ಹೈಟೆನ್ಷನ್ ವೈರ್‌ ಬಿದ್ದು ವಿದ್ಯುತ್ ಸ್ಪರ್ಶಕ್ಕೆ ಕನಿಷ್ಠ 16 ಜನ ಬಲಿ: ನಮಾಮಿ ಗಂಗಾ ಯೋಜನೆ ಆವರಣದಲ್ಲಿ ದಾರುಣ ಘಟನೆ

ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ಹಾಗೂ ಮೂವರು ಗೃಹರಕ್ಷಕ ದಳದ ಸಿಬ್ಬಂದಿ ಸೇರಿ ವಿದ್ಯುತ್‌ ಸ್ಪರ್ಶಕ್ಕೆ 16 ಮಂದಿ ಬಲಿಯಾಗಿದ್ದಾರೆ. 

16 electrocuted to death in uttarakhand s chamoli after transformer explodes ash

ಹೊಸದಿಲ್ಲಿ (ಜುಲೈ 19, 2023): ಉತ್ತರಾಖಂಡದ ಚಮೋಲಿ ಜಿಲ್ಲೆಯ ನಮಾಮಿ ಗಂಗಾ ಯೋಜನೆಯ ಚಹಾ ಬುಧವಾರ ಬೆಳಗ್ಗೆ ಹೈಟೆನ್ಷನ್ ತಂತಿ ಬಿದ್ದ ಪರಿಣಾಮ ಕನಿಷ್ಠ 16 ಜನರು ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗಿರುವ ದಾರುಣ ಘಟನೆ ವರದಿಯಾಗಿದೆ. ಈ ಘಟನೆಯಲ್ಲಿ 6  ಮಂದಿ ತೀವ್ರ ಸುಟ್ಟಗಾಯಗಳಾಗಿದ್ದು, ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಇನ್ನು, ಟ್ರಾನ್ಸ್‌ಫಾರ್ಮರ್ ಸ್ಫೋಟಗೊಂಡಿದ್ದು, ಇದರಿಂದ ಉತ್ತರಾಖಂಡದಲ್ಲಿನ ಈ ಸೇತುವೆಗೆ ವಿದ್ಯುತ್ ಪ್ರವಹಿಸಿ ಘಟನೆ ಸಂಭವಿಸಿದೆ ಎಂದೂ ಹೇಳಲಾಗಿದೆ.

ಪ್ರಾಥಮಿಕ ಮಾಹಿತಿಯಂತೆ ಓರ್ವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ಹಾಗೂ ಮೂವರು ಗೃಹರಕ್ಷಕ ದಳದ ಸಿಬ್ಬಂದಿ ಸಹ ವಿದ್ಯುತ್‌ ಸ್ಪರ್ಶಕ್ಕೆ ಬಲಿಯಾಗಿದ್ದಾರೆ. ಬಲಿಯಾದ ಇತರೆ ಎಲ್ಲ ವ್ಯಕ್ತಿಗಳು ನಮಾಮಿ ಗಂಗೆ ಯೋಜನೆಯ ಸ್ಥಳದಲ್ಲಿ ಕೆಲಸಗಾರರಾಗಿದ್ದರು. ಇನ್ನು, ಈ ಘಟನೆಗೆ ನಿಖರವಾದ ಕಾರಣ ಇನ್ನೂ ಪತ್ತೆಯಾಗಿಲ್ಲ ಎಂದು ವಿಪತ್ತು ನಿರ್ವಹಣಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನು ಓದಿ: ಮಹಿಳೆಯರ ಒಳಗೆ ಸೇರಿದ ‘ಗುಂಡು’; ಪೊಲೀಸ್‌ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ: ವಿಡಿಯೋ ವೈರಲ್‌

ಉತ್ತರಾಖಂಡ ಸಿಎಂರಿಂದ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ

ಈ ಮಧ್ಯೆ, ಉತ್ತರಾಖಂಡ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಘಟನೆಯ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೆ, ಉತ್ತರಾಖಂಡದ ನಮಾಮಿ ಗಂಗೆಯ ರಾಜ್ಯ ಕಾರ್ಯಕ್ರಮ ನಿರ್ವಹಣಾ ಗುಂಪಿನ ಮೂಲವೊಂದು ಈ ಘಟನೆಯು ಹಳೆಯ 50 KLD ಕೊಳಚೆನೀರಿನ ಸಂಸ್ಕರಣಾ ಘಟಕದಲ್ಲಿ (STP) ಸಂಭವಿಸಿದೆ. ಅದರ ಕೆಲಸವನ್ನು 2019 ರಲ್ಲಿ ಪೂರ್ಣಗೊಳಿಸಲಾಯಿತು ಮತ್ತು ಅದನ್ನು 2021 ರಲ್ಲಿ ಜಲ ಸಂಸ್ಥಾನಕ್ಕೆ ಹಸ್ತಾಂತರಿಸಲಾಯಿತು ಎಂದು ಮಾಹಿತಿ ನೀಡಿದೆ. 

"ವಾಡಿಕೆಯ ಪ್ರಕ್ರಿಯೆಯಾಗಿ, ಮುಂಗಾರಿನಿಂದಾಗಿ ಅತಿಯಾದ ಕೆಸರನ್ನು ತೆಗೆದುಹಾಕಲು ಕಾರ್ಮಿಕರು ನಿರ್ವಹಣಾ ಕಾರ್ಯ ಮಾಡುತ್ತಿದ್ದರು ಮತ್ತು ಸೈಟ್‌ನಲ್ಲಿನ ಕರೆಂಟ್ ಸೋರಿಕೆಯು ಘಟನೆಗೆ ಕಾರಣವಾಗಿರಬಹುದು" ಎಂದೂ ಮೂಲಗಳು ತಿಳಿಸಿವೆ. ನಮಾಮಿ ಗಂಗೆ ಯೋಜನೆಯ ಭಾಗವಾಗಿರುವ ಈ ಸೇತುವೆಯು ಉತ್ತರಾಖಂಡದ ಚಮೋಲಿ ಜಿಲ್ಲೆಯ ಅಲಕನಂದಾ ನದಿಯನ್ನು ವ್ಯಾಪಿಸಿದೆ.

ಇದನ್ನೂ ಓದಿ: Snake Smuggling: ಬ್ರಾನಲ್ಲಿ 5 ಜೀವಂತ ಹಾವುಗಳನ್ನು ಸಾಗಿಸಿದ ಮಹಿಳೆ

ಇನ್ನೊಂದೆಡೆ, ಈ ಘಟನೆ ಬಗ್ಗೆ ಉತ್ತರಾಖಂಡ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ಮಾತನಾಡಿ, "ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ಮತ್ತು ಮೂವರು ಗೃಹ ರಕ್ಷಕರು ಸೇರಿದಂತೆ 15 ಜನರು ವಿದ್ಯುತ್ ಸ್ಪರ್ಶಕ್ಕೆ ಬಲಿಯಾಗಿದ್ದಾರೆ. ಘಟನೆಯ ಕಾರಣವನ್ನು ಪತ್ತೆ ಹಚ್ಚಲು ತನಿಖೆ ನಡೆಸಲಾಗುತ್ತಿದೆ" ಎಂದು ಹೇಳಿದ್ದಾರೆ. ಕಳೆದ ರಾತ್ರಿ ಈ ಘಟನೆ ನಡೆದಿದೆ ಎಂದೂ ಚಮೋಲಿ ಪೊಲೀಸ್ ವರಿಷ್ಠಾಧಿಕಾರಿ ಪ್ರಮೇಂದ್ರ ದೋಭಾಲ್ ಹೇಳಿದ್ದಾರೆ.

“ಸೆಕ್ಯುರಿಟಿ ಗಾರ್ಡ್ ವಿದ್ಯುತ್ ಸ್ಪರ್ಶದಿಂದ ಸಾವವಿಗೀಡಾಗಿದ್ದಾರೆ ಎಂದು ನಮಗೆ ಗ್ರಾಮದಿಂದ ಕರೆ ಬಂದಿತು. ಪೊಲೀಸ್ ಸಿಬ್ಬಂದಿ ಪಂಚನಾಮ (ಸ್ಥಳ ತಪಾಸಣೆ) ಗಾಗಿ ಗ್ರಾಮಸ್ಥರೊಂದಿಗೆ ಹೋದಾಗ 21 ಜನರು ವಿದ್ಯುತ್ ಸ್ಪರ್ಶಿಸಿ ತೀವ್ರ ಗಾಯಗೊಂಡರು. ಈ ಪೈಕಿ 15 ಜನರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ, ಮತ್ತು ಉಳಿದವರ ಸ್ಥಿತಿ ಗಂಭೀರವಾಗಿದೆ’’ ಎಂಬ ಮಾಹಿತಿಯೂ ತಿಳಿದುಬಂದಿದೆ.  

ಇದನ್ನೂ ಓದಿ: ಬಿಜೆಪಿ ಮುಖಂಡನ ಪುತ್ರ ಸೇರಿ ನಾಲ್ವರಿಂದ ಗ್ಯಾಂಗ್‌ ರೇಪ್‌, ಅಪ್ರಾಪ್ತೆ ಸಹೋದರಿ ಮೇಲೂ ಲೈಂಗಿಕ ದೌರ್ಜನ್ಯ!

Latest Videos
Follow Us:
Download App:
  • android
  • ios