ಎನ್‌ಡಿಎ ಒಕ್ಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಗೊಂದಲ ಹಾಗೂ ಕುತೂಹಲಕ್ಕೆ ಕೊನೆಗೂ ತೆರೆ | ಬಿಹಾರಕ್ಕೆ ಎನ್‌ಡಿಎ ಸಿಎಂ ಅಭ್ಯರ್ಥಿ ಯಾರೆಂಬ ಸುಳಿವು ಬಿಟ್ಟುಕೊಟ್ಟ ಮೋದಿ

ಪಾಡ್ನಾ(ಸೆ.14): ಬಿಹಾರದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಗೊಂದಲ ಹಾಗೂ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಹಾಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರೇ ಈ ಚುನಾವಣೆಯಲ್ಲೂ ಎನ್‌ಡಿಎ ನಾಯಕ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

‘ಬಿಹಾರವನ್ನು ಅಭಿವೃದ್ಧಿಯ ದಾರಿಯಲ್ಲಿ ಮುನ್ನಡೆಸುವಲ್ಲಿ ನಿತೀಶ್‌ ಬಹುಮುಖ್ಯ ಪಾತ್ರ ವಹಿಸಿದ್ದಾರೆ. ರಾಜ್ಯದಲ್ಲಿ ಸುಶಾಸನವಿರಬೇಕು. ಕಳೆದ 15 ವರ್ಷಗಳಲ್ಲಿ ಮಾಡಿದ ಉತ್ತಮ ಕೆಲಸಗಳು ಮುಂದುವರೆಯಬೇಕು. ನವಭಾರತ ಹಾಗೂ ನವ ಬಿಹಾರದ ನಿರ್ಮಾಣದಲ್ಲಿ ಮುಖ್ಯಮಂತ್ರಿ ದೊಡ್ಡ ಪಾತ್ರ ವಹಿಸಿದ್ದಾರೆ’ ಎಂದು ಹೇಳುವ ಮೂಲಕ ಎನ್‌ಡಿಎ ಮುಖ್ಯಮಂತ್ರಿ ಅಭ್ಯರ್ಥಿಯಾಗಲು ನಿತೀಶ್‌ ಹೆಸರಿಗೆ ಮುದ್ರೆ ಒತ್ತಿದ್ದಾರೆ.

ಇದೇ ವೇಳೆ, ಬಿಹಾರದಲ್ಲಿ ನಿರ್ಮಿಸಲಾದ ಪೆಟ್ರೋಲಿಯಂ ಕ್ಷೇತ್ರಕ್ಕೆ ಸಂಬಂಧಪಟ್ಟ900 ಕೋಟಿ ರು. ಮೌಲ್ಯದ ಮೂರು ಯೋಜನೆಗಳನ್ನು ಮೋದಿ ಭಾನುವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿದ್ದಾರೆ.