ಚಳ್ಳಕೆರೆ ಘಟಕದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ ಕ್ಯಾತಗೊಂಡನಹಳ್ಳಿಯಿಂದ ಚಳ್ಳಕೆರೆ ನಗರಕ್ಕೆ ಆಗಮಿಸುವ ಸಂದರ್ಭದಲ್ಲಿ ಕೆಎ 17 ಎಫ್‌ 1457 ನಂಬರ್‌ನ ಬಸ್‌ ಸೀಟಿನ ಮೇಲೆ ಬ್ಯಾಗೊಂದು ಇದ್ದು ಯಾರೂ ವಾರಸುದಾರರು ಸಿಗದ ಕಾರಣ ಚಾಲಕ ಹನುಮಂತಪ್ಪ, ನಿರ್ವಾಹಕ ಪ್ರಭಾಕರ್‌ ಬ್ಯಾಗನ್ನು ಇಲ್ಲಿನ ಘಟಕದ ವ್ಯವಸ್ಥಾಪಕ ಸಿದ್ದೇಶ್‌ಗೆ ಒಪ್ಪಿಸಿ ಮಾಹಿತಿ ನೀಡಿದ್ದಾರೆ.

ಚಳ್ಳಕೆರೆ (ಡಿ.25) : ಚಳ್ಳಕೆರೆ ಘಟಕದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ ಕ್ಯಾತಗೊಂಡನಹಳ್ಳಿಯಿಂದ ಚಳ್ಳಕೆರೆ ನಗರಕ್ಕೆ ಆಗಮಿಸುವ ಸಂದರ್ಭದಲ್ಲಿ ಕೆಎ 17 ಎಫ್‌ 1457 ನಂಬರ್‌ನ ಬಸ್‌ ಸೀಟಿನ ಮೇಲೆ ಬ್ಯಾಗೊಂದು ಇದ್ದು ಯಾರೂ ವಾರಸುದಾರರು ಸಿಗದ ಕಾರಣ ಚಾಲಕ ಹನುಮಂತಪ್ಪ, ನಿರ್ವಾಹಕ ಪ್ರಭಾಕರ್‌ ಬ್ಯಾಗನ್ನು ಇಲ್ಲಿನ ಘಟಕದ ವ್ಯವಸ್ಥಾಪಕ ಸಿದ್ದೇಶ್‌ಗೆ ಒಪ್ಪಿಸಿ ಮಾಹಿತಿ ನೀಡಿದ್ದಾರೆ.

ಕೂಡಲೇ ವ್ಯವಸ್ಥಾಪಕ ಸಿದ್ದೇಶ್‌ ಸಿಬ್ಬಂದಿಯ ಸಮಕ್ಷಮದಲ್ಲಿ ಬ್ಯಾಗ್‌ ತೆರೆದು ನೋಡಿದಾಗ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬಂಗಾರದ ಗುಂಡು, ತಾಳಿ, ಕಿವಿ ಓಲೆ ಹಾಗೂ ಇನ್ನಿತರ ವಸ್ತುಗಳಿರುವುದು ಕಂಡುಬಂದಿದೆ. ನಂತರ ಕೆಲವರು ಹೋಗಿ ನಮ್ಮದೆ ಬಂಗಾರ ಕೊಡಿ ಎಂದು ಕೇಳಿದಾಗ ಅನುಮಾನಗೊಂಡ ವ್ಯವಸ್ಥಾಪಕ ಸಿದ್ದೇಶ್‌ ಬ್ಯಾಗಿನಲ್ಲಿರುವ ವಸ್ತುಗಳ ಬಗ್ಗೆ ಮಾಹಿತಿ ಕೇಳಿದ್ದು, ಕೂಡಲೇ ಅವರು ವಾಪಾಸ್‌ ಆಗಿದ್ದಾರೆ.

Vijayapura: 3 ಲಕ್ಷ ಮೌಲ್ಯದ ಚಿನ್ನಾಭರಣ ಮರಳಿಸಿದ ಕಂಡೆಕ್ಟರ್, ನಿರ್ವಾಹಕನ ಪ್ರಾಮಾಣಿಕತೆಗೆ ಜನರ ಬಿಗ್ ಸೆಲ್ಯುಟ್

ಈ ಮಧ್ಯೆ ಕ್ಯಾತಗೊಂಡಹಳ್ಳಿಯಿಂದ ಚಳ್ಳಕೆರೆಗೆ ಇದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕವಿತಾ ಮತ್ತು ಅವರ ಪತಿ ಹನುಮಂತರಾಯ ಬಸ್‌ನಿಂದ ಇಳಿದ ಸ್ವಲ್ಪ ಸಮಯದ ನಂತರ ಬ್ಯಾಗ್‌ನ ಬಗ್ಗೆ ಹೆಂಡತಿಯನ್ನು ಪ್ರಶ್ನಿಸಿದ್ದಾನೆ. ಹೆಂಡತಿ ನೀವು ಬ್ಯಾಗ್‌ ತೆಗೆದುಕೊಂಡಿದ್ದೀರ ಎಂದು ನಾನು ಸುಮ್ಮನಾದೆ ಎಂದಿದ್ದಾಳೆ. ಕೂಡಲೇ ಗಾಬರಿಗೊಂಡ ಅವರು ಬಸ್‌ ಹುಡುಕುತ್ತಾ ಇಲ್ಲಿನ ಘಟಕಕ್ಕೆ ಬಂದಿದ್ದಾರೆ. ಘಟಕದ ವ್ಯವಸ್ಥಾಪಕ ಸಿದ್ದೇಶ್‌ ಮತ್ತು ಸಿಬ್ಬಂದಿ ವರ್ಗ ಇವರು ನೀಡಿದ ಮಾಹಿತಿ, ಬ್ಯಾಗ್‌ನಲ್ಲಿದ್ದ ವಸ್ತುಗಳು ತಾಳೆಯಾಗಿದ್ದು, ಅವರಿಗೆ ವಾಪಾಸ್‌ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಸಂತಸವನ್ನು ಹಂಚಿಕೊಂಡ ಹನುಮಂತರಾಯ, ಮನೆಯಲ್ಲಿನ ಸಮಸ್ಯೆಯಿಂದ ಬಂಗಾರವನ್ನು ಎಲ್ಲಾದರೂ ಅಡಮಾನವಿಟ್ಟು ಹಣ ಪಡೆಯಲು ಬಂದಿದ್ದೆವು. ಬ್ಯಾಗ್‌ ಕಳೆದಿದೆ ಎಂದ ಕೂಡಲೇ ನಮಗೆ ಜೀವವೇ ಹೋಗಿತ್ತು. ಕೂಡಲೇ ಬಸ್‌ ಹುಡುಕಿಕೊಂಡು ಡಿಪೋಗೆ ಬಂದಾಗ ಅಲ್ಲಿನ ವ್ಯವಸ್ಥಾಪಕರು, ಸಿಬ್ಬಂದಿ ವರ್ಗ ತಡಮಾಡದೆ ನಮ್ಮನ್ನು ಸಮಾದಾನಿಸಿ, ಮಾಹಿತಿ ಪಡೆದು ಎಲ್ಲಾ ವಸ್ತುಗಳನ್ನು ನೀಡಿದ್ದಾರೆ. ಅವರ ಉಪಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಗ್ರಾಮದ ಅನೇಕ ಮುಖಂಡರೂ ಸಹ ಸಿಬ್ಬಂದಿ ವರ್ಗದ ಪ್ರಾಮಾಣಿಕತೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

 ಪ್ರಾಮಾಣಿಕತೆ ಮೆರೆದ ಆಟೋ ಚಾಲಕ, ಕರ್ತವ್ಯ ಪ್ರಜ್ಞೆ ಮೆರೆದ ಪೊಲೀಸರು!