Asianet Suvarna News Asianet Suvarna News

ರಸ್ತೆ ಬದಿ ಬಿದ್ದು ಸಿಕ್ಕ 25 ಲಕ್ಷ ರೂ. ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ರಸ್ತೆ ಬದಿ ಬಿದ್ದಿದ್ದ ಚೀಲವೊಂದರಲ್ಲಿ ಸಿಕ್ಕ 25 ಲಕ್ಷ ರೂಪಾಯಿಯನ್ನು ಹಿಂದಿರುಗಿಸುವ ಮೂಲಕ ಆಟೋ ಚಾಲಕರೊಬ್ಬರು ಪ್ರಮಾಣಿಕತೆ ಮೆರೆದಿದ್ದಾರೆ. ಉತ್ತರಪ್ರದೇಶದ ಗಾಜಿಯಾಬಾದ್‌ನ ಮೋದಿ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

Ghaziabad Auto driver returns bag with 25 lakhs which found lying on the road side at Modinagar akb
Author
First Published Feb 9, 2023, 7:59 PM IST

ನವದೆಹಲಿ: ರಸ್ತೆ ಬದಿ ಬಿದ್ದಿದ್ದ ಚೀಲವೊಂದರಲ್ಲಿ ಸಿಕ್ಕ 25 ಲಕ್ಷ ರೂಪಾಯಿಯನ್ನು ಹಿಂದಿರುಗಿಸುವ ಮೂಲಕ ಆಟೋ ಚಾಲಕರೊಬ್ಬರು ಪ್ರಮಾಣಿಕತೆ ಮೆರೆದಿದ್ದಾರೆ. ಉತ್ತರಪ್ರದೇಶದ ಗಾಜಿಯಾಬಾದ್‌ನ ಮೋದಿ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಹೀಗೆ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಹಿಂದಿರುಗಿಸಿದ ಆಟೋ ಚಾಲಕನ ಪ್ರಾಮಾಣಿಕತೆ ಮೆಚ್ಚಿ ಹಿರಿಯ ಪೊಲೀಸ್ ಅಧಿಕಾರಿಗಳು ಆಟೋ ಚಾಲಕನನ್ನು ಸನ್ಮಾನಿಸಿದ್ದಾರೆ. 

ಆಸ್ ಮೊಹಮ್ಮದ್ (Aas Mohammad) ಎಂಬುವವರೇ ಪ್ರಾಮಾಣಿಕತೆ ಮೆರೆದ ವ್ಯಕ್ತಿ.  ಮಂಗಳವಾರ ಈ ಘಟನೆ ನಡೆದಿದೆ. ಗಾಜಿಯಾಬಾದ್‌ನ ಮೊದಿ ನಗರದಲ್ಲಿ ಆಟೋದಲ್ಲಿದ್ದ ಪ್ರಯಾಣಿಕರನ್ನು ಬಿಟ್ಟು ಬರುತ್ತಿದ್ದ ವೇಳೆ ಅವರಿಗೆ ರಸ್ತೆ ಬದಿ ಬ್ಯಾಗೊಂದು ಬಿದ್ದಿರುವುದು ಕಂಡಿದೆ. ಇದನ್ನು ತೆಗೆದುಕೊಂಡು ತೆರೆದು ನೋಡಿದಾಗ ಅದರಲ್ಲಿ ಹಣದ ದೊಡ್ಡ ದೊಡ್ಡ ಕಂತೆಗಳಿರುವುದು ಕಂಡು ಬಂದಿದೆ.  ನಂತರ ಈ ಬ್ಯಾಗ್‌ನ ಮಾಲೀಕರನ್ನು ಹುಡುಕಲು ಚಾಲಕ ಮುಂದಾಗಿದ್ದಾರೆ. ಆದರೆ ಅವರಿಗೆ ಮಾಲೀಕನನ್ನು ಪತ್ತೆ ಮಾಡುವುದಕ್ಕೆ ಸಾಧ್ಯವಾಗಿಲ್ಲ.  ಹೀಗಾಗಿ ಬ್ಯಾಗ್‌ನ್ನು ತನ್ನ ಬಳಿಯೇ ಇರಿಸಿಕೊಳ್ಳುವ ಬದಲು ಅವರು ಅದನ್ನು ಮೋದಿ ನಗರದ ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದು ಹಸ್ತಾಂತರಿಸಿದ್ದಾರೆ. 

 

Chitradurga News: ಯಾತ್ರಿಕರ ಆಭರಣ ಮರಳಿಸಿ ಪ್ರಾಮಾಣಿಕತೆ ಮೆರೆದ ಸಿಬ್ಬಂದಿ

ಈ ವೇಳೆ ಪೊಲೀಸ್ ಅಧಿಕಾರಿಗಳು ಬ್ಯಾಗ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ಅವರಿಗೆ 500 ರೂಪಾಯಿ ನೋಟುಗಳ 50 ಕಂತೆಗಳು ಸಿಕ್ಕಿವೆ. ಅದನ್ನು ಎಣಿಸಿದಾಗ 25 ಲಕ್ಷ ರೂಪಾಯಿ ಇರುವುದು ಅವರ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಆಟೋ ಚಾಲಕನ ಪ್ರಾಮಾಣಿಕತೆಗೆ ಮೆಚ್ಚಿದ  ಡಿಸಿಪಿ  ಆತನಿಗೆ ಪ್ರಶಂಸಾರ್ಹ ಪತ್ರ ನೀಡಿ ಗೌರವಿಸಿದ್ದಾರೆ. 

ಅಲ್ಲದೇ ಈ ವಿಚಾರವನ್ನು ಗಾಜಿಯಾಬದ್ ಗ್ರಾಮೀಣ ಕಮೀಷನರೇಟ್ ವ್ಯಾಪ್ತಿಯ ಡೆಪ್ಯೂಟಿ ಕಮೀಷನರ್ ಟ್ವಿಟ್ ಮಾಡಿದ್ದಾರೆ. 'ಗ್ರಾಮೀಣ ಡಿಸಿಪಿ ಇ-ಆಟೋ ರಿಕ್ಷಾ ಚಾಲಕನನ್ನು  ಅವರ ಸನ್ಮಾನಿಸಿದ್ದಾರೆ. ಅವರು ರಸ್ತೆ ಬದಿ ಸಿಕ್ಕ 25 ಲಕ್ಷ ರೂಪಾಯಿ ಹಣವಿದ್ದ ಬ್ಯಾಗ್ ಅನ್ನು ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆಗೆ (honesty) ಉದಾಹರಣೆಯಾಗಿದ್ದಾರೆ' ಹೀಗೆ ಬರೆದು ಆಟೋ ಚಾಲಕ ಮೊಹಮ್ಮದ್ ಅವರಿಗೆ ಪ್ರಶಾಂಸರ್ಹ ಪ್ರಮಾಣಪತ್ರ ನೀಡಿದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.  ಇತ್ತ ಡಿಸಿಪಿ ಟ್ವಿಟ್‌ ನೋಡಿ ನೆಟ್ಟಿಗರು ಕೂಡ ಆಟೋ ಚಾಲಕನ ಪ್ರಾಮಾಣಿಕತೆಯನ್ನು ಪ್ರಶಂಸಿಸಿದ್ದಾರೆ. 

UttaraKannada: KSRTC ಬಸ್ಸಿನಲ್ಲಿ ಸಿಕ್ಕ 8 ಲಕ್ಷ ಮೌಲ್ಯದ ಆಭರಣಗಳನ್ನು ಮರಳಿಸಿ ಪ್ರಾಮಾಣಿಕತೆ ಮರೆದ ಸಿಬ್ಬಂದಿ

ಕಳೆದ ವರ್ಷವೂ ಇದೇ ರೀತಿಯ ಘಟನೆಯೊಂದು ನಡೆದಿತ್ತು. ಆಟೋ ಚಾಲಕನೋರ್ವ (Rickshaw Driver) ತನ್ನ ವಾಹನದಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ 6 ಲಕ್ಷ ಮೌಲ್ಯದ ಆಭರಣ ಹಾಗೂ 50 ಸಾವಿರ ಮೌಲ್ಯದ ಹಣವನ್ನು ಹಿಂದಿರುಗಿಸಿದ್ದರು.

Follow Us:
Download App:
  • android
  • ios