ಪಣಜಿ [ಫೆ.08]: ಇಂದು ಪಣಜಿಯಲ್ಲಿ ನಡೆಯುವ ಆರ್‌ಎಸ್‌ಎಸ್‌ ಸಂವಾದ ಕಾರ್ಯಕ್ರಮವೊಂದಕ್ಕೆ ಗೋವಾ ಮತ್ತು ದಮನ್‌ನ ಕ್ರೈಸ್ತ ಆಚ್‌ರ್‍ ಬಿಷಪ್‌ ರೆ.ಫಿಲಿಪಿ ನೆರೆ ಫೆರ್ರಾವ್‌ ಅವರಿಗೆ ಆಹ್ವಾನ ನೀಡಲಾಗಿದೆ.

ಡೋನಾಪೌಲಾದಲ್ಲಿ ನಡೆಯಲಿರುವ ಕಾರ್ಯಕ್ರಮ ಉದ್ದೇಶಿಸಿ ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ಭಯ್ಯಾಜಿ ಜೋಶಿ ಮಾತನಾಡಲಿದ್ದಾರೆ. 

ಮೋದಿ ದೇಶದ ಪ್ರಧಾನಿ, RSS ಪ್ರಧಾನಿಯಲ್ಲ, ಇದು ನೆನಪಿರಲಿ'..!

ಆರ್‌ಎಸ್‌ಎಸ್‌ನ ‘ವಿಶ್ವಗುರು ಭಾರತ’ ಎಂಬ ಪರಿಕಲ್ಪನೆ ಬಗ್ಗೆ ಭಯ್ಯಾಜಿ ಜೋಶಿ ಮಾತನಾಡಲಿದ್ದಾರೆ. ಈ ವೇಳೆ ನಡೆಯುವ ಸಂವಾದ ಕಾರ್ಯಕ್ರಮಕ್ಕೆ ಸಮಾಜದ ವಿವಿಧ ವರ್ಗಗಳ ನಾಯಕರು ಮತ್ತು ಬುದ್ಧಿಜೀವಿಗಳನ್ನು ಆಹ್ವಾನಿಸಲಾಗಿದೆ. 

ಅಧಿಕಾರ ಇದ್ದಾಗ ಆರೆಸ್ಸೆಸ್‌ ನಿಷೇಧಿಸಬೇಕಿತ್ತು: ಕಲ್ಲಡ್ಕ ಭಟ್‌...

ಅದೇ ರೀತಿಯಲ್ಲಿ ರೆ. ಫಿಲಿಪಿ ನೆರೆ ಫೆರ್ರಾವ್‌ ಅವರಿಗೂ ಆಹ್ವಾನ ನೀಡಲಾಗಿದೆ ಎಂದು ಸಂಘಟನೆ ಹೇಳಿದೆ.