ಪುರಂದರದಾಸರ 'ಭಾಗ್ಯದ ಲಕ್ಷ್ಮಿ ಬಾರಮ್ಮ' ಹಾಡಿಗೆ ಮನಸೋತ ಜರ್ಮನ್ ಬಾಲೆ: ವಿಡಿಯೋ ವೈರಲ್

ಇಲ್ಲೊಬ್ಬಳು ಜರ್ಮನ್ ಹುಡುಗಿ ಕನ್ನಡ ಸೇರಿದಂತೆ ಭಾರತೀಯ ಭಾಷೆಗಳ ಹಾಡುಗಳನ್ನು ಹಾಡುತ್ತಾ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದು ಇದರಿಂದಲೇ ಸಾಕಷ್ಟು ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದಾಳೆ.

German girl singing Kannada dasa Shrestha purandaradasa written devotional song Bhagyada laxmi Baramma,watch viral video akb

ಇವತ್ತು ಇಂಟರ್‌ನೆಟ್‌ ಹಾಗೂ ಸಾಮಾಜಿಕ ಜಾಲತಾಣ ಎಷ್ಟೊಂದು ಪ್ರಭಾವಶಾಲಿಯಾಗಿದೆ ಎಂದರೆ ಅದರ ಪ್ರಭಾವವನ್ನು ನೀವು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಎಲ್ಲೋ ಪ್ರಪಂಚದ ಮೂಲೆಯಲ್ಲಿ ಕುಳಿತ ಹುಡುಗಿಯೊಬ್ಬಳು( ಹುಡುಗನೂ)  ಪ್ರಪಂಚದ ಇನ್ಯಾವುದೋ ಮೂಲೆಯ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ಅರಿತುಕೊಂಡು ಆ ಬಗ್ಗೆ ವಿವರಿಸುತ್ತಾಳೆ ವಿಡಿಯೋ ಮಾಡುತ್ತಾಳೆ. ಹಾಗೆಯೇ ಕನ್ನಡದ ಗಂಧಗಾಳಿ ಇರದ ವಿದೇಶದಲ್ಲಿ ಹುಟ್ಟಿದ ಪುಟಾಣಿ ಹುಡುಗನೋರ್ವ ನಿರರ್ಗಳವಾಗಿ ಕನ್ನಡ ಮಾತನಾಡುತ್ತಾನೆ. ಕನ್ನಡದ ಡಾ. ರಾಜ್‌ಕುಮಾರ್ ಸೇರಿದಂತೆ 90 ರ ದಶಕದ ಚಲನಚಿತ್ರಗೀತೆಗಳಿಂದ ಹಿಡಿದು ಇತ್ತೀಚಿನ ಹಾಡುಗಳವರೆಗೆ ಎಲ್ಲವನ್ನು ಹಾಡುತ್ತಾನೆ  ಎಂದರೆ ನೀವೆ ಸಾಮಾಜಿಕ ಜಾಲತಾಣ ಎಷ್ಟು ಪ್ರಭಾವಶಾಲಿ ಎಂಬುದನ್ನು ನೀವೇ ಲೆಕ್ಕ ಹಾಕಬಹುದು. ಇಷ್ಟೆಲ್ಲಾ ವಿಚಾರ ಈಗ್ಯಾಕೆ ಅಂತೀರಾ? ಮ್ಯಾಟರ್ ಇದೆ.

ಇಲ್ಲೊಬ್ಬಳು ಜರ್ಮನ್ ಹುಡುಗಿ ಕನ್ನಡ ಸೇರಿದಂತೆ ಭಾರತೀಯ ಭಾಷೆಗಳ ಹಾಡುಗಳನ್ನು ಹಾಡುತ್ತಾ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದು ಇದರಿಂದಲೇ ಸಾಕಷ್ಟು ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದಾಳೆ. ಹೇಳಿ ಕೇಳಿ ಭಾರತ ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ಬಹುಸಂಸ್ಕೃತಿಯ ವಿಶಾಲ ದೇಶ. ಹಾಗೆ ಈ ಹುಡುಗಿಯೂ ಕೂಡ ಇಲ್ಲಿನ ಬಹುಸಂಸ್ಕೃತಿಯ ವಿವಿಧ ಭಾಷೆಗಳ ಹಾಡುಗಳನ್ನು ತನ್ನ ಸುಮಧುರ ಕಂಠದಿಂದ ಹಾಡುತ್ತಿದ್ದು, ಇನ್ಸ್ಟಾಗ್ರಾಮ್‌ನಲ್ಲಿ ಹಲ್‌ಛಲ್ ಸೃಷ್ಟಿಸಿದ್ದಾಳೆ. 

ಏರ್ಪೋಟಲ್ಲಿ ಮಲಗಲು ಒತ್ತಾಯಿಸಿದ ಜರ್ಮನ್ ವಿಮಾನ ಸಂಸ್ಥೆ ವಿರುದ್ಧ ದಾವೆ ಹೂಡಿ 10 ಲಕ್ಷ ಗೆದ್ದ ಬೆಂಗಳೂರು ವೈದ್ಯ!

ಸಿನಿಮಾ ಹಾಡುಗಳಿಂದ ಹಿಡಿದು ಹಿಂದೂ ಸನಾತನ ಧರ್ಮದ ಆಧ್ಯಾತ್ಮದ ಭಕ್ತಿಗೀತೆ ಸ್ತೋತ್ರಗಳನ್ನು ಕೂಡ ಈಕೆ ಹಾಡಿದ್ದು, ಮೃತ್ಯಂಜಯ ಮಂತ್ರ ನನ್ನ ಬದುಕು ಬದಲಿಸಿದೆ ಎಂದು ಹೇಳುತ್ತಾಳೆ ಈ ಬೆಡಗಿ. ಅಂದಹಾಗೆ ಈಕೆಯ ಹೆಸರು CassMae, ಇನ್ಸ್ಟಾಗ್ರಾಮ್‌ನಲ್ಲಿ CassMae ಹೆಸರಿನಿಂದ ಗುರುತಿಸಿಕೊಂಡಿರುವ ಈಕೆ ಜರ್ಮನ್ನ ಓರ್ವ ಗಾಯಕಿ ಹಾಗೂ ಇನ್‌ಫ್ಲುಯೆನ್ಸರ್, ಜರ್ಮನ್ ಗಾಯಕಿ ಹಾಗೂ ಹಾಡುಗಳ ಬರಹಗಾರ್ತಿ ಎಂದು ತನ್ನ ಬಯೋದಲ್ಲಿ ಬರೆದುಕೊಂಡಿರುವ ಈಕೆ ಭಾರತದ ಮೇಲೆ ನನಗೆ ಇನ್ನಿಲ್ಲದ ಪ್ರೀತಿ ಇದೆ ಎಂದು ಹೇಳಿಕೊಂಡಿದ್ದಾಳೆ. 

ಇತ್ತೀಚೆಗೆ ಈಕೆ ಪುರಂದರದಾಸರ ಭಾಗ್ಯದ ಲಕ್ಷ್ಮಿ ಬಾರಮ್ಮ ಎಂಬ ಭಕ್ತಿಗೀತೆಯನ್ನು ಸುಶ್ರಾವ್ಯವಾಗಿ ಹಾಡಿದ್ದು, ಈಕೆಯ ಕಂಠಸಿರಿ ಕೇಳಿದರೆ ಲಕ್ಷ್ಮಿಯೇ ಎದ್ದು ಹೊರಟು ಬಿಡುವಳೇನೋ ಅನ್ನುವಷ್ಟು  ಸುಶ್ರಾವ್ಯವಾಗಿ ಮೂಡಿ ಬಂದಿದೆ ಈ ಹಾಡು.  ಅನೇಕರು ಈಕೆಯ ಹಾಡು ಕೇಳಿ ಬೆರಗಾಗಿದ್ದು, ಲಕ್ಷಿ ಬಂದೆ ಬಿಡುವಳು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಅನೇಕರು ಕನ್ನಡದಲ್ಲಿ ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಅನೇಕರಿಗೆ ಈ ಹಾಡಿನ ಬಗ್ಗೆ ಗೊತ್ತಿಲ್ಲ. ಹೀಗಿರುವಾಗ ಕನ್ನಡದ ಗಂಧಗಾಳಿ ಇಲ್ಲದ ನೀವು ಹಾಡಿರುವುದು ಗ್ರೇಟ್ ಎಂದು ಆಕೆಯನ್ನು ಕೊಂಡಾಡಿದ್ದಾರೆ.  ಮತ್ತೆ ಕೆಲವರು ಇನ್ನು ಕೆಲವು ಕನ್ನಡದ ಭಕ್ತಿಗೀತೆಗಳನ್ನು ಆಕೆಗೆ ತಿಳಿಸಿ ಇದನ್ನು ಒಮ್ಮೆ ಪ್ರಯತ್ನಿಸಿ ಎಂದು ಮನವಿ ಮಾಡಿದ್ದಾರೆ. 

RRR; ದೆಹಲಿ ಚಾಂದಿನಿ ಚೌಕ್‌ನಲ್ಲಿ ಜರ್ಮನ್ ರಾಯಭಾರಿಗಳ ನಾಟು ನಾಟು ಡಾನ್ಸ್

ಬರೀ ಕನ್ನಡ ಮಾತ್ರವಲ್ಲದೇ ದಕ್ಷಿಣ ಭಾರತದ ಇತರ ಭಾಷೆಗಳಾದ ತಮಿಳು, ಮಲೆಯಾಳಂ ತೆಲುಗು ಹಾಡುಗಳನ್ನು ಆಕೆ ಹಾಡಿದ್ದಾಳೆ. ಸಿನಿಮಾ ಹಾಡುಗಳ ಜೊತೆ ಜೊತೆ ಭಕ್ತಿಗೀತೆಗಳನ್ನು ಹಾಡಿದ್ದು, ಈಕೆಯ ಕಂಠಸಿರಿಗೆ ಭಾರತೀಯರು ತಲೆಬಾಗಿದ್ದಾರೆ. ಆಕೆ ಹಾಡುವ ವೇಳೆ ಆಕೆ ವಿದೇಶಿ ಎಂದು ಎಲ್ಲೂ ಅನಿಸುವುದೇ ಇಲ್ಲ. ಏಕೆಂದರೆ ಪ್ರತಿ ಉಚ್ಛಾರವೂ ಸ್ಪಷ್ಟತೆಯಿಂದ ಕೂಡಿದ್ದು, ಕೇಳುಗರ ಹೃದಯವನ್ನು ತಣಿಸುತ್ತಿದೆ. ಒಟ್ಟಿನಲ್ಲಿ ನಮ್ಮ ನೆಲದಲ್ಲಿ ಹುಟ್ಟಿ ಬೆಳೆದ ಮಕ್ಕಳೇ ನಮ್ಮ ಭಾಷೆ ಸಂಸ್ಕೃತಿಯನ್ನು ಕಡೆಗಣಿಸಿ ಮಾತೃಭಾಷೆ ಮಾತನಾಡಲು ತಡವರಿಸುತ್ತಿರುವಾಗ ಎಲ್ಲೋ ಬೆಳೆದ ಹುಡುಗಿಯೊಬ್ಬಳು ಹೀಗೆ ಕನ್ನಡದ ದಾಸಶ್ರೇಷ್ಠ ಪುರಂದರದಾಸರ ಹಾಡುಗಳನ್ನು ಇಷ್ಟೊಂದು ಸುಶ್ರಾವ್ಯವಾಗಿ ಹಾಡುತ್ತಿರುವುದು ನೋಡಿದರೆ ಅಚ್ಚರಿ ಮೂಡದೇ ಇರದು ಅಲ್ವಾ? 

 
 
 
 
 
 
 
 
 
 
 
 
 
 
 

A post shared by CassMae (@cassmaeofficial)

 

Latest Videos
Follow Us:
Download App:
  • android
  • ios