ಬುಡಕಟ್ಟು ಸಮುದಾಯದಲ್ಲಿ ಬೆಳೆದ ಭಾಸ್ಕರ್‌ ಹಲಾಮಿ ಈಗ ಅಮೆರಿಕದ ಮೇರಿಲ್ಯಾಂಡ್‌ನ ಸಿರ್ನಾಒಮಿಕ್ಸ್‌ ಇಂಕ್‌ ಎಂಬ ಬಯೋಫಾರ್ಮಾಸ್ಯುಟಿಕಲ್‌ ಕಂಪನಿಯಲ್ಲಿ ಸಂಶೋಧನಾ ಹಾಗೂ ಅಭಿವೃದ್ಧಿ ವಿಭಾಗದಲ್ಲಿ ಹಿರಿಯ ವಿಜ್ಞಾನಿಯಾಗಿದ್ದಾರೆ.

ಬಡತನ (Poverty) ಅನ್ನೋದು ಹಲವರಿಗೆ ತಟ್ಟಿದ ಶಾಪ ಅನ್ನೋ ಮಾತಿದೆ. ಹಲವರು ಬಡತನದಲ್ಲಿ ಬೆಂದು, ಹಾಗೂ ನರಳುತ್ತಲೇ ಇರುತ್ತಾರೆ. ಮಾನಸಿಕವಾಗಿಯೂ ಕುಗ್ಗಿಹೋಗುತ್ತಾರೆ. ಆದರೆ, ಬಡತನದಲ್ಲೇ ಬೆಳೆದು ದೊಡ್ಡವರಾದ ಮೇಲೆ ಸಾಧನೆ ಮಾಡಿದವರು ಸಹ ಹಲವರಿರುತ್ತಾರೆ. ಅಂತಹ ಸ್ಫೂರ್ತಿದಾಯಕ ಕಥೆಯೊಂದನ್ನು ನಾವು ಹೇಳ್ತೀವಿ ನೋಡಿ.. ಮಹಾರಾಷ್ಟ್ರದ (Maharashtra) ಗಡ್‌ಚಿರೋಲಿ (Gadchiroli) ಭಾಗದ ಕುಗ್ರಾಮವೊಂದರಲ್ಲಿ ಬೆಳೆದ ಇವರು ಈಗ ಅಮೆರಿಕದ (United States of America) ಹಿರಿಯ ವಿಜ್ಞಾನಿಯಾಗಿದ್ದಾರೆ (Senior Scientist). ಅಂದು ಒಂದು ಹೊತ್ತು ಊಟಕ್ಕಾಗಿ ಪರದಾಡ್ತಿದ್ದ ಇವರು ಈಗ ಅಮೆರಿಕದಲ್ಲಿ ಐಷಾರಾಮಿ ಜೀವನ ನಡೆಸ್ತಿದ್ದಾರೆ. ಭಾಸ್ಕರ್‌ ಹಲಾಮಿ (Bhaskar Halami) ಎಂಬ ಈ ವಿಜ್ಞಾನಿ ಸಂಪೂರ್ಣ ಕಠಿಣ ಪರಿಶ್ರಮ ಮತ್ತು ನಿರ್ಣಯಕ್ಕೆ ಒಂದು ಉತ್ತಮ ಉದಾಹರಣೆ ಎಂದು ಹೇಳಬಹುದು. 

ಬುಡಕಟ್ಟು ಸಮುದಾಯದಲ್ಲಿ ಬೆಳೆದ ಭಾಸ್ಕರ್‌ ಹಲಾಮಿ ಈಗ ಅಮೆರಿಕದ ಮೇರಿಲ್ಯಾಂಡ್‌ನ ಸಿರ್ನಾಒಮಿಕ್ಸ್‌ ಇಂಕ್‌ ಎಂಬ ಬಯೋಫಾರ್ಮಾಸ್ಯುಟಿಕಲ್‌ ಕಂಪನಿಯಲ್ಲಿ ಸಂಶೋಧನಾ ಹಾಗೂ ಅಭಿವೃದ್ಧಿ ವಿಭಾಗದಲ್ಲಿ ಹಿರಿಯ ವಿಜ್ಞಾನಿಯಾಗಿದ್ದಾರೆ. ಜೆನೆಟಿಕ್‌ ಔ‍ಷಧಿಗಳ ಸಂಶೋಧನೆಯನ್ನು ಈ ಕಂಪನಿ ನಡೆಸುತ್ತದೆ. ಇದರಲ್ಲಿ ಆರ್‌ಎನ್‌ಎ ಉತ್ಪಾದನೆ ಹಾಗೂ ಸಂಶ್ಲೇಷಣೆ ವಿಭಾಗವನ್ನು ಭಾಸ್ಕರ್‌ ಹಲಾಮಿ ನೋಡಿಕೊಳ್ಳುತ್ತಿದ್ದಾರೆ. 

ಇದನ್ನು ಓದಿ: ಐಎಎಸ್ ಅಧಿಕಾರಿಯ ಆಶೀರ್ವದಿಸಿದ ಹಿರಿಜೀವ... ಫೋಟೋ ವೈರಲ್

ಅವರು ಯಶಸ್ವಿ ವಿಜ್ಞಾನಿಯಾಗಲು ತುಂಬಾ ಕಷ್ಟಪಟ್ಟಿದ್ದು, ಹಲವು ಅಡೆತಡೆಗಳನ್ನು ಎದುರಿಸಿದ್ದಾರೆ. ಇನ್ನು, ಚಿರ್ಚಾಡಿಯಿಂದ ವಿಜ್ಞಾನ ವಿಭಾಗದಲ್ಲಿ ಪದವಿ ಪಡೆದ ಮೊದಲಿಗರು ಹಾಗೂ ಅವರು ಹುಟ್ಟಿದ ಗ್ರಾಮದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಮಾಡಿದ ಮೊದಲ ವ್ಯಕ್ತಿ ಸಹ ಇವರೇ.

ಈ ಬಗ್ಗೆ ಸುದ್ದಿಸಂಸ್ಥೆ ಪಿಟಿಐಗೆ ತನ್ನ ಬಾಲ್ಯದ ಬಗ್ಗೆ ಭಾಸ್ಕರ್ ಹಲಾಮಿ ಹೇಳಿಕೊಂಡಿರುವುದು ಹೀಗೆ.. ತನ್ನ ಬಾಲ್ಯದಲ್ಲಿ ತುಂಬಾ ಕಡಿಮೆ ದುಡ್ಡಲ್ಲಿ ತನ್ನ ಕುಟುಂಬ ಜೀವನ ನಡೆಸುತ್ತಿತ್ತು ಎಂದು ಅವರು ಸ್ಮಸಿಕೊಂಡಿದ್ದಾರೆ. ಒಂದು ಹೊತ್ತು ಸರಿಯಾಗಿ ಊಟ ಸಿಗಲು ಸಹ ನಾವು ಪರದಾಡುತ್ತಿದ್ದೆವು. ಆಹಾರ ಹಾಗೂ ಕೆಲಸವಿಲ್ಲದ ಆ ದಿನಗಳಲ್ಲಿ ನಾವು ಹೇಗೆ ಬದುಕಿ ಉಳಿದೆವು ಎಂಬುದನ್ನು ನಮ್ಮ ಪೋಷಕರು ಈಗಲೂ ಸಹ ಆಶ್ಚರ್ಯ ಪಡುತ್ತಾರೆ ಎಂದು 44 ವರ್ಷದ ವಿಜ್ಞಾನಿ ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ: ಐಎಎಸ್ ಟಾಪರ್ ಸೃಷ್ಟಿ ದೇಶಮುಖ್ ಮಾರ್ಕ್ಸ್ ಕಾರ್ಡ್ ವೈರಲ್!

ವರ್ಷದ ಕೆಲವು ತಿಂಗಳುಗಳಲ್ಲಿ ಅದರಲ್ಲೂ ಮಳೆಗಾಲದಲ್ಲಿ ಪರಿಸ್ಥಿತಿ ತುಂಬಾ ಕೆಟ್ಟದಾಗಿತ್ತು. ನಮ್ಮ ಕುಟುಂಬದ ಬಳಿ ಇದ್ದ ಸಣ್ಣ ಜಾಗದಲ್ಲಿ ಯಾವ ಬೆಳೆಯೂ ಇರಲಿಲ್ಲ ಹಾಗೂ ಕೆಲಸವೂ ಇರುತ್ತಿರಲಿಲ್ಲ ಎಂದೂ ಅವರು ನೆನೆಪಿಸಿಕೊಂಡಿದ್ದಾರೆ. ನಾವು ಮಹುವಾ ಹೂವುಗಳನ್ನು ಬೇಯಿಸುತ್ತಿದ್ದೆವು, ಅದನ್ನು ತಿನ್ನುವುದು ಹಾಗೂ ಜೀರ್ಣ ಮಾಡಿಕೊಳ್ಳುವುದು ಸುಲಭವಾಗಿರಲಿಲ್ಲ. ಇನ್ನು, ನಾವು ಕಾಡು ಅಕ್ಕಿ (ಪರ್ಸೋದ್‌) ಹಾಗೂ ಅಕ್ಕಿ ಹಿಟ್ಟನ್ನು ಬೇಯಿಸಿ ನೀರಿನಲ್ಲಿ ಹಾಕಿಕೊಂಡು ಕುಡಿದು ನಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು. ನಾವು ಮಾತ್ರ ಅಲ್ಲ, ನಮ್ಮ ಗ್ರಾಮದ ಶೇ. 90 ರಷ್ಟು ಜನ ಸಹ ಅದೇ ರೀತಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು ಎಂದೂ ಭಾಸ್ಕರ್‌ ಹಲಾಮಿ ಹೇಳಿದ್ದಾರೆ. 

400 - 500 ಕುಟುಂಬದ ಗ್ರಾಮವಾಗಿರುವ ಚಿರ್ಚಾಡಿಯಲ್ಲಿ ಹಲಾಮಿಯ ಪೋಷಕರು ತಮ್ಮ ಸಣ್ಣ ಜಾಗದಲ್ಲಿ ಬೆಳೆಯುವುದು ಮಾತ್ರವಲ್ಲದೆ ಮನೆಗೆಲಸರಾಗಿಯೂ ದುಡಿಯುತ್ತಿದ್ದರು ಎಂದೂ ತಿಳಿದುಬಂದಿದೆ. ಅವರ ತಂದೆ ಶಿಕ್ಷಣದ ಮಹತ್ವವನ್ನು ಅರಿತುಕೊಂಡು ಅವರ ಎಲ್ಲ ಮಕ್ಕಳು ಹೆಚ್ಚು ಓದುವಂತೆ ನೋಡಿಕೊಂಡರು ಎಂದೂ ಭಾಸ್ಕರ್‌ ಹೇಳಿದ್ದಾರೆ. 

ಇದನ್ನೂ ಓದಿ: ದಾವಣಗೆರೆ ವಿವಿಯ ಆರು ವಿಜ್ಞಾನಿಗಳಿಗೆ ಜಾಗತಿಕ ಮಟ್ಟದಲ್ಲಿ ಸ್ಥಾನ!

ಗಡ್‌ಚಿರೋಲಿಯ ಕಾಲೇಜೊಂದರಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಪಡೆದ ಭಾಸ್ಕರ್‌ ಹಲಾಮಿ, ನಾಗ್ಪುರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಹಾಗೂ, ಅಮೆರಿಕದಲ್ಲಿ ಪಿಎಚ್‌ಡಿಯನ್ನೂ ಮಾಡಿದರು. ಬಳಿಕ 2003ರಲ್ಲಿ ಅಸಿಸ್ಟೆಂಟ್‌ ಪ್ರೊಫೆಸರ್ ಆಗುವ ಮೂಲಕ ತಮ್ಮ ಉದ್ಯೋಗ ಆರಂಭಿಸಿದ ಭಾಸ್ಕರ್‌ ಹಲಾಮಿ ಈಗ ಅಮೆರಿಕದಲ್ಲಿ ಹಿರಿಯ ವಿಜ್ಞಾನಿಯಾಗಿದ್ದಾರೆ.