ಈ ಪಕ್ಷದ ಸಭೆಗಳಲ್ಲಿ ಮೊಬೈಲ್‌ ಬ್ಯಾನ್ ಆತಂಕ; ಕಾಂಗ್ರೆಸ್‌ - ಎಡಪಕ್ಷದ ನಡುವೆ ದಿಲ್ಲಿಯಲ್ಲಿ ದೋಸ್ತಿ, ಕೇರಳದಲ್ಲಿ ಕುಸ್ತಿ!

ಒಂದಿಲ್ಲೊಂದು ರಾಜಕೀಯ ಬೆಳವಣಿಗೆಗಳು ಆಗಾಗ್ಗೆ ತೆರೆ ಹಿಂದೆ ನಡೆಯುತ್ತಲೇ ಇರುತ್ತದೆ. ಈ ಪೈಕಿ ಅನೇಕ ಬೆಳವಣಿಗೆಗಳು ಬೆಳಕಿಗೆ ಬರೋದೇ ಇಲ್ಲ, ಕೇವಲ ಗುಸುಗುಸು ಪಿಸುಪಿಸು ಎಂಬಂತೆ ಕೇಳಿಬರುತ್ತಿರುತ್ತದೆ. ದೇಶಾದ್ಯಂತ ಇತ್ತೀಚಿನ ಇಂತಹ ಬೆಳವಣಿಗೆಗಳ ಬಗ್ಗೆ ಏಷ್ಯಾನೆಟ್‌ನ ಸಂಪೂರ್ಣ ಮಾಹಿತಿಯನ್ನೊಳಗೊಂಡ ಇಂಡಿಯಾ ಗೇಟ್ ಕಾಲಂ ಇಲ್ಲಿದೆ..

from the india gate political gossip kerala congress left rajasthan bjp leader uttar pradesh mobile ban in meetings ash

ದಿಲ್ಲಿಯಲ್ಲಿ ದೋಸ್ತಿ, ಕೇರಳದಲ್ಲಿ ಕುಸ್ತಿ 

ಫುಟ್‌ಬಾಲ್‌ನಲ್ಲಿ, ಸಾಮಾನ್ಯವಾಗಿ ಡಿಫೆಂಡರ್‌ ಟ್ಯಾಕಲ್‌ ಮಾಡುವ ಸಮಯವು ತಂಡದ ಗೆಲುವು ಮತ್ತು ಸೋಲಿನ ನಡುವೆ ನಿಂತಿರುತ್ತದೆ. ರಾಜಕೀಯ ಸಹ ಇದಕ್ಕಿಂತ ಭಿನ್ನವಾಗಿಲ್ಲ. ಪ್ರಮುಖ ರಾಜಕಾರಣಿಯ ಸಮಯೋಚಿತ ಹಸ್ತಕ್ಷೇಪವು ಚರ್ಚೆಯ ಹಾದಿಯನ್ನು ಬದಲಾಯಿಸುವುದನ್ನು ಅಥವಾ ವಿವಾದದ ಪ್ರವೃತ್ತಿಯನ್ನು ಬದಲಾಯಿಸುವುದನ್ನು ನಾವು ಹೆಚ್ಚಾಗಿ ನೋಡಿದ್ದೇವೆ. 

ಕೇರಳದಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷರು ಲಂಚದ ಹಗರಣದಲ್ಲಿ ಸಿಲುಕಿದ ನಂತರ ಕಾಂಗ್ರೆಸ್‌ ಈ ಪ್ರಕರಣದಿಂದ ಹೆಚ್ಚು ಮುಜುಗರ ಆಗದಂತೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಅಂದರೆ, ಈ ಪ್ರಕರಣವನ್ನು ಟ್ಯಾಕಲ್‌ ಮಾಡಲು ಎರ್ನಾಕುಲಂ ಸಂಸದ ಹೈಬಿ ಈಡನ್ ಡಿಫೆಂಡರ್‌ ಆಗುವ ಯತ್ನ ನಡೆಸಿದ್ದಾರೆ. 

ಇದನ್ನು ಓದಿ: ಪತ್ರಕರ್ತರಂದ್ರೆ ರಾಜ್ಯದ ಈ ರಾಜಕಾರಣಿಗೆ ಭಯ, ಕೇರಳದಲ್ಲಿ ಆಪರೇಷನ್ ಶಕ್ತಿಗೆ ಥರಗುಟ್ಟಿದ ಎಡಪಕ್ಷ!

ಪೂರ್ವ-ಯೋಜಿತ ಕ್ರಮವಲ್ಲದಿದ್ದರೂ, ಕೇರಳದ ರಾಜಧಾನಿಯನ್ನು ತಿರುವನಂತಪುರಂನಿಂದ ಎರ್ನಾಕುಲಂಗೆ ಸ್ಥಳಾಂತರಿಸುವ ಸಾಧ್ಯತೆಯ ಬಗ್ಗೆ  ಸಂಸತ್ತಿನಲ್ಲಿ ಈಡನ್ ಅವರು ಖಾಸಗಿ ಮಸೂದೆಯನ್ನು ಮಂಡಿಸಿದ್ದಾರೆ. ಇದು ಕೇರಳದ ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್ ವಿರುದ್ಧದ ಗದ್ದಲವನ್ನು ಸಂಪೂರ್ಣವಾಗಿ ಮೌನಗೊಳಿಸಿದ್ದು, ಆರೋಪಗಳ ಮೋಡಗಳು ಇದ್ದಕ್ಕಿದ್ದಂತೆ ಮಾಯವಾದವು. ಪಕ್ಷದೊಳಗಿನ ನಾಯಕರು ಕೂಡ ಈಡನ್ ಅನ್ನು ಪ್ರತ್ಯೇಕವಾಗಿಸಲು ಭಿನ್ನಮತವನ್ನೂ ಬಿಟ್ಟು ಒಂದಾಗಿದ್ದಾರೆ. 

ಕುತೂಹಲಕಾರಿಯಾಗಿ, ಈಡನ್‌ನ ಖಾಸಗಿ ಮಸೂದೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧದ ದಾಳಿಯನ್ನು ತಡೆಯಲು ಪ್ರತಿಪಕ್ಷಗಳು ನಿರ್ಧರಿಸಿವೆ. ಈ ಮೂಲಕ ದಿಲ್ಲಿಯಲ್ಲಿ ದೋಸ್ತಿ, ಕೇರಳದಲ್ಲಿ ಕುಸ್ತಿ ಎಂಬ ಪುರಾತನ ವಾಕ್ಚಾತುರ್ಯದಿಂದ ನಡೆಯುತ್ತಿರುವ ರಾಜಕೀಯ ಹೊಂದಾಣಿಕೆಯನ್ನು ಶಂಕಿಸುವುದನ್ನು ದೂಷಿಸಲಾಗಲ್ಲ.

ಇದನ್ನೂ ಓದಿ: ತೆಲಂಗಾಣದಲ್ಲಿ ಡಿಕೆ ‘ಶಿವ’ ತಾಂಡವ; ಕೈಗೊಂಬೆಯಾದ್ರು ಖರ್ಗೆ: ತಮಿಳ್ನಾಡು ರಾಜಕೀಯಕ್ಕೆ ಧುಮುಕಲು ದಳಪತಿ ರೆಡಿ
 
ಮೊಬೈಲ್ ಬ್ಯಾನ್

ಉತ್ತರ ಪ್ರದೇಶದ ಪ್ರಮುಖ ಪಕ್ಷವೊಂದರ ಮುಖ್ಯಸ್ಥರಿಗೆ ಫೋನ್‌ ಆತಂಕ ಕಾಡುತ್ತಿದೆ. ``ವಿಶ್ವಾಸಾರ್ಹ'' ನಾಯಕರಿಗೆ ತಮ್ಮ ಸೆಲ್‌ಫೋನ್‌ಗಳನ್ನು ಕೊಂಡೊಯ್ಯಲು ಅವಕಾಶ ನೀಡಿದರೆ ಕೋರ್ ಕಮಿಟಿ ಸಭೆಗಳ ನಡಾವಳಿಗಳು ಸೋರಿಕೆಯಾಗುತ್ತವೆ ಎಂದು ಭಯಪಡುತ್ತಿದ್ದಾರೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಯುವ ನಾಯಕ ಬಹಳ ಸೂಕ್ಷ್ಮವಾಗಿದ್ದಾರೆ. ಸೂಕ್ಷ್ಮ ಸಭೆಗಳ ವಿಡಿಯೋ ಮತ್ತು ಆಡಿಯೋ ರೆಕಾರ್ಡಿಂಗ್ ಸೋರಿಕೆಯಾದ ನಂತರ ಅವರು ಮುಜುಗರವನ್ನು ಎದುರಿಸಿದ್ದು, ವಿಭೀಷಣನ ಪಾತ್ರವನ್ನು ನಿರ್ವಹಿಸಿದ ಮತ್ತು ಪಕ್ಷದ ಆಂತರಿಕ ರಹಸ್ಯಗಳನ್ನು ವಿರೋಧ ಪಕ್ಷಕ್ಕೆ ಮಾಹಿತಿ ನೀಡಿದ ಆ ``ಒಬ್ಬ" ನಾಯಕನನ್ನು ಈಗ ಕಾರ್ಯಕರ್ತರು ದೂಷಿಸುತ್ತಿದ್ದಾರೆ.

ಇನ್ನು, ಸೀಟುಗಳ ಆಮಿಷವೊಡ್ಡಿ ಇನ್ನಷ್ಟು ವಿಭೀಷಣರನ್ನು ಹುಟ್ಟು ಹಾಕಬಹುದು. ಈ ಹಿನ್ನೆಲೆ ಲೋಕಸಭೆ ಚುನಾವಣೆ ಮುಗಿಯುವವರೆಗೆ ಪಾದರಕ್ಷೆಗಳ ಜೊತೆಗೆ ಮೊಬೈಲ್ ಫೋನ್‌ಗಳನ್ನು ಹೊರಗೆ ಇಡಬೇಕಾಗುತ್ತದೆ ಎಂದು ಯುವ ನಾಯಕ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ: From The India Gate: ಡಿಎಂಕೆ ವಾಷಿಂಗ್ ಮಷೀನ್‌ಗೆ ಸ್ವಚ್ಛವಾದ ಶಾಸಕ, ತಮಿಳ್ನಾಡಲ್ಲಿ IAS vs IPS ರಾಜಕೀಯ ತಂತ್ರಗಾರಿಕೆ!

ಮಿಷನ್‌ ಇಂಪಾಸಿಬಲ್‌
ಬಿಜೆಪಿಯ ಕೇಂದ್ರ ನಾಯಕತ್ವವು ರಾಜಸ್ಥಾನದಲ್ಲಿ ಮುಂಬರುವ ಚುನಾವಣೆಯಲ್ಲಿ ರಾಣಿಯನ್ನು ಪ್ರಮುಖ ನಾಯಕಿಯಾಗಿ ಅಭಿಷೇಕಿಸಿದ ನಂತರ ಅವರ ನಿರೀಕ್ಷೆಗಳು ಭಗ್ನಗೊಂಡವು. ಇದರೊಂದಿಗೆ, ಜನಸಮೂಹವನ್ನು ಸಂಘಟಿಸಲು ಮತ್ತು ತ್ವರಿತ ಪ್ರತಿಭಟನೆಗಳನ್ನು ನಡೆಸಲು ಹೆಸರುವಾಸಿಯಾದ ನಾಯಕನ ಸ್ಥಿತಿ ಯಾರಿಗೂ ಹೇಳಿಕೊಳ್ಳದಾಗಿದೆ.

ಇತ್ತೀಚಿನ ವರ್ಷಗಳಲ್ಲಿ, ನೇತಾಜಿ ಅವರು ಕೇಂದ್ರ ಸಚಿವ ಸಂಪುಟಕ್ಕೆ ಅಥವಾ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಪಾತ್ರವನ್ನು ನೀಡುವ ಭರವಸೆಯೊಂದಿಗೆ ಅನೇಕ ಪ್ರತಿಭಟನೆಗಳನ್ನು ಆಯೋಜಿಸಿದರು ಮತ್ತು ನಡೆಸಿದರು. ಆದರೆ ಇತ್ತೀಚೆಗೆ ಉದಯಪುರದಲ್ಲಿ ಬಿಜೆಪಿಯ ವರಿಷ್ಠರು ತಮ್ಮನ್ನು ಕಡೆಗಣಿಸುತ್ತಿರುವುದನ್ನು ನೋಡಿದ ನಂತರ, ನೇತಾಜಿ ಅವರು ಬದಿಗೆ ಸರಿಯುವ ಅಪಾಯವನ್ನು ಗ್ರಹಿಸಿದ್ದಾರೆ.

ಇದನ್ನೂ ಓದಿ: From the india gate: ರಾಣಿ ಜೇನು ಭೇಟಿಯಾದ ಡಿಕೆಶಿ, ಕೇರಳದಲ್ಲಿ ಯಥಾ ರಾಜ ತಥಾ ಪ್ರಜಾ!

ಈ ಹಿನ್ನೆಲೆ ಮುಂದಿನ ಸೂಚನೆ ಬರುವವರೆಗೂ ಯಾವುದೇ ಪ್ರತಿಭಟನೆ ನಡೆಸದಂತೆ ತಮ್ಮ ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಮಿಷನ್‌ ಇಂಪಾಸಿಬಲ್‌ನಲ್ಲಿ ಶಕ್ತಿಯನ್ನು ಏಕೆ ಹೂಡಿಕೆ ಮಾಡುವುದು ಎಂಬುದು ಅವರ ಆಲೋಚನೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: From the India Gate: ಸೈಲೆಂಟ್‌ ಆದ ಕರ್ನಾಟಕ ಸಿಂಗಂ, ತೆಲಂಗಾಣ ಸಿಎಂ ಕನಸಿನ ಕಾರು ಪಂಕ್ಚರ್‌!

Latest Videos
Follow Us:
Download App:
  • android
  • ios