ಪಣಜಿ(ಮಾ.23): ಬೇಸಗೆ ಶುರು. ಆರಾಮವಾಗಿ ಗೋವಾದಲ್ಲಿ ವೆಕೇಷನ್ ಎಂಜಾಯ್ ಮಾಡುವಾ ಎಂದು ಪ್ಲಾನಿಂಗ್ ಮಾಡ್ತಿರೋರು ಸ್ವಲ್ಪ ನಿಧಾನ. ಕೊರೋನಾ ಹೆಚ್ಚಳ ಹಿನ್ನೆಲೆ ಕೆಲವೊಂದು ನಿಯಮಗಳು ಬದಲಾಗೋ ಸೂಚನೆ ಸಿಕ್ಕಿದೆ.

ಶೀಘ್ರದಲ್ಲೇ ಗೋವಾಕ್ಕೆ ಭೇಟಿ ನೀಡುವವರು COVID-19 ನೆಗೆಟಿವ್ ಪ್ರಮಾಣಪತ್ರಗಳನ್ನು ಕೊಂಡೊಯ್ಯುವುದು ಕಡ್ಡಾಯವಾಗುವ ಸಾಧ್ಯತೆ ಇದೆ. ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ತಮ್ಮ ಕೊರೋನಾ ಪರೀಕ್ಷೆ ಮಾಡಿಕೊಳ್ಳುವುದು ಕಡ್ಡಾಯ ಎಂದು ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಹೇಳಿದ್ದಾರೆ.

ದೇಶದ ಮೊದಲ ಅಂತಾರಾಜ್ಯ ನದಿ ಜೋಡಣೆಗೆ ಒಪ್ಪಂದ!

ನಾವು ಈ ಪ್ರಸ್ತಾಪವನ್ನು ಮುಖ್ಯಮಂತ್ರಿ ಮುಂದೆ ಇಡುತ್ತೇವೆ ಎಂದು ರಾಣೆ ಹೇಳಿದ್ದಾರೆ. ರೆಸ್ಟೋರೆಂಟ್‌ಗಳು, ವಿವಾಹಗಳು ಮತ್ತು ಇತರ ಕಾರ್ಯಕ್ರಮಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಜನಸಂದಣಿಯನ್ನು ಕಡಿಮೆ ಮಾಡಲು ಹೊಸ ನಿಯಮ ಸೂಚಿಸಲಾಗುವುದು ಎಂದು ಅವರು ಹೇಳಿದ್ದಾರೆ.

ದೇಶದ ಹಲವು ರಾಜ್ಯಗಳಲ್ಲಿ ಕೊರೋನಾ ಹೆಚ್ಚಾಗಿದ್ದು, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ನಿಗದಿತ ಸ್ಥಳಗಳಲ್ಲಿ ರಾತ್ರಿ ಕರ್ಫ್ಯೂ, ಲಾಕ್‌ಡೌನ್‌ಗಳನ್ನು ಹೇರಲಾಗಿದೆ.