ಒಂದು ಕಾಲದಲ್ಲಿ ಗೇಮಿಂಗ್‌ ಆಸಕ್ತಿ ಇದ್ದರೆ ಅವರನ್ನು ಸಮಯ ಹಾಳುಮಾಡಬೇಡಿ ಎಂದು ಸಲಹೆ ನೀಡುತ್ತಿದ್ದೇವು. ಇದು ತಂತ್ರಜ್ಞಾನ ಯುಗ. ಇಲ್ಲಿ ಅದ್ಭುತಗಳನ್ನೇ ಸೃಷ್ಟಿಸಲು ಸಾಧ್ಯ. ಹೊರಜಗತ್ತಿನ ಕಬ್ಜಾ ಸರಿಸಿ ಭಾರತ ಅಧಿಪತ್ಯ ಸಾಧಿಸಬೇಕು ಎಂದು ಮೋದಿ ಹೇಳಿದ್ದಾರೆ. ಏಷ್ಯಾನೆಟ್ ಸುವರ್ಣನ್ಯೂಸ್ ವಿಶೇಷ ಸಂದರ್ಶನದಲ್ಲಿ ಮೋದಿ, ಗೇಮಿಂಗ್, ಹೊಸ ತಂತ್ರಜ್ಞಾನ, ಕುರಿತು ಮೋದಿ ಮಾತನಾಡಿದ್ದಾರೆ. 

ನವದೆಹಲಿ(ಏ.20) ತಂತ್ರಜ್ಞಾನ ವಿಚಾರದಲ್ಲಿ ಪ್ರಧಾನಿ ಮೋದಿಗೆ ಹೆಚ್ಚಿನ ಆಸಕ್ತಿ. ಜೊತೆಗೆ ತಮ್ಮ ಎಲ್ಲಾ ಯೋಜನೆಗಳನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಪರಿಣಾಮಕಾರಿಯಾಗಿ ಜಾರಿಗೆ ತರುತ್ತಾರೆ. ಜೊತೆಗೆ ಯುವ ಪೀಳಿಗೆ ಜೊತೆ ಮೋದಿ ಅತೀ ವೇಗದಲ್ಲಿ ಸಂಪರ್ಕ ಸಾಧಿಸುತ್ತಾರೆ. 21ನೇ ಶತಮಾನದಲ್ಲಿ ಭಾರತ ಟೆಕ್ ಜಗತ್ತಿನ ಅಧಿಪತ್ಯ ಸಾಧಿಸಬೇಕು ಅನ್ನೋದು ಮೋದಿ ಅಭಿಮತ. ಈ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್ ನಡೆಸಿದ ಸಂದರ್ಶನದಲ್ಲಿ ಮೋದಿ ಹಲವು ವಿಚಾರಗಳನ್ನು ತೆರೆದಿಟ್ಟಿದ್ದಾರೆ. ಸಮಯ ಹಾಳುಮಾಡಬೇಡಿ ಎಂದು ನಮ್ಮ ಕಾಲದಲ್ಲಿ ಗೇಮಿಂಗ್ ಕುರಿತು ಹೇಳುತ್ತಿದ್ದೇವು. ಆದರೆ ಗೇಮಿಂಗ್ ಕುರಿತು ಅರಿಯುತ್ತಿದ್ದಂತೆ ನನ್ನ ದೃಷ್ಠಿಕೋನ ಬದಲಾಯಿತು ಎಂದು ಮೋದಿ ಹೇಳಿದ್ದಾರೆ. 

21ನೇ ಶತಮಾನ ತಂತ್ರಜ್ಞಾನ ಆಧಾರಿತ ಯುಗ. ಈ ಟೆಕ್ ಯುಗವನ್ನು ನಾವು ಅರ್ಥಮಾಡಿಕೊಂಡು ಹೋಗಬೇಕು. ನನ್ನ ವಯಸ್ಸಿನವರು ಏನಿದ್ದಾರೆ.. ಹಿಂದಿನ ಯುಗದಿಂದ ಅವರು ಬಂದಿದ್ದಾರೆ. ಆವಾಗ ತಂತ್ರಜ್ಞಾನ ಇರಲಿಲ್ಲ. ಅದ್ರೆ ನಾನು ಸರ್ಕಾರ ನಡೆಸಬೇಕಾಗಿದೆ. ನನಗೆ ಪ್ರಾಥಮಿಕ ಅಂಶಗಳು ಗೊತ್ತಿರಬೇಕು.. ಇದರ ಬಗ್ಗೆ ವೈಯಕ್ತಿಕ ಅನುಭವ ಆಗಬೇಕು. ನನಗೆ ಸಾಮಾನ್ಯವಾಗಿ ಯಾರಾದರೂ ಗೇಮಿಂಗ್ ಬಗ್ಗೆ ಕೇಳಿದ್ರೆ, ಸಮಯ ಹಾಳು ಮಾಡಬೇಡಿ ಅಂತಿದ್ದೆ. ನಾನೂ ಅದನ್ನ ವಿವರವಾಗಿ ನೋಡಿದೆ. ಅಧ್ಯಯನ ಮಾಡಿದೆ. ಆಗ ನನಗೆ ನನ್ನ ದೃಷ್ಟಿಕೋನ ಸರಿಯಿಲ್ಲ ಅನಿಸ್ತು. ನಾವು ಅದಕ್ಕೆ ನಿರ್ಬಂಧ ಹೇರುವ ಬದಲು ಸರಿಯಾಗಿ ಡೈವರ್ಟ್ ಮಾಡಬೇಕು. ಗೇಮಿಂಗ್ ಜಗತ್ತಿನಲ್ಲಿ ಹಿಂದೂಸ್ಥಾನದ ಜನ ಬಹಳ ಇದ್ದಾರೆ. ಗೇಮಿಂಗ್ ಮಾರ್ಕೆಟ್ ಹೊರಗಿನ ಜನರ ಕಬ್ಜಾದಲ್ಲಿದೆ. ಮೇಡ್ ಇನ್ ಇಂಡಿಯಾ ಗೇಮಿಂಗ್ ಆಗಬೇಕಿದೆ ಎಂದು ಮೋದಿ ಹೇಳಿದ್ದಾರೆ.

ಭಾರತದ ಹತ್ತಿರ ಇಷ್ಟು ಕಥೆ.. ವಿಷಯಗಳಿವೆ. ಮತ್ತೊಂದು ನಮ್ಮ ಹೊಸ ಪೀಳಿಗೆಗೆ ಗೇಮಿಂಗ್ನಿಂದ ಸಂಸ್ಕಾರ ಕೂಡ ಕಲಿಸಬಹುದು. ಶಾಲೆ-ಕಾಲೇಜುಗಳಲ್ಲಿ ಮಕ್ಕಳಿಗೆ ಒಂದು ಪ್ರೊಜೆಕ್ಟ್ ಕೊಡ್ತಾರೆ. ಇದು ನಿಮ್ಮ ಅಸೈನ್ಮೆಂಟ್ ಒಂದು ವಾರದಲ್ಲಿ ಮಾಡಿಕೊಂಡು ಬನ್ನಿ. ಮಕ್ಕಳು ಆಗ ಅಧ್ಯಯನ ಮಾಡ್ತಾರೆ. ಗೇಮಿಂಗ್ನಲ್ಲೂ ಇದೇ ತರಹ ಅಸೈನ್ಮೆಂಟ್ ಕೊಡಲಾಗುತ್ತದೆ. ಕರ್ನಾಟಕದ ಒಬ್ಬ ಗೇಮರ್, ನದಿಯ ಕೊಳಚೆ ಬಗ್ಗೆ ಗೇಮ್ ಮಾಡಿದ್ದ. ನದಿ ಸ್ವಚ್ಛಗೊಳಿಸುವ ಕುರಿತು, ಅದು ನನಗೆ ತುಂಬಾ ಒಳ್ಳೆಯದು ಅನಿಸ್ತು. ನನಗೆ ಅನಿಸುತ್ತೆ ಜನರು ಗೇಮಿಂಗ್ ಕಾರಣದಿಂದ ಸೇರಿಕೊಂಡ್ರೆ, ಆನ್ಲೈನ್ನಲ್ಲಿ ಒಂದು ನದಿ.. ಕೊಳಚೆ ಆಗಿದೆ. ಈ ರೀತಿಯಾಗಿ ಸ್ವಚ್ಛ ಮಾಡೋಣ.. ಒಂದಾದ ಮೇಲೆ ಒಂದು ಸ್ಟೆಪ್ ಮಾಡಿದ್ದರು. ಇದರಿಂದ ಸಂಸ್ಕಾರ ಬದಲಾಗಿ ಅವರು ಆ ನದಿಯನ್ನೂ ಸ್ಚಚ್ಛಗೊಳಿಸಬಹುದು. ಒಳ್ಳೆಯ ಹವ್ಯಾಸ.. ಒಳ್ಳೆಯ ಯೋಚನೆ ಬಗ್ಗೆ ಯೋಚಿಸುವ ಅವಶ್ಯಕತೆ ಇದೆ ಎಂದರು. 

ನಾನೂ ಗೇಮರ್ಸ್ ಅನ್ನ ಭೇಟಿಯಾದೆ. ನಾನೂ ವಿದ್ಯಾರ್ಥಿಯಂತೆ ಅರ್ಥ ಮಾಡಿಕೊಳ್ತೀನಿ ನನಗೆ ಹೇಳಿ ಎಂದು ಹೇಳಿದೆ. ನನಗೆ ಇದರಲ್ಲಿ ಯಾವುದೇ ಸಂಕೋಚ ಇಲ್ಲ. ಅವರಿಗೆ ಸಾಮರ್ಥ್ಯವೂ ಇದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ವಿಚಾರ ಮಾಡ್ತೀನಿ. ಮತ್ತೊಂದು ನನಗೂ ಆಸಕ್ತಿಯೂ ಇದೆ. ನಾನೂ ಯಾವತ್ತೂ ಸಣ್ಣ ಯೋಚನೆ ಮಾಡುವ ವ್ಯಕ್ತಿ ಅಲ್ಲ. ನಾನೂ ಬಂಧನದಲ್ಲಿ ಜೀವನ ಮಾಡುವ ವ್ಯಕ್ತಿ ಅಲ್ಲ. ಹೊಸ ವಿಷಯ ಕಲಿಯುವುದು. ಹೊಸ ವಿಚಾರ ಪ್ರಯೋಗ ಮಾಡುವುದು ನನಗೂ ಆಸಕ್ತಿ. 2012ರ ರಾಜಕೀಯ ಜೀವನದಲ್ಲಿ, ಅಂದು ನಾನು ಮೊದಲ ವ್ಯಕ್ತಿ. ನಾನು ಗೂಗಲ್ ಹ್ಯಾಂಗ್ಔಟ್ಸ್ ಮಾಡಿದ್ದೆ. ಆ ಸಮಯದಲ್ಲಿ ಗೂಗಲ್ ಹ್ಯಾಂಗ್ಔಟ್ಸ್ ಬಗ್ಗೆ ಯಾರಿಗೂ ಗೊತ್ತೇ ಇರಲಿಲ್ಲ. ಅದಾದ ಮೇಲೆ ನಾನೂ 3ಡಿ ಹಾಲೋಗ್ರಾಮ್ ಮಾಡಿದ್ದೆ. 3ಡಿ ಹಾಲೋಗ್ರಾಮ್ ಬಗ್ಗೆ ಜಗತ್ತಿನ ಹಲವರು ಪ್ರಶ್ನೆ ಮಾಡಿದ್ದರು. 3ಡಿ ಹಾಲೋಗ್ರಾಫ್ ಏನ್ ಮಾಡುತ್ತೆ ಎಂದು ಕೇಳಿದ್ರು. ಆಗ ನಾನು ಹೇಳಿದೆ. ಇದು ಡ್ಯಾನ್ಸ್ ಮಾಡುತ್ತೆ ಎಂದು ಹೇಳಿದ್ದೆ. ಇಷ್ಟು ದೊಡ್ಡ ನಮ್ಮ ದೇಶ ಇದೆ. ನೀವು ನೋಡಿ ನಮ್ಮ ನಮೋ ಇನ್ ಕನ್ನಡ, ನಮೋ ಇನ್ ಮಲಯಾಳಂ, ನಮೋ ಇನ್ ತಮಿಳು.. ನಾನೂ ಹಿಂದಿಯಲ್ಲಿ AI ಉಪಯೋಗ ಮಾಡ್ತಿದ್ದೇನೆ. ನನ್ನ ಆ್ಯಪ್ ಕೂಡ AI ಬಳಸುವಂತಹ ಆ್ಯಪ್. ನಿಮ್ಮ ಜತೆಗಿನ ನನ್ನ ಫೋಟೋ ಕಳೆದುಹೋಯ್ತು ಅಂದುಕೊಳ್ಳಿ. ನೀವು ನಮೋ ಅ್ಯಪ್ ಹೋಗಿ AI ಟೂಲ್ ಉಪಯೋಗ ಮಾಡಿ ಒಂದು ಫೋಟೋ ಹಾಕಿದ್ರೆ, ನನ್ನ ಜತೆಗೆ ನಿಮ್ಮ ಎಷ್ಟು ಫೋಟೋ ಇವೆ, 30-40 ವರ್ಷದ ಹಿಂದಿನ ಎಲ್ಲ ಫೋಟೋಗಳು ನಿಮಗೆ ಸಿಗ್ತವೆ. ನಾನು AI ಉಪಯೋಗ ಮಾಡ್ತೀನಿ. ನಾನು ಆ ಪ್ರಕಾರ ನೋಡಿದ್ರೆ, ಕಂಟೆಂಟ್ ಕ್ರಿಯೇಟರ್ಸ್ ದೇಶದ ದೊಡ್ಡ ಆಸ್ತಿ ಆಗ್ತಾರೆ. ಜಗತ್ತಿನಾದ್ಯಂತ ಅವರು ಪರಿಣಾಮ ಬೀರ್ತಾರೆ. ನಾನು ಅವರ ಸಾಮರ್ಥ್ಯ ತಿಳಿದುಕೊಳ್ಳಬೇಕಾಗಿದೆ. ಒಂದು ದೊಡ್ಡ ಆರ್ಥಿಕತೆಯೂ ಇದೆ. ದೇಶದ ಬೆಳವಣಿಗೆಯಲ್ಲಿ ಅವರ ಪಾತ್ರವೂ ಇದೆ ಎಂದು ನನಗೆ ಅನಿಸುತ್ತೆ. ಸ್ವಾಭಾವಿಕವಾಗಿ ಯುವ ಪೀಳಿಗೆ ಜತೆಗೆ ಸೇರಿಕೊಂಡು, ನಾನೂ ಅವರ ವಯಸ್ಸಿಗೆ ತಕ್ಕಂತೆ ತಯಾರಾಗಬೇಕಾಗುತ್ತದೆ ಎಂದು ಮೋದಿ ಹೇಳಿದ್ದಾರೆ.