Asianet Suvarna News Asianet Suvarna News

CDS Gen Rawat's helicopter crash: ಸಿಒಐ ತನಿಖೆಯಲ್ಲಿ ಬಹಿರಂಗವಾಯ್ತು ಅಪಘಾತದ ಕಾರಣ!

ತಕ್ಷಣವೇ ಬದಲಾದ ಹವಾಮಾನದಿಂದ ಪೈಲಟ್ ನಿಂದಾದ ತಪ್ಪು
ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲರಾದ ಪೈಲಟ್
ಇದರಿಂದಾಗಿ ಸಂಭವಿಸಿದ ಸಿಐಎಫ್ ಟಿ (ಕಂಟ್ರೋಲ್ಡ್ ಫ್ಲೈಟ್ ಇನ್ ಟು ಟೆರೆನ್) 

Preliminary findings of tri services inquiry cite spatial disorientation of pilot as cause for chopper crash san
Author
Bengaluru, First Published Jan 14, 2022, 9:19 PM IST

ನವದೆಹಲಿ (ಜ. 14): ಹಠಾತ್ ಆಗಿ ಬದಲಾವಣೆಯಾದ ಹವಾಮಾನ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಪೈಲೈಟ್ ಕೊಂಚ ಮಟ್ಟಿಗೆ ವಿಫಲರಾಗಿದ್ದರಿಂದ (spatial disorientation of pilot) ಕಳೆದ ತಿಂಗಳು ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಇದ್ದ(Chief of Defence Staff General Bipin Rawat) ಐಎಎಫ್ ಸೇನಾ ಹೆಲಿಕಾಪ್ಟರ್ ತಮಿಳುನಾಡಿನ (TamilNadu) ಕೂನೂರಿನಲ್ಲಿ ಅಫಘಾತಕ್ಕೆ ಈಡಾಗಿದೆ ಎಂದು ಪ್ರಕರಣದ ಕುರಿತಾಗಿ ತನಿಖೆ ನಡೆಸಿರುವ ಮೂರೂ ಸೇನಾಪಡೆಗಳ ಕೋರ್ಟ್ ಆಫ್ ಇನ್ ಕ್ವೈರಿ (ಸಿಒಐ) ಟೀಮ್ (Tri-Services Court of Inquiry) ತನ್ನ ಪ್ರಾಥಮಿಕ ವರದಿಯಲ್ಲಿ (preliminary findings) ತಿಳಿಸಿದೆ. ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಪೈಲಟ್ ನಿಂದ ಸಣ್ಣ ಪ್ರಮಾಣದ ತಪ್ಪು ಘಟಿಸಿದ್ದರಿಂದ ಸಿಎಫ್ಐಟಿ (ಕಂಟ್ರೋಲ್ಡ್ ಫ್ಲೈಟ್ ಇನ್ ಟು ಟೆರೆನ್) ಆಗಿದ್ದು, ಹೆಲಿಕಾಪ್ಟರ್ ಅಪಘಾತಕ್ಕೆ ಈಡಾಗಿದೆ. ವಿಧ್ವಂಸಕ ಕೃತ್ಯ (sabotage), ಯಾಂತ್ರಿಕ ವೈಫಲ್ಯ (mechanical failure) ಹಾಗೂ ಪೈಲಟ್ ನಿರ್ಲಕ್ಷ್ಯವನ್ನು (negligence)ಸಮಿತಿ ಸಂಪೂರ್ಣವಾಗಿ ತಳ್ಳಿಹಾಕಿದೆ.

ಕಣಿವೆಗಳಲ್ಲಿನ ಹವಾಮಾನ ಪರಿಸ್ಥಿತಿ ಅನಿರೀಕ್ಷಿತವಾಗಿ ಬದಲಾವಣೆ ಆಗುತ್ತಿರುತ್ತದೆ. ಇದರಿಂದಾಗಿ ಹೆಲಿಕಾಪ್ಟರ್ ತಿರುಗುವ ಮಾರ್ಗದಲ್ಲಿ ಹಠಾತ್ ಆಗಿ ಮೋಡಗಳ ಪ್ರವೇಶವಾಗಿದೆ. ಇದರಿಂದಾಗಿ ಪೈಲಟ್ ಗೆ ತನ್ನ ಎದುರಿಗೆ ಏನಿದೆ ಎನ್ನುವುದು ತೋಚದಂತಾಗಿತ್ತು. ಇದರಿಂದಾಗಿ ಸಿಐಎಫ್ ಟಿ ಸಂಭವಿಸಿದೆ" ಎಂದು ವಿಮಾನದ ಡೇಟಾವನ್ನು ವಿಶ್ಲೇಷಿಸಿದ ಬಳಿಕ ತನಿಖಾ ತಂಡ ಕಂಡುಹಿಡಿದಿದೆ. ಫ್ಲೈಟ್ ಡೇಟಾ ರೆಕಾರ್ಡರ್, ಕಾಕ್ ಪಿಟ್ ವಾಯ್ಸ್ ರೆಕಾರ್ಡರ್ ಹಾಗೂ ಘಟನೆಯನ್ನು ಕಣ್ಣಾರೆ ವೀಕ್ಷಿಸಿದ ಸಾಕ್ಷಿಗಳನ್ನು ಮಾತುಗಳನ್ನು ಆಲಿಸಿದ ಬಳಿಕ ತನಿಖಾ ತಂಡ ಈ ನಿರ್ಧಾರಕ್ಕೆ ಬಂದಿದೆ.

ಹಾರಾಟದ ವೇಳೆ ಪೈಲಟ್ ನ ಸಂಪೂರ್ಣ ನಿಯಂತ್ರಣದಲ್ಲಿರುವ ವಿಮಾನ, ಭೂಪ್ರದೇಶ, ನೀರು ಅಥವಾ ಹವಾಮಾನ ವೈಪರೀತ್ಯಕ್ಕೆ ತುತ್ತಾಗಿ ಅವಗಢಕ್ಕೆ ಈಡಾದಾಗ ಅದನ್ನು ಸಿಎಫ್ಐ ಟಿ (Controlled Flight Into Terrain) ಎನ್ನುವುದು ಅಂತಾರಾಷ್ಟ್ರೀಯ ವಾಯುಯಾನ ಸಂಸ್ಥೆ (ಐಎಟಿಎ) ಪರಿಭಾಷೆಯ ಪದವಾಗಿದೆ. ವಿಮಾನವು ಸಂಪೂರ್ಣ ನಿಯಂತ್ರಣದಲ್ಲಿದ್ದ ಹೊರತಾಗಿಯೂ, ಕಣಿವೆಗಳು, ನೀರು ಅಥವಾ ಇನ್ನಿತರ ಅಡಚಣೆಯಿಂದ ಅಪಘಾತವಾದಲ್ಲಿ ಅದನ್ನು ಸಿಎಫ್ ಐಟಿ (CFIT) ಎಂದು ಐಎಟಿಎ ಕೂಡ ಹೇಳುತ್ತದೆ. ಒಟ್ಟಾರೆ ಈ ಪದದ ಸಂಪೂರ್ಣ ಅರ್ಥವೇನೆಂದರೆ, ವಿಮಾನವೂ ಸಂಪೂರ್ಣವಾಗಿ ಪೈಲಟ್ ನ ನಿಯಂತ್ರಣದಲ್ಲಿರುವಾಗಲೇ ಅಪಘಾತ ಸಂಭವಿಸಿದೆ ಎನ್ನುವುದಾಗಿದೆ.


ಕಳೆದ ವರ್ಷದ ಡಿಸೆಂಬರ್ 8 ರಂದು ಸಿಡಿಎಸ್ ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಸೇರಿದಂತೆ 12 ಮಂದು ಸೇನಾ ಸಿಬ್ಬಂದಿಗಳನ್ನು ಹೊತ್ತ ಐಎಎಫ್ ನ ಎಂಐ-17ವಿ5 ಹೆಲಿಕಾಪ್ಟರ್ ತಮಿಳುನಾಡಿನ ಕೊಯಮತ್ತೂರಿನ ಸಾಲೂರು ಏರ್ ಫೋರ್ಸ್ ಬೇಸ್ ನಿಂದ ವೆಲ್ಲಿಂಗ್ಟನ್ ನಲ್ಲಿರುವ ಡಿಫೆನ್ಸ್ ಸ್ಟಾಫ್ ಸರ್ವೀಸಸ್ ಕಾಲೇಜಿಗೆ ಪ್ರಯಾಣ ಬೆಳೆಸಿತ್ತು. ಸಾಲೂರು ಏರ್ ಫೋರ್ಸ್ ಬೇಸ್ ನಿಂದ ಹೊರ ಏಳೇ ನಿಮಿಷದಲ್ಲಿ ಕೂನೂರಿನ ಸಮೀಪ ಅವಗಢಕ್ಕೆ ಈಡಾಗಿತ್ತು. ಬಿಪಿನ್ ರಾವತ್ ಸೇರಿದಂತೆ 13 ಮಂದಿ ಸ್ಥಳದಲ್ಲೇ ಅಸುನೀಗಿದ್ದರೆ, 8 ದಿನಗಳ ಕಾಲ ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಸಾವಿಗೀಡಾಗಿದ್ದರು.

Bipin Rawat Chopper Crash: ಕಾಪ್ಟರ್‌ ದುರಂತಕ್ಕೆ ಕಾರಣ ಬಹಿರಂಗ
ಇದರ ಬೆನಲ್ಲಿಯೇ ಮೂರೂ ಸೇನಾಪಡೆಗಳ ಸದಸ್ಯರನ್ನು ಒಳಗೊಂಡ, ದೇಶದ ಅತ್ಯುನ್ನತ ಹೆಲಿಕಾಪ್ಟರ್ ಪೈಲಟ್ ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ( Air Marshal Manvendra Singh) ನೇತೃತ್ವದ ಕೋರ್ಟ್ ಆಫ್ ಇನ್ ಕ್ವೈರಿಯನ್ನು ನೇಮಿಸಲಾಗಿತ್ತು. ಈ ಕುರಿತಂತೆ ಅಂದಾಜು 1 ತಿಂಗಳಿಗೂ ಅಧಿಕ ಕಾಲ ಹಲವು ವಿಚಾರಣೆಗಳು ಹಾಗೂ ದಾಖಲೆಗಳನ್ನು ಪರಿಶೀಲನೆ ಮಾಡಿರುವ ಸಮಿತಿ, ಐಎಎಫ್ ನ ಎಂಐ-17ವಿ5 (Mi-17 V5) ಹೆಲಿಕಾಪ್ಟರ್ ಅಪಘಾತದ ಕುರಿತು ಪ್ರಾಥಮಿಕ ವರದಿಗಳನ್ನು ಸಲ್ಲಿಸಿದೆ.  "ತನ್ನ ದಾಖಲೆಯ ಆಧಾರದ ಮೇಲೆ, ವಿಚಾರಣಾ ನ್ಯಾಯಾಲಯವು ಕೆಲವು ಶಿಫಾರಸುಗಳನ್ನು ಮಾಡಿದೆ, ಅದನ್ನು ಪರಿಶೀಲಿಸಲಾಗುತ್ತಿದೆ" ಎಂದು ಸಮಿತಿ ತಿಳಿಸಿದೆ.

 

Follow Us:
Download App:
  • android
  • ios