Asianet Suvarna News Asianet Suvarna News

5 State Elections: ಇಂದು ಗೋವಾ, ಉ.ಖಂಡ ಚುನಾವಣೆ: ಯುಪಿಯಲ್ಲಿ 2ನೇ ಹಂತದ ಮತದಾನ

ತೀವ್ರ ಕುತೂಹಲ ಕೆರಳಿಸಿರುವ ಪಂಚರಾಜ್ಯ ಚುನಾವಣೆಯಲ್ಲಿ ಸೋಮವಾರ ಗೋವಾ ಹಾಗೂ ಉತ್ತರಾಖಂಡ ವಿಧಾನಸಭೆಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಉತ್ತರಪ್ರದೇಶದಲ್ಲಿ ಎರಡನೇ ಹಂತದ ಮತದಾನಕ್ಕೆ ವೇದಿಕೆ ಸಿದ್ಧವಾಗಿದೆ.

Goa Uttarakhand go to polls today voting for 2nd phase of UP elections as well gvd
Author
Bangalore, First Published Feb 14, 2022, 2:45 AM IST

ನವದೆಹಲಿ (ಫೆ.14): ತೀವ್ರ ಕುತೂಹಲ ಕೆರಳಿಸಿರುವ ಪಂಚರಾಜ್ಯ ಚುನಾವಣೆಯಲ್ಲಿ (5 State Elections) ಸೋಮವಾರ ಗೋವಾ (Goa) ಹಾಗೂ ಉತ್ತರಾಖಂಡ ವಿಧಾನಸಭೆಗೆ (Uttarakhand Assembly) ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಉತ್ತರಪ್ರದೇಶದಲ್ಲಿ (Uttar Pradesh) ಎರಡನೇ ಹಂತದ ಮತದಾನಕ್ಕೆ ವೇದಿಕೆ ಸಿದ್ಧವಾಗಿದೆ.

ಗೋವಾ ಹಾಗೂ ಉತ್ತರಾಖಂಡದಲ್ಲಿ ಈವರೆಗೆ ಬಿಜೆಪಿ- ಕಾಂಗ್ರೆಸ್‌ (BJP-Congress) ನಡುವೆಯಷ್ಟೆ ಪೈಪೋಟಿ ಏರ್ಪಡುತ್ತಿತ್ತು. ಆದರೆ ಈ ಬಾರಿ ಗೋವಾದಲ್ಲಿ ಆಮ್‌ ಆದ್ಮಿ ಪಕ್ಷ (AAp), ತೃಣಮೂಲ ಕಾಂಗ್ರೆಸ್‌, ಸಣ್ಣ ಪುಟ್ಟ ಪಕ್ಷಗಳ ಸ್ಪರ್ಧೆಯಿಂದಾಗಿ ಬಹುಕೋನ ಸ್ಪರ್ಧೆ ಕಂಡುಬರುತ್ತಿದೆ. ಉತ್ತರಾಖಂಡದಲ್ಲಿ ಆಮ್‌ ಆದ್ಮಿ ಪಕ್ಷ ಕಣಕ್ಕಿಳಿದಿರುವುದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಗೋವಾದಲ್ಲಿ 40 ಕ್ಷೇತ್ರದಲ್ಲಿ ಹಣಾಹಣಿ: ಗೋವಾದ 40 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, 301 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 11 ಲಕ್ಷ ಮತದಾರರು ಹುರಿಯಾಳುಗಳ ಭವಿಷ್ಯ ನಿರ್ಧರಿಸಲಿದ್ದಾರೆ. 2017ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 17 ಸ್ಥಾನ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿ 13 ಸ್ಥಾನಗಳನ್ನು ಗಳಿಸಿತ್ತು. ಆದರೆ ದಿಢೀರ್‌ ಮೈತ್ರಿ ಕುದುರಿಸುವ ಮೂಲಕ ಬಿಜೆಪಿ ಸರ್ಕಾರ ರಚಿಸಿತ್ತು.

5 State Elections: ಬಿಜೆಪಿಯ ಚಿನ್ನದ ಗೋವಾ ಬೇಕೆ? ಕಾಂಗ್ರೆಸ್‌ನ ಗಾಂಧಿ ಪರಿವಾರ ಗೋವಾ ಬೇಕೆ?

ಉತ್ತರಾಖಂಡದ 70 ಕ್ಷೇತ್ರದಲ್ಲಿ ಜಿದ್ದಾಜಿದ್ದಿ: ಉತ್ತರಾಖಂಡದ 70 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, 632 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 81 ಲಕ್ಷ ಮತದಾರರು ಇವರ ಭವಿಷ್ಯ ನಿರ್ಧರಿಸಲಿದ್ದಾರೆ. 2017ರ ಚುನಾವಣೆಯಲ್ಲಿ ಬಿಜೆಪಿ 57 ಹಾಗೂ ಕಾಂಗ್ರೆಸ್‌ 11 ಸ್ಥಾನ ಗೆದ್ದಿದ್ದವು.

ಉ.ಪ್ರ.ದ 55 ಕ್ಷೇತ್ರಗಳಲ್ಲಿ ಸಮರ: ಉತ್ತರಪ್ರದೇಶ ವಿಧಾನಸಭೆ ಮಾ.10ರಂದು ಮೊದಲ ಹಂತದ ಚುನಾವಣೆ ನಡೆದಿತ್ತು. ಈಗ ಎರಡನೇ ಹಂತದಲ್ಲಿ 9 ಜಿಲ್ಲೆಗಳ 55 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. 586 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಾ.10ರಂದು ಪಂಚರಾಜ್ಯಗಳ ಫಲಿತಾಂಶ ಪ್ರಕಟವಾಗಲಿದೆ.

ಸ್ಟಾರ್‌ ಅಭ್ಯರ್ಥಿಗಳು
ಉತ್ತರಾಖಂಡ

ಪುಷ್ಕರ್‌ ಸಿಂಗ್‌ ಧಾಮಿ ಬಿಜೆಪಿ
ಹರೀಶ್‌ ರಾವತ್‌ ಕಾಂಗ್ರೆಸ್‌

ಗೋವಾ
ಪ್ರಮೋದ್‌ ಸಾವಂತ್‌ ಬಿಜೆಪಿ
ವಿಜಯ ಸರದೇಸಾಯಿ ಜಿಎಫ್‌ಪಿ
ದಿಗಂಬರ ಕಾಮತ್‌ ಕಾಂಗ್ರೆಸ್‌
ಉತ್ಪಲ್‌ ಪರ್ರಿಕರ್‌ ಪಕ್ಷೇತರ

ಉತ್ತರ ಪ್ರದೇಶ
ಆಜಂ ಖಾನ್‌ ಸಮಾಜವಾದಿ ಪಕ್ಷ

ಮತ್ತೆ ಅಧಿಕಾರಕ್ಕೆ ಬಂದರೆ ಏಕರೂಪ ನಾಗರಿಕ ಸಂಹಿತೆ: ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ( CM Pushkar Singh Dhami) ಏಕರೂಪ ನಾಗರಿಕ ಸಂಹಿತೆ ಕರಡು ತಯಾರಿಸಲು ಸಮಿತಿ ರಚನೆಯ ಬಗ್ಗೆ ಶನಿವಾರ ಮಾಹಿತಿ ನೀಡಿದ್ದಾರೆ. "ಹೊಸ ಬಿಜೆಪಿ ಸರ್ಕಾರವು ರಾಜ್ಯದಲ್ಲಿ  ಪ್ರಮಾಣ ವಚನದ ನಂತರ ಏಕರೂಪ ನಾಗರಿಕ ಸಂಹಿತೆಯ ಕರಡು ತಯಾರಿಸಲು ಸಮಿತಿಯನ್ನು ರಚಿಸುತ್ತದೆ. ಈ ಯುಸಿಸಿ (Uniform Civil Code) ಎಲ್ಲಾ ಜನರಿಗೆ ಅವರ ವೈಯಕ್ತಿಕ ನಂಬಿಕೆ ಹೊರತಾಗಿಯೂ  ಮದುವೆಗಳು, ವಿಚ್ಛೇದನ, ಭೂಮಿ-ಆಸ್ತಿ ಮತ್ತು ಉತ್ತರಾಧಿಕಾರದ ಬಗ್ಗೆ ಒಂದೇ ರೀತಿಯ ಕಾನೂನುಗಳನ್ನು ಒದಗಿಸುತ್ತದೆ. "ಎಂದು ಉತ್ತರಾಖಂಡ ಸಿಎಂ ಹೇಳಿದ್ದಾರೆ. 

Assembly Elections 2022: ಗೋವಾದಲ್ಲಿ ಫೋಟೋ ಫಿನಿಶ್‌: ಮಣಿಪುರ, ಉ.ಪ್ರ.ದಲ್ಲಿ ಬಿಜೆಪಿಗೆ ಬಹುಮತ: ಸಮೀಕ್ಷೆ!

ಉತ್ತರಾಖಂಡದ ಎಲ್ಲಾ 70 ವಿಧಾನಸಭಾ ಸ್ಥಾನಗಳಿಗೆ  ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಬಿಜೆಪಿ-ಕಾಂಗ್ರೆಸ್ ಜತೆಗೆ ಆಮ್ ಆದ್ಮಿ ಮತ್ತಿತರ ಪಕ್ಷಗಳೂ ಚುನಾವಣಾ ಪ್ರಚಾರದಲ್ಲಿ ನಿರತವಾಗಿವೆ. ಸಾರ್ವಜನಿಕರನ್ನು ಓಲೈಸಲು ಭರವಸೆ ನೀಡಲಾಗುತ್ತಿದೆ. ಅಭಿವೃದ್ಧಿಯ ಮಾತು ಕೇಳಿ ಬರುತ್ತಿದೆ. ಈ ಮಧ್ಯೆ ಬಿಜೆಪಿ ಅಧಿಕಾರಕ್ಕೆ ಬಂದರೆ  ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಉತ್ತರಾಖಂಡ್‌ ಸಿಎಂ ಮಾತನಾಡಿದ್ದಾರೆ. 

Follow Us:
Download App:
  • android
  • ios