Asianet Suvarna News Asianet Suvarna News

TMC Pre Poll Promise: ಗೋವಾಗೆ ದೇವರು ಒಳ್ಳೆಯದು ಮಾಡಲಿ! ಟಿಎಂಸಿ ನೇರ ನಗದು ಯೋಜನೆಗೆ ಚಿದಂಬರಂ ಟ್ವೀಟ್ ಗುದ್ದು

  • ಗೋವಾದಲ್ಲಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ನೇರ ನಗದು ವರ್ಗಾವಣೆ ಯೋಜನೆ 
  • ಟಿಎಂಸಿ ನೀಡಿದ ಭರವಸೆಗೆ ಪಿ. ಚಿದಂಬರಂ ತರಾಟೆ
  • 23,473 ಕೋ.ಗಳಷ್ಟು ಸಾಲ ಇರುವ ಗೋವಾಗಿದು ಇದು ಸಣ್ಣ ಮೊತ್ತ ಎಂದ ಚಿದು
God bless Goa p Chidambaram takes dig on TMC pre poll promise
Author
Bengaluru, First Published Dec 12, 2021, 7:07 PM IST

ಪಣಜಿ(ಡಿ.12): ತೃಣಮೂಲ ಕಾಂಗ್ರೆಸ್ (Trinamool congress) ಗೋವಾದಲ್ಲಿ(Goa) ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ನೇರ ನಗದು ವರ್ಗಾವಣೆ ಯೋಜನೆ (Direct cash transfer scheme) ಭರವಸೆ ನೀಡಿದ ಒಂದು ದಿನದ ನಂತರ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ (P Chidambaram) ಅವರು ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಭಾನುವಾರ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಗೋವಾ ಚುನಾವಣಾ ಉಸ್ತುವಾರಿ ಚಿದಂಬರಂ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಗೆ ಅರ್ಹವಾದ ಗಣಿತ ಇಲ್ಲಿದೆ. ಗೋವಾದ 3.5 ಲಕ್ಷ ಕುಟುಂಬಗಳ ಮಹಿಳೆಗೆ ರೂ. 5000 ಮಾಸಿಕ ಅನುದಾನಕ್ಕೆ ತಿಂಗಳಿಗೆ ರೂ. 175 ಕೋಟಿ ವೆಚ್ಚವಾಗುತ್ತದೆ. ಅಂದರೆ ವರ್ಷಕ್ಕೆ ರೂ. 2100 ಕೋಟಿ. ಮಾರ್ಚ್ 2020 ರ ಅಂತ್ಯದ ವೇಳೆಗೆ ರೂ. 23,473 ಕೋಟಿಗಳಷ್ಟು ಸಾಲವನ್ನು ಹೊಂದಿರುವ ಗೋವಾ ರಾಜ್ಯಕ್ಕೆ ಇದು "ಸಣ್ಣ" ಮೊತ್ತವಾಗಿದೆ. ದೇವರು ಗೋವಾವನ್ನು ಆಶೀರ್ವದಿಸಲಿ! ಅಥವಾ ಗೋವಾವನ್ನು ದೇವರೇ ಉಳಿಸಬೇಕೇ? 'ಎಂದು ಬರೆದುಕೊಂಡಿದ್ದಾರೆ.

ತೃಣಮೂಲ ಕಾಂಗ್ರೆಸ್ ಹೇಳಿದ್ದೇನು?: ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ (Assembly election) ನಂತರ ಗೋವಾದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳಾ ಖಾತೆಗಳಿಗೆ ಪ್ರತಿ ತಿಂಗಳಿಗೆ 5 ಸಾವಿರ ರೂಪಾಯಿ (ವರ್ಷಕ್ಕೆ 60,000 ರೂ) ನೇರ ನಗದು ವರ್ಗಾವಣೆ ಯೋಜನೆ ಜಾರಿಗೊಳಿಸಲಾಗುವುದು ಎಂದು ತೃಣಮೂಲ ಕಾಂಗ್ರೆಸ್ ಶನಿವಾರ ಘೋಷಿಸಿತ್ತು.  ಈ ಬಗ್ಗೆ ತೃಣಮೂಲ ಕಾಂಗ್ರೆಸ್ ನ ಮಮತಾ ಬ್ಯಾನರ್ಜಿ ಕೂಡ ಟ್ವೀಟ್ ಮಾಡಿ ತಿಳಿಸಿದ್ದರು.

Awantipora Encounter: ಜಮ್ಮು ಮತ್ತು ಕಾಶ್ಮೀರದಲ್ಲಿ ಓರ್ವ ಉಗ್ರನನ್ನು ಹೊಡೆದುರುಳಿಸಿದ ಸೇನೆ

ಗೋವಾದಲ್ಲಿ ಒಂದು ಬಾರಿ ಪಕ್ಷ ಅಧಿಕಾರಕ್ಕೆ ಬಂದರೆ ಗೃಹ ಲಕ್ಷಿ ಯೋಜನೆ ಅಡಿಯಲ್ಲಿ ಹಣದುಬ್ಬರ ಕಡಿಮೆ ಮಾಡಲು ಖಾತರಿ ಆದಾಯ ಬೆಂಬಲವಾಗಿ ರಾಜ್ಯದ ಪ್ರತಿಯೊಬ್ಬ ಮಹಿಳೆಗೂ ತಿಂಗಳಿಗೆ 5 ಸಾವಿರ ರೂಪಾಯಿ ವರ್ಗಾವಣೆ ಮಾಡಲಾಗುವುದು ಗೃಹ ಲಕ್ಷ್ಮಿ ಯೋಜನೆಯಡಿ ರಾಜ್ಯದ 3.5 ಲಕ್ಷ ಮಹಿಳೆಯರು ಪ್ರಯೋಜನ ಪಡೆಯಲಿದ್ದು, ಇದು ರಾಜ್ಯದ ಬಿಜೆಪಿ ಸರ್ಕಾರದ ಸದ್ಯದ ಗೃಹ ಆಧಾರ್ ಯೋಜನೆಯಲ್ಲಿನ ಕಡ್ಡಾಯಗೊಳಿಸಲಾದ ಗರಿಷ್ಠ ಆದಾಯದ ಮಿತಿಯನ್ನು ಸಹ ತೆಗೆದುಹಾಕುತ್ತದೆ ಎಂದು ಗೋವಾದಲ್ಲಿನ ಟಿಎಂಸಿ ಉಸ್ತುವಾರಿ, ಕೃಷ್ಣನಗರ ಕ್ಷೇತ್ರದ ಪಕ್ಷದ ಸಂಸದೆ ಮಹುವಾ ಮೊಯಿತ್ರಾ (Mahua Moitra ) ಹೇಳಿದ್ದರು. ಮಾತ್ರವಲ್ಲ ಯೋಜನೆಗಾಗಿ ಗುರುತಿನ ಕಾರ್ಡ್ ಗಳನ್ನು ಪಕ್ಷದಿಂದ ಶೀಘ್ರದಲ್ಲಿಯೇ ವಿತರಿಸಲಾಗುವುದು ಎಂದು ಕೂಡ ಮಾಹಿತಿ ನೀಡಿದ್ದರು. 

Uttar Pradesh Elections: ಅಖಿಲೇಶ್‌ ರ್ಯಾಲಿಗೆ ಭರ್ಜರಿ ಯುವಕರ ದಂಡು, ಯೋಗಿಗೆ ಚಿಂತೆ ಶುರು

ಮಹುವಾ ಮೊಯಿತ್ರಾ ಮೇಲೆ ಮಮತಾ ವಾಗ್ದಾಳಿ: ಡಿಸೆಂಬರ್ 9 ರಂದು ನಡೆದ ಆಘಾತಕಾರಿ ಘಟನೆಗಳಲ್ಲಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಾಡಿಯಾ ಜಿಲ್ಲೆಯ ಆಡಳಿತಾತ್ಮಕ ಪರಿಶೀಲನಾ ಸಭೆಯನ್ನು ನಡೆಸುತ್ತಿದ್ದಾಗ  ಮಹುವಾ ಮೊಯಿತ್ರಾ ಅವರ ಮೇಲೆ ತೀವ್ರವಾಗಿ ವಾಗ್ದಾಳಿ ನಡೆಸಿದರು. "ಮಹುವಾ, ನಾನು ನಿಮಗೆ ಸ್ಪಷ್ಟವಾದ ಸಂದೇಶವನ್ನು ನೀಡಲು ಬಯಸುತ್ತೇನೆ. ಯಾರು ಯಾರ ವಿರುದ್ಧ ಎಂದು ತಿಳಿಯಲು ನಾನು ಬಯಸುವುದಿಲ್ಲ. ಯೂಟ್ಯೂಬ್, ಅಥವಾ ಡಿಜಿಟಲ್ ಮೀಡಿಯಂ, ಅಥವಾ ನ್ಯೂಸ್ ಪೇಪರ್ ಪೇಪರ್ ನಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿಗಳ ಸ್ವಂತ ಗುಂಪನ್ನು ಸಿದ್ಧಪಡಿಸುವ ಈ ರೀತಿಯ ರಾಜಕೀಯವು ಒಂದು ದಿನ ಉಳಿಯಬಹುದು, ಆದರೆ ಹೆಚ್ಚು ಕಾಲ ಉಳಿಯುವುದಿಲ್ಲ. ಒಬ್ಬರು ಶಾಶ್ವತವಾಗಿ ಸ್ಥಾನದಲ್ಲಿರುತ್ತಾರೆ ಎಂದು ನಂಬಲು ಯಾವುದೇ ಕಾರಣವಿಲ್ಲ. ಚುನಾವಣೆ ಸಮಯದಲ್ಲಿ, ಯಾರು ಸ್ಪರ್ಧಿಸಬೇಕು ಮತ್ತು ಯಾರು ಸ್ಪರ್ಧಿಸಬಾರದು ಎಂಬುದನ್ನು ಪಕ್ಷ ನಿರ್ಧರಿಸುತ್ತದೆ. ಯಾವುದೇ ಭಿನ್ನಾಭಿಪ್ರಾಯ ಇರಬಾರದು, ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ನನಗೆ ಎಲ್ಲದರ ಬಗ್ಗೆ ಜ್ಞಾನವಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು. ನಾಡಿಯಾ ಜಿಲ್ಲಾ ನಾಯಕತ್ವದೊಳಗಿನ ಆಂತರಿಕ ಕಲಹ , ಟಿಎಂಸಿಯ ಎರಡು ಬಣಗಳು ಮುಖಾಮುಖಿಯಾಗಿರುವ ಇತ್ತೀಚಿನ ಬೆಳವಣಿಗೆಯಿಂದ ಮಮತಾ ಬ್ಯಾನರ್ಜಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

Follow Us:
Download App:
  • android
  • ios