Asianet Suvarna News Asianet Suvarna News

ಐಎಎಸ್ ಟಾಪರ್ ಸೃಷ್ಟಿ ದೇಶಮುಖ್ ಮಾರ್ಕ್ಸ್ ಕಾರ್ಡ್ ವೈರಲ್!

*ಸೃಷ್ಟಿ ದೇಶಮುಖ್ ಕರ್ನಾಟಕ ಐಎಎಸ್ ಅಧಿಕಾರಿ ಡಾ. ನಾಗಾರ್ಜನ ಗೌಡ ಅವರ ಪತ್ನಿ
*ಐಎಎಸ್ ಆಕಾಂಕ್ಷಿಗಳಿಗೆ ಸ್ಪೂರ್ಥಿ ತುಂಬುವ ಐಎಎಸ್ ಟಾಪರ್ ಸೃಷ್ಟಿ
* ಸೃಷ್ಟಿ ದೇಶಮುಖ್ ಅವರ 12 ನೇ ತರಗತಿಯ ಅಂಕಪಟ್ಟಿ ವೈರಲ್ ಆಗಿದೆ.
 

Marks card of IAS topper Srushti Deshmukh goes viral
Author
First Published Sep 28, 2022, 11:14 AM IST

ದೇಶದ ಅತ್ಯುನ್ನತ ಸ್ಪರ್ಧಾತ್ಮಕ ಪರೀಕ್ಷೆ ಯುಪಿಎಸ್ಸಿ (UPSC) ಬರೆಯಬೇಕೆಂದು ಸಾವಿರಾರು ಮಂದಿ ಕನಸು ಕಾಣುತ್ತಾರೆ. ಆದ್ರೆ ಕೆಲವರ ಕನಸು ಮಾತ್ರ ನನಸಾಗುತ್ತದೆ. ಪ್ರತಿ ವರ್ಷ ಅದೆಷ್ಟೋ ಮಂದಿ ಪರೀಕ್ಷೆಗೆ ತಯಾರಿ ನಡೆಸ್ತಾರೆ. ಕೆಲವರಷ್ಟೇ ಅದರಲ್ಲಿ ಸಕ್ಸಸ್ ಕಾಣುತ್ತಾರೆ. ಇನ್ನು ಐಎಎಸ್ (IAS) ಆಗಬೇಕೆಂದು ಕನಸು ಕಾಣುವ ಯುವಜನತೆ, ಈಗಾಗಲೇ ಸಾಧನೆಯ ಶಿಖರವೇರಿದ ಹಾದಿ, ಅವರ ಅಂಕಪಟ್ಟಿ ನಿಜಕ್ಕೂ ಸ್ಪೂರ್ತಿದಾಯಕ. ಐಎಎಸ್ ಪಾಸ್ ಮಾಡಿದವರ ವ್ಯಾಸಂಗ, ಜೀವನ ಶೈಲಿ, ನಡೆ-ನುಡಿ ಎಲ್ಲವೂ ಇತರೆ ಆಕಾಂಕ್ಷಿಗಳಿಗೆ ಮಾರ್ಗದರ್ಶಿ. ಅದೇ ರೀತಿ ಶಾಲಾ ಹಂತದಲ್ಲಿ ಅವರು ಎಷ್ಟು ಅಂಕಗಳನ್ನ ಪಡೆದಿದ್ರು ಅನ್ನೋದು ಅನೇಕರಲ್ಲಿ ಕುತೂಹಲ ಇದ್ದೇ ಇರುತ್ತೆ.  ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಐಎಎಸ್ ಟಾಪರ್ ಸೃಷ್ಟಿ ದೇಶಮುಖ್ (Srushti Jayant Deshmukh ) ಅವರ 12 ನೇ ತರಗತಿಯ ಅಂಕಪಟ್ಟಿ ವೈರಲ್ ಆಗಿದೆ. ಇತ್ತೀಚೆಗೆ, ಐಎಎಸ್ ಟೀನಾ ದಾಬಿ ಅವರ ಅಂಕಪಟ್ಟಿ ಸುದ್ದಿ ಮಾಡಿತ್ತು. ಐಎಎಸ್ ಟಾಪರ್ ಸೃಷ್ಟಿ  ದೇಶಮುಖ್ ಅವರ, CBSE 12ನೇ ತರಗತಿ ಪರೀಕ್ಷೆಯಲ್ಲಿ 93% ಪಡೆದಿದ್ದಾರೆ. 10ನೇ ತರಗತಿಯಲ್ಲಿ 10 ಸಿಜಿಪಿಎ ಗ್ರೇಡ್ ಪಡೆದಿದ್ದಾರೆ. ಕರ್ನಾಟಕ ಮೂಲದ ಐಎಎಸ್ ಅಧಿಕಾರಿ ಡಾ.ನಾಗಾರ್ಜನಗೌಡ ಅವರನ್ನು ಸೃಷ್ಟಿ ದೇಶಮುಖ್ ಅವರು ವಿವಾಹವಾಗಿದ್ದಾರೆ.

ಧಾರವಾಡ: ರಾಷ್ಟ್ರಪತಿಯಿಂದ ಐಐಐಟಿ ಹೊಸ ಕ್ಯಾಂಪಸ್‌ ಲೋಕಾರ್ಪಣೆ!

IAS ಸೃಷ್ಟಿ ಜಯಂತ್ ದೇಶಮುಖ್ ಅವರು 2018 ರಲ್ಲಿ UPSC ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಅಖಿಲ ಭಾರತ 5 ನೇ ರ್ಯಾಂಕ್ ಗಳಿಸಿದರು. ಅವರು ತಮ್ಮ ಮೊದಲ ಪ್ರಯತ್ನದಲ್ಲಿ ದೇಶದ ಅತ್ಯಂತ ಕಷ್ಟಕರ ಪರೀಕ್ಷೆಯನ್ನ ಭೇದಿಸಿ 5ನೇ ಱಂಕರ್ ಆದ್ರು. 2018 ರಲ್ಲಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಪರೀಕ್ಷೆಯಲ್ಲಿ ಮಹಿಳಾ ಟಾಪರ್ ಆಗಿ ಹೊರಹೊಮ್ಮಿದ್ರು.  

ಮೂಲತಃ ಮಧ್ಯಪ್ರದೇಶದ ಭೋಪಾಲ್ನವರಾದ ಸೃಷ್ಟಿ,  2018 ರಲ್ಲಿ ರಾಜೀವ್ ಗಾಂಧಿ ಪ್ರೊಡಿಯೋಗಿಕಿ ವಿಶ್ವವಿದ್ಯಾಲಯದಿಂದ ರಾಸಾಯನಿಕ ಇಂಜಿನಿಯರ್ ಆಗಿ ಪದವಿ ಪಡೆದಿದ್ದಾರೆ. ಸೃಷ್ಟಿಯ ತಂದೆ ಇಂಜಿನಿಯರ್ ಮತ್ತು ತಾಯಿ ಶಿಕ್ಷಕಿ. ಈಗ, ಐಎಎಸ್ ಸೃಷ್ಟಿ ದೇಶಮುಖ್ ಗೌಡ ಅವರು ದೇಶದ ಅತ್ಯಂತ ಜನಪ್ರಿಯ ಐಎಎಸ್'ಗಳಲ್ಲಿ ಒಬ್ಬರು. ಸಾಮಾಜಿಕ ಜಾಲತಾಣದಲ್ಲಿ ಸೃಷ್ಟಿ, ಬರೋಬ್ಬರಿ 1.9 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ರೆ, ಟ್ವಿಟರ್‌ನಲ್ಲಿ 144K ಅನುಯಾಯಿಗಳನ್ನು ಹೊಂದಿದ್ದಾರೆ. 

ಸೃಷ್ಟಿ ಅವರು, ಇತ್ತೀಚೆಗೆ UPSC ಆಕಾಂಕ್ಷಿಗಳಿಗೆ ಸಹಾಯ ಮಾಡಲು ನಾಗರಿಕ ಸೇವಾ ಮುಖ್ಯ ಪರೀಕ್ಷೆಯ ತಯಾರಿ ಕುರಿತು "ದಿ ಆನ್ಸರ್ ರೈಟಿಂಗ್ ಮ್ಯಾನ್ಯುಯಲ್" ಪುಸ್ತಕವನ್ನು ಬರೆದಿದ್ದಾರೆ. ಈಗ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಆ ಪುಸ್ತಕ ಲಭ್ಯವಿದೆ. ಈ ಪುಸ್ತಕವು ಯುಪಿಎಸ್ಸಿ ಆಕಾಂಕ್ಷಿಗಳಿಗೆ ಪರೀಕ್ಷೆಗೆ ತಯಾರಿ ನಡೆಸಲು ಸಹಾಯ ಮಾಡುತ್ತದೆ. ನಾಗರಿಕ ಸೇವೆಗಳ ಪರೀಕ್ಷೆಗೆ ಹಾಜರಾಗುವಾಗ ಆಕಾಂಕ್ಷಿಗಳು ಅನುಸರಿಸಬೇಕಾದ ಸಲಹೆಗಳು ಮತ್ತು ತಂತ್ರಗಳನ್ನು ಬಿಡಿಸಿ ಹೇಳಿದ್ದಾರೆ.   ಆರಂಭಿಕರಿಗಾಗಿ ಸಂಪೂರ್ಣ ಮಾರ್ಗದರ್ಶಿಯಾಗಿ ಮತ್ತು ಅನುಭವಿಗಳಿಗೆ ಗಣನೀಯವಾಗಿ ಅಂಕಗಳನ್ನು ಸುಧಾರಿಸಲು ಸಹಾಯ ಮಾಡುವ ಸಾಧನವಾಗಿದೆ.

ಓದಿದ್ದು ನೆನಪಿನಲ್ಲಿ ಉಳಿಯುತ್ತಿಲ್ಲವಾ? ಜೋರಾಗಿ ಓದಲು ಕಲಿತು ನೋಡಿ

ಸದ್ಯ ಸೃಷ್ಟಿ ದೇಶ್ಮುಖ್ರ ಅಂಕಪಟ್ಟಿ ವೈರಲ್ ಆಗಿದ್ದು, ಭಾರೀ ಸದ್ದು ಮಾಡ್ತಿದೆ. ಅವರು ಪಡೆದಿರುವ ಅಂಕಗಳು, ಯುಪಿಎಸ್ಸಿ ಆಕಾಂಕ್ಷಿಗಳಿಗೆ ಸ್ಪೂರ್ತಿದಾಯಕವಾಗಿದೆ. ಶಾಲಾ ಹಂತದಲ್ಲಿ ಅಂಕ ಕಡಿಮೆ ಬಂದಿಯೋ ಅಥವಾ ಹೆಚ್ಚು ಬಂದಿದೆಯೋ ಎಂಬುದು ಮಹತ್ವದ್ದಲ್ಲ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎಷ್ಟು ಸಮರ್ಥವಾಗಿ ನೀವು ಎದುರಿಸುತ್ತೀರಿ, ಹೇಗೆ ತಯಾರಿ ಮಾಡಿಕೊಳ್ಳುತ್ತೀರಿ ಎಂಬುದರ ಮೇಲೆ ನಿಮ್ಮ ಸಕ್ಸೆಸ್ ನಿಂತಿರುತ್ತದೆ. ಹಾಗಾಗಿ, ನಿಮ್ಮ ಯೋಜನೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದೇ ಆಗಿದ್ದರೆ, ಈಗಿನಿಂದಲೇ ಆ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳಿ ಮತ್ತು ಖಂಡಿತವಾಗಿ ಅದರಲ್ಲಿ ಯಶಸ್ವಿಯಾಗುತ್ತೀರಿ.

Follow Us:
Download App:
  • android
  • ios