Asianet Suvarna News Asianet Suvarna News

From the India Gate: ಹರಿಯೋ ನೀರಿಗೆ 'ಗೋವಾ' ದೊಣ್ಣೆ ನಾಯಕನ ಅಪ್ಪಣೆ: ರಾಜ್ಯದಲ್ಲಿ ಸಮರ್ಥ ಭಾಷಾಂತರಕಾರರ ಕೊರತೆ..!

ದಿನಾ ಒಂದಿಲ್ಲೊಂದು ರಾಜಕೀಯ ಬೆಳವಣಿಗೆಗಳು ನಡೆಯುತ್ತಲೇ ಇರುತ್ತದೆ. ಈ ಪೈಕಿ ಅನೇಕ ಬೆಳವಣಿಗೆಗಳು ತುಂಬಾ ಸ್ವಾರಸ್ಯಕರವಾಗಿರುತ್ತವೆ. ಆದರೂ, ಅನೇಕ ಬೆಳವಣಿಗೆಗಳು ವರದಿಯಾಗೋದೇ ಇಲ್ಲ. ಕೇವಲ ಬಾಯಿಮಾತಿನಲ್ಲಿ ಮಾತ್ರ ಕೇಳಿಬರುತ್ತಿರುತ್ತದೆ. ಅಂದರೆ, ಹೆಚ್ಚಾಗಿ ಗುಸುಗುಸು ಕೇಳಿಬರುತ್ತಿರುತ್ತದೆ. ದೇಶಾದ್ಯಂತ ಇತ್ತೀಚಿನ ರಾಜಕೀಯ ಹಾಗೂ ಅಧಿಕಾರಿಶಾಹಿ ವರ್ಗದ ಇಂತಹ ಬೆಳವಣಿಗೆಗಳ ಬಗ್ಗೆ ಏಷ್ಯಾನೆಟ್‌ನ ಸಂಪೂರ್ಣ ಮಾಹಿತಿಯನ್ನೊಳಗೊಂಡ ಇಂಡಿಯಾ ಗೇಟ್ ಕಾಲಂ ಇಲ್ಲಿದೆ ನೋಡಿ.. 
 

 

 

from the india gate political gossip mahadayi issuetranslation woes madhya pradesh ash
Author
First Published Jan 23, 2023, 2:32 PM IST

(ಡೆಲ್ಲಿ ಮಂಜು/ ಗಿರೀಶ್ ಬಾಬು) 

ನಮ್ಮೂರ ಹಳ್ಳದಲ್ಲಿ ಹರಿಯೋ ನೀರಿಗೆ 'ಗೋವಾ' ದೊಣ್ಣೆ ನಾಯಕನ ಅಪ್ಪಣೆ ಬೇಕಂತೆ...!  ಇಂಥ ಪ್ರಸಂಗ ಎದುರಾಗಿದ್ದು ಮೊನ್ನೆ ಮಹದಾಯಿ ವಿಚಾರದಲ್ಲಿ. ಕರ್ನಾಟಕದಲ್ಲಿ ಚುನಾವಣಾ ರಣಕಹಳೆ ಮೊಳಗಲು ಜಾಸ್ತಿ ದಿನ ಸಮಯ ಇಲ್ಲ. ಹಾಗಾಗಿ ಡಬಲ್ ಎಂಜಿನ್‌ ಸರ್ಕಾರದ ಮುಖ್ಯಸ್ಥ ಸೆಂಟ್ರಲ್ ಗವರ್ನಮೆಂಟ್ ಮಹದಾಯಿ ನೀರು ಕುರಿತು ನೋಟಿಫಿಕೇಷನ್ ಹೊರಡಿಸ್ತು. ಈಗಾಗಲೇ ಇರೋ ಎಲ್ಲಾ ತಗಾದೆಗಳನ್ನು ತೆಗೆದು, ಒಂದೊಮ್ಮೆ ನೀರು ಕೊಟ್ರು ಬೆಳೆಯೋಕೆ ಭೂಮಿ ಇಲ್ಲದೇ ಇರೋ ಗೋವಾ, ದೇಶಕ್ಕೆಲ್ಲಾ ನಮ್ಮೂರು ರಂಗೇಗೌಡನೇ ದೊಡ್ಡ ಗೌಡ ಎನ್ನುವಂತೆ ವ್ಯಾಪ್ತಿಯೇ ಇಲ್ಲದ ವನ್ಯಜೀವಿ ಸಂರಕ್ಷಣಾ ಚೀಫ್ ವಾರ್ಡನ್ (ಗೋವಾ) ಇವರ ಕಡೆಯಿಂದ ಕರ್ನಾಟಕಕ್ಕೆ ನೋಟಿಸ್ ಕೊಡಿಸಿದೆ. ಇದನ್ನು ನೋಡಿದ ನಮ್ಮ ನೀರಾವರಿ ನಿಗಮದ ಅಧಿಕಾರಿಗಳು ನಗಬೇಕೋ‌ ಅಥವಾ ಅಳಬೇಕೋ ಗೊತ್ತಾಗದೆ, ಕೊನೆಗೆ ನಗಲು ನಮಗೆ ಸಹಾಯ ಮಾಡಿ ಅನ್ನೋ ಅರ್ಥದಲ್ಲಿ ಆ ಗೋವಾ ವಾರ್ಡನ್ ಕಳುಹಿಸಿದ ನೋಟಿಸ್‌ ನೋಡಿದ್ರಂತೆ.

ನಂಬರ್ ಒನ್-  ಗೋವಾ ವಾರ್ಡನ್‌ಗೆ ಕರ್ನಾಟಕದ ವ್ಯಾಪ್ತಿ ಬರೋದಿಲ್ಲ. ನಂಬರ್ ಟೂ- ಟ್ರಿಬ್ಯೂನಲ್ ಹಂಚಿಕೆ ಮಾಡಿರೋ ನೀರು. ನಂಬರ್ ತ್ರೀ- ವನ್ಯಜೀವಿ ಸಂರಕ್ಷಣೆಗೆ ಮೀಸಲಿಟ್ಟು ಹೆಚ್ಚಾಗಿರೋ ನೀರು ಕರ್ನಾಟಕ ಬಳಕೆ ಮಾಡಲು ಯೋಜನೆ ಮಾಡ್ತಿರೋದು. ಇಷ್ಟೆಲ್ಲಾ ಡೀಟೈಲ್‌ ಗೊತ್ತಿದ್ದರೂ ಈ ಮಿಡಲ್ ಎಂಜಿನ್ ಗೋವಾ ರಾಜ್ಯ, ನೋಟಿಸ್‌ ಕೊಟ್ಟು ಉತ್ತರ ಕೊಡಿ ಅಂತ ಕೇಳೋದು ಎಷ್ಟು ಸರಿ ಹೇಳಿ. 

ಇದನ್ನು ಓದಿ: From the India Gate: ಸಿದ್ದರಾಮಯ್ಯ ಪುತ್ರ ವ್ಯಾಮೋಹ; ಬಂಗಾಳದಲ್ಲಿ ಬಡ ಪಕ್ಷ, ಸಿರಿವಂತ ನಾಯಕರು..!

ಇರೋ ಅಷ್ಟೋ ಇಷ್ಟೋ ಭೂಮಿಯಲ್ಲಿ ಪ್ರವಾಸೋದ್ಯಮ ಜೊತೆ ರೆಸಾರ್ಟ್, ಕ್ಯಾಸಿನೋ ಅಂಥ ಮಾಡಿಕೊಂಡಿದೆ. ಸಾಲದ್ದಕ್ಕೆ ಅರಣ್ಯ ಕಡಿದು ಮಹಾರಾಷ್ಟ್ರ ಕಡೆ ಏರ್‌ಪೋರ್ಟ್‌ ಮಾಡಿಕೊಂಡಿರೋ ಗೋವಾ, ವನ್ಯಜೀವಿ ಸಂರಕ್ಷಣೆಯ ಬಗ್ಗೆ ಮಾತಾಡಿದಾಗ ನಕ್ಕು ಸುಮ್ಮನಾಗೋದು ಒಳ್ಳೆಯದು ಅಂದುಕೊಂಡ್ರಂತೆ ನಮ್ಮ ಕನ್ನಡದ ಅಧಿಕಾರಿಗಳು..!

ಸಮರ್ಥ ಭಾಷಾಂತರಕಾರರ ಕೊರತೆ..!
ಕರ್ನಾಟಕದಲ್ಲಿ ಮತ್ತೆ ಅಧಿಕಾರದ ಕನಸು ಕಾಣುತ್ತಿರುವ ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಒಂದು ಸಾಮಾನ್ಯ ಕೊರತೆ ಕಾಣಿಸಿಕೊಂಡಿದೆ. ಅದು ಸಮರ್ಥ ಭಾಷಾಂತರಕಾರರ ಕೊರತೆ!!!. ಅದು ಬಿಜೆಪಿಯಾಗಲಿ ಅಥವಾ ಕಾಂಗ್ರೆಸ್ ಆಗಿರಲಿ ಈ ಎರಡು ಪಕ್ಷಗಳಿಗೆ ಮತದಾರರನ್ನು ಒಲೈಸಲು ಪ್ರಮುಖ ಸಾಧನ ಹೈಕಮಾಂಡ್‌ನ ವರಿಷ್ಠರ ಪ್ರಭಾವ. 

ಇದನ್ನೂ ಓದಿ: From the India Gate: ಸಮಾಜವಾದಿ ಪಕ್ಷಕ್ಕೆ ಮತ್ತಷ್ಟು ಬಲ; ಭಾರತ್‌ ಜೋಡೋ ಯಾತ್ರೆ ಯಶಸ್ಸಿನ ಗುಟ್ಟು..!

ಕಾಂಗ್ರೆಸ್‌ನಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಮತ್ತು ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾರಂತಹ ನಾಯಕರು ಚುನಾವಣೆ ವೇಳೆ ಬಂದು ಮತಗಳನ್ನು ಪಕ್ಷಕ್ಕೆ ಸೆಳೆಯಬಹುದು ಎಂಬ ನಂಬಿಕೆಯನ್ನು ಎರಡೂ ಪಕ್ಷಗಳು ಹೊಂದಿವೆ. ಹೀಗಾಗಿಯೇ ಚುನಾವಣೆ ಸಮೀಪಿಸುತ್ತಿರುವಂತೆಯೇ ಈ ರಾಷ್ಟ್ರ ನಾಯಕರನ್ನು ದಮ್ಮಯ್ಯ ಗುಡ್ಡೆ ಹಾಕಿ ರಾಜ್ಯಕ್ಕೆ ಕರೆಸಲಾಗುತ್ತಿದೆ.

ಮಜಾ ಎಂದರೆ, ಈ ರಾಷ್ಟ್ರ ನಾಯಕರು ರಾಜ್ಯಕ್ಕೆ ಆಗಮಿಸಿ ಜನತೆಯನ್ನು ಉದ್ದೇಶಿಸಿ ಮಾಡುವ ಸಮರ್ಥ ಭಾಷಣವನ್ನು ಅಷ್ಟೇ ಸಮರ್ಥವಾಗಿ ಕನ್ನಡಿಗರಿಗೆ ಕೇಳಿಸುವಲ್ಲಿ ಎರಡೂ ಪಕ್ಷಗಳು ಸತತವಾಗಿ ವಿಫಲವಾಗುತ್ತಿವೆ.

ಇದನ್ನೂ ಓದಿ: India Gate ಸುಂದರಿ ಹುಡುಕಾಟದಲ್ಲಿ ಬಿಜೆಪಿ, ಜೈಲು ಪ್ರವಾಸದಲ್ಲಿ ಚೋಟಾ ನೇತಾಜಿ!

ಇದಕ್ಕೆ ಇತ್ತೀಚಿನ ಉದಾಹರಣೆ ‘ನಾ ನಾಯಕಿ’ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದ ಪ್ರಿಯಾಂಕ ಗಾಂಧಿ ಅವರ ಭಾಷಣವನ್ನು ಅನುವಾದಿಸಿದ ಲಕ್ಷ್ಮೀ ಹೆಬ್ಬಾಳಕರ್! ಪ್ರಿಯಾಂಕ ಅವರ ಮಾತುಗಳ ಸತ್ವ ಹಾಗೂ ಆಶಯ ಲಕ್ಷ್ಮೀ ಹೆಬ್ಬಾಳಕರ್ ಅವರ ಭಾಷಾಂತರದಲ್ಲಿ ಇರಲಿಲ್ಲ. ಅಷ್ಟೇ ಅಲ್ಲ, ಮೂಲಕ್ಕೂ ಭಾಷಾಂತರಕ್ಕೂ ಹಲವು ಬಾರಿ ತಾಳಮೇಳ ಇರಲಿಲ್ಲ.

ಇಂತಹ ಸಾಧನೆ ಲಕ್ಷ್ಮೀ ಅವರದ್ದು ಮಾತ್ರವಲ್ಲ. ಭಾರತ್ ಜೋಡೋ ಯಾತ್ರೆಯ ವೇಳೆ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಸುಪುತ್ರ ಅಜಯ್‌ಸಿಂಗ್ (ಮೊಳಕಾಲ್ಮೂರು ಸಮಾವೇಶದಲ್ಲಿ) ಹಾಗೂ ನಾಗರಾಜ್ ಯಾದವ್ (ಚಿತ್ರದುರ್ಗದಲ್ಲಿ) ರಾಹುಲ್ ಭಾಷಣವನ್ನು ಭಾಷಾಂತರಿಸುವ ನೆಪದಲ್ಲಿ ತಮ್ಮದೇ ಭಾಷಣ ಆರಂಭಿಸಿದ್ದ ಸೋಜಿಗ ನಡೆದಿತ್ತು.

ಇದನ್ನೂ ಓದಿ: India Gate ಸೊಸೆಯಂದಿರ ಪೈಪೋಟಿಗೆ ದೇವೇಗೌಡರು ಸುಸ್ತು, ಕಾಂಗ್ರೆಸ್‌ಗೆ ತಲೆನೋವಾದ ಗೆಹ್ಲೋಟ್ ಮಾತು!

ಇದು ಕಾಂಗ್ರೆಸ್ಸಿಗೆ ಮಾತ್ರ ಸೀಮಿತವಲ್ಲ. ಬಿಜೆಪಿ ನಂ. 2 ಅಮಿತ್ ಶಾ ಅವರಿಗೂ ಈ ಅನುಭವವಾಗಿದೆ.  ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಸಮಾರಂಭದಲ್ಲಿ ಅಮಿತ್ ಶಾ ಭಾಷಣ ಭಾಷಾಂತರಕ್ಕೆ ನಿಂತ ಬಿಜೆಪಿ ವಕ್ತಾರರೊಬ್ಬರ ಉತ್ಸಾಹ ಮೇರೆ ಮೀರಿದ್ದನ್ನು ಕಂಡ ಕೇಂದ್ರ ಗೃಹ ಸಚಿವರು ಭಾಷಣ ನಿಲ್ಲಿಸಿ, ಯಪ್ಪ, ನಾ ಹೇಳಿದ್ದು ಮಾತ್ರ ಹೇಳಿ, ನಿಮ್ಮದನ್ನು ಸೇರಿಸಿ ಹೇಳಬೇಡಿ ಎಂದು ವೇದಿಕೆಯಲ್ಲೇ ಹೇಳಿದ್ದು ಟ್ರೋಲ್ ಆಗಿತ್ತು.

ಇಂತಹ ಟ್ರೋಲ್‌ಗಳನ್ನು ತಪ್ಪಿಸಬೇಕಾದರೆ ಪಾರ್ಟ್ ಟೈಂ ಭಾಷಾಂತರಕಾರರ (ರಾಜಕಾರಣಿಗಳು ಅತಿ ಉತ್ಸಾಹದಿಂದ ನಾಯಕರ ಭಾಷಣ ಭಾಷಾಂತರಕ್ಕೆ ಮುಂದಾಗುವುದನ್ನು ತಪ್ಪಿಸಿ) ವೃತ್ತಿಪರರನ್ನು ನೇಮಿಸಬೇಕು ಎಂಬ ಕನ್ನಡಿಗರ ಕಳಕಳಿಯ ವಿನಂತಿ ಉಭಯ ಪಕ್ಷಗಳ ನಾಯಕರಿಗೆ ಅರ್ಥವಾಗಬೇಕಿದೆ!

ಇದನ್ನೂ ಓದಿ: ದೀದಿ ನಾಡಲ್ಲಿ ಧನ್ಕರ್ ತಿಕ್ಕಾಟವಿಲ್ಲ ಎಲ್ಲವೂ ಆನಂದಮಯ, ಪಿಣರಾಯಿಗೆ ರಿಲೀಫ್ ಸಮಯ!

ಮತಕ್ಕೆ ಯೋಗ್ಯ..!

ಈ ಹಿಂದೆ ಇತಿಹಾಸದ ಸಹಾಯಕ ಪ್ರಾಧ್ಯಾಪಕರಾಗಿದ್ದ ರಾಜ್ಯಸಭಾ ಸಂಸದರೊಬ್ಬರು ಮಧ್ಯಪ್ರದೇಶದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸದ್ಯದ ಮೆಚ್ಚುಗೆಯ ವ್ಯಕ್ತಿ ಎಂದು ಹೇಳಲಾಗುತ್ತಿದೆ. ಬುಡಕಟ್ಟು ಸಮುದಾಯದಿಂದ ಬಂದಿರುವ ಈ ಯುವ ನಾಯಕ, ಈಗಾಗಲೇ ತ್ವರಿತವಾದ ರಾಜಕೀಯ ವೃತ್ತಿಜೀವನದಲ್ಲಿದ್ದಾರೆ. ಅನುಕರಣೀಯ ವಾಗ್ಮಿ ಮತ್ತು ನಾಯಕತ್ವ ಕೌಶಲ್ಯವನ್ನು ಹೊಂದಿರುವ ಇವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೂ ಉತ್ತಮ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವರ್ಷ ನಡೆಯಲಿರುವ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಮುನ್ನ ಅವರನ್ನು ಕೇಂದ್ರ ಕ್ಯಾಬಿನೆಟ್ ಸ್ಥಾನಕ್ಕೆ ಪರಿಗಣಿಸಬಹುದು ಎಂಬ ಭಾರಿ ಊಹಾಪೋಹಗಳು ಕೇಳಿಬಂದಿದೆ. ಈ ನಾಯಕ ಬುಡಕಟ್ಟು ಸಮುದಾಯದಿಂದ ಬಂದಿರುವ ಕಾರಣ ಈ ಸಮುದಾಯದ ಪ್ರಾಬಲ್ಯ ಹೊಂದಿರುವ ಪಶ್ಚಿಮ ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಇದು ಉತ್ತಮ ಲಾಭವಾಗಬಹುದು ಎಂದೂ ಹೇಳಲಾಗಿದೆ. ಏಕೆಂದರೆ, ಮಧ್ಯ ಪ್ರದೇಶ ರಾಜ್ಯದ ಜನಸಂಖ್ಯೆಯ ಶೇಕಡಾ 21 ಕ್ಕಿಂತ ಹೆಚ್ಚು ಮತದಾರರು ಬುಡಕಟ್ಟು ಸಮುದಾಯದವರು ಎಂಬುದು ಗಮನಾರ್ಹ.

ಇದನ್ನೂ ಓದಿ: FROM THE INDIA GATE: ಸಂಸದ್‌ ಟಿವಿಯಲ್ಲಿ ಪಟ್ಟು, ದೇವೇಗೌಡ-ಮೋದಿ ಭೇಟಿ ಹಿಂದಿನ ಗುಟ್ಟು!

Follow Us:
Download App:
  • android
  • ios