ. 

ಜೈ ಹಿಂದ್: ದೇಶಕ್ಕೆ ನೇತಾಜಿ ಕೊಡುಗೆ ನೆನೆದ ಪ್ರಧಾನಿ ಮೋದಿ!.

ಈ ಕುರಿತು ಟ್ವೀಟ್ ಮೂಲಕ ಮೋದಿ ಮಾಹಿತಿ ಹಂಚಿಕೊಂಡಿದ್ದಾರೆ. ನೇತಾಜಿ ಸುಭಾಸ್ ಬೋಸ್ ಅವರ ಶೌರ್ಯ ಎಲ್ಲರಿಗೂ ತಿಳಿದಿದೆ. ವಿದ್ವಾಂಸ, ಸೈನಿಕ ಮತ್ತು ರಾಜಕಾರಣಿಯಾಗಿದ್ದ ಬೋಸ್ ಅವರ 125 ನೇ ಜಯಂತಿ ಆಚರಣೆಯನ್ನು ಶೀಘ್ರದಲ್ಲೇ ಆರಂಭಿಸುತ್ತಿದ್ದೇವೆ. ಬೋಸ್ ಜನ್ಮದಿನಾಚರಣೆಗಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಈ ವಿಶೇಷ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸೋಣ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. 

Scroll to load tweet…

ಗುಮ್ನಾಮಿ ಬಾಬಾ ಅಥವಾ ನೇತಾಜಿ?: ಬಯಲಾಗಲಿದೆ ರಹಸ್ಯ!.

ಮೋದಿ ಸೂಚಿಸಿದ ಉನ್ನತ ಮಟ್ಟದ ಸಮಿತಿ ನೇತೃತ್ವವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ವಹಿಸಿಕೊಳ್ಳಲಿದ್ದಾರೆ. ಈ ಸಮಿತಿ 2021ರ ಜನವರಿಯಿಂದ 23 ರಿಂದ ಒಂದು ವರ್ಷಗಳ ಸ್ಮರಣಾರ್ಥ ಚಟುವಟಿಕೆಗಳನ್ನು ಆಯೋಜಿಸಲಿದೆ. ನೇತಾಜಿ ನೀಡಿದ ಅಪಾರ ಕೊಡುಗೆಗೆ ಕೃತಜ್ಞತೆಯ ಸಂಕೇತವಾಗಿ ಈ ಕಾರ್ಯಕ್ರಮಗಳು ನಡೆಯಲಿದೆ.

ಬ್ರಿಟೀಷರ ವಿರುದ್ಧದ ಸಶಸ್ತ್ರ ಹೋರಾಟಕ್ಕಿಳಿದ ನೇತಾಜಿ, ಅವರ ಧೈರ್ಯ, ಅಪರಾ ಕೂಡುಗೆಗೆಯನ್ನು ಭಾರತ ಸ್ಮರಿಸಲೇಬೇಕು. ನೇತಾಜಿ ಆದರ್ಶ ಈಡೇರಿಸಲು ಹಾಗೂ ಭವ್ಯ ಭಾರತ ನಿರ್ಮಾಣಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ನೇತಾಜಿ ಜನ್ಮದಿನಾಚರಣೆ ಸಮಿತಿ ದೇಶ ವಿದೇಶಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಿದೆ. ಅಮಿತ್ ಶಾ ನೇತೃತ್ವದ ಈ ಉನ್ನತ ಮಟ್ಟದ ಸಮಿತಿಯಲ್ಲಿ ಇತಿಹಾಸಕಾರರು, ತಜ್ಞರು, ಲೇಖಕರು, ನೇತಾಜಿ ಸುಭಾಸ್ ಚಂದ್ರ ಬೋಸ್ ಕುಟುಂಬ ಸದಸ್ಯರು ಮತ್ತು ಆಜಾದ್ ಹಿಂದ್ ಫೌಜ್ ಸಂಬಂಧಿಸಿದ ಪ್ರಖ್ಯಾತ ವ್ಯಕ್ತಿಗಳು ಇರಲಿದ್ದಾರೆ.