ಮೈಸೂರು(ಫೆ.02): ನರೇಂದ್ರ ಮೋದಿ ಈ ದೇಶದ ಪ್ರಧಾನಿ, ಆರ್‌ಎಸ್‌ಎಸ್‌ ನೇಮಿಸಿದ ಪ್ರಧಾನಿ ಅಲ್ಲ ಎಂದು ನಿವೃತ್ತ ಅಡ್ವೋಕೇಟ್ ಪ್ರೊ.ರವಿವರ್ಮ ಕುಮಾರ್ ವ್ಯಂಗ್ಯ ಮಾಡಿದ್ದಾರೆ.

ಕರೆದು ಮಾತನಾಡಿಸುವುದು ನಾಯಕನ ಕಾರ್ಯ. ರೌಡಿ ಬಿಟ್ಟು ಗುಂಡು ಹೊಡೆಸುವುದು ನಾಲಾಯಕ್ ಕಾರ್ಯಕ್ರಮ. ಅಣ್ಣ ಹಜಾರೆ ನೇತೃತ್ವದಲ್ಲಿ ದೇಶದ ತುಂಬೆಲ್ಲ ಹೋರಾಟ ನಡೆಯಿತು. ಆಗಿನ ಸರ್ಕಾರ ಅದನ್ನು ಹತ್ತಿಕ್ಕುವ ಪ್ರಯತ್ನ ಮಾಡಲಿಲ್ಲ ಎಂದು ಅವರು ನೆನಪಿಸಿಕೊಂಡಿದ್ದಾರೆ.

'ಸಂಪುಟ ವಿಸ್ತರಿಸಲು ಬಿಎಸ್‌ವೈ RSSನವರ ಬಾಗಿಲು ಕಾಯ್ತಿದ್ದಾರೆ'..!

ಈಗ ಸಿಎಎ ವಿರೋಧಿಸಿ ದೇಶದ ತುಂಬೆಲ್ಲ ಪ್ರತಿಭಟನೆಗಳು ನಡೆಯುತ್ತಿವೆ. ಜೆಎನ್‌ಯುನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಗುಂಡು ಹಾರಿಸಿದ್ದಾರೆ. ನಾನು ದೇಶದ ಪ್ರಧಾನಿ, ಆರ್‌ಎಸ್‌ಎಸ್ ನೇಮಿಸಿದ ಪ್ರಧಾನಿ ಅಲ್ಲ‌. ಇದು ಪ್ರಧಾನಿಗೆ ಅರಿವಿರಬೇಕು ಎಂದು ಅವರು ಹೇಳಿದ್ದಾರೆ.