ಗುಲಾಂ ನಬಿ ಆಜಾದ್ರ 17 ಆಪ್ತರು 2 ತಿಂಗಳಲ್ಲಿ ಕಾಂಗ್ರೆಸ್‌ಗೆ ವಾಪಸ್
2 ತಿಂಗಳ ಹಿಂದಷ್ಟೇ ಗುಲಾಂ ನಬಿ ಆಜಾದ್ ಅವರ ‘ಡೆಮಾಕ್ರೆಟಿಕ್ ಆಜಾದ ಪಕ್ಷ’ ಸೇರಿದ್ದ ಮಾಜಿ ಉಪ ಮುಖ್ಯಮಂತ್ರಿ ತಾರಾಚಂದ್ ಮತ್ತು ಪಿಸಿಸಿ ಮಾಜಿ ಮುಖ್ಯಸ್ಥ ಪೀರ್ಜಾದಾ ಮಹಮ್ಮದ್ ಸಯೀದ್ ಸೇರಿದಂತೆ 17 ಮಾಜಿ ಕಾಂಗ್ರೆಸ್ಸಿಗರು ಈಗ ಕಾಂಗ್ರೆಸ್‌ಗೆ ಮರಳಿದ್ದಾರೆ.

ನವದೆಹಲಿ (ಜ.07): 2 ತಿಂಗಳ ಹಿಂದಷ್ಟೇ ಗುಲಾಂ ನಬಿ ಆಜಾದ್ ಅವರ ‘ಡೆಮಾಕ್ರೆಟಿಕ್ ಆಜಾದ ಪಕ್ಷ’ ಸೇರಿದ್ದ ಮಾಜಿ ಉಪ ಮುಖ್ಯಮಂತ್ರಿ ತಾರಾಚಂದ್ ಮತ್ತು ಪಿಸಿಸಿ ಮಾಜಿ ಮುಖ್ಯಸ್ಥ ಪೀರ್ಜಾದಾ ಮಹಮ್ಮದ್ ಸಯೀದ್ ಸೇರಿದಂತೆ 17 ಮಾಜಿ ಕಾಂಗ್ರೆಸ್ಸಿಗರು ಈಗ ಕಾಂಗ್ರೆಸ್‌ಗೆ ಮರಳಿದ್ದಾರೆ. ಇವರನ್ನು ಶುಕ್ರವಾರ ಬರಮಾಡಿಕೊಂಡ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ‘ಜಮ್ಮು-ಕಾಶ್ಮೀರಕ್ಕೆ ಪ್ರವೇಶಿಸುವ ಮುಂಚೆಯೇ ‘ಭಾರತ್ ಜೋಡೋ ಯಾತ್ರೆಯು ಎಲ್ಲರನ್ನೂ ಸೆಳೆಯುತ್ತಿದೆ’ ಎಂದರು.
‘ಒಟ್ಟು 19 ನಾಯಕರು ಇಂದು ಪಕ್ಷಕ್ಕೆ ಸೇರಬೇಕಾಗಿತ್ತು, ಆದರೆ 17 ಮಂದಿ ಮಾತ್ರ ಸೇರ್ಪಡೆಯಾಗಿದ್ದಾರೆ. ಇದು ಮೊದಲ ಹಂತವಾಗಿದ್ದು, ಶೀಘ್ರದಲ್ಲಿ ಇನ್ನಷ್ಟುಜನ ಪಕ್ಷ ಸೇರಲಿದ್ದಾರೆ’ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ. ಈ ನಡುವೆ, ಗುಲಾಮ್ ನಬಿ ಆಜಾದ್, ಕಾಂಗ್ರೆಸ್‌ಗೆ ಮರಳುವ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮಲಲ್ಲಾ ಬದಲು ರಾಮನ ಹೊಸ ವಿಗ್ರಹ
ಕಾಂಗ್ರೆಸ್ ಬಗ್ಗೆ ಆಜಾದ್ ಪ್ರಶಂಸೆ: ಇತ್ತೀಚೆಗೆ ಕಾಂಗ್ರೆಸ್ ತೊರೆದಿದ್ದ ಹಿರಿಯ ಮುಖಂಡ ಗುಲಾಂ ನಬಿ ಆಜಾದ್, ತಮ್ಮ ಮಾತೃ ಪಕ್ಷವನ್ನು ಪ್ರಶಂಸಿಸಿದ್ದಾರೆ. ಭಾನುವಾರ ಮಾತನಾಡಿದ ಅವರು, ‘ಗುಜರಾತ್‌ನಲ್ಲಿ ಬಿಜೆಪಿಗೆ ಸವಾಲು ಹಾಕುವ ಶಕ್ತಿ ಕಾಂಗ್ರೆಸ್‌ಗೆ ಮಾತ್ರ ಇದೆ. ಆಪ್ ಕೇವಲ ದಿಲ್ಲಿ ಕೇಂದ್ರಿತ ಪಕ್ಷ’ ಎಂದಿದ್ದಾರೆ. ‘ನಾನು ಕಾಂಗ್ರೆಸ್ಸಿಂದ ಪ್ರತ್ಯೇಕ ಆಗಿದ್ದರೂ ಅದರ ಜಾತ್ಯತೀತ ನಿಲುವಿನ ವಿರುದ್ಧ ಇಲ್ಲ. ಪಕ್ಷದಲ್ಲಿನ ವ್ಯವಸ್ಥೆ ಬಗ್ಗೆ ಮಾತ್ರ ನಾನು ವಿರೋಧ ಹೊಂದಿದ್ದೇನೆ. ಗುಜರಾತ್, ಹಿಮಾಚಲದಲ್ಲಿ ಪಕ್ಷ ಉತ್ತಮ ಸಾಧನೆ ಮಾಡಬೇಕು ಎಂಬ ಆಸೆ ಹೊಂದಿದ್ದೇನೆ. ಆಪ್‌ನಿಂದ ಇದು ಸಾಧ್ಯವಿಲ್ಲ’ ಎಂದಿದ್ದಾರೆ.