Asianet Suvarna News Asianet Suvarna News

ಕೇರಳ ಮಾಜಿ ಸಿಎಂ ಸಮಾಧಿ ನೋಡೋಕೆ 2 ದಿನ ಪ್ಯಾಕೇಜ್: ಲೋಕಲ್‌ ಪ್ರಶಾಂತ್‌ ಕಿಶೋರರಿಂದ ಸೋತ ರಾಜ್ಯ ಬಿಜೆಪಿ ನಾಯಕರು!

ಒಂದಿಲ್ಲೊಂದು ರಾಜಕೀಯ ಬೆಳವಣಿಗೆಗಳು ಆಗಾಗ್ಗೆ ತೆರೆ ಹಿಂದೆ ನಡೆಯುತ್ತಲೇ ಇರುತ್ತದೆ. ಈ ಪೈಕಿ ಅನೇಕ ಬೆಳವಣಿಗೆಗಳು ಬೆಳಕಿಗೆ ಬರೋದೇ ಇಲ್ಲ, ಕೇವಲ ಗುಸುಗುಸು ಪಿಸುಪಿಸು ಎಂಬಂತೆ ಕೇಳಿಬರುತ್ತಿರುತ್ತದೆ. ದೇಶಾದ್ಯಂತ ಇತ್ತೀಚಿನ ಇಂತಹ ಬೆಳವಣಿಗೆಗಳ ಬಗ್ಗೆ ಏಷ್ಯಾನೆಟ್‌ನ ಸಂಪೂರ್ಣ ಮಾಹಿತಿಯನ್ನೊಳಗೊಂಡ ಇಂಡಿಯಾ ಗೇಟ್ ಕಾಲಂ ಇಲ್ಲಿದೆ..

from the india gate political gossip kerala oommen chandy rajasthan red diary karnataka bjp politics ash
Author
First Published Aug 6, 2023, 1:20 PM IST

ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ನಿಧನರಾಗಿ ಮೂರು ವಾರಗಳು ಕಳೆದಿವೆ. ಆದರೆ, ಅವರ ಮಾನವೀಯತೆ, ಸರಳತೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸುದ್ದಿಯಾಗ್ತಿದೆ. ಈಗಲೂ ಕೂಡ ಟ್ರೆಂಡಿಂಗ್ ಆಗ್ತಿದೆ. ಇನ್ನು, ಅವರ ಸಮಾಧಿಗೆ ವೀಕೆಂಡ್‌ನಲ್ಲಿ ಮಾತ್ರವಲ್ಲದೆ ವಾರದ ದಿನಗಳಲ್ಲೂ ಹೆಚ್ಚು ಜನ ಹೋಗ್ತಿದ್ದಾರೆ ಎಂಉದ ತಿಳಿದುಬಂದಿದೆ.

ಅಂತ್ಯವೇ ಇಲ್ಲದ ಹಾಗೆ ಕೇರಳ ಮಾಜಿ ಸಿಎಂ ಸಮಾಧಿ ನೋಡಲು ಸಿಕ್ಕಾಪಟ್ಟೆ ಕ್ಯೂ ಇದ್ಯಂತೆ. ಶ್ರದ್ಧಾಂಜಲಿ ಸಲ್ಲಿಸಲು ಕೇರಳದಾದ್ಯಂತ ನೂರಾರು ಜನರು ಮುಂಜಾನೆಯಿಂದ ಸಂಜೆಯವರೆಗೆ ಅವರ ಸಮಾಧಿಗೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ, ಮೌನವಾಗಿ ಧನ್ಯವಾದಗಳನ್ನು ಹೇಳಲು ಕೆಲವರು ಇಲ್ಲಿಗೆ ಹೋಗ್ತಾರೆ. ಆದರೆ ಹೆಚ್ಚಿನ ಜನ ಈ ಜನನಾಯಕನನ್ನು ಆವರಿಸಿರುವ ಸೆಳವುಗಳಿಂದ ಆಕರ್ಷಿತರಾಗುತ್ತಿದ್ದಾರೆ.

ಇದನ್ನು ಓದಿ: ಎಡ ಪಕ್ಷದವರಿಗೆ 'ಗಣೇಶ'ನಿಗಿಂತ ಮಿಡತೆ ಮೇಲೆ ಗೌರವ: ಪೈಲಟ್‌ಗಿಲ್ಲ ಕೃತಜ್ಞತೆ; ‘ಪವರ್’ ಕಳ್ಳರ ಮೇಲೆ ಗೆಹ್ಲೋಟ್‌ ಪ್ರೇಮ!

ಇದನ್ನೇ ಬಂಡವಾಳವಾಗಿಸಿಕೊಂಡ ತಿರುವನಂತಪುರಂನಲ್ಲಿರುವ ಟೂರ್ ಆಪರೇಟರ್ ಕೊಟ್ಟಾಯಂ ಜಿಲ್ಲೆಯ ಪುತ್ತುಪ್ಪಲ್ಲಿಯಲ್ಲಿರುವ ಉಮ್ಮನ್‌ ಚಾಂಡಿ ಅವರ ಸಮಾಧಿಗೆ ಭೇಟಿ ನೀಡಲು ಪ್ಯಾಕೇಜ್ ಅನ್ನು ಪ್ರಾರಂಭಿಸಿದ್ದಾರೆ. ಹತ್ತಿರದ ಚರ್ಚುಗಳನ್ನು ಒಳಗೊಂಡಿರುವ ಪ್ರಯಾಣದ ಜೊತೆಗೆ ಸಮಾಧಿ ನೋಡಲು ಎರಡು ದಿನಗಳ ಪ್ಯಾಕೇಜ್ ಕೂಡ ಇದೆ.

ಕುತೂಹಲಕಾರಿಯಾಗಿ, ಪ್ರವಾಸದ ಪ್ಯಾಕೇಜ್‌ಗೆ ಹೋಗುವ ಎಲ್ಲರಿಗೂ ಸಮಾಧಿಯಲ್ಲಿ ಬೆಳಗಿಸಲು ಮೇಣದಬತ್ತಿ, ಗೌರವ ಸಲ್ಲಿಸಲು ಹೂವುಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಶೀಘ್ರದಲ್ಲೇ ಇತರ ಟೂರ್ ಆಪರೇಟರ್‌ಗಳು ಸಾವಿರಾರು ಚಾಂಡಿ ಪ್ರೇಮಿಗಳನ್ನು ಪುತ್ತುಪ್ಪಲ್ಲಿ ಚರ್ಚ್‌ಗೆ ಸಹ ಕರೆದೊಯ್ಯುತ್ತಾರೆ.

ಇದನ್ನೂ ಓದಿ: ರಾಜ್ಯದಲ್ಲಿ ‘ಕೈ’ ಗೆಲ್ಲಿಸಿದ್ರೂ ಸುನೀಲ್‌ ಕನುಗೋಲಿಗೆ ತೆಲಂಗಾಣದಿಂದ ಗೇಟ್‌ಪಾಸ್‌: 3 ಭೂಕಂಪವಾದ್ರೂ ಇವರಿಗೆ ಎಚ್ಚರನೇ ಆಗಿಲ್ಲ!
 
ಕೆಂಪು ಡೈರಿಗೆ ಶಾಶ್ವತವಾಗಿ ಮೂಗು ದಾರ ಹಾಕಲು ಪ್ಲ್ಯಾನ್‌!
ಇತ್ತೀಚೆಗೆ ಭಾರಿ ಸುದ್ದಿ ಮಾಡಿದ ರಾಜಸ್ಥಾನದ ರಾಜೇಂದ್ರ ಗುಧಾ ತೋರಿಸಿದ ಕೆಂಪು ಡೈರಿಯನ್ನು ಶಾಶ್ವತವಾಗಿ ಮೂಗುದಾರ ಹಾಕಲು ರಾಜಸ್ಥಾನ ಸರ್ಕಾರವು ಕಸರತ್ತು ನಡೆಸುತ್ತಿದೆ. ರಾಜೇಂದ್ರ ಗುಧಾ ಅವರ ಕೆಂಪು ಡೈರಿಯಲ್ಲಿ ಮುಖ್ಯಮಂತ್ರಿಯ ಸಂಬಂಧಿಕರ ಹೆಸರು ಕಾಣಿಸಿಕೊಂಡ ಹಿನ್ನೆಲೆ ಕಾಂಗ್ರೆಸ್‌ನಲ್ಲಿ ಆತಂಕ ಹೆಚ್ಚಾದ ಹಿನ್ನೆಲೆ ಈ ಕ್ರಮ ಉದ್ಭವಿಸಿದೆ. 

ಈ ಟ್ರೇಲರ್‌ ಅನ್ನು ಬಹಿರಂಗಪಡಿಸಿದ್ದು, ಹೆಚ್ಚು ಸುದ್ದಿ ಮಾಡದಿದ್ದರೂ, ಡೈರಿಯ ಪೂರ್ಣ ಅಂಶ ಬಿಡುಗಡೆ ಮಾಡಿದರೆ ತನಗೆ ಹೆಚ್ಚಿನ ಹಾನಿಯನ್ನು ನಿರೀಕ್ಷಿಸುತ್ತಿದೆ ಕಾಂಗ್ರೆಸ್‌ ಪಕ್ಷ. ಈ ಹಿನ್ನೆಲೆ ರಾಜೇಂದ್ರ ಗುಧಾ ಮತ್ತು ಅವರ ಡೈರಿಗೆ ಮೂಗುದಾರ ಹಾಕಲು ಗೆಹ್ಲೋಟ್ ಸರ್ಕಾರ ಕಾನೂನು ಕ್ರಮವನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ. ರಾಜಸ್ಥಾನ ರಾಜಕೀಯಕ್ಕೆ ಮತ್ತೆ ಪುಟಿದೇಳಲು ಡೈರಿ ಮತ್ತು ಅದರ ರಹಸ್ಯಗಳ ಮೇಲೆ ಹೆಚ್ಚು ಅವಲಂಬಿತನಾಗಿರೋ ರಾಜೇಂದ್ರ ಗುಧಾ ಇದಕ್ಕೆಯಾವ ಪ್ರತಕ್ರಿಯೆ ನೀಡುತ್ತಾರೋ ಅಥವಾ ಅವರು ಮುಂದ ಯಾವ ಹೆಜ್ಜೆ ಇಡುತ್ತಾರೋ ಅನ್ನೋದನ್ನು ಕಾದುನೋಡಬೇಕಿದೆ. 

ಇದನ್ನೂ ಓದಿ: ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಚಾಟ್‌ ಜಿಪಿಟಿ ಫಾರ್ಮುಲಾ: ತಮಿಳುನಾಡಲ್ಲಿ ಅಣ್ಣಾಮಲೈ ‘ಚೆನ್ನೈ ಎಕ್ಸ್‌ಪ್ರೆಸ್‌’ ರಾಜಕೀಯ!

ಲೋಕಲ್ ಪ್ರಶಾಂತ್ ಕಿಶೋರರು..!

ಎಲೆಕ್ಷನ್ ಆಯ್ತು. ಸೋಲು-ಗೆಲುವು ಎಲ್ಲವೂ ಖುಲಂಖುಲಾ ಗೊತ್ತಾಗಿದ್ದೂ ಆಯ್ತು. ಇಷ್ಟರ ನಡುವೆ ಯಪ್ಪೋ ಎಂಬತೆ ಸೋತು ಮನೆ ಸೇರಿದ್ದೂ ಆಯ್ತು. ಆದ್ರೆ ಲೋಕಲ್ ತಂತ್ರಗಾರರು ಕೊಟ್ಟ ಲೆಕ್ಕ, ಜಾತಿ ಸಮೀಕರಣ, ಕೊಡು ಕೊಳ್ಳುವಿಕೆ ಸಟ್ರಾಜಿಗಳು ಮಾತ್ರ ಮರೆಯೋಕೆ ಸಾಧ್ಯವೇ ಇಲ್ಲ ನೋಡಿ.

ಹೀಗೆ ಆರಾಮಾಗಿ ಮಾತಿಗೆ ಸಿಕ್ಕ ಸೋತ ಬಿಜೆಪಿ ಅಭ್ಯರ್ಥಿಯೊಬ್ಬರು. `ಲೋಕಲ್ ಪ್ರಶಾಂತ್ ಕಿಶೋರ್'ಗಳ ಆಟವನ್ನು ವಿವರಿಸುತ್ತಲೇ ಇದ್ರು. ಅವರು ಕೊಟ್ಟ ಟಾರ್ಗೆಟ್, ಗೆಲುವಿನ ಅಂತರ, ಆ ಮನೆತನದವರು ಈ ಬಾರಿ ನಮ್ಮ ಹಿಂದೆ ನಿಂತವರು. ಈ ಮನೆತನದವರು ನಮ್ಮ ಹಿಂದೆ ನಿಂತಿದ್ದಾರೆ. ಪಕ್ಕಾ ಲೆಕ್ಕಾ ಅಣ್ಣಾ... ಮಿನಿಮಮ್ 2 ಸಾವಿರ ಓಟು ಲೀಡು ನಮ್ಮದೇ ಅಂಥ ನಂಬಿಸಿದ್ರು. ಆ ಅಭ್ಯರ್ಥಿ ನಂಬಿದ್ದ 10 ಮಂದಿಯಿಂದ್ಲೂ ಇದೇ ವಾಗ್ದಾನ. ಮೇಜು ಕುಟ್ಟು ವಿನ್ನಿಂಗ್ ಕೌಂಟ್, ಗೆಲ್ಲುವ ಲೀಡ್ ಕೂಡ ಮತದಾನಕ್ಕೆ ಎರಡು ದಿನ ಮುಂಚೆ ಹೇಳಿದ್ರಂತೆ.

ಇದನ್ನೂ ಓದಿ: ಈ ಪಕ್ಷದ ಸಭೆಗಳಲ್ಲಿ ಮೊಬೈಲ್‌ ಬ್ಯಾನ್ ಆತಂಕ; ಕಾಂಗ್ರೆಸ್‌ - ಎಡಪಕ್ಷದ ನಡುವೆ ದಿಲ್ಲಿಯಲ್ಲಿ ದೋಸ್ತಿ, ಕೇರಳದಲ್ಲಿ ಕುಸ್ತಿ!

ತಮ್ಮ ನಾಯಕನ ಮುಂದೆ ಆ `ಕಿಶೋರರ' ಜೋಷ್ ಎಷ್ಟು ಇತ್ತು ಅಂದ್ರೆ ಅವರ ಬೂತ್ ಅಥವಾ ಊರಿನ ಮತದಾರರ ಸಂಖ್ಯೆಗಿಂತ ಇವರ ಗೆಲುವಿನ ಕೌಂಟ್ ಜಾಸ್ತಿ ಇತ್ತಂತೆ. ಅಷ್ಟಕ್ಕೂ ಐದಾರು ಚುನಾವಣೆಗಳನ್ನು ನೋಡಿದ್ದ ಆ ನಾಯಕ, ಈ ಲೋಕಲ್ ಕಿಶೋರರ ಲೆಕ್ಕವನ್ನು ಅರ್ಧಕ್ಕೆ ತುಂಡು ಹಾಕಿ, ಮನಸ್ಸಿನಲ್ಲೇ ತಮ್ಮ ಮೈಂಡ್ ಡೇರಿಗೆ ಸೇರಿಸಿಕೊಳ್ತಾ ಇದ್ರಂತೆ. ಬಂದವರೆಲ್ಲಾ ಅದೇ ಗೆಲುವಿನ ಮಾತು, ಕೆಲಸ ಅವರ ಊರಿಗೆ ಮಾಡಿಸಿಕೊಂಡವರೆಲ್ಲಾ ಅದೇ ಗೆಲುವಿನ ಲೆಕ್ಕ. ಬಟ್ ರಿಸಲ್ಟ್ ಬಂದಾಗ ಮಾತ್ರ... ಬಿಜೆಪಿ ಪಾಪುಲರ್ ಅಭ್ಯರ್ಥಿಗೆ `ಸೋಲು'.

ಆಯ್ತು ಮತದಾರರ ಪ್ರಭುವಿನ ಲೆಕ್ಕ ಎಲ್ಲರೂ ಒಪ್ಪಲೇ ಬೇಕು ಅಂಥ ತೀರ್ಮಾನಿಸಿ, ತಾವಾಯ್ತು ತಮ್ಮ ಪಕ್ಷದ ಕೆಲಸ ಆಯ್ತು ಅಂಥ ಇದ್ದ ಆ ಮಾಜಿ ಶಾಸಕ, ಹೋಗ್ಲಿ ನಾವು ಮಾಡಿಕೊಂಡ ಎಡವಟ್ಟು ಏನಪ್ಪ ಅಂಥ ಚೆಕ್ ಮಾಡೋಣ ಅಂದ್ರೆ ಅದೇ ಲೋಕಲ್ ಕಿಶೋರರು ಸಿಕ್ಕಾಗ ಮಾತಿಗೆಳದ್ರೆ, ಅದೇ ಅಣ್ಣೋ ಈ ಬಾರಿ ನಮ್ಮ ಸಮುದಾಯದವರು ಸಿಎಂ ಆಗ್ತಾರೆ ಮತ್ತೆ ನಮ್ಮವರು ಆಗೋದಕ್ಕೆ ಅದೆಷ್ಟು ವರ್ಷ ಬೇಕೋ ಗೊತ್ತಿಲ್ಲ ಅಂಥ `ಕೈ' ಎತ್ತಿಬಿಟ್ಟವರಣ್ಣ ಅಂದ್ರಂತೆ. ಈಗ ಹೇಳಿ ಲೋಕಲ್ ಕಿಶೋರರನ್ನು ನಂಬೋದೋ ಅಥವಾ ಬಿಡೋದೋ.. ಇದು ಚುನಾವಣೆಯ ಕಥೆ-ವ್ಯಥೆ..

ಇದನ್ನೂ ಓದಿ: ಪತ್ರಕರ್ತರಂದ್ರೆ ರಾಜ್ಯದ ಈ ರಾಜಕಾರಣಿಗೆ ಭಯ, ಕೇರಳದಲ್ಲಿ ಆಪರೇಷನ್ ಶಕ್ತಿಗೆ ಥರಗುಟ್ಟಿದ ಎಡಪಕ್ಷ!

Follow Us:
Download App:
  • android
  • ios