ನವದೆಹಲಿ(ಸೆ.18): ಹಲವು ದಶಕಗಳಿಂದ ಬಿಹಾರ ಜನತೆ ಕೋಸಿ ನದಿಗೆ ರೈಲು ಸೇತುವೆಯೊಂದಿಗೆ ಸಂಪರ್ಕ ಸೇತುವೆ ಬಯಸಿದ್ದರು. 1.9 ಕಿಲೋಮೀಟರ್ ಉದ್ದನೆ ರೈಲು ಸೇತುವೆ ಯೋಜನೆಗೆ 2003-04ರಲ್ಲಿ ಅನುಮೋದನೆ ಸಿಕ್ಕಿದ್ದರೂ ಯೋಜನೆ ನೆನೆಗುದಿಗೆ ಬಿದ್ದಿತ್ತು. ಆದರೆ ಮೋದಿ ಸರ್ಕಾರ ಈ ಯೋಜನೆ ಕೈಗೆತ್ತಿಕೊಂಡು ಇದೀಗ ಪೂರ್ಣಗೊಳಿಸಿದೆ. ವಿಡಿಯೋ ಕಾನ್ಫೆರೆನ್ಸ್ ಮೂಲಕ ಕೋಸಿ ನದಿ ರೈಲು ಸೇತುವೆಯನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ.

ಕೇಂದ್ರದ ಭರ್ಜರಿ ಕೊಡುಗೆ,  ಒಂದೆ ದಿನ ಏಳು ದೊಡ್ಡ ದೊಡ್ಡ ಯೋಜನೆ, ಯಾವ ರಾಜ್ಯಕ್ಕೆ?.

2003-04ರಲ್ಲಿ 512 ಕೋಟಿ ರೂಪಾಯಿ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಇದೀಗ ಕೇಂದ್ರ ಸರ್ಕಾರ ಬರೋಬ್ಬರಿ 3,000 ಕೋಟಿ ರೂಪಾಯಿ ವೆಚ್ಚದಲ್ಲಿ ಕೋಸಿ ನದಿ ರೈಲು ಸೇತುವೆ, ರಸ್ತೆ ಸೇರಿದಂತೆ ಇತರ ಕೆಲ ಯೋಜನೆಗಳನ್ನೂ ಪೂರ್ಣಗೊಳಿಸಿ, ಲೋಕಾರ್ಪಣೆಗೊಳಿಸಿದೆ.

ಬಿಹಾರಕ್ಕೆ ಎನ್‌ಡಿಎ ಸಿಎಂ ಅಭ್ಯರ್ಥಿ ಯಾರು? ಮೋದಿ ಕೊಟ್ರು ಸುಳಿವು!...

ಈ ಸೇತುವೆಯಿಂದ ಬಿಹಾರ, ಭಾರತ-ನೇಪಾಳ ಗಡಿ, ಪಶ್ಚಿಮ ಬಂಗಾಳ ಹಾಗೂ ಈಸ್ಟರ್ನ್ ರೈಲು ಸಂಪರ್ಕ ಸಾಧ್ಯವಾಗಲಿದೆ. ಬಿಹಾರದ ಸುಪಾಲ್, ಅರಾರಿಯಾ, ಸಹರಸಾ ಜಿಲ್ಲಾ ಜನರಿಗೆ ಉಪಯೋಗವಾಗಲಿದೆ. ಸುಲಭ ಸಂಪರ್ಕ ರಸ್ತೆ ಇಲ್ಲದೆ ಪರದಾಡುತ್ತಿದ್ದ ಈ ಭಾಗದ ಜನರಿಗೆ ಈ ಸೇತುವೆ ಸಹಕಾರಿಯಾಗಿ ಎಂದು ಪ್ರಧಾನಿ ಮೋದಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಹೇಳಿದರು.

1887ರಲ್ಲಿ ಬ್ರಿಟೀಷ್ ಸರ್ಕಾರ ಬಿಹಾರದ ನಿರ್ಮಲಿ ಹಾಗೂ ಬಾಪ್ತಿಯಾಹಿ ಅಡ್ಡವಾಗಿ  ರೈಲು ಲಿಂಕ್ ಹಾಕಲಾಗಿತ್ತು. ಆದರೆ 1934ರ ಪ್ರವಾಹ ಹಾಗೂ ಭಾರತ ನೇಪಾಳ ಭೂಕಂಪದಿಂದ ರೈಲು ಲಿಂಕ್ ಸಂಪೂರ್ಣ ಕೊಚ್ಚಿ ಹೋಗಿತ್ತು. ಇದರ ಬಳಿಕ ಕೋಸಿ ನದಿಗೆ ರೈಲು ನಿರ್ಮಾಣ ಮಾಡುವ ಕಾರ್ಯಕ್ಕೆ ಯಾರೂ ಕೂಡ ಕೈ ಹಾಕಿರಲಿಲ್ಲ. ಆದರೆ ಮೋದಿ ಸರ್ಕಾರ ಮಹತ್ವಾಕಾಂಕ್ಷೆ ಯೋಜನೆ ಕೈಗೆತ್ತಿಕೊಂಡು ಪೂರ್ಣಗೊಳಿಸಿದೆ.  

ಲಾಕ್‌ಡೌನ್ ವೇಳೆ ಕೋಸಿ ನದಿ ರೈಲು ಸೇತುವೆ ಹಾಗೂ ಇತರ ಕೆಲ ಯೋಜನೆಗಳು ಪೂರ್ಣಗೊಂಡಿದೆ. ವಿಶೇಷ ಅಂದರೆ ತವರಿಗೆ ವಾಪಾಸಾದ ವಲಸೆ ಕಾರ್ಮಿಕರು ಸೇತುವೆ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ ಎಂದು ಮೋದಿ ಹೇಳಿದರು