ಜೈಪುರ (ಏ.02): ರಾಜ್ಯದ ಪ್ರತಿ ಕುಟುಂಬಕ್ಕೂ ವಾರ್ಷಿಕ 5 ಲಕ್ಷ ರು. ವರೆಗೆ ಉಚಿತ ಆರೋಗ್ಯ ವಿಮೆ ಒದಗಿಸುವ ‘ಚಿರಂಜೀವಿ ಆರೋಗ್ಯ ವಿಮೆ’ ಯೋಜನೆಯನ್ನು ರಾಜಸ್ಥಾನ ಸರ್ಕಾರ ಗುರುವಾರ ಜಾರಿಗೊಳಿಸಿದೆ. ಗುರುವಾರದಿಂದಲೇ ಎಲ್ಲರೂ ಹೆಸರು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಿದೆ.

ಬಳಿಕ ಈ ಬಗ್ಗೆ ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, ‘ರಾಜ್ಯದ ಪ್ರತಿ ನಾಗರಿಕರಿಗೂ ಆರೋಗ್ಯ ವಿಮೆ ಒದಗಿಸುವ ಯೋಜನೆ ಜಾರಿಗೊಳಿಸಿದ್ದೇವೆ. ಜನರು ತಮ್ಮ ಹೆಸರನ್ನು ನೋಂದಾಯಿಸಿ, ನಗದು ರಹಿತ ಚಿಕಿತ್ಸೆ ಪಡೆಯಬಹುದಾಗಿದೆ.

ಆಧಾರ್‌ ಜೊತೆ ಪಾನ್‌ ಕಾರ್ಡ್‌ ಲಿಂಕ್ ಮಾಡಿದವರು ಮತ್ತೆ ಮಾಡಬೇಕಾ? ...

 ನೋಂದಣಿ ಗುರುವಾರದಿಂದಲೇ ಆರಂಭವಾಗಲಿದೆ. ಈ ಮೂಲಕ ರಾಜ್ಯದ ಎಲ್ಲ ಕುಟುಂಬಗಳಿಗೂ ವಾರ್ಷಿಕ 5 ಲಕ್ಷ ರು.ವರೆಗೆ ಉಚಿತ ಆರೋಗ್ಯ ವಿಮೆ ಒದಗಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ರಾಜಸ್ಥಾನ ಪಾತ್ರವಾಗಿದೆ’ ಎಂದಿದ್ದಾರೆ.