ಕೇಂದ್ರ ಸರ್ಕಾರವು ನಾಗರಿಕರ ಅನುಕೂಲಕ್ಕಾಗಿ ಕ್ರಿಮಿನಲ್ ಕಾನೂನು, ಕಾರ್ಪೋರೆಟ್, ಕೌಟುಂಬಿಕ, ಆಸ್ತಿ ವಿವಾದಗಳಿಗೆ ನೇರ ಕಾನೂನು ಸಲಹೆ ನೀಡಲು ವಾಟ್ಸಾಪ್‌ನಲ್ಲಿ ಉಚಿತವಾಗಿ ನ್ಯಾಯಸೇತು ಚಾಟ್‌ಬೋಟ್ ಸೇವೆಯನ್ನು ಆರಂಭಿಸಿದೆ
ನವದೆಹಲಿ: ಕೇಂದ್ರ ಸರ್ಕಾರವು ನಾಗರಿಕರ ಅನುಕೂಲಕ್ಕಾಗಿ ಕ್ರಿಮಿನಲ್ ಕಾನೂನು, ಕಾರ್ಪೋರೆಟ್, ಕೌಟುಂಬಿಕ, ಆಸ್ತಿ ವಿವಾದಗಳಿಗೆ ನೇರ ಕಾನೂನು ಸಲಹೆ ನೀಡಲು ವಾಟ್ಸಾಪ್‌ನಲ್ಲಿ ಉಚಿತವಾಗಿ ನ್ಯಾಯಸೇತು ಚಾಟ್‌ಬೋಟ್ ಸೇವೆಯನ್ನು ಆರಂಭಿಸಿದೆ. ==
ಸೇವೆ ಬಳಸೋದು ಹೇಗೆ?
ಚಾಟ್‌ಬೋಟ್ ಸೇವೆ ಪಡೆದುಕೊಳ್ಳಲು ಮೊದಲು ವಾಟ್ಸಪ್‌ನಲ್ಲಿ 7217711814 ಸಂಖ್ಯೆ ಸೇವ್ ಮಾಡಿಕೊಳ್ಳಿ. ಆ ಬಳಿಕ ನಿಮಗೆ ಅದು ಟೆಲಿ-ಲಾ ಎನ್ನುವ ಹೆಸರಿನಿಂದ ಗೋಚರಿಸುತ್ತದೆ. ನಂತರ ಏಕೀಕೃತ ಇಂಟರ್ಫೇಸ್ ಪ್ರವೇಶಿಸಿ ಮೊಬೈಲ್ ಸಂಖ್ಯೆ ನೋಂದಾಯಿಸಿಕೊಳ್ಳಬೇಕು. ಆ ಬಳಿಕ ಸುಲಭವಾಗಿ, ತ್ವರಿತವಾಗಿ ಮಾಹಿತಿ ಪಡೆಯಬಹುದು. ಯಾರು ಬೇಕಿದ್ದರೂ ಈ ಪ್ರಯೋಜನ ಪಡೆಯಬಹುದು.
ಹಾಯ್ ಎಂದು ಸಂದೇಶ ಕಳುಹಿಸಬೇಕು.
ನೀವು ನಂಬರ್ ಅನ್ನು ಸೇವ್ ಮಾಡಿಕೊಂಡ ನಂತರ ಹಾಯ್ ಎಂದು ಸಂದೇಶ ಕಳುಹಿಸಬೇಕು. ಆ ಬಳಿಕ ಅದು ನಿಮಗೆ ಕಾನೂನು ಸಲಹೆ, ಮಾಹಿತಿ, ಮಾರ್ಗದರ್ಶನ ಹೀಗೆ ಯಾವ ರೀತಿಯ ನೆರವು ಬೇಕೆಂದು ಮೂರು ಆಯ್ಕೆಗಳನ್ನು ನೀಡುತ್ತದೆ. ಅದರಲ್ಲಿ ನೀವು ನಿಮಗೆ ಯಾವುದು ಬೇಕೆಂದು ಆಯ್ಕೆ ಮಾಡಿಕೊಂಡು ಸಂವಹನ ಮುಂದುವರೆಸಬಹುದು.ಸದ್ಯ ಇಂಗ್ಲೀಷ್, ಹಿಂದಿ ಭಾಷೆಯಲ್ಲಿ ಮಾತ್ರವೇ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಕನ್ನಡ ಸೇರಿ ಇತರ ಪ್ರಾದೇಶಿಕ ಭಾಷೆಗಳಲ್ಲಿಯೂ ಅಭಿವೃದ್ಧಿ ಪಡಿಸಲು ಕೇಂದ್ರ ಚಿಂತನೆ ನಡೆಸಿದೆ ಎನ್ನಲಾಗಿದೆ.


