ಜಾಗತಿಕ ಹಸಿವಿನ ಸೂಚ್ಯಂಕ್ಯ ವರದಿ ಅವೈಜ್ಞಾನಿಕ, ಸಂಶೋಧನೆ ಆಘಾತಕಾರಿ ಎಂದ ಭಾರತ!
- ಜಾಗತಿಕ ಹಸಿವಿನ ಸೂಚ್ಯಂಕ್ಯದಲ್ಲಿ ಭಾರತಕ್ಕೆ 101ನೇ ಸ್ಥಾನ
- ಪಾಕಿಸ್ತಾನಕ್ಕಿಂತ ಕೆಟ್ಟ ಪರಿಸ್ಥಿತಿ ಎಂದು ಬಿಂಬಿಸಿದ ಎಜೆನ್ಸಿ
- ಹಸಿವಿನ ವರದಿ ಅವೈಜ್ಞಾನಿಕ ಎಂದ ಭಾರತ
ನವದೆಹಲಿ(ಅ.15): ಜಾಗತಿಕ ಹಸಿವಿನ ಸೂಚ್ಯಂಕ್ಯ ವರದಿ(Global Hunger Report) ಭಾರತದಲ್ಲಿ ಭಾರಿ ಸಂಚಲನ ಮೂಡಿಸಿದೆ. ಜಾಗತಿಕ ಎಜೆನ್ಸಿ ಬಿಡುಗಡೆ ಮಾಡಿದ ಈ ವರದಿಯಲ್ಲಿ ಭಾರತಕ್ಕೆ 101ನೇ ಸ್ಥಾನ ನೀಡಲಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳಕ್ಕಿಂತಲೂ ಭಾರತದಲ್ಲಿ ಕೆಟ್ಟ ಪರಿಸ್ಥಿತಿ ಇದೆ ಎಂದು ಉಲ್ಲೇಖಿಸಲಾಗಿದೆ. ಆ ವರದಿ ಕುರಿತು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ(Ministry of Women and Child Development) ಪ್ರತಿಕ್ರಿಯೆ ನೀಡಿದೆ. ಈ ವರದಿ ಅವೈಜ್ಞಾನಿಕ(unscientific) ಎಂದು ಭಾರತ ಹೇಳಿದೆ.
ಹಸಿವಿನ ಸೂಚ್ಯಂಕ: ಭಾರತದಲ್ಲಿ ಪಾಕ್‌ಗಿಂತಲೂ ಕೆಟ್ಟ ಸ್ಥಿತಿ..! ಕಂಗ್ರಾಟ್ಸ್ ಮೋದಿ ಜೀ ಎಂದ ಸಿಬಲ್
ಕನ್ಸರ್ನ್ ವರ್ಲ್ಡ್ ವೈಡ್ ಹಾಗೂ ವೆಲ್ತ್ ಹಂಗರ್ ಎಜೆನ್ಸಿ ನಡೆಸಿದ ಈ ಸಂಶೋಧನಾ ಅಧ್ಯಯನ ಆಧಾರ ರಹಿತವಾಗಿದೆ. ಗ್ರೌಂಡ್ ರಿಯಾಲಿಟಿ ರಹಿತವಾದ ವರದಿ ಬಿಡುಗಡೆ ಮಾಡಿದೆ. ಎಜೆನ್ಸಿ ಸರಿಯಾದ ಪರಿಶ್ರಮವಹಿಸಿ ವರದಿ ತಯಾರಿಸಿಲ್ಲ. ಈ ವರದಿ ಆಘಾತಕಾರಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೇಳಿದೆ.
ಜಾಗತಿಕ ಹಸಿವಿನ ಸೂಚ್ಯಂಕ್ಯ ವರದಿ ತಪ್ಪು. ಎಜೆನ್ಸಿ ನಡೆಸಿದ ಸಂಶೋಧನೆ ಸರಿಯಾಗಿಲ್ಲ. ಕಾರಣ ಪೌಷ್ಠಿಕಾಂಶವಿಲ್ಲದ ಜನಸಂಖ್ಯೆ ಅನುಪಾತದ ಮೇಲೆ ಈ ವರದಿ ತಯಾರಿಸಲಾಗಿದೆ. ಭಾರತದ ಪೌಷ್ಠಿಕಾಂಶದ ಕೊರತೆ ವರದಿ ಅನುಪಾತದಲ್ಲಿ ಹಸಿವಿನ ಸೂಚ್ಯಂಕ್ಯ ತಿಳಿಯಲು ಸಾಧ್ಯವಿಲ್ಲ. ಈ ವರದಿ ಸತ್ಯಾಸತ್ಯಯಿಂದ ಕೂಡಿಲ್ಲ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಹೇಳಿದೆ.
ಒಂದೊತ್ತಿನ ಊಟಕ್ಕೂ ಹಾಹಾಕಾರ, ಖಜಾನೆಯಲ್ಲಿ ಹಣವಿಲ್ಲ; ಅಫ್ಘಾನ್ ನಾಗರೀಕರ ಸ್ಥಿತಿ ಹರೋಹರ
ಸಂಶೋಧನೆ ನಡೆಸಿದ ವಿಧಾನವೂ ಅವೈಜ್ಞಾನಿಕವಾಗಿದೆ. ಕಾರಣ ಜಾಗತಿಕ ಹಸಿವಿನ ಮೌಲ್ಯಮಾಪವನ್ನು ಕೇವಲ 4 ಪ್ರಶ್ನೆಗಳ ಅಭಿಪ್ರಾಯದಲ್ಲಿ ಮಾಡಲಾಗಿದೆ. ಅಪೌಷ್ಟಿಕತೆಯ ವೈಜ್ಞಾನಿಕ ಮಾಪನಕ್ಕೆ ತೂಕ ಮತ್ತು ಎತ್ತರದ ಅಳತೆಯ ಅಗತ್ಯವಿರುತ್ತದೆ, ಆದರೆ ಇಲ್ಲಿ ಒಳಗೊಂಡಿರುವ ವಿಧಾನವು ಜನಸಂಖ್ಯೆಯ ಶುದ್ಧ ದೂರವಾಣಿ ಅಂದಾಜಿನ ಆಧಾರದ ಮೇಲೆ ನಡೆಸಲಾಗಿದೆ. ಕೊರೋನಾ ವಕ್ಕರಿಸಿದ ಬಳಿಕ ಕೇಂದ್ರ ಸರ್ಕಾರ ಭಾರತದ ಇಡೀ ಜನಸಂಖ್ಯೆಗೆ ಬೃಹತ್ ಆಹಾರ ಭದ್ರತೆಯನ್ನು ನೀಡಿದೆ. ಭಾರತ ಸರ್ಕಾರದ ಪ್ರಯತ್ನದ ಅಂಕಿ ಅಂಶವನ್ನು ನಿರ್ಲಕ್ಷಿಸಿದೆ. ಈ ಕುರಿತು ಒಂದು ಒಂದು ಪ್ರಶ್ನೆಯನ್ನು ಮೌಲ್ಯಮಾಪನದಲ್ಲಿ ಇಲ್ಲ. ಹೀಗಾಗಿ ಈ ವರದಿ ಸತ್ಯಕ್ಕೆ ದೂರವಾಗಿದೆ ಎಂದು ಭಾರತ ಹೇಳಿದೆ.
'ನನಗೆ ಹಸಿವಿನ ಅರಿವಾಗಿದ್ದು ಭಾರತದಲ್ಲಲ್ಲ, ಅಮೆರಿಕದಲ್ಲಿ'
ಕೊರೋನಾದಿಂದ ಆರ್ಥಿಕತೆ ಹಾಗೂ ಆಹಾರದಲ್ಲಿ ಹೆಚ್ಚಿನ ಸಮಸ್ಯೆಗಳಾದ ರೀತಿಯಲ್ಲಿ ಭಾರತ ನೋಡಿಕೊಂಡಿದೆ. ಆದರೆ ಹಸಿವಿನ ಸೂಚಂಕ್ಯ ವರದಿಯಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾಗೆ ಕೋವಿಡ್‌ನಿಂದ ಯಾವುದೇ ಪರಿಣಾಮ ಬೀರಿಲ್ಲ ಎಂದು ವರದಿ ನೀಡಿದೆ. ಆದರೆ ಸಂಶೋಧನಾ ವರದಿ ಹೇಳುವಂತೆ ಭಾರತದಲ್ಲಿ ಹಸಿವಿನ ಸೂಚಂಕ್ಯ ಕೆಳಕ್ಕೆ ಇಳಿದಿಲ್ಲ ಎಂದು ಸಚಿವಾಲಯ ಹೇಳಿದೆ.