ದಾವಣಗೆರೆ ವಿವಿಯ ಆರು ವಿಜ್ಞಾನಿಗಳಿಗೆ ಜಾಗತಿಕ ಮಟ್ಟದಲ್ಲಿ ಸ್ಥಾನ!
ದಾವಣಗೆರೆ ವಿವಿ 2009ರಲ್ಲಿ ಪ್ರಾರಂಭವಾಗಿ 2022ರಲ್ಲಿ ಹೆಮ್ಮೆ ಪಡುವಂತಹ ಸಾಧನೆ ಮಾಡಿದೆ. ಮೂರು ಜನ ಗಣಿತ ವಿಜ್ಞಾನಿಗಳು ಜಗತ್ತಿನ ಶೇ.2 ರಷ್ಟು ವಿಜ್ಞಾನಿಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವುದು ಮಧ್ಯ ಕರ್ನಾಟಕಕ್ಕೆ ಗೌರವವಾಗಿದೆ.
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್, ದಾವಣಗೆರೆ
ದಾವಣಗೆರೆ (ಅ.14): ದಾವಣಗೆರೆ ವಿವಿ 2009ರಲ್ಲಿ ಪ್ರಾರಂಭವಾಗಿ 2022ರಲ್ಲಿ ಹೆಮ್ಮೆ ಪಡುವಂತಹ ಸಾಧನೆ ಮಾಡಿದೆ. ಮೂರು ಜನ ಗಣಿತ ವಿಜ್ಞಾನಿಗಳು ಜಗತ್ತಿನ ಶೇ.2 ರಷ್ಟು ವಿಜ್ಞಾನಿಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವುದು ಮಧ್ಯ ಕರ್ನಾಟಕಕ್ಕೆ ಗೌರವವಾಗಿದೆ. ವಿಶ್ವದ ಉನ್ನತ ವಿಜ್ಞಾನಿಗಳ ಕುರಿತು ಅಮೇರಿಕಾದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯ ಸಿದ್ಧವಡಿಸಿದ ಪಟ್ಟಿಯಲ್ಲಿ ದಾವಣಗೆರೆ ವಿವಿಯ ಆರು ವಿಜ್ಞಾನಿಗಳು ಸ್ಥಾನ ಪಡೆದಿದ್ದಾರೆ. ದಾವಣಗೆರೆ ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕರುಗಳಾದ ಪ್ರೊ, ಬಿ.ಸಿ ಪ್ರಸನ್ನ ಕುಮಾರ್, ಪ್ರೊ. ಡಿ.ಜಿ. ವಕಾಶ ಮತ್ತು ಪ್ರೊ. ಯು. ಎಸ್. ಮಹಾಬಲೇಶ್ವರ್ ಇವರುಗಳು ಅಮೇರಿಕಾದ ಪ್ರತಿಷ್ಠಿತ ಸ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯವು ತಯಾರಿಸಿದ 2021ರವರೆಗಿನ ಜಾಗತಿಕ ಮಟ್ಟದ ಅತ್ಯುನ್ನತ ಶೇ. 2ರ ವಿಜ್ಞಾನಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ.
ಇದರ ಜೊತೆಗೆ ಗಣಿತಶಾಸ್ತ್ರ ವಿಭಾಗದ ಡಾ.ಡಿ.ಎಸ್. ಕೊಠಾರಿ ಪೋಸ್ಟ್ ಡಾಕ್ಟರಲ್ ಫೆಲೋ ಆದ ಡಾ. ಗಣೇಶ್ ಕುಮಾರ್ ಹಾಗೂ ಪ್ರೊ. ಬಿ.ಸಿ ಪ್ರಸನ್ನ ಕುಮಾರ್, ರವರ ಅಡಿಯಲ್ಲಿ ಸಂಶೋಧನಾರ್ಥಿಗಳಾದ ಆರ್.ಜೆ. ಪುನೀತ್ ಗೌಡ ಮತ್ತು ಆರ್ ನವೀನ್ ಕುಮಾರ್‌ರವರು ಕೂಡ ಸ್ಥಾನ ಪಡೆದಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಗುಣಮಟ್ಟದ ಸಂಶೋಧನೆ, ಸಂಶೋಧನಾ ವರದಿ, ಸಂಶೋಧನಾ ಉಲ್ಲೇಖಗಳು, ಲೇಖನಗಳನ್ನು ಒಳಗೊಂಡ ಹೆಚ್-ಇಂಡಕ್, ಐ-ಟಿನ್ ಇಂಡೆಕ್ಸ್ ಸೇರಿದಂತೆ ವಿವಿಧ ಮಾನದಂಡಗಳನ್ನು ಪರಿಗಣಿಸಿ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ವಿಶೇಷತೆಯೇನೆಂದರೆ, ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಎಲ್ಲಾ ವಿಜ್ಞಾನಿಗಳು ಗ್ರಾಮೀಣ ಪ್ರತಿಭೆಗಳಾಗಿದ್ದಾರೆ.
ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕನ್ನಡಿಗರ ಹಿತ ಕಾಯಿರಿ
ಪ್ರಸನ್ನಕುಮಾರ್ ಶಾಖ ಮತ್ತು ಸಮೂಹ ವರ್ಗಾವಣೆ ಸಂಖ್ಯಾತ್ಮಕ ವಿಶ್ಲೇಷಣೆ , ಘನ ಚಲನಶಾಸ್ತ್ರ ದ್ರವ ಚಲನ ಶಾಸ್ತ್ರ ಸಂಶೋಧನಾ ವಿಷಯದಲ್ಲಿ ರೀಸರ್ಚ್ ಪೇಪರ್ ಮಂಡಿಸಿದ್ದರು. ಡಿಜಿ ಪ್ರಕಾಶ್‌ರವರು ಭೇದಾತ್ಮಕ ರೇಖಾಗಣಿತ, ಭಿನ್ನರಾಶಿ ಕಲನಶಾಸ್ತ್ರ, ಅನ್ವಯಿಕ ಗಣಿತಶಾಸ್ತ್ರ, ವಿಭಿನ್ನ ಸಮೀಕರಣಗಳಿಗೆ ಪರಿಹಾರ ಸಂಶೋಧನಾ ವಿಷಯದಲ್ಲಿ ಪೇಪರ್ ಮಂಡಿಸಿದ್ದರು. ಪ್ರೋ ಮಹಾಬಲೇಶ್ವರ್ ರಾವ್ ಶಾಖ ಮತ್ತು ಸಮೂಹ ವರ್ಗಾವಣೆ ದ್ರವ ಚಲನ ಶಾಸ್ತ್ರ ವಿಷಯದಲ್ಲಿ ಸಂಶೋಧನಾ ಲೇಖನ ಮಂಡಿಸಿದ್ದರು. ರಾಜ್ಯದ 32 ಯುನಿವರ್ಸಿಟಿಗಳಲ್ಲಿ ಒಟ್ಟು 24 ಸಂಶೋಧಕರು ಅಮೇರಿಕಾದ ಸ್ಟ್ಯಾನ್ ಪೋರ್ಡ್ ಯುನಿವರ್ಸಿಟಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಇದು ರಾಜ್ಯಕ್ಕೆ ಹೆಮ್ಮೆಯ ಸಂಗತಿ.
ಅದರಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಮೂವರು ಪ್ರಾಧ್ಯಾಪಕರು ಸೇರಿ ಸಂಶೋಧನಾ ವಿದ್ಯಾರ್ಥಿಗಳು ವಿಶ್ವದ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದಕ್ಕೆ ವಿವಿ ಕುಲಪತಿ ಡಿಬಿ ಕುಂಬಾರ್ ಹರ್ಷ ವ್ಯಕ್ತಪಡಿಸಿದ್ದಾರೆ. ಇನ್ನು ವಿವಿಯ ಎಲ್ಲಾ ವಿಭಾಗಗಳಲ್ಲು ಹೆಚ್ಚಿನ ಸಂಶೋಧನೆ ಪ್ರೋತ್ಸಾಹಿಸುವ ಹಿನ್ನಲೆಯಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು ಇನ್ನು ನಾಲ್ಕು ವರ್ಷಗಳಲ್ಲಿ ಅಗ್ರಗಣ್ಯ ವಿವಿಗಳಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಸ್ಥಾನ ಪಡೆಯಲಿದೆ ಎಂದರು. ನಮ್ಮ ಗಣಿತ ಶಾಸ್ತ್ರ ವಿಭಾಗದ ಎಲ್ಲಾಅಧ್ಯಾಪಕರು ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಿಜಿ ಪ್ರಕಾಶ್ ಮಾತನಾಡಿ ನಮ್ಮ ವಿಭಾಗ ರಾಜ್ಯದಲ್ಲೇ ಅತ್ಯುತ್ತಮವಾಗಿದೆ. ಸಂಶೋಧನಾ ಆಸಕ್ತಯುಳ್ಳ ಪ್ರಾಧ್ಯಾಪಕ ವರ್ಗವಿದ್ದು ಟೀಮ್ ವರ್ಕ್‌ನಲ್ಲಿ ಕೆಲಸ ಮಾಡುತ್ತಿದ್ದೇವೆ. ದೇಶ ವಿದೇಶಗಳ ವಿಜ್ಞಾನಿಗಳ ಪಟ್ಟಿಯಲ್ಲಿ ನಮ್ಮ ಹೆಸರು ಸೇರ್ಪಡೆಯಾಗಿರುವುದಕ್ಕೆ ತುಂಬಾ ಸಂತೋಷವಾಗಿದೆ. 2020 ರಲ್ಲು ನಮ್ಮ ವಿವಿಯ ಇಬ್ಬರು ಅಧ್ಯಾಪಕರು ಸ್ಟ್ಯಾನ್ ಪೋರ್ಡ್ ಸಿದ್ದಪಡಿಸಿದ ವಿಶ್ವದ ವಿಜ್ಞಾನಿಗಳ ಪಟ್ಟಿಯಲ್ಲಿ ಹೆಸರು ಪಡೆದಿದ್ದರು. ಇದೀಗ ಮತ್ತೇ 2021 ರಲ್ಲು ಆ ಸಾಧನೆ ಮುಂದುವರಿದಿದೆ. ಕೋರೊನೊ ವೇಳೆಯ ಸಮಯವನ್ನು ನಾವು ಚೆನ್ನಾಗಿ ಉಪಯೋಗಿಸಿಕೊಂಡಿದ್ದರಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು.
25 ಜನ ಸಂಶೋಧನಾ ವಿದ್ಯಾರ್ಥಿಗಳು ನಮ್ಮಲ್ಲಿದ್ದಾರೆ. ಬೇರೆ ಬೇರೆ ವಿಷಯಗಳಲ್ಲಿ ಕ್ಷೇತ್ರಗಳಲ್ಲಿ ಅನ್ವಯಿಕ ಗಣಿತಶಾಸ್ತ್ರವನ್ನು ಬಳಸಿ ಹೊಸ ಹೊಸ ಪರಿಕಲ್ಪನೆ ಹುಟ್ಟುಹಾಕುವಲ್ಲಿ ನಮ್ಮ ಟೀಮ್ ಉತ್ಸುಕವಾಗಿದೆ ಎಂದರು. ಇನ್ನೊಬ್ಬ ಅಧ್ಯಾಪಕ ಪ್ರಸನ್ನಕುಮಾರ್ ಮಾತನಾಡಿ ಸ್ಟ್ಯಾನ್ ಪೋರ್ಟ್ ಪಟ್ಟಿಯಲ್ಲಿ ಆರು ಜನ ಸ್ಥಾನ ಪಡೆದಿರುವುದಕ್ಕೆ ದಾವಣಗೆರೆ ವಿವಿಗೆ ಸಂದ ಗೌರವವಾಗಿದೆ. ಅನ್ವಯಿಕ ಗಣಿತಶಾಸ್ತ್ರದಲ್ಲಿ ನಾವು ಟೀಮ್ ವರ್ಕ್ ಮಾಡಿ ಹೊಸ ಹೊಸ ಮಾಡೆಲ್ ತೋರಿಸಿದ್ದೇವೆ. ನೀರು ರಕ್ತ ಗಾಳಿ ಹೀಗೆ ಎಲ್ಲಾ ವಸ್ತುಗಳಲ್ಲು ಅನ್ವಯಿಕ ಗಣಿತಶಾಸ್ತ್ರವನ್ನು ಬಳಸಿ ಸಮಾಜಕ್ಕೆ ಹೇಗೆ ಉಪಯೋಗವಾಗುತ್ತದೆ ಎಂಬುದನ್ನ ಸಂಶೋಧನಾ ಮೂಲಕ ತೋರಿಸುವ ಪ್ರಯತ್ನ ಮಾಡುತ್ತಿದ್ದೇವೆ.
ಇಂಟರ್ ನ್ಯಾಷನಲ್ ಜರ್ನಲ್‌ನಲ್ಲಿ ದಾವಣಗೆರೆ ವಿವಿ ಸಂಶೋಧನಾ ಲೇಖನಗಳು ಪ್ರಕಟಗೊಂಡು ಅವುಗಳನ್ನು ಇತರ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಅಧ್ಯಯನಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಗಣಿತವೆಂದ್ರೆ ಕೇವಲ ಕೂಡುವುದು ಕಳೆಯುವುದು ಮಾತ್ರವಲ್ಲ ಜೀವನದ ವಿವಿಧ ಕ್ಷೇತ್ರಗಳಲ್ಲಿ ಗಣಿತ ಶಾಸ್ತ್ರ ಎಷ್ಟು ಮುಖ್ಯ ಎಂಬುದನ್ನು ತೋರಿಸುವ ಪ್ರಯತ್ನವನ್ನು ನಮ್ಮ ವಿಭಾಗ ಮಾಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಾಧ್ಯಾಪಕ ಯು ಎಸ್ ಮಹಾಬಲೇಶ್ವರ್ ರಾವ್ ಮಾತನಾಡಿ 22 ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ಇಂಟರ್ನ್ಯಾಷನಲ್ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ.
ಕಾಂಗ್ರೆಸ್‌ನಲ್ಲಿ ಎಲ್ಲ ಜಾತಿ, ಧರ್ಮದವರೂ ಒಂದೇ: ಧ್ರುವನಾರಾಯಣ್
ಸ್ಟ್ಯಾನ್ ಪೋರ್ಡ್ ಪಟ್ಟಿಯಲ್ಲಿ ಬಂದಿರುವುದು ಖುಷಿಯಾಗಿದೆ. ಸತತ ಪ್ರಯತ್ನದ ಫಲವಾಗಿ ಇಂತಹದೊಂದು ಸಾಧನೆ ಸಾಧ್ಯವಾಗಿದೆ. ಒಂದೊಂದೆ ಮಾಡಲ್ ಮಾಡಿಕೊಂಡು ನಮ್ಮ ಪೇಪರ್ ಗಳು ಇಂಟರ್ ನ್ಯಾಷನಲ್ ನಲ್ಲಿ ಗುರುತಿಸುವಂತಾಗಿದೆ. ನಾನು 102 ಪೇಪರ್‌ಗಳನ್ನು ಮಾಡಿದ್ದೇನೆ. ಯು ಕೆ ನೆದರ್ ಲ್ಯಾಂಡ್ ಯು ಎಸ್ ಎ ಹೀಗೆ ಹಲವು ದೇಶಗಳ ವಿವಿ ರೀರ್ಸರ್ಚ್ ಸೆಂಟರ್ ಸೈಂಟಿಸ್ಟ್‌ಗಳ ಜೊತೆ ನಮ್ಮ ಸಹಯೋಗ ಇದೆ. ಇವತ್ತು ದಾವಣಗೆರೆ ವಿವಿಯವರು ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮ ಇದೆ ಎನ್ನುತ್ತಾರೆ ಮಹಾಬಲೇಶ್ವರ್.