UttaraKannada: KSRTC ಬಸ್ಸಿನಲ್ಲಿ ಸಿಕ್ಕ 8 ಲಕ್ಷ ಮೌಲ್ಯದ ಆಭರಣಗಳನ್ನು ಮರಳಿಸಿ ಪ್ರಾಮಾಣಿಕತೆ ಮರೆದ ಸಿಬ್ಬಂದಿ

ಸರ್ಕಾರಿ ಬಸ್‌ನಲ್ಲಿ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಬಿಟ್ಟು ಬೆಳಗಾವಿಗೆ ತೆರಳಿದ್ದ ಪ್ರಯಾಣಿಕರೋರ್ವರಿಗೆ ಮರಳಿ ಅವರ ವಸ್ತುಗಳನ್ನು ಒಪ್ಪಿಸಿ ಮಾನವೀಯತೆ ಮೆರೆದ ಘಟನೆ ಶಿರಸಿಯಲ್ಲಿ ನಡೆದಿದೆ.

KSRTC bus staff returned the gold jewelry worth 8 lakh found in the sirsi bus gow

ಕಾರವಾರ (ಡಿ.29): ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿಯ ಸರಳತೆ, ಪ್ರಾಮಾಣಿಕತೆ ಮತ್ತೊಮ್ಮೆ ಮೆರೆದಿದೆ.  ಸರ್ಕಾರಿ ಬಸ್‌ನಲ್ಲಿ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಬಿಟ್ಟು ಬೆಳಗಾವಿಗೆ ತೆರಳಿದ್ದ ಪ್ರಯಾಣಿಕರೋರ್ವರಿಗೆ ಮರಳಿ ಅವರ ವಸ್ತುಗಳನ್ನು ಒಪ್ಪಿಸಿ ಮಾನವೀಯತೆ ಮೆರೆದ ಘಟನೆ ಶಿರಸಿಯಲ್ಲಿ ನಡೆದಿದೆ. ಹಾನಗಲ್-  ಶಿರಸಿ ಮಾರ್ಗವಾಗಿ ಸಂಚರಿಸುವ ಸರ್ಕಾರಿ ಬಸ್ಸಿನಲ್ಲಿ ಇಸಳೂರಿನಿಂದ ಕವಿತಾ ಹಾಗೂ ಅವರ ಪುತ್ರ ಬಸ್ ಹತ್ತಿ ಶಿರಸಿಗೆ ಬಂದಿದ್ದರು. ಬಸ್ ಇಳಿಯುವ ಆತುರದಲ್ಲಿ ಚಿನ್ನಾಭರಣ ತುಂಬಿದ್ದ ಬ್ಯಾಗನ್ನು ಬಸ್ ನಲ್ಲಿಯೇ  ಬಿಟ್ಟು ಇಳಿದು ಹೋಗಿದ್ದರು. ನಂತರ ಮತ್ತೊಂದು ಬಸ್ ಹತ್ತಿ ಬೆಳಗಾವಿಗೆ ತೆರಳಿದ್ದಾರೆ. 

ಬೆಳಗಾವಿಗೆ ಹೋದ ತಕ್ಷಣ ತಮ್ಮ ಬ್ಯಾಗ್ ನಾಪತ್ತೆಯಾಗಿರುವುದು ಗಮನಕ್ಕೆ ಬಂತು. ಹಲವಾರು ಬಾರಿ ಬಸ್‌ ಬದಲಿಸಿದ್ದರಿಂದ ಎಲ್ಲ ಕಡೆ ಮೂರು ದಿನಗಳ ಕಾಲ ಬ್ಯಾಗಿಗಾಗಿ ಹುಡುಕಾಟ ನಡೆಸಿದ್ದರು. ಹೀಗಾಗಿ  ತಕ್ಷಣ ಶಿರಸಿ ಡಿಪೋಗೆ ಕರೆಮಾಡಿ ವಿಚಾರಿಸಿದ್ದಾರೆ.   ಅಷ್ಟರೊಳಗೆ ಹಾನಗಲ್ ಶಿರಸಿ ಬಸ್ ನ ಚಾಲಕ ವಿನೋದ್ ನಾಯ್ಕ ಹಾಗೂ ನಿರ್ವಾಹಕ ಸೇವಾ ನಾಯ್ಕ ರಾಥೋಡ್ ಬಸ್ ಅನ್ನು ಡಿಪೋಗೆ ತಂದಾಗ ಅಲ್ಲಿ ಚಿನ್ನಾಭರಣವಿರುವ ಬ್ಯಾಗ್ ಕಂಡು ಬಂದಿತ್ತು. ಅದನ್ನು ಅಧಿಕಾರಿಗಳಿಗೆ ಪ್ರಾಮಾಣಿಕವಾಗಿ ನೀಡಿದ್ದಾರೆ.

ಹೆರಿಗೆ ಸಂಕಟ: ಹೆರಿಗೆಗೆ ಸಹಾಯ ಮಾಡಿ ಮಾನವೀಯತೆ ಮೆರೆದ ಬೆಂಗಳೂರು ರೈಲ್ವೆ ಪೊಲೀಸ್

ಬ್ಯಾಗ್‌ ಸಿಕ್ಕಿದ್ದ ಬಸ್ಸಿನ ಚಾಲಕ ಮಹೇಶ ನಾಯ್ಕ ನಿರ್ವಾಹಕ ಸೇವಾ ರಾಥೋಡ ಇವರು ಬ್ಯಾಗನ್ನು ತಂದು ಸಂಚಾರ ಅಧೀಕ್ಷಕ ಮಹೇಶ ಜೋಗಳೆಕರ ಅವರಿಗೆ ತಂದು ತೋರಿಸಿದ್ದಾರೆ. ಬ್ಯಾಗ್‌ ಬಿಚ್ಚಿ ನೋಡಿದಾಗ ಅದರಲ್ಲಿ ಚಿನ್ನ ಮತ್ತು ಬೆಳ್ಳಿಯ ಆಭರಣ ಇರುವುದನ್ನು ಕಂಡು ಇದು ನಕಲಿ ಇರಬೇಕೆಂದು ಮೊದಲಿಗೆ ಅಷ್ಟೇನೂ ಆಶ್ಚರ್ಯಪಡದ ಮಹೇಶ ಅದನ್ನು ಅಸಲಿಯೋ, ನಕಲಿಯೋ ಎಂದು ಜ್ಯುವೆಲರಿ ಅಂಗಡಿಯಲ್ಲಿ ತೋರಿಸಿದ್ದಾಗ ಅಸಲಿ ಆಭರಣದ ದರ ಕೇಳಿ ಮಹೇಶ ಚಕಿತರಾದರು.

ರಸ್ತೆ ಅಪಘಾತ: ಗಾಯಾಳುಗಳನ್ನ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಶಾಸಕ ಶರಣು ಸಲಗರ

ಚಿನ್ನಾಭರಣ ಕಳೆದುಕೊಂಡಿದ್ದ ಕವಿತಾ ಅವರನ್ನು ಸಂಪರ್ಕಿಸಿದ ಅಧಿಕಾರಿಗಳು ಬ್ಯಾಗ್ ಸಹಿತ ಚಿನ್ನಾಭರಣವನ್ನು ಮರಳಿಸಿದ್ದಾರೆ. ಅಲ್ಲದೇ, ಚಾಲಕ ಹಾಗೂ ನಿರ್ವಾಹಕರ ಕರ್ತವ್ಯ ನಿಷ್ಠೆ ಹಾಗೂ ಪ್ರಾಮಾಣಿಕತೆಗೆ  ಶಿರಸಿ ವಿಭಾಗೀಯ ಡಿಸಿ ಹಾಗೂ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios