ಚುಚ್ಚಿ ಕೊಂದ ಚಿರಂಜೀವಿ, ಚಿನ್ನದಂಥ ಗಂಡನಿದ್ದರೂ ವಾಟ್ಸಪ್‌ ಪ್ರೇಮಿಗೆ ಬಲಿಯಾದ ತೃಪ್ತಿ!

ಚಿಕ್ಕಮಗಳೂರಿನಲ್ಲಿ 25 ವರ್ಷದ ಗೃಹಿಣಿಯನ್ನು ಆಕೆಯ ವಾಟ್ಸಾಪ್ ಸ್ನೇಹಿತ ಚಾಕುವಿನಿಂದ ಚುಚ್ಚಿ, ಕೆರೆಗೆ ದೂಡಿ ಕೊಲೆ ಮಾಡಿದ್ದಾನೆ. ತಿಂಗಳ ಹಿಂದೆ ಇಬ್ಬರೂ ಮನೆ ಬಿಟ್ಟು ಓಡಿ ಹೋಗಿದ್ದು, ಬಳಿಕ ಮನೆಗೆ ವಾಪಸ್ ಬಂದಿದ್ದರು.

illicit relationship With whatsapp friend chikkamagaluru married women Death san

ಚಿಕ್ಕಮಗಳೂರು (ಡಿ.7): ಚಿನ್ನದಂಥ ಗಂಡನಿದ್ದರೂ ವಾಟ್ಸಾಪ್‌ ಪ್ರೇಮಿಯ ಹಿಂದೆ ಬಿದ್ದ 25 ವರ್ಷದ ಗೃಹಿಣಿ ದಾರುಣವಾಗಿ ಕೊಲೆಯಾಗಿದ್ದಾಳೆ. ಆಕೆಯ ವಾಟ್ಸಾಪ್‌ ಸ್ನೇಹಿತನೇ ಆಕೆಯನ್ನು ಚಾಕುವಿನಿಂದ ಚುಚ್ಚಿ ಕೊಂದಿದ್ದಾನೆ. ಚಾಕುವಿನಿಂದ ಚುಚ್ಚಿದರೂ ಆಕೆ ಸಾವು ಕಾಣದೇ ಇದ್ದಾಗ ಮನೆಯ ಹಿಂದಿನ ಕೆರೆಗೆ ಆಕೆಯನ್ನು ದೂಡಿ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಅನೈತಿಕ ಸಂಬಂಧಕ್ಕೆ ಬಿತ್ತು 25 ವರ್ಷದ ಗೃಹಿಣಿ ಸಾವು ಕಂಡಿರುವುದು ಜಿಲ್ಲೆಯಲ್ಲಿ ಆಘಾತ ಮೂಡಿಸಿದೆ. ಆಕೆಯ ವಾಟ್ಸಾಪ್‌ ಸ್ನೇಹಿತನೇ ಬರ್ಬರವಾಗಿ ಹತ್ತೆ ಮಾಡಿದ್ದಾನೆ. ಬಾಳೆಹೊನ್ನೂರು ಸಮೀಪದ ಕಿಚ್ಚಬ್ಬಿ ಗ್ರಾಮದಲ್ಲಿ ಘಟನೆ ನಡೆದಿದೆ. ಕಿಚ್ಚಬ್ಬಿ ಗ್ರಾಮದ ತೃಪ್ತಿ 25 ಮೃತ ದುರ್ದೈವಿ. ವಾಟ್ಸಾಪ್ ಸ್ನೇಹಿತ ಚಿರಂಜೀವಿ ಕೊಲೆ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಕುವಿನಲ್ಲಿ ಚುಚ್ಚಿದರೂ, ಆಕೆ ಸಾಯದೇ ಇದ್ದಾಗ ತೃಪ್ತಿಯನ್ನು ಚಿರಂಜೀವಿ ಕೆರೆಗೆ ಎಸೆದು ಕೊಲೆ ಮಾಡಿದ್ದಾನೆ. ಚಿರಂಜೀವಿ ಹಾಗೂ ತೃಪ್ತಿ ವಾಟ್ಸಾಪ್‌ ಮೂಲಕ ಸ್ನೇಹಿತರಾಗಿದ್ದರು. ಬಳಿಕ ಇದು ಪ್ರೀತಿಗೆ ತಿರುಗಿತ್ತು. ತಿಂಗಳ ಹಿಂದೆ ಚಿರಂಜೀವಿ ಹಾಗೂ ತೃಪ್ತಿ ಮನೆ ಬಿಟ್ಟು ಓಡಿ ಹೋಗಿದ್ದರು. ಬಾಳೆಹೊನ್ನೂರು ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಟ್ ಕೂಡ ದಾಖಲಾಗಿತ್ತು. ವಾಪಸ್ ಬಂದ ಬಳಿಕ ಮನೆಯವರ ರಾಜಿ ಬಳಿಕ ಆತನ ಜೊತೆ ಮಾತು ಹಾಗೂ ಸ್ನೇಹವನ್ನೂ ತೃಪ್ತಿ ಬಿಟ್ಟಿದ್ದಳು.

ಜ್ಯೋತಿ ರೈ ಜೊತೆ ಕೆಲಸ ಮಾಡ್ತೀರಾ, ಇಲ್ಲಿದೆ ನೋಡಿ ಬ್ಯೂಟಿ ಕೊಟ್ಟಿರೋ ಭರ್ಜರಿ ಆಫರ್‌!

ಶನಿವಾರ ಏಕಾಏಕಿ ಮನೆಗೆ ಬಂದು ಮಕ್ಕಳ ಎದುರೇ ಚಾಕುವಿನಿಂದ ಚುಚ್ಚಿ ತೃಪ್ತಿ ಕೊಲೆಗೆ ಯತ್ನಿಸಿದ್ದಾಣೆ. ಚಾಕುವಿನಿಂದ ಚುಚ್ಚಿ ಸಾಯಲಿಲ್ಲ ಎಂದು ಮನೆ ಹಿಂದಿನ ಕೆರೆಗೆ ಆಕೆಯನ್ನು ಎಸೆದಿದ್ದಾನೆ. ತೃಪ್ತಿ ಪತಿ ಕೆಲಸಕ್ಕೆ ಹೋಗಿದ್ದಾಗ ಈ ಕೃತ್ಯ ನಡೆದಿದೆ. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನಲ್ಲಿ ಈ ಘಟನೆ ನಡೆದಿದೆ.

Breaking: ಕರ್ನಾಟಕಕ್ಕೆ ಮೋದಿ ಸರ್ಕಾರ ಗುಡ್‌ ನ್ಯೂಸ್‌, ಮೂರು ಹೊಸ ಕೇಂದ್ರೀಯ ವಿದ್ಯಾಲಯಗಳಿಗೆ ಒಪ್ಪಿಗೆ

Latest Videos
Follow Us:
Download App:
  • android
  • ios