ಅಯೋಧ್ಯೆಯಲ್ಲಿ ರಾಮಲಲ್ಲಾ ಬದಲು ರಾಮನ ಹೊಸ ವಿಗ್ರಹ
2024ರ ಜನವರಿಯಲ್ಲಿ ಉದ್ಘಾಟನೆ ಆಗಲಿರುವ ಅಯೋಧ್ಯೆಯ ನೂತನ ರಾಮಮಂದಿರ ಗರ್ಭಗುಡಿಯಲ್ಲಿ 9 ಅಡಿ ಎತ್ತರದ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು ಎಂದು ರಾಮಜನ್ಮಭೂಮಿ ಟ್ರಸ್ಟ್ ಕಾರ‍್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.
ಅಯೋಧ್ಯೆ (ಜ.07): 2024ರ ಜನವರಿಯಲ್ಲಿ ಉದ್ಘಾಟನೆ ಆಗಲಿರುವ ಅಯೋಧ್ಯೆಯ ನೂತನ ರಾಮಮಂದಿರ ಗರ್ಭಗುಡಿಯಲ್ಲಿ 9 ಅಡಿ ಎತ್ತರದ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು ಎಂದು ರಾಮಜನ್ಮಭೂಮಿ ಟ್ರಸ್ಟ್ ಕಾರ‍್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.
ಪಿಟಿಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಅವರು ಈವರೆಗಿನ ತಾತ್ಕಾಲಿಕ ರಾಮಮಂದಿರದಲ್ಲಿ ಚಿಕ್ಕ ರಾಮಲಲ್ಲಾ ಪ್ರತಿಮೆ ಇದೆ. ಇದನ್ನು 1949ರಲ್ಲಿ ಬಾಬ್ರಿ ಮಸೀದಿಯಲ್ಲಿ ನಿಗೂಢವಾಗಿ ತಂದಿಡಲಾಗಿತ್ತು. ಇದರ ಬದಲಿಗೆ 9 ಅಡಿ ಎತ್ತರದ ರಾಮಮಲ್ಲಾ ಪ್ರತಿಮೆ ಹೊಸ ಗರ್ಭಗುಡಿಯಲ್ಲಿ ಸ್ಥಾಪನೆ ಆಗಲಿದೆ ಎಂದರು.
ಅಮಿತ್ ಶಾ ರಾಜಕಾರಣಿ, ಪೂಜಾರಿಯಲ್ಲ, ರಾಮ ಮಂದಿರ ಉದ್ಘಾಟನೆ ಘೋಷಣೆಗೆ ಕೆರಳಿದ ಖರ್ಗೆ!
‘ಇದರ ವಿನ್ಯಾಸ ಇನ್ನೂ ಅಂತಿಮ ಆಗಿಲ್ಲ. ಯತಿಗಳ ಜತೆ ಈ ಬಗ್ಗೆ ಚರ್ಚೆ ನಡೆಸಲಿದ್ದೇವೆ. ಇದಕ್ಕಾಗಿ ಕರ್ನಾಟಕ, ಒಡಿಶಾ ಹಾಗೂ ಮಹಾರಾಷ್ಟ್ರದ ಕಲ್ಲು ಆಯ್ಕೆ ಮಾಡಿಕೊಂಡಿದ್ದೇವೆ. ಹೊಸ ರಾಮನ ವಿಗ್ರಹವನ್ನು, ಮೂರ್ತಿಯ ಪಾದಕ್ಕೆ ಸೂರ್ಯೋದಯದ ವೇಳೆ ಸೂರ‍್ಯರಶ್ಮಿ ಬೀಳುವ ಥರ ವಿನ್ಯಾ ಮಾಡಲಾಗುತ್ತದೆ’ ಎಂದರು.
ಇದಲ್ಲದೆ, ‘ಕರ್ನಾಟಕದ ಶಿಲ್ಪಿ ಕೆಕೆವಿ ಮಾಣಿವ್ಯ, ಒಡಿಶಾದ ವಾಸುದೇವ ಕಾಮತ್ ಹಾಗೂ ಸುಧರ್ಶನ ಸಾಹು, ಪುಣೆಯ ಶತ್ರಯಜ್ಞ ದೇವುಳಕರ್ ಅವರಿಂದ ಮೂರ್ತಿಯ ವಿನ್ಯಾಸ ಬಯಸಲಾಗಿದೆ. ಈ ಪೈಕಿ ಉತ್ತಮವಾದುದನ್ನು ಆಯ್ಕೆ ಮಾಡಲಾಗುತ್ತದೆ’ ಎಂದರು.
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಡೇಟ್ ಫಿಕ್ಸ್..!
ಖರ್ಗೆ ವ್ಯಂಗ್ಯ: ಈ ನಡುವೆ, 2024 ಜ.1ಕ್ಕೆ ಅಯೋಧ್ಯೆ ರಾಮಮಂದಿರ ಸಿದ್ಧವಾಗಲಿದೆ ಎಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಮಂದಿರ ಉದ್ಘಾಟನೆ ದಿನ ಹೇಳಲು ಶಾ ಪೂಜಾರಿಯೋ ಅಥವಾ ಸ್ವಾಮಿಜಿಯೋ?’ ಎಂದು ಕೇಳಿದ್ದಾರೆ.