'ನನಗೆ ಹಸಿವಿನ ಅರಿವಾಗಿದ್ದು ಭಾರತದಲ್ಲಲ್ಲ, ಅಮೆರಿಕದಲ್ಲಿ'
ನನಗೆ ಹಸಿವಿನ ಅರಿವಾಗಿದ್ದು ಭಾರತದಲ್ಲಲ್ಲ, ಅಮೆರಿಕದಲ್ಲಿ| ಬಿಬಿಸಿ ವರದಿಗಾರನಿಗೆ ವಿಕಾಸ್ ಭರ್ಜರಿ ಟಾಂಗ್
ನವದೆಹಲಿ(ಜೂ.29): ಭಾರತವೆಂದರೆ ಬಡರಾಷ್ಟ್ರ, ಅಲ್ಲಿರುವವರೆಲ್ಲರಿಗೂ ಹಸಿವಿನ ಮಹತ್ವ ಗೊತ್ತಿರುತ್ತದೆ ಎಂಬ ಭಾರತದಲ್ಲಿ ಭಾರತವನ್ನು ವಿಶ್ಲೇಷಿಸಿದ್ದ ಬ್ರಿಟನ್‌ನ ಬಿಬಿಸಿಯ ಪತ್ರಕರ್ತರೊಬ್ಬರಿಗೆ ಭಾರತೀಯ ಮೂಲದ ವಿಶ್ವವಿಖ್ಯಾತ ಬಾಣಸಿಗ ವಿಕಾಸ್ ಖನ್ನಾ ಮುಟ್ಟಿನೋಡಿಕೊಳ್ಳುವಂತ ಮಾತಿನ ಏಟು ನೀಡಿದ್ದಾರೆ.
2 ಲಕ್ಷ ಮಂದಿಗೆ ಈದ್ ಫೆಸ್ಟ್ ಮೂಲಕ ಹಬ್ಬದೂಟ ಆಯೋಜಿಸಿದ ವಿಕಾಸ್ ಖನ್ನ!
ಕೊರೋನ ವೇಳೆ ವಿಕಾಸ್, ಅವರು ಲಕ್ಷಾಂತರ ಜನರಿಗೆ ಉಚಿತವಾಗಿ ಊಟ ವಿತರಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಬಿಸಿ ವಿಕಾಸ್ ಅವರನ್ನು ಆನ್‌ಲೈನ್ ಮೂಲಕವೇ ಸಂದರ್ಶನಕ್ಕೆ ಕರೆದಿತ್ತು. ಸಂದರ್ಶನದ ವೇಳೆ ನಿರೂಪಕ ಗೋರ್ಡನ್ ರಾರಯಮ್ಸೇ, ‘ನೀವೇನು ಶ್ರೀಮಂತ ಕುಟುಂಬದಿಂದ ಬಂದವರಲ್ಲ. ಆದರೂ ನೀವು ಒಬಾಮಾರಂಥ ಖ್ಯಾತನಾಮರಿಗೆ ಅಡುಗೆ ತಯಾರಿಸಿದ್ದೀರಿ. ಹಲವು ಶೋಗಳನ್ನು ನಡೆಸಿ ಕೊಟ್ಟಿದ್ದೀರಿ. ಭಾರತದಲ್ಲಿ ಇರುವುದರಿಂದ ನಿಮಗೆ ಹಸಿವಿನ ಮಹತ್ವ ಏನೆಂದು ತಿಳಿದಿರಬಹುದಲ್ವಾ?’ ಎಂದು ಪ್ರಶ್ನೆ ಹಾಕಿದ್ದರು.
ಅದಕ್ಕೆ ವಿಕಾಸ್, ‘ನಾನು ಇರುವ ಅಮೃತಸರದಲ್ಲಿ ಎಲ್ಲರಿಗೂ ಊಟ ಲಭ್ಯವಿದೆ. ನನಗೆ ಹಸಿವಿನ ಮಹತ್ವ ಗೊತ್ತಾಗಿದ್ದು ನ್ಯೂಯಾರ್ಕ್ನಲ್ಲಿ’ ಎಂದು ಉತ್ತರಿಸಿದ್ದಾರೆ. ಅವರ ಈ ತೀಕ್ಷ್ಣ ಉತ್ತರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಲಾಕ್‌ಡೌನ್ ವೇಳೆ ಖನ್ನಾ ಸುಮಾರು 90 ಲಕ್ಷ ಮಂದಿಗೆ ಆಹಾರ ಹಂಚಿದ್ದರು.