Asianet Suvarna News Asianet Suvarna News

ಅಧಿಕಾರ ಇದ್ದಾಗ ಆರೆಸ್ಸೆಸ್‌ ನಿಷೇಧಿಸಬೇಕಿತ್ತು: ಕಲ್ಲಡ್ಕ ಭಟ್‌

ಅಧಿಕಾರ ಇದ್ದಾಗ ಆರೆಸ್ಸೆಸ್‌ ನಿಷೇಧಿಸಬೇಕಿತ್ತು: ಕಲ್ಲಡ್ಕ ಭಟ್| ಮಾಜಿ ಸಿಎಂ ಎಚ್‌ಡಿಕೆಗೆ ಆರೆಸ್ಸೆಸ್‌ ಮುಖಂಡ ತಿರುಗೇಟು

Kalladka Prabhakar Bhat Slams HD Kumaraswamy On RSS Issue
Author
Bangalore, First Published Jan 29, 2020, 8:03 AM IST
  • Facebook
  • Twitter
  • Whatsapp

ಚಿತ್ರದುರ್ಗ[ಜ.29]: ಮುಖ್ಯಮಂತ್ರಿಯಾಗಿದ್ದವರು ಆರೆಸ್ಸೆಸ್ಸನ್ನು ನಿಷೇಧಿಸುವ ಮಾತನಾಡುವ ಬದಲು ತಾವು ಅಧಿಕಾರದಲ್ಲಿದ್ದಾಗ ನಿಷೇಧ ಮಾಡಿ ತಾಕತ್ತು ಪ್ರದರ್ಶಿಸಬೇಕಿತ್ತು ಎಂದು ಆರೆಸ್ಸೆಸ್ಸಿನ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಕಲ್ಲಡ್ಕ ಡಾ.ಪ್ರಭಾಕರ್‌ ಭಟ್‌ ಅವರು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪರೋಕ್ಷವಾಗಿ ಸವಾಲು ಹಾಕಿದ್ದಾರೆ.

ಆರೆಸ್ಸೆಸ್ಸಿನದ್ದು ಯಾರನ್ನೋ ಹೊಡೆಯುವ, ಬಡಿಯುವ, ಕೊಲ್ಲುವ ಸಂಸ್ಕೃತಿಯಲ್ಲ. ದೇಶಭಕ್ತಿಯನ್ನು ನಿರ್ಮಾಣ ಮಾಡುತ್ತಿರುವ ಸಂಘಟನೆ ಎಂದು ಸಮರ್ಥಿಸಿದ್ದಾರೆ. ಆರೆಸ್ಸೆಸ್ಸನ್ನು ಬ್ಯಾನ್‌ ಮಾಡಬೇಕೆಂಬ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆ ಬಗ್ಗೆ ನಗರದಲ್ಲಿ ಮಂಗಳವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆರ್‌ಎಸ್‌ಎಸ್‌ ಬ್ಯಾನ್‌ ಮಾಡುವಂತೆ ಮಾಜಿ ಮುಖ್ಯಮಂತ್ರಿಯಾಗಿದ್ದವರು ಮಾತನಾಡಬಾರದು ಎಂದರು. ಅನೇಕ ದಶಕಗಳಿಂದ ಆರೆಸ್ಸೆಸ್‌ ಬಗ್ಗೆ ಅಪಪ್ರಚಾರಗಳ ನಡೆಸಲಾಗುತ್ತಿದ್ದು, ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಆರೆಸ್ಸೆಸ್‌ ಹಿಂದೂ ಸಮಾಜದ ರಕ್ಷಕನಂತಿದ್ದು, ಈ ಕಾರಣಕ್ಕಾಗಿಯೇ ಹಿಂದೂ ಸಮಾಜ ಆರೆಸ್ಸಿಸ್ಸಿನ ಹಿಂದೆ ಬರುತ್ತಿದೆ ಎಂದರು.

ಸಿಎಂ ಯಡಿಯೂರಪ್ಪ ಹತ್ರ ರೇವಣ್ಣ ಹೇಳಿದ್ರೆ ಅನುದಾನ ಬಿಡುಗಡೆ : ಸಚಿವ ಮಾಧುಸ್ವಾಮಿ

ಗೋಮಾತೆ ಹಾಗೂ ಹೆಣ್ಣನ್ನು ರಕ್ಷಿಸುವ ಕೆಲಸ ಆರೆಸ್ಸೆಸ್‌ ಮಾಡುತ್ತಿದೆ. ನಮಗೆ ಕಾನೂನು ಮಾಡುವ ಅವಕಾಶ ಸಿಕ್ಕರೆ ಗೋಹತ್ಯೆ ಹಾಗೂ ಮತಾಂತರ ನಿಷೇಧ ಕಾನೂನು ಜಾರಿಗೆ ತರುವುದಾಗಿ ಗಾಂಧೀಜಿ ಹೇಳಿದ್ದರು. ಕಳೆದ 94 ವರ್ಷಗಳಿಂದ ಅಂಬೇಡ್ಕರ್‌ ಬಗ್ಗೆ ಆರ್‌ಎಸ್‌ಎಸ್‌ ಹೆಚ್ಚು ಮಾತನಾಡುತ್ತಿದೆ. ಅವರೊಬ್ಬ ರಾಷ್ಟ್ರೀಯ ದೃಷ್ಟಿಕೋನದ ವ್ಯಕ್ತಿಯಾಗಿದ್ದು, ಈ ಕಾರಣಕ್ಕಾಗಿಯೇ ನಾವು ಹೆಚ್ಚು ಪುಸ್ತಕಗಳನ್ನು ಬರೆದಿದ್ದೇವೆ ಎಂದು ತಿಳಿಸಿದರು.

ಇದೇವೇಳೆ ಪಾಪ್ಯೂಲರ್‌ ಫ್ರಂಟ್‌ ಅಫ್‌ ಇಂಡಿಯಾ(ಪಿಎಫ್‌ಐ)ಗೆ ಸಿಮಿ ಸಂಘಟನೆಗಳಿಂದ ಹಣದ ಪ್ರವಾಹವೇ ಹರಿಯುತ್ತಿದ್ದು, ಈ ಕಾರಣಕ್ಕಾಗಿಯೇ ಮಂಗಳೂರಿನಲ್ಲಿ ಗಲಭೆಯಂತಹ ಘಟನೆಗಳು ನಡೆಯುತ್ತಿವೆ ಎಂದು ಆರೋಪಿಸಿದರು.

‘ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ ಎಂದು ಅಂಬೇಡ್ಕರ್ ಹೇಳಿದ್ದರು’

Follow Us:
Download App:
  • android
  • ios