ನವದೆಹಲಿ(ಸೆ.14): ಬಿಹಾರಕ್ಕೆ ಕೇಂದ್ರ ಸರ್ಕಾರ ಭರ್ಜರಿ ಕೊಡುಗೆಗಳ ಪ್ಯಾಕೇಜ್ ನೀಡಿದೆ.  ನಗರಾಭಿವೃದ್ಧಿಗೆ ಸಂಬಂಧಿಸಿದ ಏಳು ಅತಿದೊಡ್ಡ ಪ್ರಾಜೆಕ್ಟ್ ಗಳಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ, ಸೆ. 15 ರಂದು ಚಾಲನೆ ಚಾಲನೆ ನೀಡಲಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದು ಇದರಲ್ಲಿ ನಾಲ್ಕು ಯೋಜನೆಗಳು ನೀರು ಸರಬರಾಜು, ಎರಡು ಒಳಚರಂಡಿ ನಿರ್ವಹಣೆಯದ್ದಾಗಿದ್ದರೆ ಇನ್ನೊಂದು ನದಿ ನಿರ್ವಹಣೆಗೆ ಸಂಬಂದಿಸಿದ್ದಾಗಿದೆ. ಈ ಎಲ್ಲ ಯೋಜನೆಗಳ ಒಟ್ಟು ಮೊತ್ತ  541  ಕೋಟಿ ರೂ.!

ಬಿಹಾರ ಚುನಾವಣಗೆ ಕಂಗನಾ ಬರಲಿದ್ದಾರಾ?

ಬಿಹಾರ ಸರ್ಕಾರದ ನಗರಾಭಿವೃದ್ಧಿ ಮತ್ತು ವಸತಿ ಇಲಾಖೆ ಈ ಎಲ್ಲ ಯೋಜನೆಗಳ ಉಸ್ತುವಾರಿ ನೋಡಿಕೊಳ್ಳಲಿದೆ. ಬಿಹಾರದ ಸಿಎಂ ನಿತೀಶ್ ಕುಮಾರ್ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ.

 ಕರ್ಮಾಲಿಚಕ್ ನ ಬೆವೂರಿನಲ್ಲಿ ನಮಾಮಿ ಗಂಗಾ ಅಡಿಯಲ್ಲಿ ಒಳಚರಂಡಿ ಮತ್ತು ನೀರು ನಿರ್ವಹಣೆ ಯೋಜನೆಗೆ ಚಾಲನೆ ದೊರೆಯಲಿದೆ.  ಅಮೃತ್ ಮಿಷನ್ ಅಡಿಯಲ್ಲಿ ನೀರು ಸರಬರಾಜು ಯೋಜನೆ ಚಾಪ್ರಾ ಮುನ್ಸಿಪಲ್ ಕಾರ್ಪೋರೇಶನ್ ಗೆ ಸೇರಿದೆ.  ದಿನದ 24  ಗಂಟೆ ಪಾಟ್ನಾ ಮತ್ತು ಚಾಪ್ರಾದ ಜನರಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗಲಿದೆ. ಜಮಾಲ್ ಪುರದ ಜನರಿಗೂ ಶುದ್ಧ ನೀರು ಲಭ್ಯವಾಗಲಿದೆ.

ಮುಜಾಫರ್ ಪುರ್ ನ ಪೂರ್ವಿ ಅಖಾಡಾ ಘಾಟ್, ಸೇದಿ ಘಾಟ್ ಮತ್ತು ಚಂದ್ವಾರಾ ಘಾಟ್ ನಲ್ಲಿ ಮೂಲ ಸೌಕರ್ಯ ಅಭಿವೃದ್ಧಿಯಾಗಲಿದೆ. ಶವಚಾಲಯ, ಭದ್ರತೆ. ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ

ಬಿಹಾದ ಹಳ್ಳಿ, ಪಟ್ಟಣ, ನಗರ ಸೇರಿದಂತೆ ಪ್ರತಿ ಜಿಲ್ಲೆಗಳಲ್ಲಿ ಮೂಲ ಸೌಕರ್ಯ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗೆ ಮೋದಿ  ಬಹು ದೊಡ್ಡ ಪ್ಲಾನ್ ರೆಡಿ ಮಾಡಿದ್ದಾರೆ. ಬರೋಬ್ಬರಿ 16,000 ಕೋಟಿ ರೂಪಾಯಿ ವೆಚ್ಚದಲ್ಲಿ ಬಿಹಾರದಲ್ಲಿ ಅಭಿವೃದ್ಧಿ ಕಾರ್ಯ ನಡೆಯಲಿದೆ ಎಂದು ಈ ಹಿಂದೆಯೇ ಪ್ರಕಟಣೆ ತಿಳಿಸಿತ್ತು.