ತಿರಂಗ ಹಿಡಿದರೆ ಸಾಕು ದಾರಿ ಬಿಡುತ್ತಾರೆ, ಇದು ವಿಶ್ವದಲ್ಲಿ ಭಾರತ ಸಂಪಾದಿಸಿದ ಗೌರವ; ಮೋದಿ ಸಂದರ್ಶನ!

ವಿಶ್ವದ ಯಾವುದೇ ಮೂಲೆಯಲ್ಲಿ ಭಾರತೀಯರ ಸಂಕಷ್ಟಕ್ಕೆ ಭಾರತ ಸರ್ಕಾರ ಸ್ಪಂದಿಸಿದೆ. ಹಲವು ಕಾರ್ಯಾಚರಣೆ ಮೂಲಕ ಸುರಕ್ಷಿತವಾಗಿ ಭಾರತೀಯರನ್ನು ಕರೆತರಲಾಗಿದೆ. ಈ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆಗಿನ ಸಂದರ್ಶನದಲ್ಲಿ ಮೋದಿ ಮಾತನಾಡಿದ್ದಾರೆ. ತಿರಂಗ ಹಿಡಿದು, ಭಾರತ ಮಾತಾ ಕಿ ಜೈ ಎಂದರೆ ಸಾಕು, ನಿಮ್ಮನ್ನು ಬಿಟ್ಟುಕಳುಹಿಸುತ್ತಾರೆ. ಇದು ಭಾರತ ಸಂಪಾದಿಸಿದ ಗೌರವ ಎಂದು ಮೋದಿ ಹೇಳಿದ್ದಾರೆ.
 

Previous governments never paid attention towards strengthening relations with West Asia says PM Modi on Interview ckm

ನವದೆಹಲಿ(ಏ.20) ಪ್ರಧಾನಿ ಮೋದಿ ಆಡಳಿತದಲ್ಲಿ ಭಾರತ ವಿಶ್ವಮಟ್ಟದಲ್ಲಿ ಅತ್ಯಂತ ಪ್ರಭಾವಿ ದೇಶವಾಗಿ ಗುರುತಿಸಿಕೊಂಡಿರುವುದು ಸುಳ್ಳಲ್ಲ. ಭಾರತದ ವಿದೇಶಾಂಗ ನೀತಿಗಳು, ವಿಶ್ವದ ಯಾವುದೇ ಮೂಲೆಯಲ್ಲಿರುವ ಭಾರತೀಯನಿಗೆ ಭಾರತ ಸರ್ಕಾರ ಸ್ಪಂದಿಸುವ ರೀತಿ ಕುರಿತು ವಿಶ್ವವೇ ಬೆರಗಾಗಿದೆ. ಈ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಮೋದಿ ಮಾತನಾಡಿದ್ದಾರೆ.ಹಿಂದಿನ ಸರ್ಕಾರಗಳು ಮಧ್ಯ ಪ್ರಾಚ್ಯ ಹಾಗೂ ಇತರ ದೇಶಗಳೊಂದಿಗೆ ಉತ್ತಮ ಸಂಬಂಧ ಬೆಳೆಸಲು ಗಮನ ನೀಡಲಿಲ್ಲ ಎಂದಿದ್ದಾರೆ.

ನಾವು ಮೊದಲು ಎರಡು ಕೆಲಸ ಮಾಡ್ತಿದ್ದೇವು. ತೈಲ ಆಮದು ಮಾಡಿಕೊಳ್ತಿದ್ವಿ.. ಹಾಗೂ ಕಡಿಮೆ ಬೆಲೆಗೆ ಮಾನವ ಸಂಪನ್ಮೂಲವನ್ನ ರಫ್ತು ಮಾಡುತ್ತಿದ್ವಿ. ಇದು ಸರಿಯಾದ ಕೆಲಸ ಆಗಿರಲಿಲ್ಲ. ಆದ್ರೆ ಈಗ ನಮ್ಮ ರಸ್ತೆ ತುಂಬಾ ಬಲವಾಗಿದೆ. ಕೊಳ್ಳುವವರು ಹಾಗೂ ಮಾರುವವರ ವ್ಯವಸ್ಥೆ ಬಿಟ್ಟು ಒಂದು ಒಳ್ಳೆಯ ಅಭಿವೃದ್ಧಿಯ ಒಪ್ಪಂದ ಮಾಡಿಕೊಳ್ಳಲಾಗಿದೆ. ಅವರೊಂದಿಗೆ ವ್ಯಾಪಾರ ಒಪ್ಪಂದಗಳಾಗಿದೆ. ಜತೆಗೆ ಹಲವು ಆಯಾಮಗಳಲ್ಲಿ ಕೆಲಸಗಳು ನಡೆಯುತ್ತಿದೆ. ಈಗ ನಾವು ತಂತ್ರಜ್ಞಾನ ಹಾಗೂ ಸೇವೆಗಳನ್ನು ಸಹ ರಫ್ತು ಮಾಡುತ್ತಿದ್ದೇವೆ. ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ವಿಶ್ವವಿದ್ಯಾನಲಯಗಳು ಅಲ್ಲಿ ಕೆಲಸ ಮಾಡುತ್ತಿವೆ.. ಕೃಷಿ ಉತ್ಪನ್ನಗಳಿಗಾಗಿ ಒಪ್ಪಂದ ಆಗಿದೆ. ಆಹಾರ ಸಂಸ್ಕರಣೆಗಾಗಿ ಅವರು ಹೂಡಿಕೆ ಮಾಡುತ್ತಿದ್ದಾರೆ ಎಂದಿದ್ದಾರೆ. 

ಅಧಿಕಾರ ಚಲಾಯಿಸಿಲ್ಲ, ಜನರ ಸೇವೆ ಮಾಡಿದ್ದೇವೆ, 2024ರ ಅಭೂತಪೂರ್ವ ಗೆಲುವಿನ ಕುರಿತು ಮೋದಿ ಮಾತು!

ಇಡೀ ವಿಶ್ವ ಭಾರತವನ್ನ ವಿಶ್ವಬಂಧು ಅನ್ನೋ ಥರ ಭಾವಿಸುತ್ತೆ. ಅದು ಶಬ್ಧದಲ್ಲಿ ಅಲ್ಲ ಭಾವನೆಯಲ್ಲಿ ವ್ಯಕ್ತಪಡಿಸುತ್ತೆ. ಎಂಥದ್ದೇ ಸಂಕಷ್ಟದ ಸಮಯದಲ್ಲಿ ಭಾರತ ಮೊದಲು ಪ್ರತಿಸ್ಪಂದನೆ ನೀಡುತ್ತೆ. ಕಾವೇರಿ ಆಪರೇಷನ್ ನಡೆಯುವಾಗ .. ಕರ್ನಾಟಕದ ತುಂಬಾ ಜನರು ಅಲ್ಲಿದ್ರು. ಅವರನ್ನ ವಾಪಸ್ ಕರೆದುಕೊಂಡು ಬರಲಾಯ್ತು. ಸೂಡಾನ್ನಿಂದ ಕೆಲವರನ್ನ ಕರೆತರಲಾಯ್ತು. ಅಲ್ಲಿ ತುಂಬಾ ಕಷ್ಟದ ಕೆಲಸ ಮಾಡ್ತಿದ್ರು. ಅಲ್ಲಿ ಕೆಲಸ ಇಲ್ಲ ಅಂದ್ರೆ ಊಟಕ್ಕೂ ಕಷ್ಟವಿತ್ತು. ಎಲ್ಲರನ್ನೂ ವಾಪಸ್ ಕರೆತರಲಾಯ್ತು. ವಿದೇಶಿ ನೀತಿಯ ದೃಷ್ಟಿಕೋನವನ್ನ ನಾವು ಸಂಪೂರ್ಣವಾಗಿ ಬದಲಿಸಿದ್ದೇವೆ. ನಮ್ಮ ನೀತಿಯಲ್ಲಿ ಅನಿವಾಸಿ ಭಾರತೀಯರಿಗೆ ಮಹತ್ವ ನೀಡಲಾಗಿದೆ. ಪಾಸ್ಪೋರ್ಟ್ನ ಬಣ್ಣ ಯಾವುದೇ ಇರಲಿ. ನನ್ನ ಪ್ರಕಾರ ಅವರು ಹಿಂದೂಸ್ತಾನಿಯರು, ಅವರದ್ದು ಹಿಂದೂಸ್ಥಾನಿ ರಕ್ತ. ಹಿಂದೂಸ್ತಾನದ ರಕ್ತವಾಗಿದ್ರೆ ಅವರಿಗೆ ಸಹಾಯ ಮಾಡ್ತೀವಿ. ಮೊದಲು ವಿದೇಶಿ ನೀತಿ ಅನಿವಾಸಿ ಭಾರತೀಯರ ಪರ ಇರಲೇ ಇಲ್ಲ. ಜನ ಅವರ ಜೀವನಕ್ಕಾಗಿ ಹೋಗಿದ್ದಾರೆ ಏನಾದರೂ ಆಗಲಿ ಅನ್ನುವ ಸ್ಥಿತಿ ಇತ್ತು. ಅವರು ಹೋಗಿದ್ದಾರೆ, ಅವರನ್ನ ಕರೆತರುವುದು ನನ್ನ ಕೆಲಸ ಎಂದು ಯೋಚಿಸುತ್ತೇನೆ. ಕೊನೇವರೆಗೂ ಪ್ಲಾನ್ ಮಾಡಿಕೊಂಡು ಹೋಗುತ್ತೇವೆ ಎಂದರು.

ಬೇರೆ ದೇಶದ ಜನರಲ್ಲೂ ನಮ್ಮ ಬಗ್ಗೆ ವಿಶ್ವಾಸರ್ಹತೆ ಹೆಚ್ಚಾಗಿದೆ. ತಿರಂಗಾ ಹಿಡಿದುಕೊಂಡು ಭಾರತ್ ಮಾತಾ ಕೀ ಜೈ ಅಂದ್ರೆ ನೀವು ಯಾವ ದೇಶದವರು ಎಂದು ಯಾರೂ ಕೂಡ ಕೇಳೋದಿಲ್ಲ ದಾರಿ ಬಿಟ್ಟು ಕಳಿಸುತ್ತಾರೆ. 2015ರ ಯೆಮೆನ್ ಸಂಕಷ್ಟ ಇರಬಹುದು. ಸೌದಿ ರಾಜನ ಜೊತೆ ಮಾತಾಡಿ ಸಾವಿರಾರು ಜನರನ್ನ ರಕ್ಷಣೆ ಮಾಡಿದ್ದು. ಉಕ್ರೇನ್ ಸಂಕಷ್ಟ ಕೂಡ ಜನರಿಗೆ ಗೊತ್ತಿದೆ. ಎಲ್ಲೋ ಒಂದು ಕಡೆ ನಮ್ಮ ಅಭ್ಯರ್ಥಿಗೆ ಡೆಪಾಸಿಟ್ ಕಟ್ಟಲು ಹಣ ಇರಲಿಲ್ಲ. ಉಕ್ರೇನ್ನಿಂದ ಬಂದ ವಿದ್ಯಾರ್ಥಿಗಳೆಲ್ಲಾ ಹಣ ಹೊಂದಿಸಿ ಕೊಟ್ಟಿದ್ದಾರೆ ಎಂದಿದ್ದಾರೆ.

ಕೇರಳದ ಜನರಿಗೆ ಇದು ಗೊತ್ತಿರಬಹುದು. ನಿಮಗೆ ಫಾದರ್ ಟೋಂಬ್ನ ಕಥೆ ನೆನಪಿರಬೇಕು. ಫಾದರ್ ಟೋಂಬ್ ತುಂಬಾ ದೀರ್ಘ ಕಾಲ ಐಸಿಸ್‌ನ ವಶದಲ್ಲಿದ್ರು. ನಾವು ರಾಜತಾಂತ್ರಿಕ ಹಾಗೂ ಎಲ್ಲಾ ಥರದ ಪ್ರಯತ್ನ ಮಾಡಿದ್ದೇವು. ತುಂಬಾ ದೀರ್ಘ ಸಮಯದ ನಂತರ ಅವರನ್ನ ವಾಪಸ್ ಕರೆತಂದ್ದೇವೆ. ಜೀವಂತವಾಗಿ ವಾಪಸ್ ಕರೆತಂದ್ದೇವೆ ಎಂದು ಮೋದಿ ಹೇಳಿದ್ದಾರೆ. 

ತ್ರಿಪುರ ಬದಲಾಗಿದೆ, ಕೇರಳ ಬದಲಾವಣೆಯತ್ತ ದಾಪುಗಾಲಿಡುತ್ತಿದೆ, ಸಂದರ್ಶನದಲ್ಲಿ ಮೋದಿ ನೀಡಿದ್ರು ಸುಳಿವು!

ಒಬ್ಬ ಬಂಗಾಳದ ಹೆಣ್ಣು ಮಗಳು ಅಫ್ಘಾನಿಸ್ತಾನದಲ್ಲಿ ಕ್ರಿಶ್ಚಿಯನ್ನರ ಪರವಾಗಿ ಕೆಲಸ ಮಾಡಿದ್ದಳು.  ಹೆಸರು ಜುಡಿತ್ ಡಿಸೋಜಾ. ಅವರನ್ನ ಅಪಹರಣ ಮಾಡಲಾಗಿತ್ತು. ನಮಗೆಲ್ಲಾ ಚಿಂತೆಯಾಗಿತ್ತು. ಅವರು ತಿಂಗಳುಗಳ ಕಾಲ ಭಯೋತ್ಪಾದಕರ ವಶದಲ್ಲಿದ್ದರು. ನಾವು ನಮ್ಮೆಲ್ಲಾ ಸಂಬಂಧಗಳನ್ನ ಬಳಸಿಕೊಂಡು ಆಕೆಯನ್ನ ಸುರಕ್ಷಿತವಾಗಿ ವಾಪಸ್ ಕರೆತಂದ್ದೇವೆ. 
 
ಒಬ್ಬ ಫಾದರ್ ಪ್ರೇಮ್ ಅವರನ್ನು ಸಹ ಇದೇ ಥರ ತುಂಬಾ ಸಮಯದ ನಂತರ ಕರೆತಂದ್ದೇವೆ.ಅವರು ದೆಹಲಿಗೆ ಬಂದ್ರು. ಅವರ ಮನೆಗೆ ಕರೆ ಮಾಡಿದ್ದಾರೆ.. ಅವರ ತಂಗಿ ಫೋನ್ ರಿಸೀವ್ ಮಾಡಿದ್ದಾರೆ.. ನಾನು ನಿಮ್ಮ ಅಣ್ಣ ಅಂದ್ರೆ ಅವರು ನಂಬೋಕೆ ಸಿದ್ಧವಿರಲಿಲ್ಲ. ನಾವು ಬರೋ ವಿಷಯವನ್ನ ಸೀಕ್ರೆಟ್ ಆಗಿ ಇಟ್ಟಿದ್ವಿ. ಅವರು ಜೀವಂತವಾಗಿ ಬರ್ತಾರೆ ಅಂತಾ ನಂಬಿರಲಿಲ್ಲ. ಈ ಸಂಬಂಧಗಳ ಉಪಯೋಗವನ್ನ ವಿಶ್ವದ ವಿವಿದೆಡೆ ಇರುವ ದೇಶದ ನಾಗರೀಕರಿಗಾಗಿ ಬಳಕೆ ಮಾಡ್ತಿದ್ದೇವೆ. ನಾವು ಇದನ್ನ ವ್ಯಕ್ತಿಗತವಾಗಿ ಮಾಡ್ತಿಲ್ಲ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿರೋ ನಮ್ಮ ನಾಗರೀಕರಿಗೆ ಅನ್ನಿಸಬೇಕು. ದೇಶ ನಮ್ಮ ಜತೆ ನಿಂತಿದೆ ಎಂದು ಅವರಿಗೆ ಅನ್ನಿಸಬೇಕು. ಇದು ತುಂಬಾ ಅವಶ್ಯಕ ಎಂದು ಮೋದಿ ಹೇಳಿದ್ದಾರೆ.

Latest Videos
Follow Us:
Download App:
  • android
  • ios