Awantipora Encounter: ಜಮ್ಮು ಮತ್ತು ಕಾಶ್ಮೀರದಲ್ಲಿ ಓರ್ವ ಉಗ್ರನನ್ನು ಹೊಡೆದುರುಳಿಸಿದ ಸೇನೆ

  • ಅವಂತಿಪೋರಾದಲ್ಲಿ ಓರ್ವ ಉಗ್ರನನ್ನು ಹತ್ಯೆ 
  • ಎನ್ಕೌಂಟರ್ ನಡೆಸಿ ಹತ್ಯೆ ಮಾಡಿ ಭದ್ರತಾ ಪಡೆ
  • ಡಿಸೆಂಬರ್ ತಿಂಗಳಿನಲ್ಲಿ ನಡೆದ ನಾಲ್ಕನೇ ಉಗ್ರರರ ವಿರುದ್ಧದ ಕಾರ್ಯಾಚರಣೆ
Awantipora Encounter terrorist killed by security forces gow

ಅವಂತಿಪೋರಾ(ಡಿ.12): ಜಮ್ಮು ಮತ್ತು ಕಾಶ್ಮೀರದ (Jammu and Kashmir) ಅವಂತಿಪೋರಾದಲ್ಲಿ (Awantipora) ಭದ್ರತಾಪಡೆಗಳು ಎನ್ಕೌಂಟರ್ (Encounter) ನಡೆಸಿದ್ದು, ಓರ್ವ ಉಗ್ರನನ್ನು ಹತ್ಯೆ ಮಾಡಿದೆ ಎಂದು ವರದಿ ತಿಳಿಸಿದೆ. ಅವಂತಿಪೋರಾದ ಬರಗಾಮ್ ಎಂಬ ಪ್ರದೇಶದಲ್ಲಿ ಉಗ್ರರು (Terrorist) ಅಡಗಿಕುಳಿತಿರುವ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಭದ್ರತಾಪಡೆಗಳು (Security Force) ಕಾರ್ಯಾಚರಣೆ ಆರಂಭಿಸಿದ್ದವು. ಈ ವೇಳೆ ಉಗ್ರರು ಭದ್ರತಾ ಪಡೆಗಳ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.

ಕೂಡಲೇ ಸ್ಥಳವನ್ನು ಸುತ್ತುವರೆದ ಸೇನಾಪಡೆ ಉಗ್ರರ ವಿರುದ್ಧ ಎನ್ಕೌಂಟರ್ ನಡೆಸಿದ್ದು, ಗುಂಡಿನ ಚಕಮಕಿ ಬಳಿಕ ಇದೀಗ ಓರ್ವ ಉಗ್ರನನ್ನು ಹತ್ಯೆ ಮಾಡಿದೆ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಅವರು ಹೇಳಿದ್ದಾರೆ. ಕಾರ್ಯಾಚರಣೆ ಮುಂದುವರೆದಿದೆ.

ಕಾಶ್ಮೀರದ ಬಂಡಿಪೊರದಲ್ಲಿ ಉಗ್ರರ ದಾಳಿ, ಪೋಲಿಸ್ ಸಿಬ್ಬಂದಿ ಹುತಾತ್ಮ: ಶುಕ್ರವಾರ ಜಮ್ಮು ಕಾಶ್ಮೀರದ ಬಂಡೀಪೊರ (Bandipora) ಜಿಲ್ಲೆಯ ಗುಲ್​ಶಾನ್ ಚೌಕ್ ಬಳಿ ಮುಸುಕುಧಾರಿ ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಪೊಲೀಸ್‌ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಜಮ್ಮು-ಕಾಶ್ಮೀರದ ಗುಲ್ಶನ್ ಚೌಕ್‌ನಲ್ಲಿ ಉಗ್ರರ ದಾಳಿ ನಡೆದಿದ್ದು, ಮೊಹಮದ್ ಸುಲ್ತಾನ್, ಫಯಾಜ್ ಅಹ್ಮದ್‌ ಸಾವನ್ನಪ್ಪಿದ್ದಾರೆ. ಪೊಲೀಸರನ್ನು ಗುರಿಯಾಗಿಸಿ ಫೈರಿಂಗ್ ನಡೆಸಿದ್ದ ಉಗ್ರರು ಲಷ್ಕರ್ ಸಂಘಟನೆಯ ಭಯೋತ್ಪಾದಕರೆಂಬ ಅನುಮಾನ ವ್ಯಕ್ತವಾಗಿದೆ. 

Kashmir tribute to Rawat: ರಾವತ್ ನಿಧನಕ್ಕೆ ಕಾಶ್ಮೀರಿ ಜನರ ಬೆಳಕಿನ ನಮನ

ಶೋಪಿಯಾನ್ ನಲ್ಲಿ ಉಗ್ರರ ಎನ್‌ಕೌಂಟರ್: ಕಳೆದ ಡಿಸೆಂಬರ್ 8ರಂದು ದಕ್ಷಿಣ ಶೋಫಿಯಾನ್ (shopian) ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್)ನ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿತ್ತು. 

ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಭಾರತೀಯ ಸೇನೆ (Indian Army) ಹಾಗೂ ಕೇಂದ್ರಿಯ ಮೀಸಲು ಭದ್ರತಾಪಡೆ ಮತ್ತು ಸ್ಥಳೀಯ ಪೊಲೀಸರು ಈ ಕಾರ್ಯಾಚರಣೆ ಆರಂಭಿಸಿದ್ದರು. ಕಾರ್ಯಾಚರಣೆ ವೇಳೆ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿತ್ತು.

Rajasthan: ಹುತಾತ್ಮನಿಗೆ 5 ವರ್ಷದ ಮಗನಿಂದ ಅಗ್ನಿ ಸ್ಪರ್ಶ, ಮೊಮ್ಮಗನನ್ನೂ ಸೇನೆಗೆ ಕಳಿಸ್ತೀನಿ ಎಂದ ಅಜ್ಜ!

ಪುಲ್ವಾಮಾದಲ್ಲಿ ಉಗ್ರರ ದಾಳಿ: ಇದಕ್ಕೂ ಮುನ್ನ ಡಿಸೆಂಬರ್ 1 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಕಸ್ಬಾ ಯಾರ್‌ ಪ್ರದೇಶದಲ್ಲಿ ಭಾರತೀಯ ಸೇನೆ ಭಾರೀ ಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರನ್ನು ಎನ್‌ಕೌಂಟರ್‌ನಲ್ಲಿ ಹತೈಗೈದಿತ್ತು. ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಇಬ್ಬರು ಭಯೋತ್ಪಾದಕರು ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದರು. 

ಪುಲ್ವಾಮಾದ ಕಸ್ಬಾ ಯಾರ್ ಪ್ರದೇಶದಲ್ಲಿ ಜೈಷ್‌-ಇ-ಮೊಹಮದ್‌ ಸಂಘಟನೆಗೆ ಸೇರಿದ ಇಬ್ಬರು ಉಗ್ರರು ಅಡಗಿ ಕುಳಿತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಭಾರತೀಯ ಸೇನಾಪಡೆ ಸ್ಥಳದಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಹತ್ಯೆಯಾದವರನ್ನು ಯಾಸಿರ್ ಪರ್ರೆ, ಫುರ್ಖಾನ್ ಎಂದು ಗುರುತಿಸಲಾಗಿದೆ. ಯಾಸಿರ್ ಪರ್ರೆ ಜೆಇಎಂ ಉಗ್ರ ಸಂಘಟನೆಯ ಕಮಾಂಡರ್ ಆಗಿದ್ದು, ಫುರ್ಖಾನ್ ಐಇಡಿ ಪರಿಣಿತ ಹಾಗೂ ವಿದೇಶಿ ಭಯೋತ್ಪಾದಕನಾಗಿದ್ದ ಎಂದು ಜಮ್ಮು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದರು. 

Sri Lanka Braves Forex Crisis: ತಪ್ಪದೇ ಸಾಲ ಕಟ್ಟುತ್ತೇವೆಂದು ಭರವಸೆ ನೀಡಿದ ಶ್ರೀಲಂಕಾ

ಮೂಲಗಳ ಪ್ರಕಾರ ಕಾಶ್ಮೀರದ 9 ಪ್ರದೇಶಗಳ ಪೈಕಿ ಹೆಚ್ಚಿನ ಭಯೋತ್ಪಾದಕರು ಪುಲ್ವಾಮಾದಲ್ಲಿದ್ದಾರೆ. ಪುಲ್ವಾಮಾದಲ್ಲಿ ಒಟ್ಟು 36 ಭಯೋತ್ಪಾದಕರು ಇದ್ದಾರೆ ಎಂದು ವರದಿಯಾಗಿದೆ. ಅವರಲ್ಲಿ 10 ಹಿಜ್ಬುಲ್ ಮುಜಾಹಿದ್ದೀನ್, 17 ಲಷ್ಕರ್, 4 ಅಲಬ್ದಾರ್, 4 ಜೈಶ್ ಭಯೋತ್ಪಾದಕರು. ಇದಾದ ನಂತರ ಶೋಪಿಯಾನ್ ನಲ್ಲಿ ಒಟ್ಟು 24 ಸಕ್ರಿಯ ಭಯೋತ್ಪಾದಕರು ಇದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಅದರಲ್ಲಿ 5 ಹಿಜ್ಬುಲ್ ಮುಜಾಹಿದ್ದೀನ್, 14 ಲಷ್ಕರ್ ಮತ್ತು ಒಟ್ಟು 5 ಅಲ್ಬದರ್ ಭಯೋತ್ಪಾದಕರು ಇದ್ದಾರೆ ಎನ್ನಲಾಗಿದೆ. ಇನ್ನು ಕುಲ್ಗಾಮ್‌ನಲ್ಲಿ 13, ಶ್ರೀನಗರದಲ್ಲಿ 8, ಅನಂತನಾಗ್‌ನಲ್ಲಿ 8 ಮತ್ತು ಬಾರಾಮುಲ್ಲಾದಲ್ಲಿ 5 ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಲಭಿಸಿದೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ ಎಲ್ಲಾ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಗೆ ಭದ್ರತಾ ಏಜೆನ್ಸಿಗಳು ಸಿದ್ಧತೆಯಲ್ಲಿ ತೊಡಗಿವೆ.

Latest Videos
Follow Us:
Download App:
  • android
  • ios