ಪಾನ್ ಕಾರ್ಡ್(ಪರ್ಮನೆಂಟ್ ನಂಬರ್) ಅನ್ನು ಆಧಾರ್ ಜತೆ ಲಿಂಕ್ ಮಾಡುವ ಅವಧಿಯನ್ನು ಕೇಂದ್ರ ಸರ್ಕಾರ ಮಾರ್ಚ್ 31ರಿಂದ 2021 ಜೂನ್ 30ರವರೆಗೂ ವಿಸ್ತರಿಸಿದೆ. ಇದರರ್ಥ ಇದುವರೆಗೂ ಯಾರು ತಮ್ಮ ಪಾನ್ ಕಾರ್ಡ್ ನಂಬರ್ ಅನ್ನು ಆಧಾರ್ ಜತೆ ಲಿಂಕ್ ಮಾಡಿಲ್ಲವೋ ಅವರು ಲಿಂಕ್ ಮಾಡಲು ಇನ್ನೂ ಹೆಚ್ಚಿನ ಕಾಲಾವಕಾಶವನ್ನು ಕೇಂದ್ರ ಸರರ್ಕಾರ ಒದಗಿಸಿದೆ.

ಸ್ಮಾರ್ಟ್‌ಫೋನ್ ಆಯ್ತು, ಇನ್ನು ಶಿಯೋಮಿಯಿಂದಲೂ ಎಲೆಕ್ಟ್ರಿಕ್ ವೆಹಿಕಲ್?

ಪಾನ್ ಕಾರ್ಡ್ ನಂಬರ್ ಅನ್ನು ಆಧಾರ್ ಜತೆ ಲಿಂಕ್ ಮಾಡದಿದ್ದರೆ ಏನಾಗಬಹುದು ಎಂಬ ಪ್ರಶ್ನೆಯನ್ನು ನೀವು ಕೇಳಬಹುದು. ಹೌದು, ಲಿಂಕ್ ಮಾಡದಿದ್ದರೆ ಏನಾಗುತ್ತದೆ? ಇದಕ್ಕೆ ಉತ್ತರವೂ ಅಷ್ಟೇ ಸಿಂಪಲ್ ಆಗಿದೆ, ಒಂದು ವೇಳೆ ನೀವು ಆಧಾರ್ ಜತೆ ನಿಮ್ಮ ಪಾನ್ ಕಾರ್ಡ್ ನಂಬರ್ ಲಿಂಕ್ ಮಾಡದಿದ್ದರೆ ಒಂದು ಸಾವಿರ ರೂ. ದಂಡವನ್ನು ಪಾವತಿಸಬೇಕಾಗುತ್ತದೆ ಮತ್ತು ಇದರ ಜತೆಗೆ ಪಾನ್ ನಂಬರ್ ಕೂಡ ಅಸಿಂಧುಗೊಳ್ಳುವ ಸಾಧ್ಯತೆ ಇದೆ. ಹಾಗಾಗಿ, ದಂಡ ಮತ್ತು ಪಾನ್ ನಂಬರ್ ಅಸಿಂಧುಗೊಳಿಸುವುದನ್ನು ತಪ್ಪಿಸುವುದಕ್ಕಾಗಿ ನಿಗದಿತ ಗಡುವಿನೊಳಗೆ ಪಾನ್ ಜತೆ ಆಧಾರ್ ಲಿಂಕ್ ಮಾಡಿಕೊಳ್ಳಿ.

ಆದರೆ, ಕೆಲವರಿಗೆ ತಮ್ಮ ಪಾನ್ ನಂಬರ್ ಅನ್ನು ಆಧಾರ್ ನಂಬರ್ ಜೊತೆ ಲಿಂಕ್ ಹೇಗೆ ಮಾಡಿಕೊಳ್ಳುವುದರ ಬಗ್ಗೆ ಮಾಹಿತಿ ಇರುವುದಿಲ್ಲ. ಅಂಥವರು ಬಲ್ಲವರಿಂದ ಕೇಳಿ ತಿಳಿದಕೊಂಡು ಲಿಂಕ್ ಮಾಡಿಕೊಳ್ಳಬಹುದು. ಇಲ್ಲವೇ ನೀವೇ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಲ್ಲಿ ನೀಡಿರುವ ಸೂಚನೆಗಳ ಪ್ರಕಾರ ಲಿಂಕ್ ಮಾಡಿಕೊಳ್ಳಬಹುದು. ಹಾಗೆಯೇ ನಿಮಗೆ ನೆರವು ನೀಡುವುದಕ್ಕಾಗಿ ಲಿಂಕ್ ಮಾಡುವ ಪ್ರಕ್ರಿಯೆ ಬಗ್ಗೆ ಇಲ್ಲಿ ತಿಳಿಸಿದ್ದೇವೆ.

ಪತ್ರ ಬರೆದು, ಚಿನ್ನದ ಪದಕ ಗೆದ್ದು, ಸ್ವಿಜರ್ಲೆಂಡ್‌ಗೆ ಹೋಗಿ!

ಪಾನ್ ಕಾರ್ಡ್ ಅನ್ನು ಆಧಾರ್ ಜತೆ ಲಿಂಕ್ ಮಾಡಲು ಹಂತಗಳನ್ನು ಬಳಸಿಕೊಳ್ಳಿ:
-ಮೊದಲಿಗೆ ಆದಾಯ ತೆರಿಗೆ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಪ್ರವೇಶ ಪಡೆದುಕೊಳ್ಳಿ
- ಆದಾಯ ತೆರಿಗೆ ಇಲಾಖೆಯ ಅಧಿಕೃತ ಜಾಲತಾಣ https://www.incometaxindiaefiling.gov.in/home ದಲ್ಲಿ ನೀವು ಲಾಗಿನ್ ಆಗಬೇಕು.
 - ಆ ನಂತರ ವೆಬ್‌ಸೈಟ್‌ನಲ್ಲಿರುವ ಹೋಮ್‌ಪೇಜ್‌ನ ಎಡಭಾಗದ ಕ್ವಿಕ್ ಲಿಂಕ್ ವಿಭಾಗದಲ್ಲಿರುವ ಲಿಂಕ್ ಆಧಾರ್ ಬಟನ್ ಮೇಲೆ ಕ್ಲಿಕ್ ಮಾಡಿ.
- ಬಳಿಕ ನಿಮ್ಮ ಪಾನ್ ನಂಬರ್, ಆಧಾರ್ ನಂಬರ್ ಮತ್ತು ಆಧಾರ್ ದಾಖಲಾತಿಯಲ್ಲಿರುವ ಹಾಗೆ ನಿಮ್ಮ ಹೆಸರನ್ನು ದಾಖಲಿಸಿ.
- ಒಂದೊಮ್ಮೆ ನೀವು ಆಧಾರ್ ಕಾರ್ಡ್‌ನಲ್ಲಿ ಹುಟ್ಟಿದ ವರ್ಷವನ್ನು ಮಾತ್ರ ಹೊಂದಿದ್ದರೆ ಚೆಕ್ ಬಾಕ್ಸ್ ಕ್ಲಿಕ್ ಮಾಡಿ ಮತ್ತು ನಂತರ ನಿಮ್ಮ ಆಧಾರ್ ವಿವರಗಳನ್ನು ಯುಐಡಿಎಐನೊಂದಿಗೆ ಮೌಲ್ಯೀಕರಿಸಲು ಒಪ್ಪಿದ್ದಕ್ಕಾಗಿ ಚೆಕ್ ಬಾಕ್ಸ್ ಕ್ಲಿಕ್ ಮಾಡಿ.
- ಇಷ್ಟಾದ ಮೇಲೆ ನಿಮ್ಮ ಸ್ಕ್ರೀನ್ ಮೇಲೆ ಕಾಣಿಸುವ ಕ್ಯಾಪ್ಚಾ ಕೋಡ್ ಎಂಟರ್ ಮಾಡಿ. ಆಗ ನಿಮಗೆ, ನಿಮ್ಮ ನೋಂದಾಯಿತ ಫೋನ್‌ ನಂಬರ್‌ಗೆ ಓಟಿಪಿ ಬರುತ್ತದೆ. ಆ ಸಂಖೆಯನ್ನು ನಮೂದಿಸಿ.
- ಕೊನೆಗೆ ಲಿಂಕ್ ಆಧಾರ್ ಬಟನ್ ಮೇಲೆ ಕ್ಲಿಕ್ ಮಾಡಿ ರಿಕ್ವೆಸ್ಟ್ ಸಬ್ಮಿಟ್ ಮಾಡಿ.

ಆದಾಯ ತೆರಿಗೆ ರಿಟರ್ನ್ಸ್(ಐಟಿಆರ್) ಸಲ್ಲಿಸಲು ಆಧಾರ್-ಪಾನ್ ಕಾರ್ಡ್ ಲಿಂಕ್ ಅನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಒಂದು ವೇಳೆ ಪಾನ್ ಕಾರ್ಡ್ ನಂಬರ್ ಆಧಾರ್ ಜತೆ ಲಿಂಕ್ ಆಗದಿದ್ದರೆ, ಬ್ಯಾಂಕ್ ತರೆದುವುದು, ಪೆನ್ಶಿನ್, ವಿದ್ಯಾರ್ಥಿ ವೇತನ, ಎಲ್‌ಪಿಜಿ ಸಬ್ಸಿಡಿ ಸೇರಿದಂತೆ ಸರ್ಕಾರದ ಹಣಕಾಸು ನೆರವು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಚುನಾವಣೆ, ಆರ್ಥಿಕ ಮಾಹಿತಿ ನೀಡುವ BolSubol ಆಪ್ ಬಿಡುಗಡೆ

ಆದಾಯ ತೆರಿಗೆ ಇಲಾಖೆಯ SMS ಮೂಲಕ:

ಇನ್ನು ನಿಮ್ಮ ಆಧಾರ್ ಹಾಗೂ ಪಾನ್‌ ಕಾರ್ಡ್‌ ಈ ಮೊದಲೇ ಲಿಂಕ್ ಆಗಿದೆಯೋ ಇಲ್ಲವೋ ಎಂದು SMS ಮೂಲಕವೂ ತಿಳಿಯಬಹುದಾಗಿದೆ. ಇದಕ್ಕಾಗಿ ನೀವು 567678 ಅಥವಾ 56161 ನಂಬರ್‌ಗೆ ಸಂದೇಶ ಕಳುಹಿಸಬೇಕಾಗಿದೆ. ಹೇಗೆ? ಇಲ್ಲಿದೆ ವಿವರ

UIDPAN< 12 ಸಂಖ್ಯೆಯ ಆಧಾರ್ ನಂಬರ್> <10 ಸಂಖ್ಯೆಯ ಪರ್ಮನೆಂಟ್‌ ಅಕೌಂಟ್‌ ನಂಬರ್> ಟೈಪ್‌ ಮಾಡಿ ಕಳುಹಿಸಬೇಕು. ಒಂದು ವೇಳೆ ನಿಮ್ಮ ಆಧಾರ್ ಹಾಗೂ ಪಾನ್‌ ಕಾರ್ಡ್‌ ಈ ಮೊದಲೇ ಲಿಂಕ್ ಆಗಿದ್ದರೆ ನಿಮ್ಮ ಆಆಧಾರ್ ಹಾಗೂ ಪಾನ್‌ ಕಾರ್ಡ್‌ ಲಿಂಕ್ ಆಗಿದೆ. ಈ ಸೇವೆ ಬಳಸಿದ್ದಕ್ಕೆ ಧನ್ಯವಾದಗಳು ಎಂಬ ಸಂದೇಶ ಮರಳಿ ಬರುತ್ತದೆ.   

ಅತೀ ಅವಶ್ಯಕ ಪಾನ್

ನಮ್ಮ ಆರ್ಥಿಕ ವ್ಯವಹಾರಗಳನ್ನು ಮಾಡಲು ಪಾನ್ ಕಾರ್ಡ್ ಅತ್ಯವಶ್ಯವಾಗಿದೆ. 50 ಸಾವಿರಕ್ಕಿಂತ ಹೆಚ್ಚಿನ ಮೌಲ್ಯದ ಖರೀದಿಗೆ ಪಾನ್ ಬೇಕು, ಬ್ಯಾಂಕಿನಲ್ಲಿ ಖಾತೆ ತೆರೆಯಲು, ಮ್ಯೂಚವಲ್ ಫಂಡ್ ಅಥವಾ ಷೇರ್ ಖರೀದಿಸಲು ಇಲ್ಲವೇ 50 ಸಾವಿರ ರೂಪಾಯಿಗಿಂತ ಹೆಚ್ಚಿನ ಮೊತ್ತ ವಹಿವಾಟಿನಲ್ಲಿ ಪಾನ್ ಕಾರ್ಡ್ ಅತ್ಯಗತ್ಯವಾಗಿ ಬೇಕಾಗುತ್ತದೆ.